• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾಶಿ, ಮಥುರಾ, ತೇಜೋಮಹಾಲ್ ಹೀಗೆ ಸಾಗಲಿ ಹಿಂದೂ ರಥ!

Hanumantha Kamath Posted On May 14, 2022
0


0
Shares
  • Share On Facebook
  • Tweet It

ಭಾರತದ ಪ್ರಮುಖ ಭಾಗಗಳಲ್ಲಿ ಎಲ್ಲೆಲ್ಲಿ ಹಿಂದೂಗಳ ಶ್ರದ್ಧಾಕೇಂದ್ರಗಳು ಇದ್ದವೋ ಅದನ್ನೆಲ್ಲ ನಿರ್ನಾಮ ಮಾಡಿಯೋ ಅಥವಾ ಅದಕ್ಕೆ ತಾಗಿಕೊಂಡೋ ಅಥವಾ ಅದರ ಮೇಲೆನೆ ಮಸೀದಿಗಳನ್ನು ನಿರ್ಮಾಣ ಮಾಡಿರುವುದನ್ನು ನಾವು ಅನೇಕ ಕಡೆ ಗಮನಿಸಿದ್ದೇವೆ. ಇದು ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಮೊಗಲರ ಕುತಂತ್ರವಾಗಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಲೇಬೇಕಾಗಿಲ್ಲ. ಯಾಕೆಂದರೆ ಇದೆಲ್ಲವೂ ಸ್ವತಂತ್ರ ಭಾರತದಲ್ಲಿ ನಡೆದ ಘಟನೆಗಳಲ್ಲ. ಮುಸ್ಲಿಂ ರಾಜರು ಹಾಗೆ ಮಾಡಿದ್ದನ್ನು ಈಗಿನ ಕೇಂದ್ರ ಸರಕಾರ ಹಂತ ಹಂತವಾಗಿ ಪರಿಶೀಲಿಸುತ್ತಿದ್ದರೆ ಮತ್ತು ಅದನ್ನು ಯಾರಾದರೂ ವಿರೋಧಿಸಲು ಮುಂದಾದರೆ ಅವರನ್ನು ಖಂಡಿತವಾಗಿ ಮೊಗಲರ ಸಂತಾನಿಗಳು ಎಂದೇ ಕರೆಯಬೇಕಾಗುತ್ತದೆ. ಅಂತಹ ಒಬ್ಬ ವ್ಯಕ್ತಿ ಓವೈಸಿ.
ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ವಿವಾದಿತ ಕಟ್ಟಡವನ್ನು ಕೆಡವಿದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಅಂತಿಮವಾಗಿ ಅದು ರಾಮಚಂದ್ರ ದೇವರ ಜನ್ಮಸ್ಥಳ ಎಂದು ಸಾಬೀತಾಗಿ ಅಲ್ಲಿ ಈಗ ಭವ್ಯ ರಾಮ ಮಂದಿರ ನಿರ್ಮಾಣವಾಗುವ ಪ್ರಕ್ರಿಯೆ ಶುರುವಾಗಿದೆ. ಅದಕ್ಕಾಗಿ ನಡೆದ ಹೋರಾಟಗಳು ಎಷ್ಟೋ, ಬಲಿದಾನಗೈದ ಸ್ವಯಂಸೇವಕರು ಎಷ್ಟೋ ಎನ್ನುವುದನ್ನು ಇತಿಹಾಸ ನೋಡಿದೆ. ಅಲ್ಲಿಗೆ ಮೊಗಲರ ಕುತಂತ್ರ ಮುಗಿಯಿತು ಎಂದಲ್ಲ. ದೇಶದಲ್ಲಿ ಮೂರು ಪ್ರಮುಖ ಹಿಂದೂ ಆರಾಧನಾ ಕೇಂದ್ರಗಳಲ್ಲಿ ಅಯೋಧ್ಯೆ ಬಿಟ್ಟರೆ ಬರುವುದು ಕಾಶಿ ಮತ್ತು ಮಥುರಾ. ಕಾಶಿ ವಿಶ್ವನಾಥ ದೇವಸ್ಥಾನ ಇತ್ತೀಚೆಗೆ ಜೀರ್ಣೋದ್ಧಾರಗೊಂಡು ಅದರ ಸುತ್ತಮುತ್ತಲೂ ಅಭಿವೃದ್ಧಿಯಾಗಿ ಅದನ್ನು ಇಡೀ ದೇಶ ಕೊಂಡಾಡುತ್ತಿರುವುದನ್ನು ನಾವು ನೋಡಿದ್ದೇವೆ. ಪ್ರಧಾನಿ ಮೋದಿ ಹಾಗೂ ವಾರಣಾಸಿಯ ಜಿಲ್ಲಾಡಳಿತದ ಇಚ್ಚಾಶಕ್ತಿಯ ಪರಿಣಾಮವಾಗಿ ಕಾಶೀ ವಿಶ್ವನಾಥ ದೇವಾಲಯ ಅದ್ಭುತವಾಗಿ ಕಾಣುತ್ತಿದೆ. ಈಗ ವಿಷಯ ಇರುವುದು ಕಾಶಿ ವಿಶ್ವನಾಥ ದೇವಾಲಯದ ಆವರಣಕ್ಕೆ ತಾಗಿಯೇ ಇರುವ ಜ್ಞಾನವಾಪಿ ಮಸೀದಿ. ಆ ಮಸೀದಿ ಒಂದು ಕಾಲದಲ್ಲಿ ಇಡೀ ಕಾಶಿಯ ಅಧಿಪತಿ ಈಶ್ವರನ ದೇವಾಲಯವಾಗಿತ್ತು ಎಂದು ಇತಿಹಾಸಕಾರರ ಅಭಿಪ್ರಾಯವೂ ಆಗಿದೆ. ಇದರಿಂದ ಅಲ್ಲಿ ಸರ್ವೆ ಕಾರ್ಯ ಆಗಬೇಕು ಎನ್ನುವುದು ಸಂಶೋಧಕರ ಅಭಿಮತ. ಅದಕ್ಕೆ ಈಗ ನ್ಯಾಯಾಲಯ ಒಪ್ಪಿಗೆ ನೀಡಿ ವಿಡಿಯೋ ಸರ್ವೆ ಕೂಡ ಆಗಿದೆ. ಮಸೀದಿಯ ಆವರಣ ಗೋಡೆಯ ಮೇಲೆ ಹಿಂದೂ ದೇವತೆಗಳ ಮೂರ್ತಿಗಳ ಕೆತ್ತನೆ ಇರುವುದರಿಂದ ಅದು ದೇವಾಲಯವಾಗಿತ್ತು ಎನ್ನುವುದಕ್ಕೆ ಪುಷ್ಟಿ ಸಿಕ್ಕಿದೆ. ಆದರೆ ಅಲ್ಲಿನ ಜಿಲ್ಲಾಡಳಿತ ಅಧಿಕಾರಿಗಳು ಹಿಂದೆ ಇದ್ದ ಬೇರೆ ಪಕ್ಷಗಳ ಸರಕಾರದ ಅವಧಿಯಲ್ಲಿ ಸರ್ವೆ ಮಾಡಲು ಮುಂದಾಗಿರಲಿಲ್ಲ. ಅದರೊಂದಿಗೆ ಮಸೀದಿಯ ಆಡಳಿತ ಮಂಡಳಿ ಹಾಗೂ ಸ್ಥಳೀಯ ಮುಸ್ಲಿಮರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದರು. ಯಾಕೆಂದರೆ ಅವರಿಗೆ ಹೆದರಿಕೆ ಇತ್ತೆನ್ನುವುದು ಸ್ಪಷ್ಟ. ಎಲ್ಲಿಯಾದರೂ ಸರ್ವೇ ನಡೆದು ಸತ್ಯ ಹೊರಗೆ ಬಂದರೆ ಮತ್ತೊಂದು ಮಸೀದಿಯನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು ಆತಂಕದ ಮೂಲವಾಗಿತ್ತು. ಆದರೆ ಅಂತಿಮವಾಗಿ ಈಗ ನ್ಯಾಯಾಲಯದ ಆದೇಶದಂತೆ ಅಲ್ಲಿ ಸರ್ವೇ ಕಾರ್ಯ ನಡೆಯಲೇಬೇಕು ಎನ್ನುವ ಸೂಚನೆ ಈಗ ಜಾರಿಯಾಗಿದೆ. ಯಾರಾದರೂ ವಿರೋಧಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡಿಯೇ ಸರ್ವೇ ಕಾರ್ಯ ಮಾಡಿ ಎನ್ನುವ ಹಿನ್ನಲೆಯಲ್ಲಿ ಸರ್ವೇ ಕಾರ್ಯದ ಅಧಿಕಾರಿಗಳು ಯೋಗ್ಯ ಕ್ರಮ ಕೈಗೊಂಡಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದು ಬಹುಶ: ಮುಂದಿನ ದಿನಗಳಲ್ಲಿ ಅದು ದೇವಾಲಯ ಎಂದು ಸಾಬೀತಾದರೆ ಮತ್ತೆ ಈಶ್ವರನ ದೇವಸ್ಥಾನದ ಗತವೈಭವ ಮುಂದುವರೆಯಬಹುದು.

ಇನ್ನು ಈಗ ಚರ್ಚೆಯಲ್ಲಿರುವ ಮಥುರಾದ ಶ್ರೀಕೃಷ್ಣ ದೇವಾಲಯದ ಮಸೀದಿಯ ವಿವಾದ. ಮುಂದಿನ ನಾಲ್ಕು ತಿಂಗಳೊಳಗೆ ಕೆಳಗಿನ ನ್ಯಾಯಾಲಯದಲ್ಲಿ ಈಗ ಇರುವ ಎಲ್ಲಾ ಪ್ರಕರಣಗಳನ್ನು ಮುಗಿಸಿ ನಂತರ ನಮ್ಮಲ್ಲಿಗೆ ಬನ್ನಿ ಎಂದು ಅಲಹಾಬಾದ್ ಉಚ್ಚನ್ಯಾಯಾಲಯ ಆದೇಶ ನೀಡಿದೆ. ಅಲ್ಲಿಯ ತನಕ ಮಥುರಾದ ಮಸೀದಿಯ ಗೋಡೆಯಲ್ಲಿರುವ ಹಿಂದೂ ದೇವತೆಗಳ ಕೆತ್ತನೆಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ಕೂಡ ಸೂಚಿಸಲಾಗಿದೆ. ಕೆಲವರಿಗೆ ಇರುವ ಆತಂಕ ಏನೆಂದರೆ ಮುಂದಿನ ನಾಲ್ಕು ತಿಂಗಳೊಳಗೆ ಮಥುರಾದ ಆ ಮಸೀದಿಯೊಳಗೆ ಸಾಕ್ಷ್ಯಗಳನ್ನು ನಾಶಪಡಿಸುವ ಕೆಲಸ ಆದರೆ ಏನು ಮಾಡುವುದು? ಅದನ್ನು ಕೂಡ ನೋಡಬೇಕಾಗಿದೆ. ಅಲ್ಲಿ ಕೂಡ ಸೂಕ್ತ ಸಂಶೋಧನೆ ಮತ್ತು ವಿಚಾರಣೆ ಆದರೆ ಅದು ಕೂಡ ಹಿಂದೂ ದೇವಾಲಯ ಆಗಬಹುದು. ಇನ್ನು ಅಂತಿಮವಾಗಿ ಚರ್ಚೆಯಲ್ಲಿರುವುದು ತೇಜೋಮಹಾಲ್. ಆಗ್ರಾದಲ್ಲಿರುವುದು ಷಹಜಹಾನ್ ಕಟ್ಟಿಸಿದ ತಾಜಮಹಾಲ್ ಅಲ್ಲ ಎನ್ನುವ ವಾದ ಹಲವು ಸಮಯದಿಂದ ಚರ್ಚೆಯಲ್ಲಿದೆ. ಆದರಿಂದ ಅಲ್ಲಿ ಮುಚ್ಚಿರುವ 22 ಕೋಣೆಗಳ ಬಾಗಿಲುಗಳನ್ನು ತೆರೆಯಬೇಕೆಂದು ಮನವಿ ಮಾಡಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಆ ಮುಚ್ಚಿರುವ 22 ಕೋಣೆಗಳಲ್ಲಿ ಹಿಂದೂ ದೇವರ ವಿಗ್ರಹಗಳು ಮತ್ತು ಅದಕ್ಕೆ ಸಂಬಂಧಪಟ್ಟ ಪರಿಕರಗಳು ಇರಬಹುದು ಎನ್ನುವುದು ನ್ಯಾಯಾಲಯಕ್ಕೆ ಹೋದವರ ವಾದ. ಆದರೆ ಅಲ್ಲಿ ಮುಚ್ಚಿರುವ 22 ಕೋಣೆಗಳಲ್ಲಿ ಅಂತದ್ದು ಏನೂ ಇಲ್ಲ ಪ್ರಾಚ್ಯ ಇಲಾಖೆ ಹೇಳಿದೆ. ಹಾಗಾದರೆ ತೆರೆದು ಪರಿಶೀಲಿಸಲು ಸತ್ಯಶೋಧನಾ ಸಮಿತಿ ರಚಿಸಲು ಏನು ಕಷ್ಟ? ಹೀಗೆ ಸನಾತನ ಧರ್ಮದ ಹಲವು ದೇವಾಲಯಗಳು ನಿಧಾನವಾಗಿ ಆದರೂ ಈ ಮಣ್ಣಿನ ಶಕ್ತಿಯನ್ನು ಆವಾಹಿಸಿಕೊಂಡು ಮೇಲೆ ಬರುತ್ತಿವೆ. ಈ ರಥ ಮುಂದುವರೆಯಲಿ ಎಂದು ಹಾರೈಕೆ!

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search