• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಎಸ್ ಡಿಪಿಐ, ಪಿಎಫ್ ಐ ಬ್ಯಾನ್ ಮಾಡುವುದು ತುಂಬಾ ಕಷ್ಟವೇ ಶಾ?

Hanumantha Kamath Posted On May 16, 2022
0


0
Shares
  • Share On Facebook
  • Tweet It

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ರಾಜಕೀಯ ಮುಖ ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧ ಮಾಡಲು ಆಗುತ್ತಾ ಇಲ್ವಾ ಎನ್ನುವುದನ್ನು ಕೇಂದ್ರ ಸರಕಾರ ಕೂಡಲೇ ಸ್ಪಷ್ಟಪಡಿಸಬೇಕು. ಒಂದು ವೇಳೆ ಆಗುತ್ತದೆ ಎಂದರೆ ಯಾವಾಗ ಆಗುತ್ತದೆ ಮತ್ತು ಆಗುವುದಿಲ್ಲ ಎಂದಾದರೆ ಯಾಕೆ ಆಗುವುದಿಲ್ಲ ಎನ್ನುವುದನ್ನು ಕೂಡ ಹೇಳಿಬಿಡಬೇಕು. ಇಲ್ಲದೇ ಹೋದರೆ ಭಾರತೀಯ ಜನತಾ ಪಾರ್ಟಿಯವರು ವಿಪಕ್ಷದಲ್ಲಿ ಇದ್ದಾಗ ಮಾತ್ರ ಈ ವಿಷಯವನ್ನು ಮಾತನಾಡುತ್ತಾರೆ ಮತ್ತು ಅಧಿಕಾರಕ್ಕೆ ಬಂದಲ್ಲಿ ಕೂಡಲೇ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರೆ ವಿನ: ಮಾಡುವುದಿಲ್ಲ ಎನ್ನುವುದನ್ನು ಕೇಸರಿ ಪಾಳಯದಲ್ಲಿ ಹಿಂದೂತ್ವದ ರಕ್ಷಣೆಗಾಗಿ ಕೆಳಮಟ್ಟದಲ್ಲಿ ಹೋರಾಡುತ್ತಾರಲ್ಲ, ಅವರು ಅಂದುಕೊಳ್ಳಲಿದ್ದಾರೆ. ಕೇರಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸುಜಿತ್ ಇತ್ತೀಚೆಗೆ ಮತಾಂಧರಿಂದ ಹತ್ಯೆಗೊಳಗಾದಾಗಲೂ ಈ ವಿಷಯ ಮತ್ತೆ ಮತ್ತೆ ಚಚ್ಚೆಗೆ ಒಳಪಟ್ಟಿತ್ತು. ಇನ್ನೇನೂ ಕೇಂದ್ರ ಸರಕಾರ ಪಿಎಫ್ ಐ ಮತ್ತು ಎಸ್ ಡಿಪಿಐ ನಿಷೇಧ ಮಾಡುತ್ತದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಂತೆ ಮತ್ತೆ ಈ ವಿಷಯ ಮೂಲೆಗೆ ಬಿದ್ದು ಇನ್ನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ ಹತ್ಯೆಯಾಗುವ ತನಕ ಕಾಯಬೇಕೆನೋ ಎನ್ನುವ ವಾತಾವರಣ ಮೂಡಿದೆ. ಹಾಗಾದರೆ ಇವರ ಬಳಿ ಬ್ಯಾನ್ ಮಾಡಲು ಸಾಕ್ಷ್ಯಗಳು ಕಡಿಮೆ ಇದೆಯಾ?
ಮೊದಲನೇಯದಾಗಿ ಕೇರಳದಲ್ಲಿ ಸಂಘದ ಮತ್ತು ಭಾರತೀಯ ಜನತಾ ಪಾರ್ಟಿಯ ಮುಖಂಡರನ್ನು, ಕಾರ್ಯಕರ್ತರನ್ನು ಈ ಮತಾಂಧ ಸಂಘಟನೆಗಳು ಹತ್ಯೆ ಮಾಡಿದ್ದೇ ತೆಗೆದುಕೊಂಡರೆ ಇದಕ್ಕಿಂತ ಸಾಲಿಡ್ ಸಾಕ್ಷ್ಯ ಬೇರೆ ಬೇಕಾಗಲಿಕ್ಕಿಲ್ಲ. ಆವತ್ತು ಪ್ರೊಫೆಸರ್ ಟಿಜೆ ಜೋಸೆಫ್ ಅವರ ಅಂಗಾಗಳನ್ನು ಇವರು ತುಂಡರಿಸಿದರಲ್ಲ, ಅದರಲ್ಲಿ 13 ಜನ ಪಿಎಫ್ ಐ ಕಾರ್ಯಕರ್ತರು ದೋಷಿಗಳು ಎಂದು ಸಾಬೀತಾಗಿದೆ. ಇನ್ನು ಸಂಸದ ತೇಜಸ್ವಿ ಸೂರ್ಯ ಹತ್ಯಾ ಸಂಚನ್ನು ರೂಪಿಸಿರುವ ಆರು ಜನ ಆರೋಪಿಗಳಿಗೆ ನೇರವಾಗಿ ಪಿಎಫ್ ಐ ಜೊತೆ ಸಂಬಂಧವಿದೆ ಎನ್ನುವುದು ಕೂಡ ಸಾಬೀತಾಗಿದೆ. ಇನ್ನು ಸಿಎಎ ವಿರುದ್ಧ ಮಂಗಳೂರು ಸಹಿತ ದೇಶದ ವಿವಿದೆಡೆ ವ್ಯಾಪಕ ಹಿಂಸಾಚಾರ ನಡೆದಾಗ ಅದರ ಹಿಂದೆ ಇದೇ ಮತಾಂಧ ಸಂಘಟನೆಗಳು ಇದ್ದವು ಎನ್ನುವುದು ಕೂಡ ಪತ್ತೆಯಾಗಿದೆ. ಇನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸುತ್ತಿರುವ ಲವ್ ಜಿಹಾದ್ ಪ್ರಕರಣಗಳಲ್ಲಿ 23 ಪ್ರಕರಣಗಳ ಆರೋಪಿಗಳು ಇದೇ ಪಿಎಫ್ ಐ, ಎಸ್ ಡಿಪಿಐಯ ಕಾರ್ಯಕರ್ತರು ಎಂದು ಕೂಡ ಹೇಳಲಾಗುತ್ತಿದೆ. ಇನ್ನು 2020 ರಲ್ಲಿ ದೆಹಲಿಯಲ್ಲಿ ನಡೆದ ದೊಂಬಿ ಮತ್ತು ಇತರ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳ ಪೈಕಿ 47 ಜನರು ಇದೇ ಸಂಘಟನೆಯವರು ಎಂದು ಕೂಡ ದಾಖಲೆಗಳು ಹೇಳುತ್ತವೆ. ಇಷ್ಟು ಮಾತ್ರವಲ್ಲ, ಇನ್ನೆಷ್ಟೋ ವಿವಿಧ ಪ್ರಕರಣಗಳಲ್ಲಿ ಈ ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರ ನೇರ ಭಾಗಿದಾರಿಕೆ ಇದೆ. ಇದೆಲ್ಲವೂ ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಸಂಸ್ಥೆಗಳಿಂದಲೇ ತನಿಖೆಗೆ ಒಳಪಟ್ಟಿದೆ. ಹಾಗಾದರೆ ಇನ್ನಾದರೂ ಬ್ಯಾನ್ ಮಾಡಬಾರದೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಒಂದಂತೂ ನಿಜ, ಈ ಬ್ಯಾನ್ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ. ಅದರಲ್ಲಿಯೂ ಒಂದು ರಾಜಕೀಯ ಪಕ್ಷವನ್ನು ನಿಷೇಧ ಮಾಡುವುದು ಎಂದರೆ ಜಟಿಲವಾದ ಪ್ರಕ್ರಿಯೆ. ಇನ್ನು ಈ ಸಂಘಟನೆಗಳನ್ನು ಬ್ಯಾನ್ ಮಾಡಲಾಯಿತು ಎಂದೇ ಇಟ್ಟುಕೊಳ್ಳೋಣ. ಅವರು ಬಾಯಿಗೆ ಅವಲಕ್ಕಿ ಹಾಕಿಕೊಂಡು ಸುಮ್ಮನೆ ಕಾಲ ಮೇಲೆ ಕಾಲು ಹಾಕಿ ಮಲಗುತ್ತಾರೆ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ನಿಷೇಧದ ಘೋಷಣೆ ಆದ ಕೆಲವೇ ಗಂಟೆಗಳಲ್ಲಿ ಅವರ ವಕೀಲರು ದೆಹಲಿಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿ ಆಗಿರುತ್ತದೆ. ಅಲ್ಲಿಂದ ಅದು ನ್ಯಾಯಾಲಯದ ಅಂಗಳದಲ್ಲಿ ಹೋಗುತ್ತದೆ. ತಾವು ನಿಷೇಧ ಮಾಡಿರುವುದಕ್ಕೆ ಸೂಕ್ತ ಕಾರಣಗಳನ್ನು ಕೇಂದ್ರ ಸರಕಾರ ಕೊಡಬೇಕಾಗುತ್ತದೆ. ಕೊಡಲು ವಿಫಲವಾದ್ದಲ್ಲಿ ಕೇಂದ್ರ ಸರಕಾರವನ್ನು ದೂಷಿಸಿ ಪ್ರಕರಣವನ್ನು ರದ್ದು ಮಾಡಲಾಗುತ್ತದೆ. ಆಗ ಈ ಸಂಘಟನೆಗಳು ನೈತಿಕ ವಿಜಯವನ್ನು ಆಚರಿಸುತ್ತವೆ. ಅಷ್ಟೇ ಅಲ್ಲ, ಮತ್ತಷ್ಟು ಕಠಿಣವಾಗುತ್ತವೆ. ಇನ್ನಷ್ಟು ಮೊನಚಾಗಿ ತಮ್ಮ ದುರುಳತನವನ್ನು ಹೊರಹಾಕುತ್ತವೆ. ಯಾಕೆಂದರೆ ಒಮ್ಮೆ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡ ನಂತರ ಕೆಲವೇ ಸಮಯದಲ್ಲಿ ಮತ್ತೆ ಈ ಪ್ರಕರಣವನ್ನು ಹಿಡಿದುಕೊಂಡು ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಸ್ಥಿತಿಯಲ್ಲಿ ಬಂದುಬಿಡುತ್ತದೆ. ಇನ್ನು ಒಂದು ವೇಳೆ ಸೂಕ್ತ ಸಾಕ್ಷಾಧಾರಗಳೊಂದಿಗೆ ಬ್ಯಾನ್ ಮಾಡಿದರೂ ಕೆಲವೇ ತಿಂಗಳುಗಳ ಬಳಿಕ ಬೇರೆ ಹೆಸರಿನೊಂದಿಗೆ ಇವು ಜನ್ಮ ತಾಳುತ್ತವೆ. ಅದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಕಾಂಗ್ರೆಸ್ಸನ್ನು ಬಗ್ಗುಬಡಿಯಲು ಬಿಜೆಪಿಗೆ ಎಸ್ ಡಿಪಿಐ ಅವಶ್ಯಕ ಇದೆ ಎನ್ನುವುದು ಕೆಲವು ಎಡಪಂಥಿಯ ರಾಜಕೀಯ ಪಂಡಿತರ ವಾದ. ಆದರೆ ಒಂದಂತೂ ನಿಜ, ಕಾಂಗ್ರೆಸ್ಸಿಗಿಂತ ಎಸ್ ಡಿಪಿಐ ಇನ್ನಷ್ಟು ಕ್ರೂರಿ. ಅದು ಈಗ ಗೊತ್ತಾಗಲ್ಲ. ಯಾವಾಗ ಗೊತ್ತಾಗುತ್ತೋ ಆಗ ಡೇಂಜರ್ ಬೆಲ್ ಬಡಿಯುತ್ತಾ ಇರುತ್ತದೆ!
0
Shares
  • Share On Facebook
  • Tweet It




Trending Now
ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
Hanumantha Kamath August 26, 2025
ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
Hanumantha Kamath August 26, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
  • Popular Posts

    • 1
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • 2
      ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • 3
      ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • 4
      ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • 5
      ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!

  • Privacy Policy
  • Contact
© Tulunadu Infomedia.

Press enter/return to begin your search