• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದಾರೆ ಎಂದರೆ ಅದು ಮಂಗಳೂರು ಪಾಲಿಕೆ ಎಂದೇ ಅರ್ಥ!!

Hanumantha Kamath Posted On May 24, 2022


  • Share On Facebook
  • Tweet It

ಗುಡ್ಡಕ್ಕೆ ಬೆಂಕಿ ಬಿದ್ದ ನಂತರ ಬಾವಿ ತೋಡುವ ಬುದ್ಧಿವಂತರೇ ತುಂಬಿರುವ ಮಂಗಳೂರು ಮಹಾನಗರ ಪಾಲಿಕೆಯಿಂದ ಬೇರೆ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ. ಮಂಗಳೂರನ್ನು ಚೆಂದ ಮಾಡಿ ಕೊಡುತ್ತೇವೆ ಎಂದು ಬಂದ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿಗೆ ಮಂಗಳೂರನ್ನು ಬೆಳ್ಳಿಯ ಹರಿವಾಣದಲ್ಲಿಟ್ಟು ಕೊಟ್ಟ ಬಳಿಕ ಮಂಗಳೂರು ಹೇಗಿದೆ ಎಂದು ಎಲ್ಲರಿಗೂ ಗೊತ್ತು. ನಾಯಿ ಬಾಲವನ್ನು ಅಲ್ಲಾಡಿಸುವುದು ಸಾಮಾನ್ಯ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಕಳೆದ ಏಳು ವರ್ಷಗಳಲ್ಲಿ ನಮ್ಮ ತೆರಿಗೆಯ ಹಣದ ಕೋಟ್ಯಾಂತರ ರೂಪಾಯಿ ಪೋಲಾಗಿರುವುದೇ ಸಾಕ್ಷಿ. ಯಾವುದೇ ಒಂದು ಕಾರ್ಪೋರೇಟ್ ಕಂಪೆನಿಗೆ ಒಬ್ಬ ಉದ್ಯೋಗಿಯ ಕೆಲಸದ ಮೇಲೆ ಸಮಾಧಾನ ಇಲ್ಲದೇ ಹೋದರೆ ಏನಾಗುತ್ತೆ. ಆತನ ಉದ್ಯೋಗದ ಗುತ್ತಿಗೆ ಮುಗಿಯುತ್ತಿದ್ದಂತೆ ಅವನನ್ನು ಗೌರವಪೂರ್ಣವಾಗಿ ಕಳುಹಿಸಿಕೊಡಲಾಗುತ್ತದೆ. ಅವಧಿ ಮುಗಿಯಲು ಆರು ತಿಂಗಳು ಇರುವಾಗಲೇ ಆ ಸ್ಥಾನಕ್ಕೆ ಯಾರು ಸೂಕ್ತ ಎನ್ನುವುದರ ಬಗ್ಗೆ ಕಂಪೆನಿಯ ಆಡಳಿತ ಮಂಡಳಿ ಚಿಂತನೆ ಮಾಡಿ ಸೂಕ್ತ ನಿರ್ಧಾರ ಮಾಡುತ್ತದೆ. ಯಾಕೆಂದರೆ ಕಂಪೆನಿಗಳಲ್ಲಿ ಅಲ್ಲಿನ ಧಣಿಯ ಹಣಕ್ಕೆ ಬೆಲೆ ಇರುತ್ತದೆ. ಆದರೆ ಸರಕಾರಿ ವ್ಯವಸ್ಥೆಯಲ್ಲಿ ನಮ್ಮ ನಿಮ್ಮ ತೆರಿಗೆಯ ಹಣಕ್ಕೆ ಮೌಲ್ಯ ಎಲ್ಲಿದೆ? ಆದ್ದರಿಂದ ಇವರು ನಿದ್ರೆಯಿಂದ ಏಳುವಾಗ ಇನ್ನಷ್ಟು ಕೋಟಿ ನಮ್ಮ ತೆರಿಗೆಯ ಹಣ ಹಳ್ಳ ಹಿಡಿದಿರುತ್ತದೆ. ಆಂಟೋನಿ ವೇಸ್ಟ್ ವಿಷಯದಲ್ಲಿ ಆದದ್ದು ಹಾಗೆ.

ಏಳು ವರ್ಷದ ಗುತ್ತಿಗೆ ಯಾವಾಗ ಮುಗಿಯುತ್ತೆ ಎಂದು ಮಹಾನಗರದ ಜನತೆ ಕಾಯುತ್ತಿದ್ದರೆ, ಆಡಳಿತ ನಡೆಸುತ್ತಿದ್ದ ಭಾರತೀಯ ಜನತಾ ಪಾರ್ಟಿಯವರು ಹಾಗೂ ಜವಾಬ್ದಾರಿಯುತ ವಿಪಕ್ಷವಾಗಬೇಕಿದ್ದ ಕಾಂಗ್ರೆಸ್ ಎರಡೂ ಕೂಡ ಇನ್ನಷ್ಟು ದಿನ ಆಂಟೋನಿಯೊಂದಿಗೆ ಸಂಸಾರವನ್ನು ಮುಂದುವರೆಸುವ ಐಡಿಯಾ ಇಟ್ಟುಕೊಂಡಿದ್ದವು. ಗುತ್ತಿಗೆ ಅವಧಿ ಮುಗಿದ ನಂತರ ಮುಂದೇನು ಎನ್ನುವ ಸಭೆ ಎಂಬ ನಾಟಕವನ್ನು ವಿದ್ಯುಕ್ತವಾಗಿ ಮಾಡಿ ಮುಗಿಸಿ ಮತ್ತೆ ಮಂಗಳೂರಿನ ಜನರ ಕಣ್ಣಿಗೆ ಮಣ್ಣೆರೆಚುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕೂಡ ಯಶಸ್ವಿಯಾಗಿದೆ. ಯಾವಾಗ ಕಾಲಕಾಲಕ್ಕೆ ಪ್ರಸಾದ ಸಿಗುವ ವ್ಯವಸ್ಥೆ ಎರಡೂ ಪಕ್ಷಗಳಿಗೆ ಆಗಿರುತ್ತದೆಯೋ ಯಾರು ತಾನೆ ವಿರೋಧ ಮಾಡಿಯಾರು. ಆದ್ದರಿಂದ ಏಳು ವರ್ಷಗಳ ಬಳಿಕ ಮತ್ತೆ ಒಂದು ವರ್ಷಕ್ಕೆ ಗುತ್ತಿಗೆಯನ್ನು ಎದುರಿಗೆ ಬೇಸರದಿಂದ ಒಳಗೆ ಖುಷಿಯಿಂದ ಪಾಲಿಕೆಯ ಸದಸ್ಯರು ವಿಸ್ತರಿಸಿಕೊಂಡಿದ್ದಾರೆ. ಹಿಂದಿನ ಏಳು ವರ್ಷಗಳ ತನಕ ಕನಿಷ್ಟ 50% ಆದರೂ ಮನೆಮನೆ ಕಸ ಸಂಗ್ರಹ ಆಗುತ್ತಿತ್ತು. ಈಗ ಅದು 25% ಬಂದು ನಿಂತಿದೆ. ಅದರಿಂದ ಪ್ರತಿ ರಸ್ತೆಯ ಅಲ್ಲಲ್ಲಿ ತೊಟ್ಟೆಯಲ್ಲಿ ತುಂಬಿದ ತ್ಯಾಜ್ಯ ನಿಮಗೆ ಸುಲಭವಾಗಿ ಕಾಣಸಿಗುತ್ತೆ. ಅಂತಹ ಕೆಲವು ಫೋಟೋಗಳನ್ನು ಇವತ್ತು ಪೋಸ್ಟ್ ಮಾಡುತ್ತೇನೆ. ಇನ್ನು ಇವರು ರಸ್ತೆ ಗುಡಿಸುವುದು ತಮ್ಮ ಕೆಲಸ ಅಲ್ಲವೇ ಅಲ್ಲ ಎಂದು ಯಾವತ್ತೋ ನಿರ್ಧರಿಸಿ ಆಗಿದೆ. ಆದ್ದರಿಂದ ಈಗ ವಿಸ್ತರಿಸಿರುವ ಗುತ್ತಿಗೆ ಅವಧಿಯಲ್ಲಿ ಇವರು ರಸ್ತೆ ಗುಡಿಸುತ್ತಾರೆ ಎಂದು ನಿರೀಕ್ಷಿಸುವಷ್ಟು ಮೂರ್ಖರು ಪಾಲಿಕೆಯಲ್ಲಿ ಇಲ್ಲ.

ಮಣ್ಣಗುಡ್ಡೆಯಲ್ಲಿ ನಿಯಮಗಳ ಪ್ರಕಾರ ನಿತ್ಯ ಗುಡಿಸಬೇಕೆಂಬ ಷರತ್ತು ಇದೆ. ಆಂಟೋನಿ ವೇಸ್ಟಿನವರು ಇಲ್ಲಿನ ರಸ್ತೆಗಳಿಗೆ ಪೊರಕೆ ತೋರಿಸದೇ ಅದೆಷ್ಟು ಕಾಲವಾಯಿತೋ. ಇತ್ತೀಚೆಗೆ ಇಲ್ಲಿನ ಸ್ಥಳೀಯ ನಿವಾಸಿಗಳು ಪಾಲಿಕೆಗೆ ದೂರು ಕೊಟ್ಟರು. ಸರಿಯಾಗಿ ನೋಡಿದರೆ ನಾಗರಿಕರು ದೂರು ಕೊಡುವ ಪ್ರಸಂಗ ಬರಲೇಬಾರದು. ಏನಿದ್ದರೂ ಅದು ಆಯಾ ವಾರ್ಡಿನ ಜವಾಬ್ದಾರಿ ಹೊಂದಿದ ಹೆಲ್ತ್ ಇನ್ಸಪೆಕ್ಟರ್ ಅವರ ಕೆಲಸ. ಅವರು ತಮಗೆ ನೀಡಿರುವ ವಾರ್ಡುಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಸುತ್ತಾಡಿ ಪರಿಶೀಲನೆ ಮಾಡಿ ಎಲ್ಲಿಯಾದರೂ ಸ್ವಚ್ಚತೆ ಆಗದಿದ್ದರೆ ಕ್ರಮ ತೆಗೆದುಕೊಳ್ಳಬೇಕಾದ ಕರ್ತವ್ಯ ಹೊಂದಿರುತ್ತಾರೆ. ನಂತರ  ಮಧ್ಯಾಹ್ನ ಪಾಲಿಕೆಯ ತಮ್ಮ ವಿಭಾಗದಲ್ಲಿ ಅವರು ಹಾಜರಿ ಇರಬೇಕಾಗುತ್ತೆ. ಆದರೆ ಯಾವ ಹೆಲ್ತ್ ಇನ್ಸಪೆಕ್ಟರ್ ತಾನೆ ಹೀಗೆ ವಾರ್ಡುಗಳಲ್ಲಿ ಗ್ರೌಂಡ್ ಕೆಲಸ ಮಾಡುತ್ತಾರೆ. ಯಾರೂ ಇಲ್ಲ. ಎಲ್ಲರೂ ನೇರವಾಗಿ ಮಧ್ಯಾಹ್ನ ಪಾಲಿಕೆಗೆ ಬರುತ್ತಾರೆ. ಆದ್ದರಿಂದ ವಾರ್ಡುಗಳಲ್ಲಿ ಕಸದ ರಾಶಿ ಬಿದ್ದರೂ ಕೇಳುವವರು ಇರುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮಣ್ಣಗುಡ್ಡೆಯ ನಿವಾಸಿಗಳು ದೂರು ಕೊಡಬೇಕಾದ ಪ್ರಮೇಯ ಬಂದಿತ್ತು. ಒಂದು ತಿಂಗಳ ಬಳಿಕ ಇದೊಂದು ದೊಡ್ಡ ಸಂಗತಿ ಆಗುವುದು ಬೇಡಾ ಎಂದು ಮುಜುಗರಕ್ಕೆ ಒಳಗಾದ ಆಂಟೋನಿ ವೇಸ್ಟಿನವರು ಒಂದೇ ಸಲಕ್ಕೆ 10-15 ಕೆಲಸಗಾರರನ್ನು ಸ್ವಚ್ಚತೆ ಮಾಡಲು ಕಳುಹಿಸಿದ್ದರು. ಅಪರೂಪ ಅಲ್ಲವೇ, ಕಸ ಒಟ್ಟು ಮಾಡಿ ಏನು ಮಾಡಬೇಕೆಂದು ಆಂಟೋನಿ ವೇಸ್ಟಿನವರಿಗೆ ಮರೆತು ಹೋದಂತೆ ಕಾಣಿಸುತ್ತದೆ. ಕಸದ ರಾಶಿಯನ್ನು ಒಟ್ಟು ಮಾಡಲಾಯಿತು. ತುಂಬಾ ಸಮಯದಿಂದ ಸ್ವಚ್ಚ ಮಾಡದೇ ಇದ್ದ ಕಾರಣ ಸಹಜವಾಗಿ ತ್ಯಾಜ್ಯದ ರಾಶಿ ಗುಡ್ಡೆಯಾಗಿತ್ತು. ಆದರೆ ಒಟ್ಟು ಮಾಡಿದ ಕಸವನ್ನು ಯಾರೂ ತೆಗೆದುಕೊಂಡು ಹೋಗಿಲ್ಲ. ಈಗ ಮಳೆ ಬಿದ್ದು ಅದು ಮತ್ತೆ ಚರಂಡಿ ಸೇರುತ್ತದೆ. ಇದನ್ನು ಆಂಟೋನಿಯವರ ಸ್ವಚ್ಚತೆ ಎಂದು ಕರೆಯಲಾಗುತ್ತದೆ ಮತ್ತು ಇದಕ್ಕೆ ಕೋಟಿಗಟ್ಟಲೆ ಹಣವನ್ನು ಪಾಲಿಕೆ ಸಂದಾಯ ಮಾಡುತ್ತದೆ. ಅದರೊಂದಿಗೆ ನಮ್ಮನ್ನು ಫೂಲ್ ಮಾಡಿದ್ದಕ್ಕೆ ಕಾಂಗ್ರೆಸ್, ಬಿಜೆಪಿ ಎರಡೂ ನಗುತ್ತಿರುತ್ತವೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search