• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಜಾಕೀರ್ ನೈಕಿಗೆ ಒಂದು ನಿಯಮ, ನೂಪುರ್ ಶರ್ಮಾಳಿಗೆ ಒಂದು ನಿಯಮ!!

Hanumantha Kamath Posted On June 10, 2022
0


0
Shares
  • Share On Facebook
  • Tweet It

ಸತ್ಯವನ್ನು ಕೆಲವು ದಿನಗಳ ತನಕ ದಮನಿಸಬಹುದು ಆದರೆ ನಿರ್ನಾಮ ಮಾಡಲು ಆಗುವುದಿಲ್ಲ ಎಂದು ಪ್ರಾಜ್ಞರು ಹೇಳಿರುವುದರಲ್ಲಿ ನೂರಕ್ಕೆ ನೂರು ಸತ್ಯ ಇದೆ. ಯಾಕೆಂದರೆ ಯಾವಾಗಲೂ ಚಪ್ಪಾಳೆ ಒಂದು ಕೈಯಿಂದ ತಟ್ಟಲು ಆಗುವುದಿಲ್ಲ. ಅತ್ಯಾಚಾರ ಆಗುವಾಗ ಅತ್ಯಾಚಾರಿ ಎಷ್ಟೇ ಬಲಿಷ್ಟನಾದರೂ ಸಂತ್ರಸ್ತ ಮಹಿಳೆ ತನ್ನ ಅಷ್ಟೂ ಬಲವನ್ನು ಒಗ್ಗೂಡಿಸಿಕೊಂಡು ವಿರೋಧ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯ. ಆದ್ದರಿಂದ ನಿರಂತರವಾಗಿ ಹಿಂದೂ ದೇವತೆಗಳನ್ನು, ದೇವರನ್ನು ಅವಮಾನಿಸುವುದು, ಹೀಯಾಳಿಸುವುದು, ನಿಂದಿಸುವುದನ್ನು ಕೇಳಿ ಕೇಳಿ ರೋಸಿ ಹೋದ ಓರ್ವ ಭಾರತೀಯ ಹಿಂದೂ ಹೆಣ್ಣುಮಗಳು ಅವರದ್ದೇ ಹದೀಸ್ ನಲ್ಲಿ ಉಲ್ಲೇಖಿತವಾಗಿರುವುದನ್ನು ಹೇಳಿದರೆ ತಪ್ಪೇನು ಎನ್ನುವುದು ಈಗಿನ ಪ್ರಶ್ನೆ. ಯಾಕೆಂದರೆ ನೂಪುರ್ ಶರ್ಮಾ ಹೇಳಿದ್ದು ತನ್ನ ಸ್ವಂತ ಅಭಿಪ್ರಾಯ ಅಲ್ಲ. ಡಿಬೇಟಿನಲ್ಲಿ ಆಕೆ ಮಾತನಾಡಿದಾಗ ಅವಳ ಬಳಿ ಹದೀಸ್ ನಲ್ಲಿ ಬರೆದಿದ್ದ ಅಂಶಗಳಿದ್ದವು. ಹಾಗಾದರೆ ಇಸ್ಲಾಂನಲ್ಲಿ ಹದೀಸ್ ನಲ್ಲಿ ಬರೆದಿರುವುದು ಸುಳ್ಳು ಎಂದು ಆ ಮತದ ಮೌಲ್ವಿಗಳು, ಧರ್ಮಗುರುಗಳು ಹೇಳಿಬಿಡಲಿ. ಇಲ್ಲ, ಹದೀಸ್ ಅನ್ನು ಅವರು ಹಿಂಪಡೆಯಲಿ, ಯಾರು ಅದನ್ನು ಓದಿ ತಪ್ಪು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಬೇಡಾ ಎಂದು ಹೇಳಿಬಿಡಲಿ. ಅದು ಬಿಟ್ಟು ಒಂದು ಕಡೆ ಕುರಾನ್, ಮತ್ತೊಂದೆಡೆ ಹದೀಸ್ ಇಟ್ಟುಕೊಂಡು ಅದರಲ್ಲಿರುವ ವಿಷಯ ಬಾಯಿಬಿಟ್ಟು ಹೇಳಬಾರದು ಎನ್ನುವುದು ಎಷ್ಟರಮಟ್ಟಿಗೆ ಸರಿ. ನಮಗೆ ಹದೀಸ್ ನಲ್ಲಿರುವ ಅಂಶಗಳು ಮುಜುಗರಕ್ಕೆ ಒಳಗಾಗುತ್ತವೆ ಎಂದು ಅವರ ಉನ್ನತ ನಾಯಕರು ಯಾವಾಗಲಾದರೂ ಒಂದು ನಿರ್ಣಯಕ್ಕೆ ಬಂದಿದ್ದಾರಾ? ಇಲ್ಲ.
ಈಗ ಹಿಂದೂ ಧರ್ಮದ ವಿಚಾರವನ್ನೇ ತೆಗೆದುಕೊಳ್ಳಿ.

ಶ್ರೀಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಸ್ತ್ರೀಯರೊಂದಿಗೆ ವಿವಾಹವಾಗಿತ್ತು ಎಂದು ಇದೆ. ಅದನ್ನು ಇಟ್ಟುಕೊಂಡು ಜಾಕೀರ್ ನೈಕ್ ಅವರು ಹಿಂದೂ ಧರ್ಮವನ್ನು ಹೀಯಾಳಿಸುವುದಿಲ್ಲವೇ? ಗಣಪತಿಗೆ ಆನೆಯ ಸೊಂಡಿಲು ಇದೆ ಎಂದು ಹಂಗಿಸಲಿಲ್ಲವೇ? ನಮ್ಮ ಎಷ್ಟೋ ದೇವರನ್ನು ವಾಮಾಗೋಚರವಾಗಿ ಜಾಕೀರ್ ನೈಕ್ ನಿಂದಿಸುವಾಗ ಅವನ ಕಾರ್ಯಕ್ರಮದಲ್ಲಿ ಕುಳಿತ ಸಾವಿರಾರು ಜನ ಖುಷಿಪಡುವುದಿಲ್ಲವೇ? ಅವನ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವುದಿಲ್ಲವೇ? ಇಸ್ಲಾಂ ಧರ್ಮಗುರುಗಳು ಅವನ ಬೋಧನೆಗಳನ್ನು ಯೂಟ್ಯೂಬ್ ನಲ್ಲಿ ನೋಡುವುದಿಲ್ಲವೇ? ಅವನನ್ನು ದೇಶ, ವಿದೇಶಗಳಲ್ಲಿ ಕರೆದು ಅವನಿಂದ ಹಿಂದೂ ಧರ್ಮದ ಬಗ್ಗೆ ಟೀಕಿಸಲು ಭಾಷಣ ಮಾಡಿಸುತ್ತಿಲ್ಲವೇ? ಅವನ ಖಾತೆಗೆ ಕೋಟ್ಯಾಂತರ ರೂಪಾಯಿ ಹರಿದುಬರುತ್ತಿಲ್ಲವೇ? ಇದೆಲ್ಲವೂ ಏನು? ಕೇವಲ ಹಿಂದೂ ಧರ್ಮವನ್ನು ಅವನು ಹೀಯಾಳಿಸುವಾಗ ಖುಷಿಪಡಲು ಎನ್ನುವುದನ್ನು ಬಿಟ್ಟು ಅವನ ಮಾತುಗಳಲ್ಲಿ ಅದೇನು ಸತ್ಯವಿದೆ. ಅಷ್ಟೇ ಅಲ್ಲ, ಜಾಕೀರ್ ನೈಕ್ ಹೇಳುವುದರಲ್ಲಿ ಏನಾದರೂ ಸತ್ಯಕ್ಕೆ ಹತ್ತಿರ ಇದೆಯಾ? ಅವನು ಹಿಂದೂ ದೇವತೆಗಳ ವಿಡಂಬನೆಯನ್ನು ರಸವತ್ತಾಗಿ ಅದನ್ನು ಕೇಳುವವರ ಕಿವಿಗೆ ಸುರಿಯುತ್ತಾನಲ್ಲ ಅದಕ್ಕೆ ಏನಾದರೂ ಸತ್ಯದ ತಳಹದಿ ಇದೆಯಾ, ಇಲ್ಲ. ಆದರೂ ಇಲ್ಲಿಯ ತನಕ ಅವನು ತನ್ನ ಸುಳ್ಳಿನ ಅಂಗಡಿಯನ್ನು ತೆರೆದು ವ್ಯಾಪಾರಕ್ಕೆ ಕುಳಿತುಕೊಂಡಿದ್ದಾನೆ. ಒಂದು ವೇಳೆ ಹಿಂದೂಗಳು ಅಸಹಿಷ್ಣುತಾವಾದಿಗಳು ಆದರೆ ಭಾರತದಲ್ಲಿ ನಿತ್ಯ ದೊಂಬಿಗಳು, ಗಲಾಟೆಗಳು ಆಗುತ್ತಿರಲಿಲ್ಲವೇ? ಸರಿಯಾಗಿ ನೋಡಿದರೆ ಜಾಕೀರ್ ನೈಕ್ ನನ್ನು ಬಂಧಿಸಿ ಅವನು ಜೀವನ ಪರ್ಯಂತ ಭಾರತೀಯ ಜೈಲುಗಳಲ್ಲಿ ಕೊಳೆಯುವಂತೆ ಮಾಡಬೇಕು. ಅದನ್ನು ನಾವು ಮಾಡಿದ್ದೇವಾ? ಕೇವಲ ಜಾಕೀರ್ ನೈಕ್ ಗೆ ಹರಿದು ಬರುತ್ತಿರುವ ಕೋಟ್ಯಾಂತರ ರೂಪಾಯಿ ಹಣಕ್ಕೆ ಎಲ್ಲಿಯ ಮೂಲ ಎಂದು ತನಿಖೆ ಆಗುತ್ತಿದೆ ಬಿಟ್ಟರೆ ಅವನ ಕೈಕಾಲು ಮುರಿದು ಜೈಲಿನ ಮೂಲೆಯಲ್ಲಿ ದೂಡುವಷ್ಟು ಪ್ರಯತ್ನ ಯಾಕಿಲ್ಲ. ಯಾವ ಹಿಂದೂ ಕೂಡ ಅದನ್ನು ಬಯಸುವುದಿಲ್ಲ. ಅದೇ ನೂಪುರ್ ಶರ್ಮಾ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದೆ ಮೇಲೆ ಒದ್ದ ಹಾಗೆ ಎನ್ನುವಂತೆ ಕೆಲವು ಮತಾಂಧರು ವರ್ತಿಸುತ್ತಿರುವುದೇಕೆ?

ಇನ್ನು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಬರೋಣ. ಆತನ ಹೆಸರು ಅಸಾವುದ್ದೀನ್ ಓವೈಸಿ. ಓವೈಸಿ ಬಾಯಿ ತೆರೆದರೆ ಹೂಗಳು ಹೊರಗೆ ಬೀಳುವುದಿಲ್ಲ. ಅವನ ಹೊಲಸು ಬಾಯಲ್ಲಿ ಇರುವುದೇ ಕೇವಲ ಹಿಂದೂ ವಿರೋಧಿ ಹೇಳಿಕೆಗಳು. ಭಾರತದ ಪೊಲೀಸರನ್ನು 15 ನಿಮಿಷ ತಟಸ್ಥಗೊಳಿಸಿ, ನಾವು ನಮ್ಮ ಶಕ್ತಿ ತೋರಿಸುತ್ತೇವೆ ಎನ್ನುವುದರಿಂದ ಹಿಡಿದು ಓವೈಸಿಯ ಒಂದೊಂದು ಮಾತು ಕೂಡ ಹಿಂದೂ ದ್ವೇಷದ ಬಾಂಬುಗಳೇ ಆಗಿವೆ. ಅದರ ಬಗ್ಗೆ ಆತ ಎಲ್ಲಿಯಾದರೂ ಕ್ಷಮೆಯಾಚಿಸಿದ್ದಾನಾ? ತಾನು ಹೇಳಿರುವುದಕ್ಕೆ ಯಾವುದೇ ಆಧಾರ ಇಲ್ಲದಿದ್ದರೂ ಆತ ಘಂಟಾಘೋಷವಾಗಿ ಹೇಳುತ್ತಿಲ್ಲವೇ? ಹೀಗೆ ಭಾರತದ ಉದ್ದಗಲಕ್ಕೂ ಅನೇಕ ಹಿಂದೂ ವಿರೋಧಿ, ಹಿಂದೂ ದೇವತೆಗಳ ದ್ವೇಷಿ ವ್ಯಕ್ತಿಗಳು ಇದ್ದಾರೆ. ಬರೇಲಿಯ ರಜಾಕ್, ದೇವಬಂಧು ಪ್ರದೇಶದ ಮದನಿ ಹೀಗೆ ಇವರ ಪಟ್ಟಿ ದೊಡ್ಡದಿದೆ. ಇವರನ್ನು ಇಸ್ಲಾಂನ ಮತಪಂಡಿತರು ಯಾವತ್ತೂ ವಿರೋಧಿಸಿಲ್ಲ. ಆದರೆ ನೂಪುರ್ ಶರ್ಮಾ ಕೊಟ್ಟ ಹೇಳಿಕೆ ಮಾತ್ರ ಅಂತರಾಷ್ಟ್ರೀಯವಾಗಿ ಕೂಡ ಬೆಂಕಿ ಹಚ್ಚುವ ಘಟನೆಗೆ ಕಾರಣವಾಯಿತು. ಭಾರತವನ್ನು ಅಂತರಾಷ್ಟ್ರೀಯ ಸ್ತರದಲ್ಲಿ ಕುಗ್ಗಿಸಲು ವ್ಯವಸ್ಥಿತ ಸಂಚು ನಡೆಯುತ್ತಿರುವುದು ಯಾವ ಪಾಮರನಿಗೂ ಕಣ್ಣು ತೆರೆದರೆ ಗೊತ್ತೆ ಆಗುತ್ತದೆ. ಭಾರತ ದೇಶದಲ್ಲಿ ಮುಸ್ಲಿಮರಿಗೆ ಭದ್ರತೆ ಇಲ್ಲ ಎನ್ನುವುದನ್ನು ಬಿಂಬಿಸಲು ಸಿಗುವ ಯಾವ ಅವಕಾಶವನ್ನು ಕೂಡ ವಿದೇಶದಲ್ಲಿ ಕುಳಿತಿರುವ ಯಾವ ಮೂಲಭೂತವಾದಿಗಳು ಕೂಡ ಬಿಡುವುದಿಲ್ಲ. ಇಲ್ಲದೇ ಹೋದರೆ ನೂಪುರ್ ಶರ್ಮಾ ಹೇಳಿರುವ ಹೇಳಿಕೆಯಿಂದ ಭಾರತ ಸರಕಾರ ಕ್ಷಮೆಯಾಚಿಸಬೇಕು ಎನ್ನುವುದು ಎಂತಹ ಮೂರ್ಖತನದ ಒತ್ತಡ ಎಂದು ಯಾರಿಗಾದರೂ ಗೊತ್ತಾಗುತ್ತದೆ!!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search