• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯೋಗಿಯ ಕಂಡಲ್ಲಿ ಗುಂಡು ಆದೇಶ, ಮತಾಂಧರು ಬಾಲ ಮುದುಡಿ ಬಿಲ ಸೇರಲಿ!

Hanumantha Kamath Posted On June 11, 2022


  • Share On Facebook
  • Tweet It

ಒಂದು ಪೂರ್ವ ನಿರ್ಧರಿತ ಸಂಚು ಇಲ್ಲದೇ ಇದ್ದರೆ ಇಡೀ ಭಾರತದಲ್ಲಿ ಮತ್ತು ಅದೇ ಸಮಯಕ್ಕೆ ವಿದೇಶದ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ಮತ್ತು ದೊಂಬಿ ನಡೆಸಲು ಸಾಧ್ಯವೇ ಇಲ್ಲ. ಇದು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಏಕಾಏಕಿ ನಡೆದ ಸಂಘರ್ಷ ಅಲ್ಲವೇ ಅಲ್ಲ. ಆದರೂ ದೆಹಲಿಯ ಜುಮ್ಮಾ ಮಸೀದಿಯ ಧರ್ಮಗುರುಗಳು ನಮಗೆ ಇದೆಲ್ಲಾ ಗೊತ್ತೆ ಇರಲಿಲ್ಲ. ನಮ್ಮ ಮಸೀದಿಯಲ್ಲಿ ಮಧ್ಯಾಹ್ನ ಪ್ರಾರ್ಥನೆಯ ನಂತರ ಒಂದೇ ಸಮನೆ ಗೇಟ್ 1 ರ ಬಳಿ ಘೋಷಣೆಗಳು ಕೂಗಿದವು. ಹೊರಗಿನವರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಎಸೆಯುವಂತೆ ಉತ್ತರ ಪ್ರದೇಶದ ಹಲವು ಕಡೆ ಗಲಭೆಗಳು ನಡೆದಿವೆ. ಕಾನ್ಪುರದಲ್ಲಿ ಕೆಲವು ದಿನಗಳಿಂದ ದೊಂಬಿ ನಡೆಯುತ್ತಿದ್ದ ಕಾರಣ ಅಲ್ಲಿ ಮೊದಲೇ ಕಟ್ಟೆಚ್ಚರ ವಹಿಸಲಾಗಿತ್ತು. ಆದ್ದರಿಂದ ಅಲ್ಲಿ ಅಂತಹ ವಾತಾವರಣ ನಿರ್ಮಾಣವಾಗಲಿಲ್ಲ. ಆದರೆ ಪ್ರಯಾಗರಾಹ್ ಸಹಿತ ಇತರೆಡೆ ಗಲಭೆಗಳು ನಡೆದಿದೆ. ಇನ್ನು ಇವರು ಮಾಡುವ ಪ್ರತಿಭಟನೆ ಹೇಗಿರುತ್ತೆ ಎಂದರೆ ಒಂದೋ ಕಡ್ಡಿ ಮುರಿಯಬೇಕು ಅಥವಾ ಹಾವು ಸಾಯಬೇಕು ಎನ್ನುವ ಧೋರಣೆಯಲ್ಲಿ ಬೀದಿಗೆ ಇಳಿಯುತ್ತಾರೆ. ಕಲ್ಲುಗಳು ಸಂಗ್ರಹವಾಗುತ್ತವೆ ಮತ್ತು ಅದನ್ನು ಗಾಡಿಯಲ್ಲಿ ಮೊದಲೇ ತುಂಬಿಸಿಡಲಾಗುತ್ತದೆ. “ಅವರು” ಪೊಲೀಸರನ್ನು ತಮ್ಮ ಮೊದಲ ವೈರಿ ಎಂದು ಅಂದುಕೊಂಡಿರುವುದರಿಂದ ಪಾಕಿಸ್ತಾನದ ಗಡಿಯ ಆಚೆ ನಿಂತು ಭಾರತೀಯರತ್ತ ಬಾಂಬು ಬಿಸಾಡುವ ರೀತಿಯಲ್ಲಿಯೇ ಕಲ್ಲು ಬಿಸಾಡುತ್ತಾರೆ. ಆಗ ಅವರಲ್ಲಿ ಮನಸ್ಸಿನಲ್ಲಿ ಆರ್ ಯಾ ಪಾರ್ ಎನ್ನುವ ಮನಸ್ಥಿತಿಯೇ ಇರುತ್ತದೆ. ಇದನ್ನು ಅವರು ತಮ್ಮ ಪ್ರತಿಭಟನೆಯ ಹಕ್ಕು ಎಂದು ಅಂದುಕೊಂಡಿದ್ದಾರೆ. ಆದ್ದರಿಂದ ತಮ್ಮ ಶಕ್ತಿ ಪ್ರದರ್ಶನಕ್ಕೆ ಅವರು ಮುಂದಾಗುತ್ತಾರೆ. ದೇಶದ ಯಾವುದೇ ಭಾಗದಲ್ಲಿ ದೊಂಬಿಗಳಾಗುವಾಗ ಅಲ್ಲಿನ ರಾಜ್ಯ ಸರಕಾರ ಎಷ್ಟು ಖಡಕ್ಕಾಗಿ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಹೇಳಲಿಕ್ಕೆ ಆಗುವುದಿಲ್ಲವಾದರೂ ಉತ್ತರಪ್ರದೇಶದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ಏನು ಬೇಕಾದರೂ ಕ್ರಮ ತೆಗೆದುಕೊಳ್ಳಿ ಎಂದು ಯೋಗಿ ಗೃಹ ಇಲಾಖೆಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಒಂದು ವೇಳೆ ಅನಿವಾರ್ಯವಾದರೆ ಪೊಲೀಸರು ಕಂಡಲ್ಲಿ ಗುಂಡಿಕ್ಕಿದರೂ ಅಲ್ಲಿನ ಸಿಎಂ ಪೊಲೀಸರ ಬೆಂಬಲಕ್ಕೆ ನಿಲ್ಲಲಿದ್ದಾರೆ. ಯಾಕೆಂದರೆ ಒಂದು ವೇಳೆ ಕಂಡಲ್ಲಿ ಗುಂಡಿಕ್ಕುವ ಕ್ರಮ ಜಾರಿಗೆ ಬಂದು ಕೆಲವು ಹೆಣ ನೆಲಕ್ಕೆ ಉರುಳಿದರೆ ಯಾರೂ ಎಚ್ಚೆತ್ತುಕೊಳ್ಳುತ್ತಾರೋ, ಬಿಡ್ತಾರೋ ಮಾನವ ಹಕ್ಕು ಸಂಘಟನೆಗಳು ಮಾತ್ರ ಓಡಿಬರುತ್ತಾರೆ. ಈ ಮಾನವ ಹಕ್ಕು ಸಂಘಟನೆಗಳು ಮುಸ್ಲಿಮರಿಗೆ ಒಂದು ಇರುವೆ ಕಚ್ಚಿದರೂ ಓಡೋಡಿ ಬರುತ್ತಾರೆ. ಅದೇ ಹಿಂದೂಗಳ ಮಾರಣಹೋಮ ನಡೆದರೂ ಇವರು ನಿದ್ರೆಯಿಂದ ಏಳಲ್ಲ. 2006 ರಲ್ಲಿ ಯುಪಿಯ ವಾರಣಾಸಿಯಲ್ಲಿರುವ ಸಂಕಟಮೋಚನಾ ಮಂದಿರದಲ್ಲಿ ಬಾಂಬ್ ಬ್ಲಾಸ್ಟ್ ಆಗಿ 14 ಅರ್ಚಕರ ಸಹಿತ 18 ಜನ ಸತ್ತು ಹೋದರು. ಬಾಂಬ್ ಇಟ್ಟಿದ್ದು ಮತಾಂಧರು ಎಂದು ಗೊತ್ತಾಗಿತ್ತು. ಆದರೂ ಆಗಿನ ಉತ್ತರಪ್ರದೇಶದ ಸರಕಾರ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂಗಳು ಬೀದಿಗೆ ಇಳಿಯಲಿಲ್ಲ. ಅಖಿಲೇಶ್ ಯಾದವ್ ಅವರು ಯುಪಿ ಸಿಎಂ ಆಗಿದ್ದಾಗ ವಲ್ಲಿವಲ್ಲ ಎಂಬ ಅಪ್ಪಟ ಮತಾಂಧ ಕ್ರಿಮಿನಲ್ ನನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು. ಅದಕ್ಕೆ ಅವರು ಕೊಟ್ಟ ಕಾರಣ ” ಪಾಪ, ಮುಸ್ಲಿಂ ಎನ್ನುವ ಕಾರಣಕ್ಕೆ ಜೈಲಿನೊಳಗೆ ಇದ್ದ”. ಸಂಸತ್ತಿನ ಮೇಲೆ ದಾಳಿಯಾದ ಪ್ರಕರಣದ ಮಾಸ್ಟರ್ ಮೈಂಡ್ ಅಫ್ಜಲ್ ಗುರುವಿಗೆ ಶಿಕ್ಷೆ ಘೋಷಣೆ ಆದಾಗಲೂ ಮುಸ್ಲಿಮರು ಪ್ರತಿಭಟನೆ ನಡೆಸಿದ್ರು. ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ರ ಏಕೈಕ ಉಗ್ರ ಕಸಬ್ ನೇಣಿಗೇರಿದಾಗಲೂ ಪ್ರತಿಭಟನೆ ಆಯಿತು. ಕಾಶ್ಮೀರದಲ್ಲಿ ಉಗ್ರರು ಶೂಟೌಟ್ ನಿಂದ ಸತ್ತರೂ ಪ್ರತಿಭಟನೆ ಮಾಡುತ್ತಾರೆ. ಇತ್ತೀಚೆಗೆ ಹನುಮಾನ್ ಜಯಂತಿಯ ಮೆರವಣಿಗೆ ಮೇಲೆನೂ ಕಲ್ಲು ಬಿಸಾಡಿದ್ದಾರೆ. ಶಿವಮೊಗ್ಗದ ಹರ್ಷ ಪಾರ್ಥಿವ ಶರೀರ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗಲು ಕಲ್ಲು ಬಿಸಾಡಿ ತಲವಾರು ಝಳಪಿಸಿದ್ದಾರೆ. ಹಾಗಾದ್ರೆ ಇವರು ಈ ದೇಶದ ಕಾನೂನುಗಳಿಗೆ ಡೋಂಟ್ ಕೇರ್ ಮಾಡುತ್ತಾರಾ? ಇಲ್ಲದೇ ಹೋದರೆ ಒಬ್ಬ ಹೆಣ್ಣುಮಗಳು ಪ್ರವಾದಿಯವರ ಬಗ್ಗೆ ಹೇಳಿದ ಹೇಳಿಕೆಯಿಂದ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ ಮೇಲೆಯೂ ಇಂತಹ ಪ್ರತಿಭಟನೆ, ಆಕ್ರೋಶ, ದೊಂಬಿ, ಗಲಭೆ ಬೇಕಿತ್ತಾ? ನಿಮ್ಮದೇ ಹದೀಸ್ ನಲ್ಲಿ ಇದ್ದದ್ದು, ನಿಮ್ಮದೇ ಜಾಕೀರ್ ನೈಕ್ ಹೇಳಿದ್ದು, ಅದನ್ನೇ ತಾನು ಹೇಳಿದರೆ ಈ ಪರಿಯ ಪ್ರತಿಭಟನೆ ಆಗುತ್ತದೆ ಎಂದು ಗೊತ್ತಿದ್ದರೆ ನೂಪುರ್ ಸತ್ಯ ಹೇಳಲು ಹೋಗುತ್ತಿರಲಿಲ್ಲವೇನೋ? ಆದರೆ ಇಂತಹ ಅಸಹಿಷ್ಣುತಾವಾದಿಗಳ ವಿರುದ್ಧ ಒಂದೇ ಒಂದು ಹೇಳಿಕೆ ಕೂಡ ಇಷ್ಟು ಗಲಭೆಗೆ ಕಾರಣವಾಗುತ್ತೆ ಎಂದರೆ ಅರ್ಥ ಏನು ಗೊತ್ತಾ? ಇವರ ಹೊಸ ಪೀಳಿಗೆ ಇಸ್ಲಾಂ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಜ್ಜಾಗಿದೆ. ಅವರಿಗೆ ತಮ್ಮದೇ ಸಮುದಾಯದ ಹಿರಿಯರ ನಡೆ ಈಗಿನ ಕಾಲಕ್ಕೆ ಸರಿ ಹೊಂದುವುದಿಲ್ಲ ಎಂದು ಅನಿಸುತ್ತದೆ. ಅವರೀಗ ಯಾವುದೇ ಒಂದು ಪಕ್ಷದ ಪರ ಅಥವಾ ವಿರೋಧ ಎನ್ನುವುದಕ್ಕಿಂತ ತಾವೇ ರಾಜಕೀಯ ಶಕ್ತಿ ಆಗಬೇಕೆಂಬ ಹಪಾಹಪಿಗೆ ಬಿದ್ದಿದ್ದಾರೆ. ಅದಕ್ಕೆ ಸಂಘರ್ಷ ಅನಿವಾರ್ಯ ಎಂದು ನಿಶ್ಚಯಿಸಿ ಹೊರಟಿದ್ದಾರೆ. ಸದ್ಯ ಅವರು ಯಾವುದೇ ಆಯ್ಕೆ ಇಲ್ಲದೇ ಇದ್ದ ಕಾರಣ ಕಾಂಗ್ರೆಸ್ಸಿಗೆ ಮತ ಹಾಕುತ್ತಿರಬಹುದು. ಆದರೆ ದೇಶದಲ್ಲಿ ಸದೃಢ ರಾಜಕೀಯ ಶಕ್ತಿಯಾಗಿ ಉದ್ಭವಿಸಬೇಕೆಂಬ ಅವರ ಗುರಿಯ ಒಂದು ಝಲಕ್ ಈಗ ನಡೆಯುತ್ತಿದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search