• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!

Hanumantha Kamath Posted On June 15, 2022


  • Share On Facebook
  • Tweet It

ರಾಹುಲ್ ಗಾಂಧಿ ಇ.ಡಿ ವಿಚಾರಣೆಗೆ ಹೋಗುವಾಗ ಯಾರು ಹೆಚ್ಚು ಪ್ರತಿಭಟನೆ ಮಾಡುತ್ತಾರೆಯೋ ಅವರು ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ನಾಯಕರು ಎನಿಸಿಕೊಂಡವರಿಗೆ ಒಂದು ಪ್ರಾಕ್ಟೀಕಲ್ ಎಕ್ಸಾಂ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಕಚೇರಿಯಿಂದ ಫರ್ಮಾನು ಎಲ್ಲಾ ರಾಜ್ಯಗಳಿಗೂ ಹೋಗಿರುವಂತಿದೆ. ಇದನ್ನು ಸ್ವಲ್ಪ ಸೀರಿಯಸ್ಸಾಗಿ ತೆಗೆದುಕೊಂಡಡವರು ಕರ್ನಾಟಕದ ಕಾಂಗ್ರೆಸ್ಸಿಗರು. ಯಾಕೆಂದರೆ ಇಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ಹಾಗಾಗಿ ರಾಜ್ಯ ಕಾಂಗ್ರೆಸ್ಸಿನಿಂದ ಮೂರು ಬಣಗಳನ್ನು ಮಾಡಿ ಎರಡನ್ನು ದೆಹಲಿಗೆ ಕಳುಹಿಸಲಾಗಿದ್ದು, ಒಂದನ್ನು ರಾಜ್ಯದಲ್ಲಿ ಪ್ರತಿಭಟನೆಗೆ ಬಿಡಲಾಗಿದೆ. ಇನ್ನು ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಕೋಟ್ಯಾಂತರ ರೂಪಾಯಿ ಹಗರಣದಲ್ಲಿಯೂ ಸದ್ಯ ಮೂವರು ಆರೋಪಿತರು ಇದ್ದಾರೆ. ಅವರಲ್ಲಿ ಸ್ವಲ್ಪ ಯಂಗ್ ಆಗಿ ಉಳಿದಿರುವವರು ಎಂದರೆ ರಾಹುಲ್ ಮಾತ್ರ. ಇನ್ನು ಸೋನಿಯಾ ಅವರಿಗೆ ಸಾಕಷ್ಟು ವಯಸ್ಸಾಗಿದೆ. ಅದರೊಂದಿಗೆ ವಿವಿಧ ಆರೋಗ್ಯ ಸಂಬಂಧಿ ಕಾಯಿಲೆಗಳಿವೆ. ಖರ್ಗೆಯವರಿಗೆ ವಯೋ ಸಹಜ ಅನಾರೋಗ್ಯಗಳಿವೆ. ಆಸ್ಕರ್ ಅವರು ವಿಧಿವಶರಾಗಿದ್ದಾರೆ. ಸದ್ಯ ಇ.ಡಿಯವರ ಪ್ರಶ್ನೆಗಳ ಬಾಣಗಳನ್ನು ಎದುರಿಸಬಹುದಾದ ಗಂಡಸು ಎಂದರೆ ರಾಹುಲ್ ಮಾತ್ರ. ಇಲ್ಲದಿದ್ದರೆ ಒಂದೂವರೆ ದಿನ ಇ.ಡಿ ಪ್ರಶ್ನೆಗಳನ್ನು ಎದುರಿಸುವುದೆಂದರೆ ಅದು ಅಭಿಮನ್ಯು ಯುದ್ಧಕ್ಕೆ ನಿಂತ ಹಾಗೆ. ಅದನ್ನು ಎದುರಿಸಿ ರಾಹುಲ್ ಹೊರಗೆ ಬಂದಿದ್ದಾರೆ. ಇನ್ನು ಇ.ಡಿಗೆ ತಾನು ಏನೇನು ಹೇಳಿದ್ದೇನೆ ಎಂದು ತಾಯಿಗೆ ಹಾಗೂ ವೇಣುಗೆ ವರದಿ ಒಪ್ಪಿಸಿದ್ದಾರೆ. ರಾಹುಲ್ ಹೇಳಿರುವ ವಿಷಯಗಳನ್ನು ಇ.ಡಿ ತನಿಖೆ ನಡೆಸಿ ಮುಂದಕ್ಕೆ ಏನು ಬೇಕಾದರೂ ನಿರ್ಣಯ ತೆಗೆದುಕೊಳ್ಳಬಹುದು. ಆದರೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇರುವ ಏಕೈಕ ಚಿಂತೆ ಏನೆಂದರೆ ಈ ವಿಷಯವನ್ನು ತಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಮಾತ್ರ. ತಾವು ಅಧಿಕಾರಕ್ಕೆ ಬಂದರೆ ಗಾಂಧಿ-ವಾದ್ರಾ ಮೇಲಿನ ಭ್ರಷ್ಟಾಚಾರದ ಪ್ರಕರಣಗಳನ್ನು ಸೂಕ್ತ ತನಿಖೆ ಮಾಡಿ ಆರೋಪಿಗಳನ್ನು ಜೈಲಿನ ಸಲಾಕೆಗಳ ಹಿಂದೆ ಕುಳ್ಳಿರಿಸುತ್ತೇವೆ ಎಂದು ಬಿಜೆಪಿ ಮುಖಂಡರು ಚುನಾವಣೆಯ ಮೊದಲು ಹೋದಲ್ಲೆಲ್ಲ ಹೇಳಿದ್ದು ಅಧಿಕಾರಕ್ಕೆ ಬಂದು ಎಂಟು ವರ್ಷಗಳಾದರೂ ಏನು ಮಾಡಿಲ್ಲ ಎನ್ನುವ ಅಸಮಾಧಾನ ಕಾರ್ಯಕರ್ತರಲ್ಲಿ ಇತ್ತು. ಬಿಜೆಪಿ ಸೇರಿ ಎಲ್ಲಾ ಪಕ್ಷಗಳಲ್ಲಿಯೂ ಸಮಾನ ಸಂಖ್ಯೆಯಲ್ಲಿ ಮಿತ್ರರನ್ನು ಹಾಗೂ ಮುಖ ಕಂಡರಾಗದವರನ್ನು ಹೊಂದಿರುವ ಸುಬ್ರಹ್ಯಣ್ಯ ಸ್ವಾಮಿ ಮಾತ್ರ ಏಕಾಂಗಿಯಾಗಿ ಸೋನಿಯಾ ಮಗನ ಹಿಂದೆ ಬಿದ್ದಿದ್ದರು. ಸೋನಿಯಾ ಅವರಾದರೂ ಸ್ವಾಮಿಯ ಬುದ್ಧಿವಂತಿಕೆಯನ್ನು ಪ್ರಶಂಸಿಸಿ ವಿಶ್ವಾಸ ಇಟ್ಟಿದ್ದರು. ಜಯಲಲಿತಾ ಅವರನ್ನು ಸೋನಿಯಾ ಜೊತೆ ಮಾತುಕತೆ ಕೂರಿಸಿ ಒಂದು ಸರಕಾರ ಬೀಳಿಸುವಲ್ಲಿ ಸುಬ್ರಹ್ಮಣ್ಯ ಸ್ವಾಮಿ ಬುದ್ಧಿವಂತಿಕೆ ಇತ್ತು. ಆದರೆ ಸ್ವಾಮಿಯನ್ನು ರಾಹುಲ್ ಕ್ಯಾರೇ ಅನ್ನಲಿಲ್ಲ. ಅದಕ್ಕಾಗಿ ಸ್ವಾಮಿ ರಾಹುಲ್ ಅವರನ್ನು ಇಕ್ಕೆಲದಲ್ಲಿ ಸಿಲುಕಿಸಲು ಹೊರಟರು. ಅದಕ್ಕೆ ಈಗ ಫಲ ಸಿಗುತ್ತಿದೆ.

ರಾಹುಲ್ ಪಕ್ಕಾ ರಾಜಕಾರಣಿಯಲ್ಲ. ಅವರಿಗೆ ರಾಜಕಾರಣ ಬಯಸದೇ ಒಲಿದು ಬಂದ ವರಪ್ರಸಾದ. ಕಂಪ್ಯೂಟರ್, ಎಟಿಎಂಗಳಂತಹ ಆಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ತಂದ ರಾಜೀವ್ ಅವರಂತೆಯೇ ಮಗನಿಗೆ ದೂರದೃಷ್ಟಿ ಇಲ್ಲ. ಗೋಲ್ಡನ್ ಟೆಂಪಲ್ ಗೆ ನುಗ್ಗಿ ಭಯೋತ್ಪಾದಕರನ್ನು ಸದೆಬಡಿಯಿರಿ ಎಂದು ಆದೇಶ ಕೊಟ್ಟ ಅಜ್ಜಿ ಇಂದಿರಾ ಅವರಂತೆ ಕೆಚ್ಚೆದೆಯೂ ಇಲ್ಲ. ಇಟಲಿಯವರಾದರೂ ಭಾರತಕ್ಕೆ ಮದುವೆಯಾಗಿ ಬಂದು ಗಂಡನ ಅಕಾಲಿಕ ಸಾವಿನ ದಶಕದ ಬಳಿಕ ರಾಜಕೀಯ ಪ್ರವೇಶಿಸಿ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹತ್ತು ವರ್ಷ ಸೂಪರ್ ಪಿಎಂ ಆಗಿ ಮೆರೆದರಲ್ಲ ಸೋನಿಯಾ ಅವರಂತೆ ಸ್ನೇಹಶೀಲತ್ವವೂ ಇಲ್ಲ. ಹೋಗಲಿ, ಕನಿಷ್ಟ ತಂಗಿಯ ಜಿದ್ದಾದರೂ ಬಂದಿದೆಯಾ ಅದು ಕೂಡ ಇಲ್ಲ. ರಾಹುಲ್ ಏನೂ ಆಗಿ ಬೆಳೆದಿಲ್ಲ. ರಾಹುಲ್ ಅವರನ್ನು ಲೆಕ್ಕಕ್ಕಿಂತ ಹೆಚ್ಚು ಪೆಂಪರ್ ಅಥವಾ ಮುದ್ದು ಎನ್ನುತ್ತಾರಲ್ಲ, ಹಾಗೆ ಬೆಳೆಸಿದವರಲ್ಲಿ ಈಗ ಜಿ-23 ಎಂದು ಅಸಮಾಧಾನಿತರ ಗುಂಪು ಕಟ್ಟಿಕೊಂಡಿದ್ದಾರಲ್ಲ, ಅವರ ಪಾತ್ರ ದೊಡ್ಡದಿದೆ. ವೀರಪ್ಪ ಮೊಯಿಲಿ ಅಗತ್ಯಕ್ಕಿಂತ ಹೆಚ್ಚು ಸಲಿಗೆ ಕೊಟ್ಟರು. ಗುಲಾಂ ನಬಿ, ಖರ್ಗೆ ಆಡಿಸಿದರೇ ವಿನ: ರಾಜಕೀಯ ಪಟ್ಟುಗಳನ್ನು ಕಲಿಸಲೇ ಇಲ್ಲ. ಇನ್ನು ಆಸ್ಕರ್ ಅವರಿಂದ ಒಂದಿಷ್ಟು ಕಲಿ ಎಂದು ತಾಯಿ ಹೇಳಿದರೂ ಆಸ್ಕರ್ ಮಧ್ಯರಾತ್ರಿ 1 ಗಂಟೆಗೆ ದೆಹಲಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ರಾಹುಲ್ ಅದೇ ಕಚೇರಿಯ ಅಣತಿ ದೂರದಲ್ಲಿ ಎಂಜಾಯ್ ಮಾಡುತ್ತಿದ್ದರು. ಹೀಗಾಗಿ ರಾಹುಲ್ ರಾಜಕೀಯ ಎಂದರೆ ಚುನಾವಣೆಯ ಸಮಯದಲ್ಲಿ ವೇದಿಕೆಯ ಮೇಲೆ ಕೈ ಬೀಸುವುದು ಎಂದು ತಪ್ಪಾಗಿ ಅರಿತುಕೊಂಡರು. ಸರಿಯಾಗಿ ಮನಸ್ಸು ಮಾಡಿದರೆ ರಾಹುಲ್ ಮೋದಿಯವರಿಗಿಂತ ಚಾಣಾಕ್ಷ ರಾಜಕಾರಣಿಯಾಗಬಹುದಿತ್ತು. ಇಂದಿರಾ ತಮ್ಮ ಜೊತೆ ಒಪಿ ನಾಯರ್ ಅವರಂತಹ ಆಪ್ತ ಸಹಾಯಕರನ್ನು ಇಟ್ಟುಕೊಂಡಿದ್ದರು. ಸೋನಿಯಾ ಆಂಟೋನಿ, ಆಸ್ಕರ್ ಅವರನ್ನು ಜಾತಿಯ ಕಾರಣಕ್ಕೆ ತಲೆ ಮೇಲೆ ಹತ್ತಿಸಿಕೊಂಡರಾದರೂ ಅವರಿಂದ ಕಲಿತದ್ದು ತುಂಬಾ ಇತ್ತು. ಆಂಟೋನಿ, ಆಸ್ಕರ್ ಸೋನಿಯಾ ಕಣ್ಣು, ಕಿವಿಗಳಾಗಿ ಅವರನ್ನು ರಾಜಕೀಯದ ಸುನಾಮಿಯಲ್ಲಿ ಮುಳುಗಲು ಬಿಡಲೇ ಇಲ್ಲ. ನರಸಿಂಹ ರಾವ್, ಸೀತಾರಾಂ ಕೇಸರಿ ಬೆಳೆಯಲು ಎಷ್ಟೇ ಪ್ರಯತ್ನ ಪಟ್ಟರೂ ಗಾಂಧಿ ಕುಟುಂಬವನ್ನು ರಾಜಕೀಯದ ಮುನ್ನಲೆಗೆ ತರುವಲ್ಲಿ ಈ ಇಬ್ಬರು ಕೈಸ್ತರು ಸೋನಿಯಾ ಸುತ್ತ ಕೋಟೆ ಕಟ್ಟಿದರು. ಸೋನಿಯಾ ಅವರನ್ನು ಮಧ್ಯರಾತ್ರಿ 3 ಗಂಟೆಗೆ ಎಬ್ಬಿಸಿ ನಿದ್ರೆಯಲ್ಲಿಯೇ ಸಹಿ ಹಾಕಿಸಬಲ್ಲ ಛಾತಿ ಇದ್ದ ಇಬ್ಬರೆಂದರೆ ಆಸ್ಕರ್ ಮತ್ತು ಆಂಟೋನಿ. ಸೋನಿಯಾ ಅಷ್ಟು ಅವರನ್ನು ನಂಬುತ್ತಿದ್ದರು. ಆದರೆ ರಾಹುಲ್ ಯಾರನ್ನೂ ನಂಬಲಿಲ್ಲ. ಅದಕ್ಕಾಗಿ ಸುತ್ತ ಎಲ್ಲರೂ ಇದ್ದರೂ ಸ್ವಾಮಿ ಹೆಣೆದ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂದಿರಾ ತುರ್ತು ಪರಿಸ್ಥಿತಿ ಘೋಷಿಸಿಯೂ ರಾಜಕೀಯದಲ್ಲಿ ಫಿನಿಕ್ಸ್ ನಂತೆ ಎದ್ದು ಬಂದು ಅಧಿಕಾರಕ್ಕೆ ಮರಳಿದ್ದರು. ರಾಹುಲ್ ಗೆ ಆ ಅವಕಾಶವೂ ಸಿಗುವುದು ಡೌಟು!

  • Share On Facebook
  • Tweet It


- Advertisement -


Trending Now
ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
Hanumantha Kamath December 5, 2023
ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
Hanumantha Kamath December 5, 2023
Leave A Reply

  • Recent Posts

    • ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
    • ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
    • ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!
    • ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!
    • ಪಂಚಾಯತ್ ಮೂಲಕ ಅಂಗಡಿ ಪಡೆದಿದ್ದ ಆತ!
    • ಚೋಪ್ರಾ ಆಗಲ್ಲ ಎಂದದ್ದಕ್ಕೆ ರಶ್ಮಿಕಾ ಆದ್ಲು ರಣಬೀರ್ ಜೋಡಿ!
  • Popular Posts

    • 1
      ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • 2
      ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • 3
      #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • 4
      ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • 5
      ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search