ಹರ್ಷನ ಆತ್ಮ ನರಳುತ್ತಿದೆ, ಆರೋಪಿಗಳು ಒಳಗೆ ಪಾರ್ಟಿ ಮಾಡುತ್ತಿದ್ದಾರೆ!!
ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎನ್ನುವ ವಾಕ್ಯ ಇಲ್ಲಿಯ ತನಕ ಭಾರತೀಯ ಜನತಾ ಪಾರ್ಟಿ ಸರಕಾರದಲ್ಲಿ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಅದು ಸಾಬೀತಾಗಿದೆ. ಇನ್ನು ಮುಖ್ಯಮಂತ್ರಿ ಅಥವಾ ಯಾವ ಸಚಿವರು ಕೂಡ ಇಂತಹ ಹೇಳಿಕೆಗಳನ್ನು ಕೊಡಲೇಬಾರದು. ಕೊಟ್ಟರೆ ಯಾರೂ ಕೂಡ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಹರ್ಷಾ ಕೊಲೆ ಆರೋಪಿಗಳು ಮಾಡುತ್ತಿರುವ ಕಾರುಬಾರುಗಳನ್ನು ನೋಡಿದರೆ ಹರ್ಷನ ಆತ್ಮ ಮಾತ್ರ ಬೇಸರದಿಂದ ಮರಗುತ್ತಿರಬಹುದು. ಮೊದಲನೇಯದಾಗಿ ಹೊರಗಿದ್ದಾಗ ಹಂತಕ ಆರೋಪಿಗಳು ಚಿಕನ್ ಬಿರಿಯಾನಿ ಡೈಲಿ ತಿನ್ನುತ್ತಿದ್ದರೋ, ಇಲ್ವೋ ಆದರೆ ಅವರು ಹರ್ಷನ ಕೊಲೆಯ ನಂತರ ಅವರಿಗೆ ಜೈಲಿನಲ್ಲಿ ಮೃಷ್ಟಾನ್ನ ಭೋಜನ ಸಿಗುತ್ತಿದೆ. ಇನ್ನು ಆರೋಪಿಗಳು ಒಳ್ಳೆಯ ರೆಸಾರ್ಟಿನಲ್ಲಿ ಇದ್ದ ಹಾಗೆ ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾರೆ. ಇದೆಲ್ಲಾ ಸಾಕ್ಷ್ಯಾಧಾರಗಳೊಂದಿಗೆ ಪತ್ತೆಯಾಗಿದೆ. ಇನ್ನೇನು ಬೇಕು? ಆರಾಮದ ಬದುಕನ್ನು ಜಾಲಿ ಮಾಡಲು ಇವರು ಪರಪ್ಪನ ಅಗ್ರಹಾರವನ್ನೇ ಆಯ್ಕೆ ಮಾಡಿಕೊಂಡರಾ ಎಂದು ಅನಿಸುತ್ತದೆ. ಹಣ ಕೊಟ್ಟರೆ ಇಲ್ಲಿ ಹೆಣ್ಣು ಬಿಟ್ಟು ಬೇರೆ ಎಲ್ಲವೂ ಸಿಗುತ್ತದೆ ಎನ್ನುವ ವಾತಾವರಣ ಇದೆ ಎನ್ನುವುದು ಇಂದು ನಿನ್ನೆಯ ವಿಷಯ ಅಲ್ಲ. ಐಪಿಎಸ್ ಅಧಿಕಾರಿ ರೂಪಾ ಅವರು ಈ ಬಗ್ಗೆ ಬಹಳ ಹಿಂದೆನೆ ತಮ್ಮದೇ ಇಲಾಖೆಯ ಬೇರೆ ಉನ್ನತ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಆದರೆ ಅವರ ಆರೋಪದ ಬಗ್ಗೆ ತನಿಖೆ ಮಾಡುವುದಕ್ಕಿಂತ ಹೆಚ್ಚಾಗಿ ಅವರನ್ನೇ ಹೇಗೆ ಮೂಲೆಗುಂಪು ಮಾಡುವುದು ಎಂದು ರಣತಂತ್ರ ಹೂಡಲಾಯಿತೇ ವಿನ: ಬೇರೆ ಏನೂ ಆಗಿರಲಿಲ್ಲ. ಈಗ ಅದು ಮತ್ತೆ ಸಾಬೀತಾಗಿದೆ.
ಬೇರೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳು ಒಳಗೆ ಎಂತಹ ಗಮ್ಮತ್ತು ಮಾಡುತ್ತಿದ್ದಾರೆ ಎನ್ನುವುದು ಈಗ ಬೇಡಾ. ಆದರೆ ಹರ್ಷನ ಕೊಲೆ ಆರೋಪಿಗಳು ಕೂಡ ಯಾವುದೇ ಪಶ್ಚಾತ್ತಾಪ ಇಲ್ಲದೆ ಮಜಾ ಉಡಾಯಿಸಲು ಅವಕಾಶ ಕೊಟ್ಟಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಆ ಆರೋಪಿಗಳ ಮನೆಯವರು ಧನ್ಯವಾದ ಅರ್ಪಿಸಬೇಕು. ಒಂದು ನಿರ್ಲಜ್ಜ ಸರಕಾರ ಮತ್ತು ಅದಕ್ಕೆ ಕೈಲಾಗದ ಗೃಹ ಸಚಿವರು ಇದ್ದರೆ ಇದಕ್ಕಿಂತ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ? ಹರ್ಷನ ಕೊಲೆ ಆರೋಪಿಗಳನ್ನು ಈ ಸರಕಾರ ಹೇಗೆ ಟ್ರೀಟ್ ಮಾಡಬೇಕಿತ್ತು ಎಂದರೆ ಕೈ ಕಾಲು ಮುರಿದು, ನಡೆಯಲು ಆಗದೇ ಆರೋಪಿಗಳು ಹಿಂದೂ ಯುವಕನೊಬ್ಬನ ಹತ್ಯೆ ಮಾಡಿದ್ದಕ್ಕೆ ಆದಷ್ಟು ಬೇಗ ನಮ್ಮನ್ನು ಕೂಡ ಕರೆಸಿಕೊ ಎಂದು ನಿತ್ಯ ಅವರ ದೇವರಿಗೆ ಕೈ ಬೇಡುವ ಸ್ಥಿತಿಗೆ ತರಬೇಕಿತ್ತು. ಅಷ್ಟು ನೋವು, ನರಕವನ್ನು ಆರೋಪಿಗಳು ಅನುಭವಿಸಬೇಕಿತ್ತು. ಆದರೆ ಏನೂ ಆಗಿಲ್ಲದೆ ಆರೋಪಿಗಳು ಕುಡಿಯುತ್ತಾ, ತಿನ್ನುತ್ತಾ, ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡುತ್ತಾ ಇರುವುದನ್ನು ನೋಡಿದಾಗ ಹರ್ಷನ ಮನೆಯವರಿಗೆ ಬಿಡಿ, ಹರ್ಷನಿಗೆ ಸಂಬಂಧವಿಲ್ಲದ, ನೂರಾರು ಕಿ.ಮೀ ದೂರದಲ್ಲಿರುವ ಸಹೃದಯಿಗಳ ಮನಸ್ಸಿನಲ್ಲಿಯೂ ನೋವು ಹೆಪ್ಪುಗಟ್ಟಿದೆ. ಇಂತಹ ಅಂಧ ದರ್ಬಾರ್ ತಕ್ಷಣ ನಿಲ್ಲದೇ ಹೋದರೆ ಜೈಲಿನ ಹೊರಗಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹರ್ಷನ ಸಹೋದರಿ ಹೇಳಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಹಿಂದೂಗಳಿಗೆ ಇಂತಹ ಪರಿಸ್ಥಿತಿ ಬಂದಿರುವುದೇ ನಿಜಕ್ಕೂ ಅಸಹ್ಯಕರ. ಇದೇ ಸಮಯದಲ್ಲಿ ಒಂದು ವೇಳೆ ಕಾಂಗ್ರೆಸ್ ಸರಕಾರ ಇದ್ದಿದ್ದರೆ “ಸೋಭಾ, ಪ್ರುತಾಪು, ಈಶು ಸಹಿತ ಕೆಲವು ಹಿಂದೂ ಉಲಿಗಳು” ಸುದ್ದಿಗೋಷ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದವು. ಆದರೆ ಈಗ ಎಲ್ಲರೂ ಬಾಲ ಮುದುಡಿ ಮಲಗಿವೆ.
ಇನ್ನು ಹರ್ಷ ಸ್ವತ: ಗೃಹಸಚಿವರ ಜಿಲ್ಲೆಯವನು. ಅವನ ರಕ್ತ ಬಿದ್ದದ್ದು ಅದೇ ಶಿವಮೊಗ್ಗದಲ್ಲಿ. ಆರೋಪಿಗಳು ಅದೇ ಜಿಲ್ಲೆಯವರು. ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಗಿತ್ತು. “ಅವರು” ತಲವಾರು ತೋರಿಸಿದರು. ನಾವು “ಕಠಿಣ ಕ್ರಮ” ಎಂದೆವು. ಆಯಿತು, ಒಂದು ವಾರ. ಅದರ ನಂತರ ಹರ್ಷನ ಕುಟುಂಬಕ್ಕೆ ಹಣ ಕೊಡುವ ಕೆಲಸವಾಯಿತು. ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿಯ ಪ್ರತಿಯೊಬ್ಬ ಮುಖಂಡರೂ ಕೂಡ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಆರೋಪಿಗಳ ಬಂಧನವಾಯಿತು. ಈಶು ಮೇಲೆ 40% ಕಮೀಷನ್ ಆರೋಪ ಬಂತು. ಅವರು ಸಚಿವ ಸ್ಥಾನ ಕಳೆದುಕೊಂಡರು. ಅವರು ಹರ್ಷನನ್ನು ನೆನಪಿಸಿಕೊಳ್ಳಲು ಇನ್ನು ಕೂಡ ಆರೇಳು ತಿಂಗಳು ಇದೆ. ಸೋಭಾ ಈ ಕಡೆ ಬಂದಿಲ್ಲ. ಪ್ರುತಾಪು ಯೋಗದಲ್ಲಿ ಬಿಝಿಯಾದರು. ಆದರೆ ಆ ಮತಾಂಧ ಯುವಕರು ಯಾರಿಗಾಗಿ ಕೆಲಸ ಮಾಡಿದರೋ ಅವರು ಆ ಹಂತಕ ಆರೋಪಿಗಳನ್ನು ಮರೆಯಲಿಲ್ಲ. ಊಟ, ತಿಂಡಿ, ಡ್ರಿಂಕ್ಸ್, ಡ್ರಗ್ಸ್, ಫೋನು ಏನು ಬೇಕೋ ಎಲ್ಲ ಪೂರೈಕೆಯಾಯಿತು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ಹರ್ಷನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಬೇಕು. ಅವರಿಗೆ ಶಿಕ್ಷೆ ಆಗಬೇಕು. ಶಿಕ್ಷೆ ಅತ್ಯುಗ್ರವಾಗಿರಬೇಕು. ಆಗ ಕನಿಷ್ಟ ಈ ಬಿಜೆಪಿ ಸರಕಾರ ಇದ್ದದ್ದಕ್ಕಾದರೂ ಸಾರ್ಥಕವಾಗುತ್ತದೆ. ಆದರೆ ಅದ್ಯಾವುದು ಆಗುತ್ತೋ, ಇಲ್ವೋ, ಅದಕ್ಕಿಂತ ಮೊದಲೇ ಆ ಮತಾಂಧರು ಜೈಲಿನಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಬಿಜೆಪಿಯವರು ಕಠಿಣ ಕ್ರಮ ಕೈಗೊಳ್ಳಲು ಚುನಾವಣೆ ಹತ್ತಿರ ಬರಲು ಕಾಯುತ್ತಿದ್ದಾರೆ!
Leave A Reply