• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಮಗೂ, “ಅವರಿಗೂ” ಇರುವ ವ್ಯತ್ಯಾಸ ಅದೇ?

Hanumantha Kamath Posted On July 13, 2022


  • Share On Facebook
  • Tweet It

ಹಿಂದೂ ದೇವಿಯ ಒಂದು ಕೈಯಲ್ಲಿ ಸಿಗರೇಟು ಮತ್ತೊಂದು ಕೈಯಲ್ಲಿ ಸಲಿಂಗಿ ಬಾವುಟವನ್ನು ನೀಡಿ ಅದರ ವಿಡಿಯೋ ಮಾಡಿ ರಿಲೀಸ್ ಮಾಡಿದ್ರು ಎಂದ ಕೂಡಲೇ ಅದನ್ನು ನೋಡಿದ ಹಿಂದೂಗಳು ಮೊದಲು ಶಪಿಸುವುದು ಹಾಗೆ ಮಾಡಿದವರು ಮಣ್ಣು ತಿಂದು ಹೋಗಲಿ. ಯಾಕೆಂದರೆ ನಾವು ಮನಸ್ಸಿನಲ್ಲಿಯೇ ನೋವು ತಿಂದು ಮಲಗುವವರು. ಹೆಚ್ಚೆಂದರೆ ಸುದ್ದಿಗೋಷ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಬಹುದು. ಅದಕ್ಕಿಂತ ಜಾಸ್ತಿ ನಾವು ಹಿಂದೂಗಳು ಏನೂ ಮಾಡುವುದಿಲ್ಲ ಎಂದು ಹೀಗೆ ಮಾಡುವವರಿಗೆ ಗೊತ್ತಿದೆ. ಒಂದು ವೇಳೆ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆ ಮಾಡಿದರೂ ಅದರಿಂದ ಸ್ವಲ್ಪ ಪ್ರಚಾರವೇ ಆಗುತ್ತದೆ ಎಂದು ದೇವಿಗೆ ಅಪಚಾರ ಮಾಡಿದವರು ಅಂದುಕೊಳ್ಳುತ್ತಾರೆ ವಿನ: ಅಂತವರಿಗೆ ಯಾವ ಹೆದರಿಕೆ ಕೂಡ ಇರುವುದಿಲ್ಲ. ಕೆಲವು ಸಂಘಟನೆಗಳು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಡಬಹುದು. ಆದರೆ ಅದರಿಂದ ಆಗುವಂತದ್ದು ಏನೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೆಲವರು ಪ್ರಧಾನಿಗೆ ಟ್ವಿಟ್ ಮಾಡಬಹುದು ಮತ್ತು ಕೆಲವರು ಫೇಸ್ ಬುಕ್ ನಲ್ಲಿ ಬರೆದು ಹಾಕಬಹುದು. ಅಲ್ಲಿಗೆ ಹಿಂದೂಗಳ ವಿರೋಧ ಮುಗಿಯುತ್ತದೆ. ಇದರಿಂದ ಯಾರಿಗೂ ಗೊತ್ತಾಗದೇ ಸಾಯುತ್ತಿದ್ದ ಒಂದು ಕಳಪೆ ದರ್ಜೆಯ ಸಾಕ್ಷ್ಯಾಚಿತ್ರಕ್ಕೆ ಪುಕ್ಸಟ್ಟೆ ಪ್ರಚಾರ ದೊರಕುತ್ತದೆ. ಹೀಗೆ ಗೇಮ್ ಪ್ಲಾನ್ ಇಳಿದವಳ ಹೆಸರು ಲೀನಾ ಮಣಿಮೇಕಲೈ. ಇವಳನ್ನು ಭಾರತೀಯ ಮೂಲದವಳು ಎಂದು ಹೇಳುವುದು ನಮ್ಮ ದೇಶಕ್ಕೆ ನಾವೇ ಮಾಡುವ ಅವಮಾನ. ಯಾವುದೋ ಒಂದು ಡಾಕ್ಯುಮೆಂಟರಿ ಮಾಡಿದ್ದಾಳೆ. ಪಾಕಿಸ್ತಾನ, ಸೌದಿಯಲ್ಲಿರುವ ಅವಳ ಅಪ್ಪಂದಿರಿಗೆ ತೋರಿಸಿ ಹಣ ಕೀಳಲು ಕಳಪೆ ಟ್ರಿಕ್ಸ್ ಗೆ ಮೊರೆ ಹೋಗಿದ್ದಾಳೆ. ನಮ್ಮ ಕಾಳಿ ಮಾತೆಯ ಪಾತ್ರಧಾರಿಯ ಕೈಯಲ್ಲಿ ಸಿಗರೇಟು ನೀಡಿ ಇನ್ನೊಂದು ಕೈಯಲ್ಲಿ ಸಲಿಂಗಿ ಬಾವುಟ ನೀಡಿ ವಿಡಿಯೋ ಮಾಡಿದ್ದಾಳೆ. ಅಲ್ಲಿಗೆ ಅವಳ ಉದ್ದೇಶ ಈಡೇರಿದೆ. ನಮ್ಮಲ್ಲಿ ಕೆಲವರು ಅದನ್ನು ತಮ್ಮ ಫೇಸ್ ಬುಕ್, ಟ್ವಿಟರ್ ನಲ್ಲಿ ಹಾಕಿ ಖಂಡಿಸಿದ್ದಾರೆ.

ಒಂದು ವೇಳೆ ಈ ಲೀನಾ ಹಿಂದೂ ದೇವಿಯ ಬದಲಿಗೆ ಆ ಸ್ಥಾನದಲ್ಲಿ ಯಾವುದಾದರೂ ಬೇರೆ ಧರ್ಮದ ದೇವರ ಬಗ್ಗೆ ಹಾಗೇ ಮಾಡಿದ್ದರೆ ಏನಾಗುತ್ತಿತ್ತು. ಅವಳು ಎಲ್ಲಿದ್ದಾಳೋ ಅಲ್ಲಿಯೇ ಅವಳ ಅಂತ್ಯಕ್ರಿಯೆ ನೆರವೇರಿಸಬೇಕಾಗಿತ್ತು. ಯಾಕೆಂದರೆ ತಮ್ಮ ಧರ್ಮಕ್ಕೆ ಸಣ್ಣ ಅವಮಾನ ಆದರೂ ನಂತರ ಮಾಡಿದವರು ಕ್ಷಮೆ ಕೇಳಿದರೂ ಮುಸಲ್ಮಾನ ಸಮುದಾಯ ಅಂತವರನ್ನು ಸುಲಭಕ್ಕೆ ಬಿಡುವುದಿಲ್ಲ. ನುಪೂರ್ ಶರ್ಮಾ ಇಸ್ಲಾಂ ಮತದಲ್ಲಿ ಇದ್ದದ್ದನ್ನೇ ಹೇಳಿದಾಗಲೂ ಇಡೀ ದೇಶದಲ್ಲಿ ದೊಂಬಿಗಳಾದವು. ನುಪೂರ್ ಅವರಿಗೆ ಬೆಂಬಲಿಸಿದರು ಎನ್ನುವ ಕಾರಣಕ್ಕೆ ಇಬ್ಬರ ಹತ್ಯೆಗಳಾದವು. ವಿಷಯ ಸುಪ್ರೀಂ ಕೋರ್ಟ್ ತನಕ ಹೋಯಿತು. ಕೋರ್ಟ್ ನುಪೂರ್ ಶರ್ಮಾಗೆ ಕ್ಷಮೆ ಕೇಳು ಎಂದು ಹೇಳಿತು. ರಾಜಸ್ತಾನದಲ್ಲಿ ನಡೆದ ಟೈಲರ್ ಒಬ್ಬರ ಹತ್ಯೆಯ ಬಳಿಕ ಮತಾಂಧ ಆರೋಪಿಗಳು ದೇಶದ ಪ್ರಧಾನಿಯನ್ನು ಕೂಡ ಹತ್ಯೆ ಮಾಡುವುದಾಗಿ ವಿಡಿಯೋ ಮಾಡಿ ಹೇಳಿಕೊಂಡರು. ಈಗಲೂ ಆ ಡಿಬೇಟ್ ನ ಹವಾ ಇದೆ. ಅಂದರೆ ಮುಸ್ಲಿಂ ಮತದ ದೇವರ ವಿರುದ್ಧ ಅವಹೇಳನ ಬಿಡಿ, ವಾಸ್ತವ ಹೇಳಿದರೂ ದೇಶದಲ್ಲಿ ಗಲಭೆಯ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಹಿಂದೂ ಧರ್ಮ, ದೇವರ ಬಗ್ಗೆ ಏನೂ ಮಾಡಿದರೂ ಯಾರಿಗೂ ಹೆದರಿಕೆ ಇಲ್ಲ. ಹಾಗಾದರೆ ನಮ್ಮ ದೇವರ ಬಗ್ಗೆ ಹೀಗೆ ಕೆಟ್ಟದಾಗಿ ಚಿತ್ರಿಸಿದರೆ ನಾವು ಏನು ಮಾಡಬೇಕು? ಮುಸ್ಲಿಮರ ತರಹ ನಾವೇಕೆ ಬೀದಿಗೆ ಇಳಿಯಲ್ಲ? ನಾವು ಯಾಕೆ ಸಾರ್ವಜನಿಕ ಸ್ವತ್ತುಗಳಿಗೆ ಬೆಂಕಿ ಕೊಡಲ್ಲ? ನಾವೇಕೆ ಪೊಲೀಸರ ಮೇಲೆ ಕಲ್ಲು ಬಿಸಾಡಲ್ಲ.

ಯಾಕೆಂದರೆ ನಾವು ಈ ದೇಶದ ಸ್ವತ್ತನ್ನು ನಮ್ಮದು ಎಂದು ಪ್ರೀತಿಸಿದ್ದೇವೆ. ನಾವು ಬೀದಿಗೆ ಇಳಿಯುವುದಕ್ಕಿಂತ ಮೌನವಾಗಿ ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಹೆಚ್ಚಿನ ಪ್ರತಿಫಲ ಸಿಗುತ್ತೆ ಎಂದು ಅಂದುಕೊಂಡಿದ್ದೇವೆ. ಪೊಲೀಸರ ಮೇಲೆ ಕಲ್ಲು ಬಿಸಾಡುವುದು ಈ ದೇಶದ ಕಾನೂನಿಗೆ ವಿರೋಧ, ಈ ದೇಶದ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ತಿಳಿದಿದ್ದೇವೆ. ಬಹುಶ: ಇದರಿಂದಾಗಿ ಗಲಾಟೆ ಮಾಡಲು ನಾವು ಹೋಗಲ್ಲ. ಯಾವಾಗ ಲೀನಾ ತರಹದವರನ್ನು ನಡು ಬೀದಿಯಲ್ಲಿ ನಿಲ್ಲಿಸಿ ಯಾಕೆ ಹಾಗೆ ಮಾಡಿದ್ರಿ ಎಂದು ಘಂಟಾಘೋಷವಾಗಿ ಕೇಳುವಂತಹ ಮನಸ್ಥಿತಿಯನ್ನು ಹಿಂದೂಗಳು ಹೊಂದಿದರೆ ಆಗ ಇದೆಲ್ಲವುದಕ್ಕೆ ಒಂದು ನಿಯಂತ್ರಣ ಬರುತ್ತದೆ. ಇನ್ನು ಲೀನಾ ಪ್ರಪಂಚದ ಯಾವ ಮೂಲೆಯಲ್ಲಿ ಕುಳಿತುಕೊಂಡಿರಲಿ, ನಮ್ಮ ಸರಕಾರ ಅದನ್ನು ಪತ್ತೆ ಹಚ್ಚಿ ಅವಳನ್ನು ಅಲ್ಲಿಂದ ಗಡಿಪಾರು ಮಾಡಿಸಲು ಆ ರಾಷ್ಟ್ರದ ಸರಕಾರದ ಮೇಲೆ ಒತ್ತಡ ಹಾಕಬೇಕು. ಆ ಬಳಿಕ ಅವಳನ್ನು ಅಲ್ಲಿಂದ ಇಲ್ಲಿ ಕರೆಸಿ ಹಿಂದೂಗಳ ಭಾವನೆಗೆ ದಕ್ಕೆ ತಂದ ಪ್ರಕರಣದಲ್ಲಿ ಜೈಲಿಗೆ ಕಳುಹಿಸಬೇಕು. ಅಲ್ಲಿ ಸ್ವಲ್ಪ ದಿನ ಅವಳಿಗೆ ತಕ್ಕ ಶಾಸ್ತಿ ಆದರೆ ಆಗ ಅವಳಿಗೆ ಕನಸಿನಲ್ಲಿಯೂ ಹೆದರಿಕೆ ಬರಬಹುದು. ಲೀನಾನಂತವರು ದಾರಿಗೆ ಬರಬೇಕಾದರೆ ಹೀಗೆ ಮಾಡಬೇಕು. ಇನ್ನು ಲೀನಾ ತನ್ನ ಸಾಮಾಜಿಕ ಜಾಲತಾಣವೊಂದರಲ್ಲಿ 2013 ರ ಸೆಪ್ಟೆಂಬರ್ 13 ರಂದು ಒಂದು ವಿಷಯ ಬರೆದಿದ್ದಳು. ” ಮೋದಿ ಈ ದೇಶದ ಪ್ರಧಾನಿಯಾದರೆ ನಾನು ನನ್ನ ಪಾಸ್ ಪೋರ್ಟ್, ರೇಶನ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪೌರತ್ವವನ್ನು ಬಿಡುತ್ತೇನೆ ಎಂದು ಶಪಥ ಮಾಡುತ್ತೇನೆ” ಅವಳು ಹಾಗೆ ಹೇಳಿದ ನಂತರ ಮೋದಿ ಎರಡು ಸಲ ಪ್ರಧಾನಿಯಾಗಿ ದೇಶದ ಅತ್ಯುನ್ನತ ಸ್ಥಾನಕ್ಕೆ ಹೋದರು. ಅವಳು ಮಾತ್ರ ಕೆಸರಿನಲ್ಲಿ ಮುಳುಗಿ ಹಂದಿಯೊಂದಿಗೆ ಸರಸವಾಡುತ್ತಿದ್ದಾಳೆ. ಅಲ್ಲಿಯೇ ಅಂತ್ಯವಾಗುತ್ತಾಳೆ.

  • Share On Facebook
  • Tweet It


- Advertisement -


Trending Now
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
Leave A Reply

  • Recent Posts

    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
  • Popular Posts

    • 1
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 2
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 3
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 4
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 5
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search