• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಿಸ್ ಕೊಟ್ಟವಳ ಯೂನಿಫಾರಂ ಎಲ್ಲಾ ಕಥೆ ಹೇಳುತ್ತಿತ್ತು!!

Hanumantha Kamath Posted On July 21, 2022
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ರಸ್ತೆಯೊಂದಕ್ಕೆ ಹೆಸರಿಡುವ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಶಿಕ್ಷಣ ಸಂಸ್ಥೆಯೊಂದು ಈಗ ಕಿಸ್ಸಿಂಗ್ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಯುವಕನೊಬ್ಬ ಯುವತಿಗೆ ಫ್ರೆಂಚ್ ಕಿಸ್ ಎಂದು ಕರೆಯಲಾಗುವ ಕಿಸ್ ಒಂದನ್ನು ಬಹಳ ಆಳವಾಗಿ ನೀಡುವುದನ್ನು ಆ ಕೋಣೆಯಲ್ಲಿರುವ ಮತ್ತೊಬ್ಬ ಯುವಕ ಚಿತ್ರೀಕರಿಸಿದ್ದು ಅದೀಗ ವೈರಲ್ ಆಗಿದೆ. ಈಗ ಅದು ಮೊಬೈಲ್ ಗಳಲ್ಲಿ ಹರಿದಾಡುತ್ತಿದ್ದು, ಯುವತಿಯ ಮುಖ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದೇ ಕೋಣೆಯಲ್ಲಿ ಇನ್ನೊಂದು ಯುವತಿ ಯುವಕನೊಬ್ಬನ ತೊಡೆಯ ಮೇಲೆ ಮಲಗಿದಂತೆ ಕಾಣಿಸುತ್ತಿದ್ದಾಳೆ. ಇನ್ನೊಂದೆರಡು ಯುವಕರು ಆ ಕೋಣೆಯಲ್ಲಿ ಇರುವುದು ಸ್ಪಷ್ಟ. ಇದು ವಿದೇಶಗಳಲ್ಲಿ ಆಡುವ ಟ್ರೂತ್ ಅಂಡ್ ಡೇರ್ ಎನ್ನುವ ಆಟವಾಗಿದ್ದು ಅಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದೆ. ಆಟಗಾರರಲ್ಲಿ ಒಬ್ಬನಿಂದ ಇನ್ನೊಬ್ಬ ಆಟಗಾರನಿಗೆ ಎರಡು ಟಾಸ್ಕ್ ಕೊಡಲಾಗುತ್ತದೆ. ಅದರಲ್ಲಿ ಒಂದನ್ನು ಟಾಸ್ಕ್ ತೆಗೆದುಕೊಂಡವ/ಳ ಆಟಗಾರ ಮಾಡಲೇಬೇಕು. ಆ ಕಂಡಿಷನ್ ಮೇಲೆ ಆಟ ನಡೆಯುತ್ತದೆ. ಅದರಲ್ಲಿ ಒಂದು ಟಾಸ್ಕ್ ಹೀಗೆ ಕಿಸ್ ಕೊಡುವುದು ಕೂಡ ಇರಬಹುದು. ಕಿಸ್ ಕೊಡದೇ ಇದ್ದರೆ ಮೊದಲ ಆಟಗಾರ ಕೇಳುವ ಪ್ರಶ್ನೆಗೆ ಇನ್ನೊಬ್ಬ ಅಥವಾ ಇನ್ನೊಬ್ಬಳು ನೈಜ ಉತ್ತರ ಕೊಡಬೇಕು. ಆ ಪ್ರಶ್ನೆ ಯಾವುದೇ ತುಂಬಾ ವೈಯಕ್ತಿಕವಾಗಿಯೂ ಇರಬಹುದು. ಈ ರೀತಿ ಆಟ ಸಾಗುತ್ತದೆ. ನಾವು ಅಲ್ಲಿ ಏನೂ ಮಾಡಿಲ್ಲ, ಒಂದು ಆಟ ಆಡುತ್ತಿದ್ವಿ ಎಂದು ಆ ಯುವಕ, ಯುವತಿಯರು ಹೇಳುತ್ತಿದ್ದಾರಂತೆ. ಇದನ್ನು ಒಂದು ಆಟ ಎಂದು ಅಂದುಕೊಳ್ಳುವುದೇ ಭಾರತೀಯ ಸಂಸ್ಕೃತಿಗೆ ಮಾಡುವ ಮೋಸ.

ವಿದೇಶದಲ್ಲಿ ಸ್ವಚ್ಚಂದತೆಗೆ ವ್ಯಾಪಕ ಅವಕಾಶಗಳಿರಬಹುದು. ಆದರೆ ಭಾರತದಲ್ಲಿ ಇಂತಹ ಆಟಗಳು ನಿಷಿದ್ಧ. ಯಾಕೆಂದರೆ ಇದು ನಮ್ಮ ಸಂಸ್ಕೃತಿ ಅಲ್ಲ. ಹಾಗಾದರೆ ನಮಗೆ ಒಂದು ಆಟವಾಡುವುದಕ್ಕೂ ಸ್ವಾತಂತ್ರ್ಯವಿಲ್ಲವೇ ಎಂದು ಯುವಕ, ಯುವತಿಯರು ಕೇಳಬಹುದು. ಇಂತಹ ಆಟ ಏನೇ ಇರಲಿ, ಆದರೆ ಇದರ ಹಿಂದೆ ಆ ಯುವತಿಯ ಕುಟುಂಬದ ಮರ್ಯಾದೆ ಕೂಡ ಅಡಕವಾಗಿದೆ. ನಮ್ಮ ಮಗಳು ಹೀಗೆ ಕಿಸ್ ಕೊಟ್ಟರೆ ಅವಳ ಸ್ವಾತಂತ್ರ್ಯ ಅದು, ನಮಗೇನು ಅಡ್ಡಿ ಇಲ್ಲ ಎಂದು ಹೆತ್ತವರು ಹೇಳಿದ್ದರೆ ಅದು ಬೇರೆ ಮಾತು. ಇಲ್ಲದಿದ್ದರೆ ಇಂತಹ ಆಟದಿಂದ ಅದ್ಯಾವ ಖುಷಿ ಸಿಗುತ್ತೋ ಅವರಿಗೆ ಮಾತ್ರ ಗೊತ್ತು. ಇನ್ನು ಆಕೆ ಕಲಿಯುತ್ತಿರುವ ಕಾಲೇಜು ಒಂದು ಕಾಲದಲ್ಲಿ ಬಹಳ ಕಟ್ಟುನಿಟ್ಟಿಗೆ ಹೆಸರುವಾಸಿಯಾಗಿತ್ತು. ನಮ್ಮ ಮಕ್ಕಳನ್ನು ಅಲ್ಲಿ ಓದಲು ಕಲಿಸಿದರೆ ಬಹಳ ಒಳ್ಳೆಯದು ಎಂದು ಪೋಷಕರು ಮಾತನಾಡಿಕೊಳ್ಳುತ್ತಿದ್ದರು. ಆ ಕಾಲೇಜಿನ ಕಾರಿಡಾರ್ ನಲ್ಲಿ ನಡೆದುಕೊಂಡು ಹೋಗುವಾಗಲೂ ವಿದ್ಯಾರ್ಥಿನಿಯರು ತಲೆ ಕೆಳಗೆ ಮಾಡಿ ನಡೆಯುತ್ತಿದ್ದರು. ಕ್ಯಾಂಪಸ್ ನಲ್ಲಿ ಬಹಳ ಶಿಸ್ತಿನ ವಾತಾವರಣ ಇತ್ತು. ಶಿಕ್ಷಕರು ಅಕ್ಷರಶ: “ಫಾದರ್”ಗಳಂತೆ ಸ್ಟಿಕ್ಟ್ ಆಗಿರುತ್ತಿದ್ದರು. ಅದೇ ಕಾರಣಕ್ಕೆ ಕಾಲೇಜು ಹೆಸರುವಾಸಿಯಾಗಿತ್ತು. ಆಗ ಆ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಹೆದರುತ್ತಿದ್ದವು.

ಪ್ರಸ್ತುತ ಈ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಹಾತೊರೆಯುತ್ತಿದ್ದಾರೆ. ಯಾಕೆ ಗೊತ್ತಾ? ಅಲ್ಲಿ ಸಿಗುತ್ತಿರುವ ಸ್ವೇಚ್ಚಾಚಾರ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದರ ಒಂದು ಸ್ಯಾಂಪಲ್ ಈಗ ವೈರಲ್ ಆಗುತ್ತಿದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಒಂದು ಕಿಸ್ ಕೊಟ್ಟ ಕೂಡಲೇ ಜಗತ್ತು ಮುಳುಗಿ ಹೋಗುವುದಿಲ್ಲ ಎಂದು ಪ್ರಗತಿಪರರು ಹೇಳಬಹುದು. ಆದರೆ ಇಲ್ಲಿ ಕಾಲೇಜಿನ ಆಡಳಿತ ಮಂಡಳಿ ಮೌನವಾಗಿದ್ದರೆ ಇದು ವೈರಸ್ ನಂತೆ ಇಡೀ ಕಾಲೇಜನ್ನು ಆವರಿಸಿಕೊಳ್ಳಲು ತಡವಾಗುವುದಿಲ್ಲ. ಹಿಂದೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಲ್ಲಿಯಾದರೂ ಕದ್ದು ಮುಚ್ಚಿ ಸಿಗರೇಟ್ ಸೇದಲು ಕೂಡ ಭಯಪಡುತ್ತಿದ್ದರು. ಯಾರಾದರೂ ನೋಡಿ ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೇಳಿದರೆ ಚರ್ಮ ಸುಳಿಯುವಂತೆ ಬಾರಿಸುತ್ತಾರೆ ಎನ್ನುವ ಆತಂಕ ಇತ್ತು. ಅದರ ನಂತರ ಶಿಕ್ಷಕರಿಗೂ ಹೆದರುವಂತಹ ವಾತಾವರಣ ಇತ್ತು. ಆದರೆ ಮಕ್ಕಳಿಗೆ ಹೊಡೆಯಬಾರದು ಎಂದು ಸರಕಾರ ನಿಯಮ ಹೊರಡಿಸಿದ ನಂತರ ಮಕ್ಕಳಿಗೆ ಹೊಡೆಯಲು ಶಿಕ್ಷಕರು ಹಿಂದೇಟು ಹಾಕಿದರು. ಇನ್ನು ಎಷ್ಟೋ ಸಲ ಶಿಕ್ಷಕರು ಬುದ್ಧಿಮಾತಿಗೆ ಮಕ್ಕಳಿಗೆ ಎರಡು ಪೆಟ್ಟು ಹೊಡೆದದ್ದನ್ನೇ ಪೋಷಕರು ಶಾಲೆಗೆ ಬಂದು ರಂಪಾಟ ಮಾಡಿದುಂಟು. ಇದರಿಂದ ಅಂತಿಮವಾಗಿ ವಿಲನ್ ಆದದ್ದು ಶಿಕ್ಷಕರು.

ಇನ್ನು ವಿಡಿಯೋದಲ್ಲಿ ಕಾಣಿಸುವ ಯುವತಿ, ಯುವಕ ಪ್ರೀತಿಯ ಬಲೆಯಲ್ಲಿ ಬಿದ್ದು ಕಿಸ್ ಕೊಟ್ಟು ಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ಅವರು ನಿಮ್ಮ ಕಿವಿಯ ಮೇಲೆ ಯಾವ ಸೀಸನ್ನಿನ ಹೂ ಇಟ್ಟುಕೊಂಡಿದ್ದಾರೆ ಎಂದು ನೋಡಿಕೊಳ್ಳಿ. ಯಾಕೆಂದರೆ ಅಪ್ಪನ ಪಾಕೆಟ್ ಮನಿಯಲ್ಲಿ ಕಾಲೇಜಿಗೆ ಬರುವ ಯುವಕ, ಯುವತಿಯರು ಲವ್ ಗೆ ಬಿದ್ದು ಹೀಗೆ ಮುತ್ತಿನಾಟ ಆಡಿ ಅದರಿಂದ ಹೆಚ್ಚು ಕಡಿಮೆಯಾಗಿ ಭವಿಷ್ಯ ಹಾಳಾದರೆ ಆಗ ಹುಟ್ಟಿಸಿದ ತಪ್ಪಿಗೆ ಅದೇ ಅಪ್ಪ, ಅಮ್ಮ ಏನು ಮಾಡಬೇಕು. ಕಾಲೇಜು ಜೀವನ ಎಂದರೆ ಅದೊಂದು ರೀತಿಯಲ್ಲಿ ತಪಸ್ಸು ಇದ್ದಂತೆ. ಅಲ್ಲಿ ಕಳೆಯುವ ಒಂದೊಂದು ಗಂಟೆಯೂ ಮಕ್ಕಳ ಬದುಕಿನ ಯಶಸ್ಸಿನ ಮೆಟ್ಟಿಲುಗಳಾಗಬಹುದು. ಹಾಗಾದರೆ ಕಾಲೇಜಿನಲ್ಲಿ ಪುಂಡರಾಗಿದ್ದವರು ಬದುಕಿನಲ್ಲಿ ಉನ್ನತ ಸ್ಥಾನ ಪಡೆದಿಲ್ಲವೇ ಎಂದು ಕೇಳಬಹುದು. ಆದರೆ ಯಶಸ್ಸು ಚೆನ್ನಾಗಿ ಕಲಿತು, ಉತ್ತಮ ಸಂಸ್ಕಾರ ಪಡೆದುಕೊಂಡಾಗಲೂ ಸಿಗುತ್ತದೆ. ಆತ ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಎಂದು ಶಿಕ್ಷಕರು, ಆಡಳಿತ ಮಂಡಳಿಯವರು ಹೇಳುವ ಹಾಗೆ ಶಿಕ್ಷಣ ಮುಗಿಸಬೇಕು. ಆತ ಅಥವಾ ಆಕೆ ನನ್ನ ಮಗಳು ಎಂದು ಹೆತ್ತವರು ಹೆಮ್ಮೆಯಿಂದ ಹೇಳುವ ಹಾಗೆ ಇರಬೇಕು. ಇಲ್ಲದಿದ್ದರೆ ಈಗಿನ ಕಾಲದಲ್ಲಿ ವಿಡಿಯೋ ನೋಡಿ ಮೊದಲು ಕಂಡು ಹಿಡಿಯುವುದೇ ಆಕೆ ಯಾವ ಕಾಲೇಜಿನವಳು ಎನ್ನುವುದು. ಯಾಕೆಂದರೆ ಧರಿಸಿದ ಸಮವಸ್ತ್ರವೇ ಎಲ್ಲವನ್ನು ಹೇಳುತ್ತದೆ!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search