ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಹೆಣೆದಿರುವ 4 ತಂತ್ರಗಳು ಭಯಾನಕವಾಗಿದೆ!!
Posted On July 25, 2022
ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾಗುವಾಗ ಇದು ಮುಸಲ್ಮಾನ ರಾಷ್ಟ್ರವಾಗಬೇಕು ಎಂದು ಮತಾಂಧರು ಷಡ್ಯಂತ್ರ ಹೆಣೆದಿರುವ ವಿಷಯ ಈಗಾಗಲೇ ಬಹಿರಂಗವಾಗಿದೆ. ಆದರೆ ಅದನ್ನು ಸಾಧಿಸುವುದಕ್ಕೆ ಪಿಎಫ್ ಐ ಮತ್ತು ಅದರ ಅಂಗ ಸಂಘಟನೆ ಎಸ್ ಡಿಪಿಐ ತೆಗೆದುಕೊಂಡಿರುವ ಹೆಜ್ಜೆಗಳ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಇದು ಘೋರ ಅನಾಹುತಕ್ಕೆ ಕಾರಣವಾದೀತು. ತಮ್ಮ ಗುರಿ ಸಾಧಿಸಲು ಪಿಎಫ್ ಐ ನಿಧಾನವಾಗಿ ಒಂದೊಂದೇ ಮೆಟ್ಟಿಲು ಏರುತ್ತಿದೆ. ಅದಕ್ಕಾಗಿ ಭಾರತದಲ್ಲಿರುವ ಒಟ್ಟು ಮುಸಲ್ಮಾನರ ಪೈಕಿ ಕನಿಷ್ಟ 10% ಮುಸ್ಲಿಮರಾದರೂ ನಮ್ಮ ಸಂಘಟನೆ ಸೇರಿಕೊಳ್ಳಿ ಎನ್ನುವುದು ಮೊದಲ ಯತ್ನ. ಪ್ರತಿ ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯದಲ್ಲಿರುವ ಮುಸಲ್ಮಾನರನ್ನು ಗುರುತಿಸಿ ಅದರಲ್ಲಿರುವ ಯುವಕರಿಗೆ ಪಿಎಫ್ ಐಗೆ ಸೇರುವಂತೆ ಪ್ರೇರೆಪಿಸುವುದು. ಈ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ, ಹಿಂದೂಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ಅವರ ಮನಸ್ಸಿನಲ್ಲಿ ತುಂಬುವುದು. ಕಾಫೀರರನ್ನು ಜೀವಂತ ಉಳಿಸಬಾರದು ಎಂದು ಅವರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವುದು ಅದರ ಇನ್ನೊಂದು ಆಯಾಮ. ಯಾವಾಗ ಒಟ್ಟು ಮುಸಲ್ಮಾನರಲ್ಲಿ 10% ಜನ ಪಿಎಫ್ ಐ ಗೆ ಸೇರಿದರೆ ಆ ಸಂಘಟನೆ ಬಲಿಷ್ಟವಾಗುತ್ತದೆಯೋ ಆಗ ಗುರಿಯತ್ತ ಹೋಗುವುದು ಸುಲಭವಾಗುತ್ತದೆ. ಆದ್ದರಿಂದ ಮೊದಲಿಗೆ 10% ಎಂದು ಟಾರ್ಗೆಟ್ ಇಡುವುದು, ನಂತರ ಒಂದಿಷ್ಟು ಜಾಸ್ತಿ ಮಾಡುತ್ತಲೇ ಹೋಗುವುದು ಪಿಎಫ್ ಐ ಪ್ಲಾನ್ ಆಗಿದೆ.
ಪಿಎಫ್ ಐ ಮಾಡಿರುವ ಎರಡನೇ ಅಸ್ತ್ರ ಏನೆಂದರೆ ತಮ್ಮ ಪಕ್ಷ ಮತ್ತು ತಮ್ಮ ಅಂಗಸಂಸ್ಥೆಗಳು ಹೊಸ ಸದಸ್ಯರನ್ನು ಸಂಘಟನೆಗೆ ಮತ್ತು ಪಕ್ಷಕ್ಕೆ ಸೇರಿಸಿಕೊಳ್ಳಲೇಬೇಕು ಎನ್ನುವುದಾಗಿದೆ. ಯಾಕೆಂದರೆ ವಿದ್ಯಾಭ್ಯಾಸ ಚೆನ್ನಾಗಿರುವ, ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದಿರುವ, ಉತ್ತಮ ಹಿನ್ನಲೆಯ ಮುಸಲ್ಮಾನ ಯುವಕರು ಪಿಎಫ್ ಐಯಂತಹ ಸಂಘಟನೆಗೆ ಏನೂ ಸೊಪ್ಪು ಹಾಕುತ್ತಿಲ್ಲ. ಆ ಸಂಘಟನೆಯನ್ನು ಸೇರುವುದು ಬಿಡಿ, ಅದನ್ನು ದ್ವೇಷಿಸುವುದು ಕೂಡ ಮಾಡುತ್ತಿರುತ್ತಾರೆ. ಹಾಗಿರುವುದರಿಂದ ಬಡ, ಅವಿದ್ಯಾವಂತ, ಗ್ರಾಮೀಣ ಭಾಗದ ಅಮಾಯಕ ಮುಸ್ಲಿಂ ತರುಣರನ್ನೇ ಆದಷ್ಟು ಪಕ್ಷ, ಸಂಘಟನೆಗೆ ಸೇರಿಸಿಕೊಳ್ಳಬೇಕೆಂಬ ಗುರಿ ಇವರದ್ದು. ಅವರು ಸೇರಿದರೆ ಸಾಲದು, ಅವರಿಗೆ ಬೇರೆಯವರ ಮೇಲೆ ದಾಳಿ ನಡೆಸುವ, ಪ್ರತಿದಾಳಿಯಾದರೆ ರಕ್ಷಣಾತ್ಮಕ ಅಸ್ತ್ರಗಳನ್ನು ಬಳಸುವ ಮತ್ತು ಅವರಿಗೆ ವಿವಿಧ ತರಬೇತಿ ನೀಡಿ ಗಲಭೆಗೆ ಅಣಿಗೊಳಿಸುವ ಕೆಲಸವನ್ನು ನಡೆಸಬೇಕು ಎಂದು ಪಿಎಫ್ ಐ ತನ್ನ ರಣತಂತ್ರವನ್ನು ಹೆಣೆಯುತ್ತಿದೆ. ಇದು ಒಂದು ರೀತಿಯಲ್ಲಿ ಅಗತ್ಯ ಬಿದ್ದರೆ ಹಿಂಸೆಯಿಂದಲಾದರೂ ಭಾರತವನ್ನು ತಮ್ಮ ಕಬ್ಜೆಗೆ ತೆಗೆದುಕೊಳ್ಳಬೇಕೆನ್ನುವ ಗುರಿಯಾಗಿದೆ. ಹಾಗಾದ್ರೆ ಇದು ಸಾಧ್ಯಾನಾ? ಈ ಬಗ್ಗೆ ಪ್ರಯತ್ನಗಳು ಸಾಗಿವೆ. ಪೊಲೀಸರ ಮೇಲೆ ಹಲ್ಲೆ, ಹತ್ಯಾ ಯತ್ನ ಸಹಿತ ಹಿಂದೂ ಮುಖಂಡರನ್ನು ಗುರಿಯಾಗಿಸಿ ಮಾಡುವ ಕೃತ್ಯಗಳು ಈಗಾಗಲೇ ಇವರ ಷಡ್ಯಂತ್ರಕ್ಕೆ ಪುರಾವೆಯನ್ನು ಒದಗಿಸಿವೆ. ಇನ್ನು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವ ಬಗ್ಗೆ ತರಬೇತಿ ಕೂಡ ನೀಡಲು ಸಿದ್ಧತೆ ನಡೆಯಲಿದೆ. ರಕ್ಷಣೆ ಎಂದರೆ ಅದು ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿಯೂ ಇರಲಿದೆ. ಇನ್ನು ಮುಸ್ಲಿಮರಲ್ಲಿರುವ ಪುಂಡ ಸಮುದಾಯ ಹೀಗೆ ಕಾಲಾಳುಗಳಂತೆ ಹೊಡೆದಾಡುವ ಕೆಲಸಕ್ಕೆ ನಿಂತರೆ ಇದು ಸಾಧ್ಯವಾಗದ ವಿಧೇಯ ಮುಸ್ಲಿಮರು ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಬೇರೊಂದು ರೀತಿಯಲ್ಲಿ ಸಹಕರಿಸಬೇಕು ಎನ್ನುವ ತಂತ್ರ ರೂಪಿಸಲಾಗಿದೆ. ಅದೇಗೆಂದರೆ ವಿಧೇಯ ಮುಸ್ಲಿಮರು ಭಾರತದ ಸರಕಾರಿ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಸೇರುವುದು. ಇಲಾಖೆಗಳ ಒಳಗೆ ಇದ್ದುಕೊಂಡೇ ದೇಶವನ್ನು ದುರ್ಬಲಗೊಳಿಸಲು ನೋಡುವುದು. ಅದರ ತಾಜಾ ಉದಾಹರಣೆಯಾಗಿ ಬಿಹಾರದ ಪಾಟ್ನಾದಲ್ಲಿ ಮೋದಿ ಭೇಟಿಯ ಹಿಂದಿನ ದಿನ ವಿಧ್ವಂಸಕ ಕೃತ್ಯ ಮಾಡಲು ತಯಾರಾಗಿದ್ದ ಮೂವರ ಬಂಧನವಾಗಿತ್ತಲ್ಲ, ಅದರಲ್ಲಿ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಎನ್ನುವುದೇ ಭಯಾನಕ ಮುನ್ನುಡಿ ಎಂದು ತಿಳಿದುಕೊಳ್ಳಬಹುದು. ಇಂತವರನ್ನು ಹೆಚ್ಚೆಚ್ಚು ದೇಶದ ಆಡಳಿತ, ನ್ಯಾಯಾಂಗ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವಂತೆ ಸಂಚು ರೂಪಿಸಲಾಗುತ್ತಿದೆ. ಇನ್ನು ಪಿಎಫ್ ಐಯವರು ಬಿತ್ತುತ್ತಿರುವ ಮತ್ತೊಂದು ಸುಳ್ಳಿನ ಬೀಜ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮತ್ತು ಎಸ್ ಸಿ, ಎಸ್ ಟಿ ಹಾಗೂ ಒಬಿಸಿಯ ನಡುವೆ ಕಂದಕ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು. ಸಂಘ ಕೇವಲ ಉನ್ನತ ಜಾತಿಯವರ ರಕ್ಷಣೆಗೆ ಇರುವುದು ಎಂದು ಉಳಿದವರಲ್ಲಿ ಅಪನಂಬಿಕೆ ಬರುವಂತೆ ಮಾಡುವುದು. ಸಂಘ ಯಾವತ್ತೂ ಕೂಡ ಹಿಂದೂಗಳಲ್ಲಿ ಭೇದಬಾವವನ್ನು ಮಾಡಿಲ್ಲ. ಮುಸ್ಲಿಮರನ್ನು ದ್ವೇಷಿಸಬೇಕು ಎಂದು ಕೂಡ ಹೇಳಿಕೊಟ್ಟಿಲ್ಲ. ಆದರೆ ಹಿಂದೂಗಳು ಒಡೆಯಬೇಕಾದರೆ ಅದರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿದರೆ ಅರ್ಧ ಕೆಲಸ ಆದ ಹಾಗೆ ಎನ್ನುವುದು ಮತಾಂಧ ಸಂಘಟನೆಗಳ ಅಸ್ತ್ರ. ಅದಕ್ಕಾಗಿ ತಮ್ಮ ಪ್ರತಿ ಹೋರಾಟದಲ್ಲಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡುತ್ತಾರೆ. ಅಂಬೇಡ್ಕರ್ ಅವರ ಮೇಲೆ ಲವಶೇಷದಷ್ಟು ಗೌರವ ಇಲ್ಲದಿದ್ದರೂ ಹಿಂದೂಗಳನ್ನು ಒಡೆಯಲು ಇದು ಅಗತ್ಯ ಎಂದು ಪಿಎಫ್ ಐ ತೀರ್ಮಾನಿಸಿದೆ. ಇನ್ನೊಂದು ಪಿಎಫ್ ಐ ಮಾಡಿರುವ ಪ್ಲಾನ್ ಪ್ರತಿ ಮುಸ್ಲಿಂ ಕುಟುಂಬದಲ್ಲಿ ಕನಿಷ್ಟ ಒಬ್ಬನಾದರೂ ಸದಸ್ಯ ಪಿಎಫ್ ಐಗೆ ಸೇರಿರಬೇಕು. ಒಬ್ಬ ಸೇರಿದರೆ ನಂತರ ಆತ ನಿಧಾನವಾಗಿ ಇಡೀ ಕುಟುಂಬವನ್ನು ಪಿಎಫ್ ಐಗೆ ಸೆಳೆಯುತ್ತಾನೆ ಎನ್ನುವುದು ಪ್ಲಾನ್. ಇನ್ನು ಹಾಗೆ ಸೇರಿದವರು ಆರ್ ಎಸ್ ಎಸ್ ನಾಯಕರ ಬಗೆ ಮಾಹಿತಿ ಸಂಗ್ರಹಿಸಿಕೊಟ್ಟಬೇಕು ಎನ್ನುವುದು ಗ್ರೌಂಡ್ ರಿಪೋರ್ಟ್. ಹೀಗೆ ಎಲ್ಲವನ್ನು ರೂಪುರೇಶೆಯೊಂದಿಗೆ ಸಿದ್ಧಗೊಳಿಸಿ ಮತಾಂಧರು ಫೀಲ್ಡಿಗೆ ಇಳಿದಿದ್ದಾರೆ. ಅವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುವುದಿಲ್ಲ ಎನ್ನುವುದು ನಿಜವಾದರೂ ಹಿಂದೂಗಳ ದಿವ್ಯ ನಿರ್ಲಕ್ಷ್ಯ ಭಾರತದ ಐಕ್ಯತೆಗೆ ಹೊಡೆತ ನೀಡಬಾರದಲ್ಲ!
- Advertisement -
Leave A Reply