• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!

Hanumantha Kamath Posted On August 15, 2022
0


0
Shares
  • Share On Facebook
  • Tweet It

ಕೆಲವು ವಿಷಯಗಳು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ನಡೆಯುತ್ತದೆ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಅವರಿಗೆ ಕೆಲಸ ಆಗುವ ತನಕ ಒಂದು ವಿಷಯ ನೆನಪಿರುತ್ತದೆ. ಒಮ್ಮೆ ದೋಣಿ ದಡ ಸೇರಿದರೆ ನಂತರ ಅವರಿಗೆ ಅಂಬಿಗನ ಹಂಗು ಇರುವುದಿಲ್ಲ. ಈ ವಿಷಯ ಹೇಳಬೇಕಾಗಿರುವುದು ಪರೇಶ್ ಮೆಸ್ತಾ ಎನ್ನುವ ಹಿಂದೂ ಯುವಕನ ಹತ್ಯೆಯ ವಿಷಯದಲ್ಲಿ ಬಿಜೆಪಿ ಮಾಡಿರುವ ಎಡವಟ್ಟು. ಮೇಸ್ತ ಹೊನ್ನಾವರದ ಯುವಕ. ಅವನ ತೋಳಿನಲ್ಲಿ ಜೈಶ್ರೀರಾಮ್ ಎಂದು ಬರೆಯಲಾಗಿತ್ತು. ಆ ಒಂದು ಕಾರಣಕ್ಕೆ ಅವನನ್ನು ಜಿಹಾದಿಗಳು ಭೀಭತ್ಸವಾಗಿ ಕೊಂದು ಕೆರೆಯೊಂದರ ದಂಡೆಯ ಮೇಲೆ ಎಸೆದು ಹೋಗಿದ್ದರು. ಸತ್ತ ಎರಡು ದಿನಗಳ ಬಳಿಕ ಮೇಸ್ತ ಶವ ಪತ್ತೆಯಾಗಿತ್ತು. ಅದು 2017 ನೇ ಇಸ್ವಿ. ಬಿಜೆಪಿ ವಿಪಕ್ಷದಲ್ಲಿತ್ತು. ಪ್ರತಿಭಟನೆ ಹೇಗೆ ನಡೆಯಿತು ಎಂದರೆ ಆಗಿನ ಕಾಂಗ್ರೆಸ್ ಸರಕಾರ ಅಲ್ಲಾಡಿಬಿಟ್ಟಿತ್ತು. ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಬಿಜೆಪಿ ಹಟಕ್ಕೆ ಕುಳಿತುಕೊಂಡಿತ್ತು. ಕಾಂಗ್ರೆಸ್ಸಿಗೆ ಬೇರೆ ಉಪಾಯ ಇರಲಿಲ್ಲ. ಪ್ರಕರಣದ ತನಿಖೆ ಈಗಲೂ ನಡೆಯುತ್ತಿದೆ. ಆ ಕೇಸಿನ ವಿಚಾರಣೆಯಲ್ಲಿ ಜಮಾಲ್ ಅಣ್ಣಿಗೇರಿ ಎಂಬಾತನನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು. ಅಣ್ಣಿಗೇರಿ ಆ ಕೊಲೆ ಪ್ರಕರಣದಲ್ಲಿ ಆರೋಪಿ ಕೂಡ ಆಗಿದ್ದಾರೆ. ನಂತರ ಸಹಜವಾಗಿ ಬಿಜೆಪಿ ಸರಕಾರ ಬಂತು. ಹೇಗೂ ಅವರ ಬಳಿ ಜಿಹಾದಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತರ ಪಟ್ಟಿಯೇ ಇತ್ತು. ಅವರಿಗೆ ಸಹಜವಾಗಿ ಕರಾವಳಿಯಲ್ಲಿ ಸಿಕ್ಕಿದ ಬೆಂಬಲ ಹೇಗಿತ್ತು ಎಂದರೆ ಗೆಲ್ಲುವುದು ಡೌಟು ಎನ್ನುವವರೆಲ್ಲ ಶಾಸಕರಾಗಿ ಆಯ್ಕೆಯಾದರು. ಅಷ್ಟೇ, ನಂತರ ಮೇಸ್ತ ನೆನಪಿದದ್ದು ಆತನ ಕುಟುಂಬಕ್ಕೆ ಮತ್ತು ಸಿಬಿಐಯ ತನಿಖಾಧಿಕಾರಿಗೆ ಮಾತ್ರ. ವಿಷಯ ಹೀಗಿರುವಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಕಾರ್ಯಕರ್ತರು ನಿಗಮ, ಮಂಡಳಿ, ಪ್ರಾಧಿಕಾರ, ಅಕಾಡೆಮಿಯ ಅಧ್ಯಕ್ಷ, ಸದಸ್ಯರಾಗುವ ಕಾಲದಲ್ಲಿ ವಕ್ಫ್ ಬೋರ್ಡಿನ ಉಪಾಧ್ಯಕ್ಷರಾಗಿ ನೇಮಕವಾದದ್ದು ಯಾರು ಗೊತ್ತೆ. ಇದೇ ಅಣ್ಣಿಗೇರಿ, ಅಂದರೆ ಮೇಸ್ತ ಕೊಲೆ ಆರೋಪಿ.

ಹಿಂದೂ ಎನ್ನುವ ಕಾರಣಕ್ಕೆ ಹತನಾದಂತಹ, ಅಂತವರ ಸಮಾಧಿಯ ಮೇಲೆ ಅಧಿಕಾರಕ್ಕೆ ಬಂದವರು ಅದೇ ಹಿಂದೂ ಕಾರ್ಯಕರ್ತನ ಹತ್ಯಾ ಆರೋಪಿಯನ್ನು ತಮ್ಮದೇ ಸರಕಾರ ಇರುವಾಗ ವಕ್ಫ್ ಬೋರ್ಡಿನ ಉಪಾಧ್ಯಕ್ಷರನ್ನಾಗಿ ಮಾಡಿಬಿಟ್ಟರು. ಒಂದು ವೇಳೆ ಇದನ್ನು ಕಾಂಗ್ರೆಸ್ ಮಾಡಿದಿದ್ದರೆ ಬಿಜೆಪಿ ರಾಜ್ಯದಲ್ಲಿ ಬೀದರ್ ನಿಂದ ಸುಳ್ಯ ತನಕ ಒಂದು ಮಾಡಿ ಪ್ರತಿಭಟನೆ ಮಾಡಿಬಿಡುತ್ತಿತ್ತು. ಆದರೆ ಈಗ ಉಪಾಯವಿಲ್ಲ. ತಮ್ಮಿಂದ ತಪ್ಪಾಗಿದೆ ಎನ್ನುವುದು ಅರಿವಿಗೆ ಸರಕಾರಕ್ಕೆ ಯಾವಾಗ ಬಂತು ಎಂದರೆ ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಂತರ. ತಕ್ಷಣ ಎಚ್ಚೆತ್ತ ಸರಕಾರ ಆ ನೇಮಕಾತಿಯನ್ನು ತಡೆಹಿಡಿದಿದೆ. ಅದಕ್ಕೆ ಕೊಟ್ಟಿರುವ ಕಾರಣ ಜನರಿಂದ ವಿರೋಧ ಬಂದಿದೆ. ನಿಜವಾಗಿ ಆತ್ಮಸಾಕ್ಷಿ ಇದ್ದವರು ಹೀಗೆ ನಿರ್ಲಕ್ಷ್ಯ ಮಾಡುವುದಿಲ್ಲ. ಜನರಿಂದ ವಿರೋಧ ಬಂದರೆ ಮಾತ್ರ ಆಗ ನೋಡೋಣ ಎಂದು ಹಿಂದೂ ಕಾರ್ಯಕರ್ತರ ಹತ್ಯಾ ವಿಷಯದಲ್ಲಿ ಯಾವ ಸರಕಾರವೂ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳಲೇಬಾರದು. ಆದರೆ ಇವರಿಗೆ ತಾವೇ ನೇಮಿಸಲು ಹೊರಟಿದ್ದ ವಕ್ಫ್ ಬೋರ್ಡ್ ಉಪಾಧ್ಯಕ್ಷ ತಮ್ಮದೇ ಕಾರ್ಯಕರ್ತನ ಕೊಲೆ ಆರೋಪಿ ಎಂದು ಗೊತ್ತೆ ಇಲ್ಲ. ಯಾಕೆಂದರೆ ಹತ್ಯೆ ನಡೆದು ನಾಲ್ಕುವರೆ ವರ್ಷ ಆಗಿದೆ. ಅಣ್ಣಿಗೇರಿ ಬಹುಶ: ಬಿಜೆಪಿ ನಾಯಕರ ಜೊತೆ ಚೆನ್ನಾಗಿದ್ದ ಎಂದು ಅನಿಸುತ್ತದೆ. ಅದಕ್ಕೆ ಅವನ ಮೇಲೆ ಹೆಗಲ ಮೇಲೆ ಕೈ ಹಾಕಿ ಉಪಾಧ್ಯಕ್ಷ ಮಾಡಲು ಹೊರಟಿದ್ದಾರೆ. ಈಗ ವಿವಾದ ಆದ ನಂತರ ಅದು ಆವತ್ತು ಕಾಂಗ್ರೆಸ್ ಮಾಡಿದ ಶಿಫಾರಸ್ಸಿನ ಪಟ್ಟಿಯಲ್ಲಿ ಇತ್ತು. ಹಾಗೆ ಮಾಡಲಾಗಿತ್ತು ಎನ್ನುತ್ತಿದ್ದಾರೆ. ಇವರದ್ದು ಎಲ್ಲವೂ ಹೀಗೆ. ಯಾರನ್ನು ಶತಾಯಗತಾಯ ವಿರೋಧಿಸಿ ಅಧಿಕಾರಕ್ಕೆ ಬಂದರೋ ಅವರು ಕೊಟ್ಟ ಪಟ್ಟಿ ಎಂದು ಜಾರಿಗೆ ತರುವ ಮೊದಲು ಒಂದಿಷ್ಟು ನೋಡಬೇಕಾ? ಬೇಡ್ವಾ? ನೀವು ಎಲ್ಲಿಯಾದರೂ ಕಾಂಗ್ರೆಸ್ ಅಥವಾ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಇದ್ದಾಗ ಬಿಜೆಪಿ ಕಾರ್ಯಕರ್ತನನ್ನು ಯಾವುದಾದರೂ ನಿಗಮ, ಪ್ರಾಧಿಕಾರಕ್ಕೆ ಸದಸ್ಯ ಅಥವಾ ಯಾವುದಾದರೂ ಹುದ್ದೆಗೆ ನೇಮಿಸಿದ್ದು ನೋಡಿದ್ದೀರಾ? ಇಲ್ಲ, ಅವರು ನೇಮಿಸುವುದಿಲ್ಲ. ಅವರಿಗೆ ತಮ್ಮ ಕಾರ್ಯಕರ್ತರ ಶ್ರಮ ಗೊತ್ತಿದೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪಕ್ಷದವನು ಬೇಕಾದರೂ ಯಾವ ಆಯಕಟ್ಟಿನ ಸ್ಥಾನಕ್ಕೂ ಆಯ್ಕೆ ಆಗುವ ಸಾಧ್ಯತೆ ಇದೆ. ತಮಗೆ ಏನಾದರೂ ಲಾಭ, ಪ್ರಯೋಜನ ಇದೆಯಾ ಅಂತವನನ್ನು ಎಲ್ಲಿಗೆ ಬೇಕಾದರೂ ಇವರು ನೇಮಿಸುತ್ತಾರೆ. ಇವರನ್ನು ಹೀಗೆ ಬಿಟ್ಟರೆ ಸುರತ್ಕಲ್ ನಲ್ಲಿ ಆವತ್ತು ದೀಪಕ್ ರಾವ್ ಹತ್ಯೆಯ ಆರೋಪಿಗಳನ್ನು ಕೂಡ ಇವರು ಯಾವುದಾದರೂ ಒಂದು ಕಡೆ ನೇಮಿಸಲು ಕೂಡ ಹೇಸುವವರಲ್ಲ. ಹಾಗಾದರೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷ ವಿಪಕ್ಷದಲ್ಲಿದ್ದಾಗಲೂ ಪೆಟ್ಟು ತಿನ್ನಬೇಕು. ಆಡಳಿತ ಪಕ್ಷದಲ್ಲಿ ಇದ್ದಾಗಲೂ ಆಕಾಶ ನೋಡುವಂತಹ ಪರಿಸ್ಥಿತಿ ಬರುತ್ತದೆ ಎಂದರೆ ಇದಕ್ಕಿಂತ ದುರಂತ ಬೇರೆ ಏನಾದರೂ ಇದೆಯಾ? ಸರಕಾರ ಸ್ವಾತಂತ್ರ್ಯದ ವಿಷಯದಲ್ಲಿ ಕೊಟ್ಟ ಜಾಹೀರಾತಿನಲ್ಲಿ ನೆಹರೂ ಫೋಟೋವನ್ನೇ ಹಾಕಿಲ್ಲ ಎಂದು ಕಾಂಗ್ರೆಸ್ ತಗಾದೆ ತೆಗೆದಿದ್ದಾರೆ. ಅದನ್ನೇ ಸರಿಯಾಗಿ ಡೆಫೆಂಡ್ ಮಾಡದೇ ಸಿಎಂ ಏನೋ ಸಬೂಬು ಹೇಳಿ ಮುಗಿಸಲು ಹೊರಟಿದ್ದಾರೆ. ಇವರಿಗೆ ಯಾವ ವಿಷಯದಲ್ಲಿ ಗಂಭೀರತೆ ಇಲ್ಲದೇ ಇದ್ದ ಕಾರಣ ಇವತ್ತು ಬಿಜೆಪಿ ಕಾರ್ಯಕರ್ತರು ಇವರ ಮೇಲೆ ಭ್ರಮನಿರಸನರಾಗಿದ್ದಾರೆ. ಉಪಾಯ ಇಲ್ಲದೆ ಬಿಜೆಪಿಗೆ ಮತ ಹಾಕಲೂಬಹುದು. ಆದರೆ ಋಣ ಮರೆತ ನಾಯಕರು ಅದನ್ನು ಮುಂದೆ ಅನುಭವಿಸುವ ಕಾಲವೂ ಬರಬಹುದು!

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search