• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಟಿಪ್ಪು ಜಯಂತಿಯಿಂದ ಸಿದ್ದು ಆರಂಭಿಸಿದ ಯುದ್ಧ ನಿಲ್ಲುತ್ತಿಲ್ಲ!

Tulunadu News Posted On August 18, 2022
0


0
Shares
  • Share On Facebook
  • Tweet It

ಈ ಚೂರಿ ಇರಿತ, ಗಲಾಟೆ, ಫೆಕ್ಸ್ ವಿವಾದ, ಸಚಿವರುಗಳ ಹೇಳಿಕೆ, 144 ಸೆಕ್ಷನ್, ಅಂಗಡಿ-ಮುಗ್ಗಟ್ಟು ಬಂದ್, ವ್ಯಾಪಾರ ವಹಿವಾಟು ಸ್ಥಗಿತ, ಅರೆಮಿಲಿಟರಿ ಪಡೆ ಆಗಮನ, ಶಾಂತಿ ಸಭೆ, ಈಗಂತೂ ಪೊಲೀಸರಿಗೆ ಚಾಕು ತೋರಿಸಿ ಹಲ್ಲೆಗೆ ಬಂದ ಎನ್ನುವ ಕಾರಣಕ್ಕೆ ಪೊಲೀಸರಿಂದ ಗುಂಡೇಟು. ಇದೆಲ್ಲಾ ಯಾರು ಬಯಸುತ್ತಿದ್ದಾರೆ. ಯಾರಿಗೆ ಇದು ಬೇಕು? ಯಾರಿಗೆ ಇದರಿಂದ ಲಾಭ, ಯಾರಿಗೆ ಇದರಿಂದ ಬೇಳೆ ಬೇಯುವುದು ಅಥವಾ ಯಾರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ. ಈ ವಿಷಯ ಹಿಡಿದುಕೊಂಡು ಮೂಲ ಕಂಡುಹಿಡಿದು ಸತ್ಯ ಬಹಿರಂಗಗೊಳಿಸಿದರೆ ಇದು ನಿಲ್ಲುತ್ತದೆ. ಅದು ಬಿಟ್ಟು ಇದರಿಂದ ಯಾರಾದರೂ ತಮಗೆ ಪ್ರಯೋಜನ ಆಗುತ್ತೆ ಎಂದು ಅಂದುಕೊಂಡು ಮಾಡಿಸುತ್ತಿದ್ದರೆ ಇದು ಇವತ್ತಲ್ಲ, ಯಾವತ್ತಿಗೂ ನಿಲ್ಲುವುದಿಲ್ಲ. ಸದ್ಯ ಈ ಗಲಭೆಗಳ ಹಿಂದಿರುವುದು ಸಾವರ್ಕರ್ ವಿಷಯ. ಸಾವರ್ಕರ್ ಬಗ್ಗೆ ಆಳವಾಗಿ ಓದಿದವರು ಅವರನ್ನು ವಿರೋಧಿಸಲ್ಲ. ಅವರನ್ನು ವಿರೋಧಿಸಬೇಕೆಂದು ಹೊರಟವರು ಅವರನ್ನು ತಿಳಿದುಕೊಳ್ಳುವ, ಓದುವ ಗೋಜಿಗೆ ಓದಲ್ಲ. ಯಾಕೆಂದರೆ ಎಲ್ಲಿಯಾದರೂ ಸ್ಟಡಿ ಮಾಡಿ ಹೋರಾಟಕ್ಕೆ ಇಳಿಯೋಣ ಎಂದು ನಿರ್ಧರಿಸಿದರೆ ವಿರೋಧಿಸುವುದಕ್ಕೆ ವಿಷಯವೇ ಇರುವುದಿಲ್ಲ. ಆದ್ದರಿಂದ ಗಲಾಟೆ ಮಾಡುವವರಿಗೆ ಸಾವರ್ಕರ್ ನೆಪ ಮಾತ್ರ ಎನ್ನುವುದು ಯಾವತ್ತೋ ಸಾಬೀತಾಗಿದೆ. ಸಾವರ್ಕರ್ ಬಿಟ್ಟು ಬೇರೆ ಯಾರ ಫೋಟೋ ಹಾಕಿದರೂ ಯಾರೂ ವಿರೋಧ ಮಾಡುವುದಿಲ್ಲ. ಯಾಕೆಂದರೆ ಒಂದು ವಿಷಯದ ಮೇಲೆ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ಸಿಗುವ ತನಕ ಮತ್ತು ಸ್ವಾತಂತ್ರ್ಯ ಸಿಕ್ಕಿದ ನಂತರದ ಕಾಲಗತಿಯಲ್ಲಿ ತಾವು ನಂಬಿದ ಸಿದ್ಧಾಂತವನ್ನು ಛಲ ಬಿಡದೆ ಮುಂದುವರೆಸಿದ ಏಕೈಕ ನಾಯಕ ವಿನಾಯಕ ದಾಮೋದರ ಸಾವರ್ಕರ್. ಆ ವ್ಯಕ್ತಿಯನ್ನು ವಿರೋಧಿಸುವುದರಿಂದ ಹಿಂದೂತ್ವವಾದಿಗಳನ್ನು ಕೆಣಕುತ್ತೇವೆ ಮತ್ತು ಭಾರತೀಯ ಜನತಾ ಪಾರ್ಟಿಯನ್ನು ತಿವಿಯುತ್ತೇವೆ ಎಂದು ಯಾರಾದರೂ ಹೊರಟರೆ ಅದರಿಂದ ನಷ್ಟವಾಗುವುದು ಕೇವಲ ವಿರೋಧಿಸಿದವರಿಗೆ ಮಾತ್ರ. ಯಾಕೆಂದರೆ ಪ್ರತಿ ಬಾರಿ ಇಂತಹ ಗಲಾಟೆಗಳಾದಾಗ ಲಾಭ ಆಗಿದ್ದು ಬಿಜೆಪಿಗೆ. ಭವಿಷ್ಯದಲ್ಲಿ ಬಿಜೆಪಿಗೆ ಎದುರಾಳಿಯಾಗುವ ಯಾವುದಾದರೂ ಪಕ್ಷ ಇದ್ದಲ್ಲಿ ಅದು ಕಾಂಗ್ರೆಸ್ ಅಲ್ಲ. ಅದು ಎಸ್ ಡಿಪಿಐ. ಯಾಕೆಂದರೆ ಬಿಜೆಪಿ ಹಿಂದೂತ್ವದೊಂದಿಗೆ ಹೋದರೆ ಎಸ್ ಡಿಪಿಐ ತನ್ನ ಅಲ್ಪಸಂಖ್ಯಾತ ನಿಲುವುಗಳಿಗೆ ಗಟ್ಟಿಯಾಗಿ ನಿಂತಿದೆ. ಆದರೆ ಸಿದ್ದು ತರದವರು ಸಾವರ್ಕರ್ ಹಿಂದೂ ಎನ್ನುವ ಕಾರಣಕ್ಕೆ ಬೆಂಬಲ ಕೊಡುವುದಿಲ್ಲ, ಅತ್ತ ಟಿಪ್ಪು ಮುಸ್ಲಿಂ ಎನ್ನುವ ಕಾರಣಕ್ಕೆ ಬಿಡಲು ಹೋಗಲು ತಯಾರಿಲ್ಲ. ಒಂದು ಸಿದ್ಧಾಂತದೊಂದಿಗೆ ಹೋಗಲು ಬಯಸದವರು ಕಾಂಗ್ರೆಸ್ ಜೊತೆ ಇರಬಹುದು. ಆದರೆ ಇಂತಹ ಗಲಭೆಗಳು ನಿಲ್ಲುವುದು ಯಾವಾಗ?

ಇದನ್ನು ನಿಲ್ಲಿಸಲು ಮುಖ್ಯವಾಗಿ ಮಾಡಬೇಕಾಗಿರುವುದು ಆಯಾ ಸಮುದಾಯದ ಯುವಕರ ಮನ ಪರಿವರ್ತನೆ. ಸಾವರ್ಕರ್ ಅವರ ಫ್ಲೆಕ್ಸ್ ಹತ್ತಾರು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಇದ್ದರೆ ಒಬ್ಬ ಮುಸಲ್ಮಾನ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಯಾಕೆಂದರೆ ಸಾವರ್ಕರ್ ದೇಶದ್ರೋಹಿಯಲ್ಲ. ಅವರು ಈ ದೇಶದ ಜನರನ್ನು ಹಿಂಸಿಸಿಲ್ಲ. ದೌರ್ಜನ್ಯ ಎಸಗಿಲ್ಲ. ಮತಾಂತರ ಆಗಲು ಪ್ರಚೋದಿಸಿಲ್ಲ. ಅತ್ಯಾಚಾರ ಎಸಗಿಲ್ಲ. ಯಾರ ಕೊಲೆಯೂ ಮಾಡಿಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ದೇಶವಿಭಜನೆಯ ವಿರುದ್ಧ ಇದ್ದ ಗಂಡುಗಲಿ ಅವರು. ಅಂತವರನ್ನು ಯಾರಾದರೂ ವಿರೋಧಿಸುತ್ತಾರೆ ಎಂದರೆ ಅದು ಅಪ್ಪಟ ಮೂರ್ಖತನ. ಇನ್ನು ಟಿಪ್ಪುವನ್ನು ಯಾಕೆ ಹಿಂದೂಗಳು ವಿರೋಧಿಸಬೇಕು? ಟಿಪ್ಪುವಿನ ಹಿನ್ನಲೆಯಲ್ಲಿ ಮತಾಂಧತೆಯ ಛಾಯೆ ಇತ್ತು. ಮತಾಂತರದ ರಕ್ತಸಿಕ್ತ ಅಧ್ಯಾಯ ಇತ್ತು. ಟಿಪ್ಪು ಕೆಲವು ಉತ್ತಮ ಹೆಜ್ಜೆಗಳನ್ನು ಇಟ್ಟಿರಬಹುದು. ಆದರೆ ತೊಂಭತ್ತೊಂಬತ್ತು ಅನ್ಯಾಯ ಆದಾಗ ಒಂದೆರಡು ಒಳ್ಳೆಯ ಕೆಲಸಗಳು ಗುಣಗಾನ ಮಾಡಲು ಅರ್ಹವಾಗಿರುವುದಿಲ್ಲ. ಅಷ್ಟಿದ್ದೂ ಟಿಪ್ಪುವನ್ನು ಯಾರಾದರೂ ತಮ್ಮಷ್ಟಕ್ಕೆ ಆರಾಧಿಸಿದರೆ ಅದರಿಂದ ಆಗುವಂತದ್ದು ಏನೂ ಇಲ್ಲ. ಆದರೆ ಸಿದ್ದು ಅಲ್ಪಸಂಖ್ಯಾತರನ್ನು ಒಲೈಸಲು ತಾವು ಸಿಎಂ ಆಗಿದ್ದಾಗ ಸರಕಾರಿ ಪ್ರಾಯೋಜಿತವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಕರೆಕೊಟ್ಟರು. ವಿವಾದ ಶುರುವಾಗಿದ್ದೇ ಅಲ್ಲಿಂದ. ದೇವರನ್ನು ನಂಬದ ಸಿದ್ದು ತಮ್ಮ ಮನೆಯ ಬೆಡ್ ರೂಂನಲ್ಲಿ ಟಿಪ್ಪು ಫೋಟೋ ಇಟ್ಟು ಪೂಜೆ ಮಾಡಿದರೆ ಅದು ಅವರ ಇಷ್ಟ. ಆದರೆ ಜನರ ತೆರಿಗೆಯ ಹಣದಲ್ಲಿ ಒಬ್ಬ ವಿವಾದದಿಂದಲೇ ತುಂಬಿದ ಟಿಪ್ಪು ಜಯಂತಿಯನ್ನು ಆಚರಿಸುವುದು ಸರಿನಾ ಎಂದು ಬಿಜೆಪಿ ಮುಖಂಡರು ಕೇಳಿದರು. ಅಷ್ಟೇ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಯತ್ನ ಮತ್ತು ಕೊಲೆಗಳು ಕೂಡ ನಡೆದು ಹೋಯಿತು. ಒಬ್ಬ ಸಮಾಜವಾದದ ಹಿನ್ನಲೆಯಿಂದ ಬಂದ ಸಿದ್ದು ರಾಜ್ಯದಲ್ಲಿ ಗಲಭೆಗೆ ಕಾರಣವಾಗುವ ವಿಷಯಕ್ಕೆ ನಾಂದಿ ಹಾಡಿ ಆಗಿತ್ತು. ಅವರೇ ಆರಂಭಿಸಿದ ಯುದ್ಧ ಅವರೇ ನಿಲ್ಲಿಸಬೇಕು. ಆದರೆ ಅವರು ಕೇಳುತ್ತಿಲ್ಲ. ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದು ಯಾಕೆ? ಎಂದು ಸಿದ್ದು ಕೇಳುತ್ತಾರೆ. ಅದರ ಬದಲಿಗೆ ಯಾರು ಇಂತಹ ಕೃತ್ಯಗಳಿಗೆ ಮುಂದಾಗುತ್ತಾರೋ ಅವರಿಗೆ ತಕ್ಕ ಶಾಸ್ತ್ರಿ ಮಾಡಿ ಎಂದು ಸರಕಾರದ ಬೆಂಬಲಕ್ಕೆ ನಿಂತಿದ್ದರೆ ಇದು ಕಡಿಮೆಯಾಗುತ್ತಿತ್ತು. ಆದರೆ ಹಾಗೆ ಆಗುತ್ತಿಲ್ಲ. ಇನ್ನು ಯಾವುದೇ ಸಮುದಾಯದಲ್ಲಿ ಇಂತಹ ಕೃತ್ಯ ಮಾಡುವವರು ಇರುತ್ತಾರೋ ಅವರಿಗೆ ಆ ಸಮುದಾಯದವರು ಬಹಿಷ್ಕಾರ ಹಾಕಲೇಬೇಕು. ಅವರಿಗೆ ಯಾವುದೇ ಆರ್ಥಿಕ, ಸಾಮಾಜಿಕ, ಕಾನೂನಾತ್ಮಕವಾಗಿ ಸಹಾಯ ಮಾಡಲು ಹೋಗಬಾರದು. ಅವರಿಗೆ ತೀಕ್ಣವಾಗಿ ಬುದ್ಧಿ ಹೇಳಬೇಕು. ಆಗ ಕಾನೂನು ಬಂಜಕರ ಅರ್ಧ ಧಮ್ ಕಡಿಮೆಯಾಗುತ್ತದೆ.!

0
Shares
  • Share On Facebook
  • Tweet It




Trending Now
ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
Tulunadu News August 23, 2025
'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
Tulunadu News August 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
  • Popular Posts

    • 1
      ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 2
      'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • 3
      ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • 4
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 5
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!

  • Privacy Policy
  • Contact
© Tulunadu Infomedia.

Press enter/return to begin your search