ಯಡ್ಡಿಯ 1 ವರ್ಷದ ದಿವ್ಯ ಮೌನ ದುಬಾರಿಯಾಗಲಿದೆ ಎಂದು ಹೈಕಮಾಂಡಿಗೆ ಅನಿಸಿತ್ತು!

ಸದ್ಯ ಇನ್ನು ಒಂದೂವರೆ ವರ್ಷ ಯಡ್ಡಿ ಆ ಸ್ಥಾನದಲ್ಲಿ ಇದ್ದೇ ಇರುತ್ತಾರೆ. ಯಾಕೆಂದರೆ ಲೋಕಸಭಾ ಚುನಾವಣೆ ಕೂಡ ಆಗಬೇಕಲ್ವಾ? ಹಾಗಾದರೆ ಯಡ್ಡಿ ಸಂಸದೀಯ ಮಂಡಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ? ಏನಿಲ್ಲ. ಅವರನ್ನು ಬಿಜೆಪಿ ಕಡೆಗಣಿಸಿಲ್ಲ ಎಂದು ಹೊರಗಿನವರಿಗೆ ಗೊತ್ತಾಗುತ್ತೆ ಅಷ್ಟೇ. ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿರುತ್ತಾನೋ ಅಷ್ಟು ಅವನಿಗೆ ಮೇಲೆ ಗೌರವ ಜಾಸ್ತಿ. ಕಾರ್ಯಕರ್ತರು ಎಷ್ಟು ಬೇಕಾದರೂ ಸಿಗುತ್ತಾರೆ. ಆದರೆ ಯಡ್ಡಿಯತಂವರು ಒಬ್ಬರೇ ಇರುವುದು ಎಂದು ಮೋದಿ, ಶಾಗೆ ಗೊತ್ತಿದೆ. ಈ ಸ್ಥಾನ ಕೊಡದಿದ್ದರೂ ಯಡ್ಡಿ ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮಾಡುತ್ತಿರಲಿಲ್ಲವಾ? ಮಾಡುತ್ತಿದ್ದರು. ಆದರೆ ಈಗ ಅವರಿಗೆ ಪ್ರಚಾರ ಮಾಡುವುದು ಅನಿವಾರ್ಯ. ಯಾಕೆಂದರೆ ಜವಾಬ್ದಾರಿ ಇದೆ. ಇನ್ನು ಟಿಕೆಟ್ ಕೊಡುವ ಸಮಯದಲ್ಲಿಯೂ ಅವರ ಮಾತು ನಡೆಯುತ್ತೆ. ಏಕೆಂದರೆ ಆ ಸಮಿತಿಯಲ್ಲಿಯೂ ಅವರು ಸದಸ್ಯರು. ಅವರಿಗೆ ಬೇಕಾದವರಿಗೆ ಟಿಕೆಟ್ ಕೊಡಿಸಬಹುದು. ಆದರೆ ಗೆಲ್ಲಿಸುವ ಜವಾಬ್ದಾರಿ ಕೂಡ ಇದ್ದೇ ಇರುತ್ತದೆ. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ಪಕ್ಷ ಬಹುಮತ ಪಡೆದುಕೊಂಡು ಸರಕಾರ ಅಧಿಕಾರಕ್ಕೆ ತಮ್ಮ ಬಿಗಿಹಿಡಿತವನ್ನು ತೋರಿಸಬಹುದು. ಮಗನಿಗೆ ರಾಜಕೀಯ ಗಟ್ಟಿನೆಲೆಯನ್ನು ಒದಗಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ವಯಸ್ಸಾದ ಮುಖಂಡರಿಗೆ ಮಾಡಿದಂತೆ ತನ್ನನ್ನು ಸೈಡ್ ಲೈನ್ ಮಾಡಲಿಕ್ಕೆ ಆಗಲಿಲ್ಲ ಎಂದು ತೋರಿಸಿ ತನ್ನ ಸುತ್ತಲೂ ಪಕ್ಷ ಸುತ್ತುವಂತೆ ಮಾಡಬಹುದು. ಕೊನೆಗೂ ನಾನೇ ಬೇಕಾಯಿತಲ್ಲ ಎಂದು ರಾಷ್ಟ್ರೀಯ ನಾಯಕರಿಗೆ ತೋರಿಸಿದಂತೆ ಆಯಿತು. ಒಟ್ಟಿನಲ್ಲಿ ರಾಜಕೀಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೂರು ಸಲ ಯೋಚಿಸಬೇಕು ಎಂದು ಈ ವಿಷಯದಲ್ಲಿ ರಾಷ್ಟ್ರೀಯ ನಾಯಕರಿಗೂ ಪಾಠ ಕಲಿತಂತೆ ಆಯಿತು. ಏನೇ ಭ್ರಷ್ಟಾಚಾರದ ಆರೋಪ, ಪುತ್ರವಾತ್ಸಲ್ಯ ಇದ್ದರೂ ಯಡ್ಡಿಯ ಹಿಂದೆ ಪ್ರಬಲ ಲಿಂಗಾಯಿತ ಸಮುದಾಯ ಇರುವುದು ಒಂದು ವರ್ಷದ ಹಿಂದೆ ಬಿಜೆಪಿ ಹೈಕಮಾಂಡಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು. ಆದರೆ ಯಡ್ಡಿಯ ಮೌನ ಅವರಿಗೆ ದುಬಾರಿಯಾದಂತೆ ಅನಿಸಿತ್ತು. ಒಂದಂತೂ ನಿಜ, ಯಡ್ಡಿಗೆ ಪರ್ಯಾಯವಾಗಿ ಹೊಸ ನಾಯಕನ ಉಗಮ ಸದ್ಯಕ್ಕೆ ಆಗಿಲ್ಲ ಎನ್ನುವುದು ನಿಜ. ಪಕ್ಷದಲ್ಲಿ ಬಿಡಿ, ಬಿಡಿ ನಾಯಕರು ಹಲವರು ಇದ್ದಾರೆ. ಆದರೆ ಇಡೀ ರಾಜ್ಯಕ್ಕೆ ಬಿಜೆಪಿಯಲ್ಲಿ ಇರುವ ಏಕೈಕ ನಾಯಕ ಯಡ್ಡಿ ಎಂದು ಮೋದಿ, ಶಾ ಒಪ್ಪಿಕೊಂಡಂತೆ ಆಗಿದೆ!
Leave A Reply