• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಆರೋಗ್ಯ ಸುದ್ದಿ 

ರಾಜಾ ಸಿಂಗ್ ತಲೆ ತೆಗೆಯುತ್ತೇವೆ ಎಂದವರು ಆರಾಮವಾಗಿದ್ದಾರೆ!!

Hanumantha Kamath Posted On August 29, 2022
0


0
Shares
  • Share On Facebook
  • Tweet It

ಹೈದ್ರಾಬಾದಿನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಫಾರೂಕಿ ಎಂಬುವವರು ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಜೋಕ್ ಮಾಡಿ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಭಾಜಪಾ ಪಕ್ಷದ ತೆಲಂಗಾಣದ ಶಾಸಕ ಟಿ ರಾಜಾ ಸಿಂಗ್ ಎನ್ನುವವರು ಪೈಗಂಬರರ ಕುರಿತಾಗಿ ತಮ್ಮ ನಾಲಗೆಯನ್ನು ಹರಿಯಬಿಟ್ಟಿದ್ದಾರೆ ಎನ್ನುವುದು ವಿವಾದವಾಗಿತ್ತು. ಅದಕ್ಕೆ ಪ್ರತಿಯಾಗಿ ಒಂದು ಕ್ಷಣವೂ ತಡಮಾಡದೇ ಭಾರತೀಯ ಜನತಾ ಪಾರ್ಟಿ ಶಾಸಕ ರಾಜಾ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿತ್ತು. ಅಲ್ಲಿಗೆ ಆ ವಿವಾದ ಮುಗಿಯಬೇಕಿತ್ತು. ಆದರೆ ಕೆಲವು ಮುಸಲ್ಮಾನ ಸಂಘಟನೆಗಳು ಅದೇ ರಾತ್ರಿ ಬಹಳ ದೊಡ್ಡ ಸಂಖ್ಯೆಯಲ್ಲಿ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ ಮಾಡಿದ್ದವು. ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಸುಮಾರು 97 ಪ್ರತಿಭಟನಾಕಾರರನ್ನು ಬಂಧಿಸಿದ್ದರು. ಪ್ರತಿಭಟನೆ ಮಾಡುತ್ತಿದ್ದವರು ಹೇಳುತ್ತಿದ್ದ ಘೋಷಣೆ ಒಂದೇ “ತನ್ ಸರ್ ಸೆ ಜೂದಾ” ಇದರ ಅರ್ಥ ರಾಜಾ ಸಿಂಗ್ ತಲೆಯನ್ನು ದೇಹದಿಂದ ಬೇರ್ಪಡಿಸುತ್ತೇವೆ. ಹಾಗೇ ಕೋಪೋದ್ರಿಕ್ತ ಗುಂಪನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದರೆ ಅಲ್ಲಿನ ಸಂಸದ ಓವೈಸಿ ಒಂದು ಫೋನ್ ಕಾಲ್ ಮಾಡಿ ಅಷ್ಟು ಮಂದಿಯನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು. ನಂತರ ಏನಾಯಿತು? ಎಲ್ಲರನ್ನು ಬಿಡುಗಡೆ ಮಾಡಲಾಗಿತ್ತು. ರಾಜಾ ಸಿಂಗ್ ಅವರಿಗೆ ನಂತರ ಜಾಮೀನು ಸಿಕ್ಕಿತ್ತು. ನಂತರ ಮುಸ್ಲಿಂ ಸಂಘಟನೆಗಳ ಒತ್ತಾಯಕ್ಕೆ ಮಣಿದು ಪೊಲೀಸರು ಮತ್ತೊಮ್ಮೆ ಬೇರೆ ಸೆಕ್ಷನ್ ಹಾಕಿ ರಾಜಾ ಸಿಂಗ್ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಲವು ಮುಸ್ಲಿಮರು ಪೊಲೀಸ್ ಅಧಿಕಾರಿಗಳಿಗೆ ಮನವಿ ಕೊಡಲು ಹೋಗಿದ್ದರು. ಅಲ್ಲಿ ಮೀಡಿಯಾಗಳು ಕೂಡ ಇದ್ದವು. ಅವುಗಳ ಎದುರೇ ಮುಸ್ಲಿಂ ಮುಖಂಡನೊಬ್ಬ “ಸರ್ ತನ್ ಸೇ ಜೂದಾ” ಎಂದು ಘೋಷಣೆ ಕೂಗಿದ್ದಾನೆ.

ಇದೆಲ್ಲವೂ ಪೊಲೀಸರ ಎದುರೇ ಆಗಿದೆ. ಇಂತವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಓವೈಸಿಗೆ ಕೇಳಿದಾಗ ಅದು ಸರಿಯಲ್ಲ ಎಂದು ಮೇಲ್ನೋಟಕ್ಕೆ ಹೇಳಿದ್ದರಾದರೂ ಅದು ಕೇವಲ ಮಾಧ್ಯಮದವರು ಕೇಳಿದ್ದಕ್ಕೆ ಹೇಳಿದ್ದು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಯಾಕೆಂದರೆ ಓವೈಸಿ ಮುಂದೆ ಒಂದು, ಹಿಂದೆ ಒಂದು ಎಂದು ಎಲ್ಲರಿಗೂ ಗೊತ್ತಿದೆ. ಪ್ರವಾದಿಯವರ ಬಗ್ಗೆ ಯಾರು ಕನಿಷ್ಟವಾಗಿ ಮಾತನಾಡಿದರೂ ಅವರು ತಮ್ಮ ಪಕ್ಷದವರಾಗಿದ್ದರೆ ಬಿಜೆಪಿ ತಕ್ಷಣ ಅಂತವರು ಎಷ್ಟೇ ದೊಡ್ಡ ಸ್ಥಾನದಲ್ಲಿ ಇರಲಿ, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೆ ಎನ್ನುವುದಕ್ಕೆ ಯಾವ ಸಂಶಯವೂ ಇಲ್ಲ. ಕಳೆದ ಬಾರಿಯೂ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹಾಗೂ ದಿಲ್ಲಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಜಿಂದಾಲ್ ಅವರು ಹೀಗೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಪಕ್ಷದಿಂದ ಆರು ವರ್ಷಗಳಿಗೆ ಅಮಾನತು ಮಾಡಲಾಗಿತ್ತು. ಈಗ ತೆಲಂಗಾಣದಂತಹ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರ ಬರುವಂತಹ ಈ ದಿನಗಳಲ್ಲಿ ಮತ್ತು ಅದರಲ್ಲಿಯೂ ಅಲ್ಲಿ ಬಿಜೆಪಿ ಶಾಸಕರು ಬಹಳ ಕಷ್ಟಪಟ್ಟು ಗೆಲ್ಲುವಂತಹ ಸನ್ನಿವೇಶ ಇರುವ ರಾಜ್ಯ. ಹೀಗಿರುವಾಗ ಅಂತಹ ಕಡೆ ತಮ್ಮ ಪಕ್ಷದ ಒಬ್ಬ ಶಾಸಕನನ್ನು ಅದು ಕೂಡ ಮುಸ್ಲಿಮರನ್ನು ಎದುರುಹಾಕಿಕೊಂಡ ಕಾರಣಕ್ಕೆ ಉಚ್ಚಾಟಿಸುವುದೆಂದರೆ ಅದು ಬಿಜೆಪಿ ಮುಖಂಡರ ದಿಟ್ಟ ನಿರ್ಧಾರ. ಆದರೆ ರಾಜಾ ಸಿಂಗ್ ಅವರ ಹತ್ಯೆ ಮಾಡುತ್ತೇವೆ ಎಂದು ಪೊಲೀಸರ ಮುಂದೆಯೇ ಬಹಿರಂಗವಾಗಿ ಘೋಷಿಸಿರುವ ಮತಾಂಧರನ್ನು ಹಾಗೆ ಬಿಡದೇ ಅವರನ್ನು ಕೂಡ ಕೊಲೆ ಬೆದರಿಕೆ ಹಿನ್ನಲೆಯಲ್ಲಿ ತೆಗೆದು ಒಳಗೆ ಹಾಕಬೇಕು. ಅಲ್ಲಿ ಸೂಕ್ತ ಟ್ರೀಟಮೆಂಟ್ ಕೊಟ್ಟು ಕುಳ್ಳಿರಿಸಬೇಕು. ಯಾಕೆಂದರೆ ಅವರು ಹತ್ಯೆ ಮಾಡುತ್ತೇವೆ ಎಂದು ಹೇಳಿರುವುದು ಒಬ್ಬ ಶಾಸಕನನ್ನು. ಹಾಗಿರುವಾಗ ಅಂತವರನ್ನು ಬಿಡುವ ಮಾತುಂಟೆ. ಹಾಗಾದರೆ ತೆಲಂಗಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದೇ ಇಲ್ವಾ?

ಒಬ್ಬ ಮುಸ್ಲಿಂ ಹಿಂದೂ ದೇವರನ್ನು ಎಷ್ಟು ಬೇಕಾದರೂ ನಿಂದಿಸಬಹುದು. ಅದೇ ಒಬ್ಬ ಹಿಂದೂ ಅದಕ್ಕೆ ಪ್ರತ್ಯುತ್ತರ ಕೊಟ್ಟರೆ ತಪ್ಪಾಗುತ್ತದೆ ಎನ್ನುವುದು ಈಗ ಮತಾಂಧರ ಹೊಸ ಟ್ರೆಂಡ್. ಇದೇ ಓವೈಸಿಯ ಸಹೋದರ ಶಾಸಕ ಅಕ್ಬರುದ್ದೀನ್ ಓವೈಸಿ ಕೂಡ ಹಿಂದೂ ದೇವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸುದ್ದಿಯಾಗಿದ್ದರು. ಹಾಗಾದರೆ ಓವೈಸಿಯ ತಮ್ಮನನ್ನು ಹಿಂದೂಗಳು ತನ್ ಸೇ ಸಿರ್ ದೂರ್ ಮಾಡುತ್ತೇವೆ ಎಂದು ಘೋಷಿಸಿದರೆ ಏನಾಗಬೇಡಾ? ಓವೈಸಿ ಇದಕ್ಕೆ ಏನು ಪ್ರತಿಕ್ರಿಯೆ ಕೊಡಬಹುದು. ಹಾಗಾದರೆ ಹಿಂದೂಗಳ ತಲೆ ಏನು ಬಿಟ್ಟಿಯಾಗಿ ಇದೆಯಾ? ಮುಸ್ಲಿಮರು ಹಿಂದೂಗಳ ಬಗ್ಗೆ ಏನೂ ಹೇಳಬಹುದಾ

0
Shares
  • Share On Facebook
  • Tweet It




Trending Now
ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
Hanumantha Kamath August 23, 2025
'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
Hanumantha Kamath August 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
  • Popular Posts

    • 1
      ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 2
      'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • 3
      ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • 4
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 5
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!

  • Privacy Policy
  • Contact
© Tulunadu Infomedia.

Press enter/return to begin your search