• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮುರುಘಾ ಶ್ರೀಗಳ ವಿಷಯದಲ್ಲಿ ತೀರ್ಪು ಏನೇ ಬರಲಿ, ಮೇಲೆ ದೇವರಿದ್ದಾನೆ!!

Hanumantha Kamath Posted On September 7, 2022
0


0
Shares
  • Share On Facebook
  • Tweet It

ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಬೆಂಕಿ ಒಂದು ಕಿಡಿ ಇರಲಿ ಅಥವಾ ಕೆನ್ನಾಲಗೆ ಆಗಲಿ, ಅದರಲ್ಲಿ ಹೊಗೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಸದ್ಯ ಪೊಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶರಣರ ವಿಷಯದಲ್ಲಿ ಇಡೀ ಹಿಂದೂ ಸಮಾಜ ಸಂತರ, ಸ್ವಾಮೀಜಿಗಳ ವಿಷಯದಲ್ಲಿ ಗೊಂದಲಕ್ಕೆ ಬಿದ್ದಿರುವುದು ಮಾತ್ರ ನಿಜ. ಅರಿಷಡ್ ವರ್ಗಗಳನ್ನು ಜಯಿಸಿದವರನ್ನು ನಾವು ಸಂತರ ಸ್ಥಾನದಲ್ಲಿ ಕುಳ್ಳಿರಿಸಿ ಪೂಜಿಸುತ್ತೇವೆ. ಅವರಿಗೆ ವಿಶೇಷ ಗೌರವಾದರಗಳು ಸಿಗುವಂತೆ ನೋಡಿಕೊಳ್ಳುತ್ತೇವೆ. ಅವರ ಕಾಲಿಗೆ ಬೀಳುತ್ತೇವೆ. ಅವರಿಗೆ ಪಾದಪೂಜೆ ಮಾಡುತ್ತೇವೆ. ಅದೆಲ್ಲ ಯಾಕೆ ಎಂದರೆ ಅವರು ಕಾಮವನ್ನು ಜಯಸಿದವರು ಎನ್ನುವ ಏಕೈಕ ಕಾರಣಕ್ಕೆ. ಕಾಮವನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಅದು ಸಾಮಾನ್ಯರಿಗೆ ಸಾಧ್ಯವೂ ಅಲ್ಲ. ದೇಹ ಹೊರಸೂಸುವ ವಾಂಛೆಗಳ ಲವಲಕ್ಷಣಗಳನ್ನು ತೋರ್ಪಡಿಸದೇ ಇಡೀ ಬದುಕನ್ನು ಕಳೆಯುವುದು ಎಂದರೆ ಅವರು ನಿಜಕ್ಕೂ ಪವಾಡ ಪುರುಷರೇ ಆಗಿರಬೇಕು. ಅದಕ್ಕಾಗಿ ಅವರಿಗೆ ವಿಶಿಷ್ಟ ಸ್ಥಾನ. ಅಂತಹ ಸ್ಥಾನದಲ್ಲಿ ಬುದ್ಧಿ ಬಂದ ಮೇಲೆ ಕೂರಲು ಒಪ್ಪುವವರು ಕಾಮದ ವಿಷಯ ಬಂದಾಗ ಸ್ಥಿತಪಜ್ಞರಾಗಬೇಕು. ಒಂದು ವೇಳೆ ಬಾಲ್ಯದಲ್ಲಿ ಅವರನ್ನು ಯತಿಯನ್ನಾಗಿ ಮಾಡಲಾಗಿದ್ದರೆ ಯೌವನ ಬಂದ ಮೇಲೆ ಕಾಮ ನಿಗ್ರಹ ಸಾಧ್ಯವಾಗದಿದ್ದರೆ ಆ ಪೀಠದಿಂದ ಗೌರವಪೂರ್ಣವಾಗಿ ಇಳಿದು ಹೋಗಬೇಕು. ಸುಬ್ರಹ್ಮಣ್ಯ ಶ್ರೀಗಳಾಗಿದ್ದವರು ತಮ್ಮ ಭಕ್ತೆಯೊಬ್ಬರ ಮೇಲೆ ಅನುರಕ್ತರಾದಾಗ ಅವರನ್ನು ವರಿಸಲು ಪೀಠವನ್ನೇ ತ್ಯಾಗ ಮಾಡಿದ್ದರು. ಈ ಮೂಲಕ ಪೀಠದ ಗೌರವವನ್ನು ಉಳಿಸಿದ್ದರು. ಇದು ನಿಜಕ್ಕೂ ಆಗಬೇಕಾಗಿರುವ ಕೆಲಸ. ಮುರುಘಾ ಶರಣರು ಒಂದು ಕಡೆ ಭಾಷಣದಲ್ಲಿ ಸಂತರ ಕಾಯಾ ಅಂದರೆ ದೇಹವನ್ನು ಕಾಪಾಡುವುದು ಎಂತಹ ಸವಾಲಿನ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತವರೇ ಈಗ ಈ ಜಾಲಕ್ಕೆ ಬಿದ್ದಿರುವುದು ನಿಜಕ್ಕೂ ದುರಂತ.

ಇನ್ನು ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಪ್ರಕರಣ ತನಿಖೆಯ ಹಂತದಲ್ಲಿ ಇರುವಾಗಲೇ ಬೆಳಗಾವಿಯ ಮಠವೊಂದರ ಸ್ವಾಮೀಜಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಇಂತಹುದೇ ವಿಷಯ ತಾಳೆ ಹಾಕಿರುವುದು ಕೂಡ ಅವರ ಡೆತ್ ನೋಟಿನ ಮೂಲಕ ಪತ್ತೆಯಾಗಿದೆ. ಇಬ್ಬರು ಮಹಿಳೆಯರು ಫೋನಿನಲ್ಲಿ ಮಾತನಾಡುತ್ತಾ ನಮ್ಮ ಸ್ವಾಮಿ ಕೂಡ ಹಾಗೆನೆ ಎನ್ನುವ ಅರ್ಥದ ಮಾತುಗಳನ್ನು ಹೇಳಿರುವುದರಿಂದ ಘಾಸಿಗೊಂಡಿರುವ ಬೆಳಗಾವಿಯ ಸ್ವಾಮೀಜಿ ಮಠದ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಹಿಂದಿನ ಶೀರೂರು ಸ್ವಾಮೀಜಿಯೊಬ್ಬರ ವಿಷಯದಲ್ಲಿಯೂ ಅವರಿಗೆ ಮಗು ಇದೆ ಮತ್ತು ಅದು ಮಠದಲ್ಲಿಯೇ ಇರುತ್ತದೆ ಎನ್ನುವ ವಿಷಯ ಚರ್ಚೆಯಲ್ಲಿತ್ತು. ಅದು ಅವರ ಕಿವಿಗೆ ಬಿದ್ದು ಅವರು ಅಷ್ಟಮಠದ ಆಗಿನ ಹಿರಿಯ ಸ್ವಾಮೀಜಿಯೊಬ್ಬರಿಗೂ ಹೀಗೆ ಮಕ್ಕಳಿವೆ ಎಂದು ಹೇಳಿದ್ದಾರೆ ಎನ್ನಲಾಗಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಆ ಬಳಿಕ ಶೀರೂರು ಸ್ವಾಮಿಗಳು ಅನುಮಾನಾಸ್ಪದವಾಗಿ ತೀರಿಕೊಂಡಿದ್ದರು. ಅದರ ಬಳಿಕವೂ ಕೆಲವು ಕಡೆ ಸ್ವಾಮೀಜಿಗಳ ವಿಷಯದಲ್ಲಿ ಹೆಸರು ಹಾಳಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಂತ ಇವತ್ತಿಗೂ ಹಿಂದೂ ಸಮಾಜ ಸಂತರ ಬಗ್ಗೆ ಪೂಜ್ಯಭಾವನೆಯನ್ನು ಹೊಂದಿದೆ. ಎಷ್ಟೋ ಕಡೆ ಅಕ್ಷರ ದಾಸೋಹ, ಅನ್ನದಾಸೋಹ ಸಹಿತ ಮಠಗಳು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ. ಆರೋಗ್ಯದ ವಿಷಯದಲ್ಲಿ ಅನೇಕ ಮಠಗಳು ಕಾಳಜಿಯನ್ನು ಹೊಂದಿ ಆಸ್ಪತ್ರೆ ಕಟ್ಟಿಸಿವೆ. ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿವೆ. ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹಗಳಿಂದ ಹಿಡಿದು ವಸ್ತ್ರದಾನದ ತನಕ ಸತ್ಕಾರ್ಯಗಳನ್ನು ಮಾಡುವುದರಲ್ಲಿ ಮಠಗಳ ಕೊಡುಗೆ ಮುಖ್ಯವಾಗಿದೆ. ಆದ್ದರಿಂದ ಕೆಲವು ಸ್ವಾಮೀಜಿಗಳು ಮಾಡಿದ ಅನೈತಿಕ ಕಾರ್ಯಗಳಿಂದ ಇಡೀ ಸಂತ ಸಮಾಜ ನೊಂದುಕೊಳ್ಳುವುದು ಬೇಡಾ. ಆದರೆ ಒಂದು ವೇಳೆ ಸತ್ಯ ಬೇರೆ ಸ್ವಾಮೀಜಿಗಳಿಗೆ ಗೊತ್ತಿದ್ದರೆ ಅಂತವರು ಬೆಂಬಲಿಸದೇ ದೂರ ನಿಲ್ಲುವುದು ಉತ್ತಮ. ಯಾಕೆಂದರೆ ಆತ್ಮಸಾಕ್ಷಿಯ ವಿರುದ್ಧ ಹೋಗಿ ಸಂತರು ಎನ್ನುವ ಕಾರಣಕ್ಕೆ ಬೆಂಬಲ ನೀಡಿದರೆ ಅದರಿಂದಲೂ ಮಾಡಿದವರ ಪಾಪ ಬೆಂಬಲಿಸಿದವರ ಖಾತೆಗೆ ಹೋಗುತ್ತದೆ.

ಇನ್ನು ಟಿಪ್ಪುವನ್ನು ಹೊಗಳಿದವರಿಗೆ ಕೆಟ್ಟ ಸಮಯ ಶುರುವಾಗುತ್ತದೆ ಎನ್ನುವುದು ಈ ಘಟನೆಯೊಂದಿಗೆ ಹೋಲಿಸಿ ನೋಡಲಾಗುತ್ತದೆ. ಟಿಪ್ಪು ಜಯಂತಿ ಸರಕಾರದಿಂದ ಆಚರಿಸಲು ಆಗ ಸಿಎಂ ಆಗಿದ್ದ ಸಿದ್ದು ಸೂಚನೆ ಕೊಟ್ಟ ಬಳಿಕ ಮುಂದಿನ ಚುನಾವಣೆಯಲ್ಲಿ ಸೋಲಬೇಕಾಯಿತು ಎನ್ನುವುದರಿಂದ ಹಿಡಿದು ವಿಜಯ ಮಲ್ಯರು ಟಿಪ್ಪು ಖಡ್ಗವನ್ನು ಖರೀದಿಸಿದ ಬಳಿಕ ದಿವಾಳಿಯಾಗಿ ಹೋದರು ಎನ್ನುವ ತನಕವೂ ಸುದ್ದಿ ಇದೆ. ಅದರ ನಡುವೆ ಮುರುಘಾ ಶರಣರು ತಾವು ಕೂಡ ಟಿಪ್ಪುವನ್ನು ಮೈಸೂರಿನ ಹುಲಿಯೆಂದು ನಂಬಿದ್ದು ಟಿಪ್ಪು ಫೋಟೋವನ್ನು ತಮ್ಮ ಆಶ್ರಮದ ಆವರಣದಲ್ಲಿ ಇಟ್ಟುಕೊಂಡಿದ್ದರು. ಅದಕ್ಕಾಗಿ ಅವರ ಗ್ರಹಚಾರ ಕೆಟ್ಟಿತ್ತು ಎಂದು ಹೇಳುವವರು ಇದ್ದಾರೆ. ಒಟ್ಟಿನಲ್ಲಿ ತನಿಖೆ ಜಾರಿಯಲ್ಲಿದೆ. ದೂರು ಕೊಟ್ಟಿರುವ ಇಬ್ಬರು ಹೆಣ್ಣುಮಕ್ಕಳು ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ತನಿಖೆ ನಡೆದು ಅಂತಿಮ ತೀರ್ಪು ನ್ಯಾಯಾಲಯದಿಂದ ಏನೇ ಬರಲಿ. ಸತ್ಯಮೇವ ಜಯತೆ ಎನ್ನುವುದು ಎಲ್ಲರಿಗೂ ಗೊತ್ತಿದ್ರೆ ಸಾಕು, ವಿಶೇಷವಾಗಿ ಸ್ವಾಮೀಜಿಗಳಿಗೆ ನೆನಪಿದ್ದರೆ ಅದು ಉತ್ತಮ!!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search