ದೇಶದ್ರೋಹಿಗಳ ವಿರುದ್ಧ ದ್ವೇಷ ಸಾಧಿಸದೇ ಪ್ರೀತಿ ಮಾಡಬೇಕಾ?
ಇತ್ತೀಚೆಗೆ ತಾಂಟೆ ರೆ ಬಾ ತಾಂಟ್ ಮನೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಬಿಹಾರದ ಪ್ರಕರಣವೊಂದರ ತನಿಖೆಯನ್ನು ನಡೆಸಿದ್ದರು. ಅದರ ಮರುದಿನವೇ ಎಸ್ ಡಿಪಿಐ ಸುದ್ದಿಗೋಷ್ಟಿ ಮಾಡಿ ನಮ್ಮನ್ನು ಟಾರ್ಗೆಟ್ ಮಾಡುವ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿತ್ತು. ಅಂದರೆ ಆಗಲೇ ಹೊಗೆ ಆಡಲು ಶುರುವಾಗಿತ್ತು. ಅದಕ್ಕೆ ಸರಿಯಾಗಿ ಈಗ ಇಡೀ ದೇಶದಲ್ಲಿ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ ಹಾಗೂ ಮುಖಂಡರ ಮನೆಯ ಮೇಲೆ ದಾಳಿ ನಡೆದಿದೆ. ಈ ದಾಳಿಗಳು ಕೇವಲ ಬೆಂಗಳೂರು, ಮಂಗಳೂರು ಅಥವಾ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡಿನ ಹಲವೆಡೆ ಈ ದಾಳಿಗಳು ನಡೆದಿವೆ. ನೂರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು. ಮಧ್ಯರಾತ್ರಿ ಶುರುವಾದ ಆಪರೇಶನ್ ಮರುದಿನ ಮಧ್ಯಾಹ್ನದ ತನಕ ನಡೆದಿತ್ತು. ಒಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೀಗೆ ಸುಮ್ಮಸುಮ್ಮನೆ ಯಾರ ಮೇಲೆಯೂ ದಾಳಿ ಮಾಡಲ್ಲ. ಇವತ್ತು ಫ್ರೀಯಾಗಿದ್ದೇವೆ, ಹೋಗಿ ನಾಲ್ಕು ಕಡೆ ದಾಳಿ ಮಾಡೋಣ ಎಂದು ಹೊರಡಲು ಅದು ಏನು ಕೆಲಸವಿಲ್ಲದ ಗುಂಪು ಅಲ್ಲ. ಎನ್ ಐಎ ಈ ದೇಶದ ಭದ್ರತೆಗಾಗಿ ಕೆಲಸ ಮಾಡುವ ಸಂಸ್ಥೆ. ಹೇಗೆ ಸೈನಿಕರು ದೇಶದ ಗಡಿಯನ್ನು ರಕ್ಷಿಸಿಕೊಂಡು ಬರುತ್ತಿದ್ದಾರೋ ಹಾಗೆ ಎನ್ ಐಎ ಅಧಿಕಾರಿಗಳು ದೇಶದ ಒಳಗಿನ ಆಂತರಿಕ ಭದ್ರತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಶತ್ರುಗಳು ಕೇವಲ ಪಾಕಿಸ್ತಾನದಿಂದ ಬರುತ್ತಾರೆ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಪಾಕಿಸ್ತಾನಕ್ಕೆ ಹುಟ್ಟಿದವರು, ಮೊಗಲರೊಂದಿಗೆ ಹಾಸಿಗೆ ಹಂಚಿಕೊಂಡು ಜನ್ಮ ತಾಳಿದವರು ಕೂಡ ಭಾರತದಲ್ಲಿ ಇದ್ದಾರೆ. ಅವರು ಹೊರಗಿನ ಶತ್ರುಗಳಿಗಿಂತ ಹೆಚ್ಚು ಡೇಂಜರ್. ಅಂತವರು ಈ ದೇಶದ ಮಣ್ಣು, ನೀರು, ಗಾಳಿ, ಆಹಾರ ಮತ್ತು ಸರಕಾರದ ಅಷ್ಟೂ ಸೌಲಭ್ಯಗಳನ್ನು ಬಳಸಿ ಇಲ್ಲಿ ಬಾಂಬ್ ಇಡಲು ಹೊರಟಾಗ ಅವರನ್ನು ಸದೆಬಡಿಯದಿದ್ದರೆ ಏನಾಗುತ್ತದೆ? ಅವರು ಈ ದೇಶದ ಅಮಾಯಕ ನಾಗರಿಕರನ್ನು ಮಟ್ಟ ಹಾಕುತ್ತಾರೆ. ಆದ್ದರಿಂದ ಸ್ಪಷ್ಟ ಸುಳಿವು ಸಿಕ್ಕಿರುವುದರಿಂದ ಎನ್ ಐಎ ದಾಳಿ ನಡೆಸಿದೆ. ಅದು ಕೂಡ ಏಕಕಾಲದಲ್ಲಿ ಇಡೀ ದೇಶದಲ್ಲಿ ದಾಳಿ ಮಾಡಿರುವ ಕಾರಣ ಏನೆಂದರೆ ಆಯ್ದ ಕೆಲವು ಕಡೆ ಮಾತ್ರ ಮಾಡಿದರೆ ಉಳಿದವರು ಎಚ್ಚರಗೊಳ್ಳುತ್ತಾರೆ. ಅದರಿಂದ ಸಾಕ್ಷಿ ನಾಶವಾಗುತ್ತದೆ. ಆದ್ದರಿಂದ ಯಾರಿಗೂ ಸಾಕ್ಷಿ ಮುಚ್ಚಿಡಲು ಅವಕಾಶ ನೀಡದೇ ದಾಳಿ ನಡೆಸಲಾಗಿದೆ. ಎನ್ ಐಎ ದಾಳಿ ಮಾಡಿದ ಎಲ್ಲಾ ಕಡೆ ಅವರಿಗೆ ನಿರೀಕ್ಷೆ ಮಾಡಿದಷ್ಟು ದಾಖಲೆಗಳು ಸಿಕ್ಕಿದೆ ಎಂದು ಅಂದುಕೊಳ್ಳಬೇಕಾಗಿಲ್ಲ. ಕೆಲವು ಕಡೆ ಏನೂ ಸಿಗದೇ ಇರಬಹುದು. ಯಾಕೆಂದರೆ ಅವರು ಕೈ ಹಾಕಿರುವುದು ಹಾವಿನ ಹುತ್ತದಲ್ಲಿ. ಕೆಲವು ಕಡೆ ಹಾವುಗಳೇ ಇಲ್ಲದಿರಬಹುದು. ಕೇವಲ ಗೆದ್ದಲು ಮಾತ್ರ ಹುತ್ತದಂತೆ ಇರಬಹುದು. ಆದರೆ ಹತ್ತು ಕಡೆ ದಾಳಿ ಮಾಡುವಾಗ ಒಂದು ಕಡೆ ಬೇಕಾದ ಸಾಕ್ಷಿಗಳು ಸಿಕ್ಕಿದರೂ ದೇಶದ ಹಿತದೃಷ್ಟಿಯಿಂದ ಸಾಕಾಗುತ್ತದೆ. ಇವತ್ತು ನಾಲ್ಕೈದು ರಾಜ್ಯಗಳಲ್ಲಿ ದಾಳಿ ಮಾಡುವಾಗ ಬೆರಳೆಣಿಕೆಯ ಕಡೆಯಾದರೂ ಸೂಕ್ತ ದಾಖಲೆ ಸಿಕ್ಕಿರುತ್ತದೆ. ಎನ್ ಐಎ ಅಧಿಕಾರಿಗಳು ಹೇಗಿರುತ್ತಾರೆ ಎಂದರೆ ಅವರು ಒಂದು ಶೇಕಡಾ ದಾಖಲೆ ಸಿಕ್ಕಿದರೂ ಅದರ ಜಾಡು ಹಿಡಿದು ಮುಂದೆ ಆಗಬಹುದಾದ ಬಹುದೊಡ್ಡ ಷಡ್ಯಂತ್ರವನ್ನು ವಿಫಲಗೊಳಿಸುತ್ತಾರೆ. ಹಾಗಂತ ಇವರು ದಾಳಿ ನಡೆಸಿ ವಶಪಡಿಸಿಕೊಂಡ ಎಲ್ಲಾ ವಸ್ತುಗಳು ಸಾಕ್ಷಿಗಳಾಗುತ್ತವೆ ಎಂದೆನಲ್ಲ. ಮುಂದೆ ನ್ಯಾಯಾಲಯಗಳು ವಿಚಾರಣೆಯನ್ನು ಹೇಗೆ ಮಾಡುತ್ತವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಬಂಧಿತರ ವಿರುದ್ಧದ ಪ್ರಕರಣ ಬಿದ್ದು ಹೋಗಿ ಅವರಿಗೆ ಕ್ಲೀನ್ ಚಿಟ್ ಕೂಡ ಸಿಗಬಹುದು. ಇದೆಲ್ಲ ಒಂದು ಪ್ರಕ್ರಿಯೆ.
ಆದರೆ ಎನ್ ಐಎ ದಾಳಿ ನಡೆಯುವುದೇ ತಪ್ಪು ಎಂದು ಹೇಳಬಾರದು. ಇನ್ನು ದಾಳಿ ಆದ ಕೂಡಲೇ ಈ ಪಿಎಫ್ ಐನವರು ಹೆಗಲು ಮುಟ್ಟಿ ನೋಡಲೂಬಾರದು. ಆದರೆ ಪಿಎಫ್ ಐಯವರು ಈ ದಾಳಿಗಳಿಂದ ಎಷ್ಟು ಹೆದರಿ ಹೋಗಿದ್ದಾರೆಂದರೆ ಅವರಿಗೆ ಈಗ ಭಾರತದಲ್ಲಿ ಅಭದ್ರತೆಯ ಭಾವನೆ ಕಾಡಲು ಶುರುವಾಗಿದೆ. ತಾವು ಸಚ್ಚಾರಿತ್ರ್ಯವಂತರಾಗಿದ್ದರೆ ತಮ್ಮ ವಿರುದ್ಧ ಯಾವ ಕೇಸ್ ಕೂಡ ನಿಲ್ಲುವುದಿಲ್ಲ ಎಂದು ಅವರಿಗೆ ಗೊತ್ತಿರಬೇಕು. ಅದೇ ತಪ್ಪು ನಡೆದಿದ್ದರೆ ಎನ್ ಐಎ ಬಿಡುವ ಮಾತೇ ಇಲ್ಲ ಎಂದು ದೇಶಕ್ಕೆ ಗೊತ್ತಿದೆ.
ಆದರೆ ಈಗ ಏನಾಗಿದೆ ಎಂದರೆ ಈ ದಾಳಿಯಿಂದ ತಮ್ಮನ್ನು ನಿಷೇಧ ಮಾಡುವ ಸಾಧ್ಯತೆಗೆ ಕೇಂದ್ರ ಸರಕಾರಕ್ಕೆ ಒಂದಿಷ್ಟು ಪುಷ್ಟಿ ಸಿಗುತ್ತದೆ ಎನ್ನುವುದು ಈ ಸಂಘಟನೆಗಳ ಹೆದರಿಕೆ. ಸಿಮಿಯಿಂದ ಶುರುವಾದ ದೇಶದ್ರೋಹಿ ಸಂಘಟನೆಗಳು ಎಷ್ಟು ಸಲ ಬ್ಯಾನ್ ಮಾಡಿದರೂ ಬೇರೆ ಬೇರೆ ರೂಪದಲ್ಲಿ ಉದ್ಭವಿಸುತ್ತವೆ. ಇನ್ನು ಇಂತಹ ಸಂಘಟನೆಗಳು ಕೇವಲ ಪ್ರತಿಭಟನೆ ಮಾಡಿ ಮೈಕ್ ಮಡಚಿಟ್ಟು ಹೋಗುತ್ತವೆ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ಇವರು ಒಳಗೆ ಮಾಡುವ ಕೆಲಸ ಬೇರೆಯದ್ದೇ ಇದೆ ಎಂದು ಎನ್ ಐಎಗೆ ಮಾಹಿತಿ ಸಿಕ್ಕಿದೆ. ಆ ನಿಟ್ಟಿನಲ್ಲಿ ಶಂಕಿತ ಉಗ್ರರನ್ನು ಮೊನ್ನೆ ಬಂಧಿಸಿದ ಬೆನ್ನಲ್ಲೇ ಇಂತಹ ದಾಳಿ ನಡೆದಿರುವುದು ಯಾರನ್ನು ಸುಮ್ಮನೆ ಬಿಡುವ ಚಾನ್ಸೇ ಇಲ್ಲ ಎನ್ನುವ ಸಂದೇಶ ಎಸ್ ಡಿಪಿಐ, ಪಿಎಫ್ ಐಗೆ ಹೋಗಿದೆ. ಈಗ ಇವರು ಇದು ದ್ವೇಷದ ರಾಜಕೀಯ ಎಂದು ಕಿರುಚಾಡಬಹುದು. ಆದರೆ ದೇಶದ್ರೋಹಿಗಳ ವಿರುದ್ಧ ದ್ವೇಷ ಇಟ್ಟುಕೊಳ್ಳದೇ ಪ್ರೀತಿ ಇಟ್ಟುಕೊಳ್ಳಬೇಕಾ ಎಂದು ದೇಶಪ್ರೇಮಿಗಳು ಕೇಳುತ್ತಿದ್ದಾರೆ. ದೇಶದ್ರೋಹಿಗಳನ್ನು ಜೈಲಿಗೆ ಅಟ್ಟದೆ ಸಿಹಿ ತಿನ್ನಿಸಿ ಜೋಗುಳ ಹಾಡಲು ಆಗುತ್ತದೆಯಾ ಎಂದು ಸ್ವಸ್ಥ ಸಮಾಜ ಕೇಳುತ್ತಿದೆ!!
Leave A Reply