ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನಿಂದ ಕಿನ್ನಿಪಿಲಿ ವೇಷ ಸ್ಪರ್ಧೆ
ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಕಾಟಿಪಳ್ಳ ಕ್ಷೇತ್ರ ಇದರ ವತಿಯಿಂದ 02/10/2022 ರಂದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ 10 ವರ್ಷದ ಒಳಗಿನ ಪುಟಾಣಿಗಳಿಗೆ “ಕಿನ್ನಿಪಿಲಿ ವೇಷ ಸ್ಪರ್ಧೆ”ಯನ್ನು ಏರ್ಪಡಿಸಲಾಗಿತ್ತು.
ಹೊಸ ಬಗೆಯ ಈ ಕಲ್ಪನೆಗೆ ಪೋಷಕರು ತಮ್ಮ ತಮ್ಮ ಮಕ್ಕಳನ್ನು ವಿಭಿನ್ನ ಶೈಲಿಯಲ್ಲಿ ಸಿದ್ಧತೆ ಮಾಡಿಕೊಂಡು ಬಂದು ವೇದಿಕೆಯಲ್ಲಿ ಕಂಡು ಸಂಭ್ರಮಿಸಿದರು. ಉಡುಪಿ, ದ.ಕ ಜಿಲ್ಲೆಯ ಅನೇಕ ಕಡೆಗಳಿಂದ ಸುಮಾರು 105ಕ್ಕೂ ಹೆಚ್ಚು ಕಿನ್ನಿಪಿಲಿಗಳು ಭಾಗವಹಿಸಿದ್ದರಿಂದ ಕಾರ್ಯಕ್ರಮದ ಮೆರುಗು ಹೆಚ್ಚಿತ್ತು.
ಸ್ಥಳೀಯ ಶಾಸಕರಿಂದ ಸಾಂಪ್ರದಾಯಿಕವಾಗಿ ತಾಸೆ ಮತ್ತು ಡೋಲು ಬಡಿಯುವ ಮೂಲಕ ಉದ್ಘಾಟನೆಗೊಂಡ ಕಿನ್ನಿಪಿಲಿ ಕಾರ್ಯಕ್ರಮದಲ್ಲಿ ವಿಜೇತ ಪುಟಾಣಿಗಳ ಜೊತೆಗೆ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುರುವಾದ ಹೊಸ ಕಲ್ಪನೆಯ “ಕಿನ್ನಿ ಪಿಲಿ ಗೊಬ್ಬು” ಎಲ್ಲೆಡೆ ವ್ಯಾಪಿಸಲಿ, ಮುಂದಿನ ಬಾರಿ ಅವಿಭಜಿತ ಜಿಲ್ಲೆಯ ಹುಲಿವೇಷ ತಂಡಗಳು, ಸಂಘ ಸಂಸ್ಥೆಗಳು ಇಂತಹ “ಕಿನ್ನಿ ಪಿಲಿ” ಗಳಿಗೆ ಅವಕಾಶ ಮತ್ತು ಬೆಂಬಲ ನೀಡಿದರೆ ತುಳುನಾಡ ಸಾಂಪ್ರದಾಯಿಕ ಆಚರಣೆಯ ಸೊಬಗು ಇನ್ನಷ್ಟು ರಂಗೇರುವುದರಲ್ಲಿ ಅನುಮಾನವೇ ಇಲ್ಲ ಮತ್ತು ಮಕ್ಕಳು ಅನುಭವಿಸುವ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ ಎಂಬ ಮನವಿಯೊಂದಿಗೆ ಮುಂದಿನ ಬಾರಿಯ ಕಿನ್ನಿಪಿಲಿಗಳ ಬರಮಾಡಿಕೊಳ್ಳಲು ತಯಾರಿ ನಡೆಸೋಣ.
Leave A Reply