• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

25 ಗನ್, 12 ಸಾವಿರ ಜೀವಂತ ಬುಲೆಟ್ ಕೇರಳದಲ್ಲಿ ಪೊಲೀಸ್ ಇಲಾಖೆಯಿಂದ ಮಿಸ್!!

Hanumantha Kamath Posted On October 6, 2022
0


0
Shares
  • Share On Facebook
  • Tweet It

ಪೊಲೀಸ್ ಇಲಾಖೆಯಲ್ಲಿ ಒಂದೊಂದು ಗುಂಡು ಅಥವಾ ಬುಲೆಟಿಗೂ ಲೆಕ್ಕ ಇಡಬೇಕಾಗುತ್ತದೆ. ಯಾಕೆಂದರೆ ಅದು ಸರಕಾರದ ಸ್ವತ್ತು. ಬೇಕಾದಾಗ ಕಿಸೆಯಲ್ಲಿ ನಾಲ್ಕು ಹಾಕಿ ಸ್ವಲ್ಪ ಆಡಿ ಬರೋಣ ಎಂದು ಹೇಳಲು ಅದೇನು ದೀಪಾವಳಿಯ ಬಿಡಿ ಪಟಾಕಿಯಲ್ಲ. ಆದರೆ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ತವರು ಮನೆಯಂತಿರುವ ಕೇರಳದಲ್ಲಿ ಪೊಲೀಸ್ ಇಲಾಖೆ ಎನ್ನುವುದು ಭಯೋತ್ಪಾದಕರಿಗೆ ಅಡುಗೆ ಮನೆ ತರಹ ಆಗಿಬಿಟ್ಟಿದೆಯೇನೋ ಎಂದು ಅನಿಸುತ್ತಿದೆ. ಯಾಕೆಂದರೆ ಈಗ ಹೊರಬಿದ್ದಿರುವ ಮಾಹಿತಿಗಳು ನಿಜಕ್ಕೂ ಕೇರಳ ಮಾತ್ರವಲ್ಲ, ಪಿಎಫ್ ಐ ವಿರೋಧಿಗಳು ಎಲ್ಲಿದ್ದಾರೋ ಅವರಿಗೆಲ್ಲ ಆತಂಕ ಹುಟ್ಟಿಸುವುದರಲ್ಲಿ ಅನುಮಾನವೇ ಇಲ್ಲ. ಮೊದಲನೇಯದಾಗಿ ಈ ವಿಷಯವನ್ನು ಎರಡು ಭಾಗಗಳಾಗಿ ವಿಂಗಡಿಸೋಣ. ಒಂದು ಕೇರಳದ ಪೊಲೀಸರು ಪಿಎಫ್ ಐ ಸಂಘಟನೆ ಜೊತೆ ಶಾಮೀಲಾಗಿದ್ದಾರೆ ಎನ್ನುವ ಸತ್ಯ. ಇದನ್ನು ಹಾದಿಬೀದಿಯಲ್ಲಿ ಕೆಲಸವಿಲ್ಲದೇ ಅಲೆದಾಡುವವರು ಹೇಳಿಲ್ಲ. ಈ ಮಾಹಿತಿಯನ್ನು ಹೇಳಿದವರು ರಾಷ್ಟ್ರೀಯ ತನಿಖಾ ದಳ. ಎನ್ ಐಎ ಇಂತಹ ವಿಷಯಗಳನ್ನು ಯಾವುದಾದರೂ ಪತ್ರಿಕೆಗಳಲ್ಲಿ ಬರುವ ಸುದ್ದಿ ತಿಣುಕನ್ನು ಓದಿ ಹೇಳುವುದಿಲ್ಲ. ಅವರು ಸಾಕಷ್ಟು ಸಮಯ ತೆಗೆದುಕೊಂಡು ಅದರ ಟೆಕ್ನಿಕಲ್ ವಿಷಯಗಳನ್ನು ಒಟ್ಟು ಮಾಡಿ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅದನ್ನು ಹೇಗೆ ಟ್ಯಾಪ್ ಮಾಡಬಹುದು ಎಂದು ಯೋಚಿಸುವ ಅತೀ ಜಾಣರ ತಂಡ. ಅವರು ಕೇರಳದಲ್ಲಿ ಪಿಎಫ್ ಐ ಜಾಡು ಹಿಡಿದು ಕೆಲವರನ್ನು ಬಂಧಿಸಿ ಅವರ ಬಾಯಿ ಬಿಡಿಸಿದಾಗ ಅವರಿಂದ ಬಂದ ಸುದ್ದಿಗಳು ನಿಜಕ್ಕೂ ದೇಶದ ಭದ್ರತೆಗೆ ಸಂಬಂಧಿಸಿದಂತೆ ಚಿಂತಿಸುವಂತದ್ದು. ಕೇರಳದ ಸುಮಾರು 873 ಜನ ಸಬ್ ಇನ್ಸಪೆಕ್ಟರ್ ಹಾಗೂ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳು ಪಿಎಫ್ ಐ ಮುಖಂಡರೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎನ್ನುವ ಮಾಹಿತಿ ಇರುವ ವರದಿಯನ್ನು ಎನ್ ಐಎ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಒಪ್ಪಿಸಿದೆ. ಅದರಲ್ಲಿ ಯಾವ ಪೊಲೀಸ್ ಅಧಿಕಾರಿ, ಅವರ ಹೆಸರು, ಫೋನ್ ನಂಬರ್, ಈಗ ಯಾವ ಪೋಸ್ಟಿನಲ್ಲಿದ್ದಾರೆ, ಯಾವ ಸ್ಟೇಶನ್ ನಲ್ಲಿ ಕೆಲಸದಲ್ಲಿದ್ದಾರೆ, ಯಾವ ಲಿಂಕ್ ಹೊಂದಿದ್ದಾರೆ ಎಂದು ವರದಿ ನೀಡಿದೆ. ಹಾಗೆ ಎನ್ ಐಎ ಲಿಸ್ಟ್ ಮಾಡುವುದೆಂದರೆ ಅದು ಹುಡುಗಾಟದ ವಿಷಯವಲ್ಲ. ಹಾಗಾದರೆ ಯಾರೋ ಒಬ್ಬ ಬಂಧಿತ ಯಾವುದೋ ಒಬ್ಬ ಪೊಲೀಸ್ ಅಧಿಕಾರಿಯ ಹೆಸರು ಹೇಳಿದ ತಕ್ಷಣ ಎನ್ ಐಎ ಅದನ್ನು ಲಿಸ್ಟಿಗೆ ಸೇರಿಸುವುದಿಲ್ಲ. ಆ ಅಧಿಕಾರಿ ಯಾವ ಪಿಎಫ್ ಐ ಮುಖಂಡನಿಗೆ ಕಾಲ್ ಮಾಡಿದ್ದಾರೆ. ಎಷ್ಟು ಸಲ ಕಾಲ್ ಮಾಡಿದ್ದಾರೆ. ಯಾವ ಸಂದರ್ಭದಲ್ಲಿ ಕಾಲ್ ಮಾಡಿದ್ದಾರೆ ಎನ್ನುವುದನ್ನೆಲ್ಲ ನೋಡಿ ಲಿಸ್ಟಿಗೆ ಸೇರಿಸಿರುತ್ತಾರೆ. ಅದೇನೆ ಇರಲಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ದೇಶದ್ರೋಹಿ ಸಂಘಟನೆಗಳೊಂದಿಗೆ ಸೇರುವುದು ಮಾತ್ರ ದೇಶದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಹಾಗಾದರೆ ಪೊಲೀಸರು ಪಿಎಫ್ ಐ ಸಂಘಟನೆಯೊಂದಿಗೆ ಸೇರಿಕೊಂಡು ಏನು ಮಾಡಬಹುದು? ಪೊಲೀಸರು ಮನಸ್ಸು ಮಾಡಿದರೆ ಏನೂ ಕೂಡ ಮಾಡಬಹುದು. ಪಿಎಫ್ ಐ ವಿರೋಧಿಗಳಾಗಿರುವ ಕೇಸರಿ ಮುಖಂಡರ ವಿಷಯಗಳನ್ನು ಗುಪ್ತವಾಗಿ ಸೋರಿಕೆ ಮಾಡಬಹುದು. ಅವರು ಯಾವ ದಿನ, ಯಾವ ಸಮಯ ಎಲ್ಲಿ ಇರುತ್ತಾರೆ ಎಂದು ಮತಾಂಧರಿಗೆ ಮಾಹಿತಿ ನೀಡಬಹುದು. ಈ ಮೂಲಕ ಹತ್ಯೆಗೆ ಸಹಾಯ ಮಾಡಿದಂತಾಗುತ್ತದೆ. ಇನ್ನು ಕೊಲೆ ನಡೆದ ಬಳಿಕ ಕೇಸ್ ವೀಕ್ ಮಾಡಲು ಕೆಲಸ ಮಾಡಬಹುದು. ಅದರಿಂದ ಹತ್ಯಾ ಆರೋಪಿಗಳಿಗೆ ಅನುಕೂಲ ಮಾಡಿಕೊಡಬಹುದು.

ಇನ್ನು ಎನ್ ಐಎ ವರದಿಯಲ್ಲಿ ಇಂತಹ ವಿಷಯಗಳು ಇದ್ದರೆ ಸಿಎಜಿ ಎಂದರೆ ದೇಶದ ಆಡಿಟ್ ಜನರಲ್ ಸಂಸ್ಥೆ ವರದಿಯಂತೆ ಕೇರಳ ಪೊಲೀಸ್ ಇಲಾಖೆಯಿಂದ ಸುಸಜ್ಜಿತ ಆಧುನಿಕ ಆಟೋಮೆಟಿಕ್ 25 ಗನ್ ಗಳು ಕಾಣೆಯಾಗಿವೆ. ಆ ಗನ್ ಗಳು ಪಿಎಫ್ ಐ ಕಾರ್ಯಕರ್ತರಿಗೆ ಗುಪ್ತವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಆಟೋಮೇಟಿಕ್ ಗನ್ ಗಳು ಮಾತ್ರ ಮಿಸ್ ಆಗಿಲ್ಲ. 12,061 ಜೀವಂತ ಬುಲೆಟ್ ಗಳು ಕೂಡ ಕಾಣಿಯಾಗಿವೆ ಎನ್ನುವ ಮಾಹಿತಿ ಇದೆ. ಇದು ಇನ್ನೊಂದು ಶಾಕಿಂಗ್ ವಿಷಯ. ಒಂದು ರಾಜ್ಯದ ಪೊಲೀಸ್ ಇಲಾಖೆ ಹೀಗೆ ದೇಶದ್ರೋಹಿಗಳೊಂದಿಗೆ ಕೈ ಜೋಡಿಸಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ಆದರೆ ಸಿಎಜಿ ವರದಿಯನ್ನು ಅಲ್ಲಗಳೆದಿರುವ ಪೊಲೀಸ್ ಇಲಾಖೆ 12,061 ಬುಲೆಟ್ ಗಳು ಕಾಣೆಯಾಗಿಲ್ಲ. ಕೇವಲ 3636 ಬುಲೆಟ್ ಗಳು ಕಾಣಿಯಾಗಿವೆ ಎಂದಿದೆ. ಅಷ್ಟಕ್ಕೂ ಸಿಎಜಿ ಯಾಕೆ ಲೆಕ್ಕ ಹೆಚ್ಚು ಹೇಳುತ್ತದೆ? ವಿಷಯ ಇರುವುದು ಈ ಪ್ರಮಾಣದಲ್ಲಿ ಬುಲೆಟ್ ಗಳು ಹೇಗೆ ಕಣ್ಮರೆಯಾಗುತ್ತಿವೆ? ಇದು ಒಳಗಿಂದ ಒಳಗೆ ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುವ ಹುನ್ನಾರವೇ? ಅಗತ್ಯ ಬಿದ್ದಾಗ ಇರಲಿ ಎಂದು ಪಿಎಫ್ ಐ ಶಸ್ತ್ರಾಗಾರವನ್ನು ಬಲಯುತಗೊಳಿಸುವ ಸಂಚಿನ ಭಾಗವೇ? ಹಾಗಾದರೆ ಕೇರಳದಲ್ಲಿ ಏನು ನಡೆಯುತ್ತಿದೆ. ಇನ್ನು ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ನಾಗರಿಕರೊಬ್ಬರು ಕೇರಳ ಹೈಕೋರ್ಟಿಗೆ ಮನವಿ ಸಲ್ಲಿಸಿದಾಗ ಅದನ್ನು ಹೈಕೋರ್ಟ್ ವಜಾಗೊಳಿಸಿದೆ. ಒಂದು ಆಟೋಮೇಟಿಕ್ ಗನ್ ಒಂದು ಪೊಲೀಸ್ ಇಲಾಖೆಯಿಂದ ಮಿಸ್ ಆದರೆ ಅದಕ್ಕಿಂತ ಡೇಂಜರ್ ಬೇರೆ ಇಲ್ಲ. ಹಾಗಿರುವಾಗ 25 ಗನ್ ಎಂದರೆ ತಮಾಷೆ ಅಲ್ಲ. ತಮ್ಮ ರಾಜಕೀಯ ವಿರೋಧಿಗಳನ್ನು ನಾಶ ಮಾಡಲು ಪಿಎಫ್ ಐ ಅದನ್ನು ಕೇರಳದಲ್ಲಿ ಮಾತ್ರ ಇದನ್ನು ಪ್ರಯೋಗಿಸಬೇಕಾಗಿಲ್ಲ. ದೇಶದ ಯಾವುದೇ ರಾಜ್ಯಕ್ಕೂ ಸಾಗಿಸಿ ಅದನ್ನು ದುರುಪಯೋಗಪಡಿಸಬಹುದು. ಅದನ್ನು ದೇಶದ ಹೊರಗಿನ ವಿರೋಧಿಗಳಿಗೆ ನೀಡಿ ಭಾರತದ ರಕ್ಷಣಾ ವ್ಯೂಹದ ಬಗ್ಗೆ ಮಾಹಿತಿ ಸೋರಿಕೆ ಮಾಡಬಹುದು. ಹೀಗೆ ಗುಪ್ತವಾಗಿ ಕೆಲಸ ಮಾಡುತ್ತಿದ್ದ ಪಿಎಫ್ ಐ ಎಂಬ ಭಯೋತ್ಪಾದಕ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿದೆ. ಆದರೆ ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ ಎಂದು ನೆಲದ ಮೇಲ ಬರೆದ ಪ್ರಕರಣ ಬಂಟ್ವಾಳದಲ್ಲಿ ನಡೆದಿದೆ. ಕೇರಳ ಸರಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ ಭವಿಷ್ಯ ಅಲ್ಲಿ ಅಂಧಕಾರದೊಂದಿಗೆ ಮುಕ್ತಾಯವಾಗಲಿದೆ!

0
Shares
  • Share On Facebook
  • Tweet It




Trending Now
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
Hanumantha Kamath October 21, 2025
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
  • Popular Posts

    • 1
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search