ಚೋಳರು ನಮ್ಮ ಕುಟುಂಬದವರು ಎಂದು ಕಮಲ್ ಹೇಳುವುದು ಮಾತ್ರ ಬಾಕಿ!!
ಕಮಲ್ ಹಾಸನ್ ಒಬ್ಬ ಉತ್ತಮ ನಟ. ತಮ್ಮ ಸಿನೆಮಾಗಳ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ದಶವತಾರಂ ತರಹದ ಪುರಾಣದ ಹಿನ್ನಲೆಯ ಚಿತ್ರ ಮಾಡಿದ್ದಾರೆ. ಅವರ ಇತ್ತೀಚಿನ ಚಿತ್ರ ವಿಕ್ರಂ ಸಾಕಷ್ಟು ದೊಡ್ಡ ಹಿಟ್ ಆಗಿದೆ. ಅದರಿಂದ ತಮ್ಮ ಹಳೆಯ ಸಾಲ ಎಲ್ಲಾ ತೀರಿದೆ ಎಂದು ಕಮಲ್ ಹೇಳಿಕೊಂಡಿದ್ದಾರೆ. ಯಾವಾಗ ಆರ್ಥಿಕವಾಗಿ ಟೆನ್ಷನ್ ಇರುವುದಿಲ್ಲವೋ ಮನುಷ್ಯ ಅನಗತ್ಯವಾದ ಕೆಲಸಗಳಿಗೆ ಕೈ ಹಾಕುತ್ತಾನೆ. ಅದರಿಂದ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ. ಹಾಗಂತ ಕಮಲ್ ಹೇಳಿದ ವಿಷಯ ಸಂಪೂರ್ಣ ಸುಳ್ಳಲ್ಲ. ಚೋಳರ ಕಾಲದಲ್ಲಿ ಹಿಂದೂ ಧರ್ಮ ಎನ್ನುವುದು ಇರಲಿಲ್ಲ ಎನ್ನುವ ಅರ್ಥದ ಮಾತುಗಳನ್ನು ಕಮಲ್ ಹೇಳಿದ್ದಾರೆ. ಇದೇ ಈಗ ವಿಷಯ ವಿವಾದವಾಗಿರುವುದು. ಅವರು ಹೇಳಿದ್ದು ಬ್ರಿಟಿಷರು ಹಿಂದೂ ಎನ್ನುವ ಹೆಸರನ್ನು ನೀಡಿದ್ದು ಎನ್ನುವ ಅರ್ಥದ ಮಾತುಗಳನ್ನು ಅವರು ಹೇಳಿದ್ದಾರೆ. ಕಮಲ್ ಹೇಳುವಂತೆ ಹಿಂದೂ ಎನ್ನುವ ಶಬ್ದವನ್ನು ಬ್ರಿಟಿಷರು ಕೊಟ್ಟಿರಬಹುದು. ಆದರೆ ಶಬ್ದ ಕೊಟ್ಟವರು ಅದರ ಜನಕರಲ್ಲ ಎನ್ನುವ ಸಾಮಾನ್ಯ ಜ್ಞಾನ ನಟನೊಬ್ಬನಿಗೆ ಇರಲೇಬೇಕು. ಅಷ್ಟಕ್ಕೂ ಹಿಂದೂ ಎನ್ನುವುದು ಧರ್ಮ ಅಲ್ಲ. ಅದು ಜೀವನ ಪದ್ಧತಿ. ಇನ್ನು ಹಿಂದೂ ಎನ್ನುವ ಸನಾತನ ಧರ್ಮ ಯಾವಾಗ ಹುಟ್ಟಿಕೊಂಡಿತು ಎನ್ನುವ ನಿಖರವಾದ ಅಂಕಿಅಂಶಗಳಿಲ್ಲ. ಇಸ್ಲಾಂ ಹೆಚ್ಚೆಂದರೆ 1500 ವರ್ಷಗಳ ಹಿಂದೆ ಹುಟ್ಟಿದೆ. ಕ್ರಿಶ್ಚಿಯನ್ ಧರ್ಮ 2000 ವರ್ಷಗಳ ಹಿಂದೆ ಜನ್ಮ ತಾಳಿದೆ. ಅದೇ ಚೋಳರ ಸಂಸ್ಥಾನ 9 ರಿಂದ 13 ಶತಮಾನದ ಅವಧಿಯಲ್ಲಿ ಭಾರತದಲ್ಲಿ ಇತ್ತು. ಹಾಗಾದರೆ ಚೋಳರು ಮೊದಲು ಬಂದರೋ, ಹಿಂದೂ ಧರ್ಮ ಮೊದಲು ಇತ್ತೋ ಎನ್ನುವುದನ್ನು ಕಮಲ್ ಹತ್ತಿರ ಕೇಳಿದರೆ ಅವರ ಪ್ರಕಾರ ಚೋಳರ ಸಾಮ್ರಾಜ್ಯ ಮೊದಲು ಬಂದಿತ್ತು. ಯಾಕೆಂದರೆ ಆಗ ಹಿಂದೂ ಎನ್ನುವ ಶಬ್ದ ಇರಲಿಲ್ಲ. ಆದ್ದರಿಂದ ಅವರು ಹಿಂದೂಗಳಲ್ಲ ಎಂದು ಕಮಲ್ ವಾದ. ಸಿಂಧೂ ಕಣಿವೆಯಲ್ಲಿ ಹುಟ್ಟಿದ ಜನಾಂಗವನ್ನು ಸಿಂಧೂ ಎಂದು ಕರೆಯಲಾಗುತ್ತಿತ್ತು. ನಂತರ ಅದೇ ಸಿಂಧೂ ಹೋಗಿ ಹಿಂದೂ ಎನ್ನುವ ಶಬ್ದ ಬಳಕೆಯಲ್ಲಿ ಬಂತು ಎಂದು ಹೇಳಲಾಗುತ್ತದೆ. ಆದರೆ ಒಂದು ವೇಳೆ ಕಮಲ್ ಪ್ರಕಾರ ಚೋಳರು ಹಿಂದೂಗಳು ಅಲ್ಲದಿದ್ದರೆ ಅವರು ಕಟ್ಟಿದ ದೇವಾಲಯಗಳು ಏನು? ಅಷ್ಟಕ್ಕೂ ಚೋಳರು ತಮ್ಮ ಅವಧಿಯಲ್ಲಿ ಯಾವುದೇ ಮಸೀದಿ ಅಥವಾ ಚರ್ಚ್ ಕಟ್ಟಿಲ್ಲ. ಅವರು ಕಟ್ಟಿದ್ದು ದೇವಸ್ಥಾನಗಳನ್ನು. ಈ ದೇಶದ ಮೇಲೆ ಮೊಗಲರು ದಾಳಿ ಮಾಡುವ ತನಕ ಇಲ್ಲಿ ಇದ್ದದ್ದು ಹಿಂದೂ ಧರ್ಮ ಮಾತ್ರ. ಈ ಪವಿತ್ರ ನೆಲದಲ್ಲಿ ಮತಾಂಧರ ಹೆಜ್ಜೆಗಳು ಯಾವತ್ತೂ ಬೀಳದಿದ್ದರೆ ಈ ದೇಶ ಯಾವಾಗಲೂ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತಿತ್ತು. ಆದರೆ ಜಿಹಾದಿಗಳು ಇಲ್ಲಿ ಬಂದು ಈ ಮಣ್ಣಿನಲ್ಲಿ ತಮ್ಮ ಧ್ವಜ ನೆಟ್ಟು ಇದನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಇದನ್ನು ಮುಸ್ಲಿಂ ರಾಷ್ಟ್ರ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ ಎನ್ನುವುದು ಮಾತ್ರ ನಿಜ. ಆದರೆ ಈ ಪ್ರಪಂಚದ ಬೇರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋದ ಮುಸ್ಲಿಂ ರಾಜರು ಅಲ್ಲಿ ಮುಸ್ಲಿಂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಮಲ್ ತಾವೇ ಹಿಂದೆ ಒಮ್ಮೆ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ತಾವು ಒಂದು ಕಾಲದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರಪಡಿಸುತ್ತಿದ್ದೆ ಎಂದು ಕೂಡ ಹೇಳಿದ್ದಾರೆ. ಕಮಲ್ ಹಾಸನ್ ಅವರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರೀತಿ ಇದ್ದಿರಬಹುದು. ಸಹಜವಾಗಿ ಪ್ರಕಾಶ್ ರೈ ತರಹ ಅವರು ಕೂಡ ತಾವು ಈಗ ಯಾವ ಧರ್ಮ ಅನುಸರಿಸಬೇಕು ಎನ್ನುವ ಗೊಂದಲದಲ್ಲಿ ಇರಬಹುದು. ಹೀಗೆ ಹಿಂದೂಗಳ ವಿರುದ್ಧ ಮಾತನಾಡುವುದನ್ನೇ ಪ್ರಗತಿಪರ ನಿಲುವು ಎಂದು ಅಂದುಕೊಂಡಿರಬಹುದು. ಆದರೆ ಒಬ್ಬ ಬರಹಗಾರರೂ ಆಗಿರುವ ಕಮಲ್ ಒಂದು ಸಿನೆಮಾ ಮಾಡುವಾಗ ಮೊದಲು ಹೆಸರು ಹುಡುಕಿ ನಂತರ ಆ ಹೆಸರಿಗೆ ತಕ್ಕಂತೆ ಸಿನೆಮಾ ಕಥೆ ಬರೆಯುತ್ತಾರಾ ಅಥವಾ ಸಿನೆಮಾ ಕಥೆ ಬರೆದು ನಂತರ ಅದಕ್ಕೆ ಸೂಕ್ತವಾಗಿರುವ ಹೆಸರು ಇಡುತ್ತಾರಾ ಎನ್ನುವುದನ್ನು ಅವರೇ ಹೇಳಬೇಕು. ಒಂದು ವೇಳೆ ಚೋಳರು ಹಿಂದೂ ಧರ್ಮವನ್ನು ಅನುಸರಿಸದೇ ಇದ್ದರೆ ಅವರು ಯಾವ ಧರ್ಮದವರಾಗಿದ್ದರು ಎಂದು ಕಮಲ್ ಹೇಳುತ್ತಾರಾ? ಒಂದು ವೇಳೆ ಅವರು ಹಿಂದೂಗಳು ಅಲ್ಲದಿದ್ದರೆ ಚೋಳರು ಕಟ್ಟಿಸಿದ ಬೃಹದೀಶ್ವರ, ಐರಾವತೇಶ್ವರ, ಗಂಗೇಯಕೊಂಡ ಚೋಳಪುರಂ ಶಿವ ದೇವಸ್ಥಾನಗಳು ಏನು ಕಮಲ್ ಕುಟುಂಬದವರು ಕಟ್ಟಿಸಿದ್ದಾ? ಇತಿಹಾಸವನ್ನು ಅರ್ಧಂಬರ್ಧವಾಗಿ ಓದಿ ತಿಳಿದುಕೊಂಡರೆ ಅಥವಾ ವಾಟ್ಸಪ್ ನಲ್ಲಿ ಬಂದ ವಿಷಯವನ್ನು ಹಿಂಬಾಲಕರು ಓದಿ ಹೇಳಿದ್ದನ್ನೇ ನಂಬಿದರೆ ಹೀಗೆ ಆಗುವುದು. ಅದೇ ಕಮಲ್ ಹಾಸನ್ ಅವರಿಗೆ ಆಗಿದೆ. ಅಷ್ಟೇ. ಹೀಗೆ ಹೇಳಿ ಕೆಲವು ನಟರು ತಮ್ಮ ಮೇಲಿದ್ದ ಅಭಿಮಾನಿಗಳ ಗೌರವವನ್ನು ಕಳೆದುಕೊಂಡಿದ್ದಾರೆ. ಈಗ ಕಮಲ್ ಸರದಿ. ಚುನಾವಣೆಗೆ ನಿಲ್ಲುವ ಗಡಿಬಿಡಿಯಲ್ಲಿ ಯಾರನ್ನೋ ಒಲಿಸಲು ಹೋಗಿ ಜಾರಿ ಬೀಳುವುದೆಂದರೆ ಹೀಗೆ!
Leave A Reply