ಓವೈಸಿ ಕಾಂಡೋಮ್ ಮಾರಲು ಹೊರಟದ್ದು ಯಾವಾಗ?
ಅಸಾದುದ್ದೀನ್ ಓವೈಸಿ ಒಬ್ಬ ಸಂಸದ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ಒಬ್ಬ ಕಾಂಡೋಮ್ ಮಾರಾಟಗಾರ ಎಂದು ಗೊತ್ತಿರಲಿಲ್ಲ. ಅದರಲ್ಲಿಯೂ ದೇಶದ ಎಲ್ಲಾ ಮುಸ್ಲಿಮರಿಗೆ ರೆಗ್ಯುಲರ್ ಆಗಿ ಕಾಂಡೋಮ್ ಪೂರೈಕೆ ಮಾಡುವ ಗುತ್ತಿಗೆಯನ್ನು ಇವರೇ ತೆಗೆದುಕೊಂಡಿದ್ದಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಯಾವಾಗ ಕಾಂಡೋಮ್ ಬಳಸುವುದರಲ್ಲಿ ಮುಸ್ಲಿಮರೇ ಹೆಚ್ಚು ಎಂದು ಈತ ಹೇಳಿದ್ದನೋ ಅದರ ಬಳಿಕ ಇವನ ಬಳಿ ಮುಸ್ಲಿಮರು ಎಷ್ಟೆಷ್ಟು ಕಾಂಡೋಮ್ ಖರೀದಿಸಿ ಬಳಸುತ್ತಾರೆ ಎನ್ನುವ ಲೆಕ್ಕ ಕೂಡ ಇರುವುದು ಕೂಡ ಪತ್ತೆಯಾಯಿತು. ದೇಶದ ಜನಸಂಖ್ಯೆ ನಿಯಂತ್ರಣ ಮಾಡಲು ಮುಸ್ಲಿಮರೇ ಹೆಚ್ಚು ಕಾಂಡೋಮ್ ಬಳಸುತ್ತಾರೆ ಎಂದು ಓವೈಸಿ ಬಹಿರಂಗವಾಗಿ ಹೇಳಿದ್ದಾನೆ. ಅದನ್ನು ಕೇಳಿ ಮುಸ್ಲಿಮರೇ ಗಹಗಹಿಸಿ ನಗುತ್ತಿದ್ದಾರೆ. ನೀವೆನಾದ್ರೂ ಓವೈಸಿಗೆ ಫೋನ್ ಮಾಡಿ ಸುಳ್ಳು ಹೇಳಿದ್ರಾ ಎಂದು ಹೆಂಗಸರು ತಮ್ಮ ಗಂಡಂದಿರನ್ನು (?) ಪ್ರಶ್ನಿಸುತ್ತಿದ್ದಾರೆ. ಕೆಲವು ಮುಸ್ಲಿಮ್ ಗಂಡಸರು ತಮ್ಮ ಸೆಟಪ್ ವಿಷಯ ಓವೈಸಿಗೆ ಹೇಗೆ ಗೊತ್ತಾಯಿತು ಎಂದು ಆತಂಕಕ್ಕೆ ಬಿದ್ದಿದ್ದಾರೆ. ಒಟ್ಟಿನಲ್ಲಿ ಕಾಂಡೋಮ್ ಅಂಕಿಅಂಶ ನಿಷ್ಣಾತರಂತೆ ಓವೈಸಿ ಹೇಳಿದ ವಿಷಯದಿಂದ ಮುಸ್ಲಿಮ್ ಸಮಾಜ ಗಲಿಬಿಲಿಗೆ ಬಿದ್ದಿದೆ. ಯಾಕೆಂದರೆ ಮುಸ್ಲಿಮರಲ್ಲಿ ಕಾಂಡೋಮ್ ಬಳಕೆಯ ಬಗ್ಗೆ ಅಪಸ್ವರವಿದೆ. ಮಕ್ಕಳು ಅಲ್ಲಾ ಕೊಡುವ ವರ.
ಆದ್ದರಿಂದ ಅದನ್ನು ಕೃತಕ ವಸ್ತುಗಳಿಂದ ತಡೆಯಬಾರದು ಎಂದು ಇಂದಿಗೂ ಮೂಲಭೂತವಾದಿ ಮುಸ್ಲಿಮ್ ಕುಟುಂಬಗಳು ನಂಬಿವೆ. ಈಗ ಒಂದಿಷ್ಟು ಸಮಯ ಬದಲಾಗಿರಬಹುದು. ಆದರೆ ಏಕಾಏಕಿ ಯಾರನ್ನು ಸರಿ ಮಾಡಲು ಆಗುವುದಿಲ್ಲ. ನಗರ ಪ್ರದೇಶದಲ್ಲಿ ಬದಲಾವಣೆ ಆಗಿರಬಹುದು. ಆದರೆ ದೇಶದ ಗ್ರಾಮೀಣ ಪ್ರದೇಶದ ಮುಸ್ಲಿಮರು ಹಿಂದಿನ ಹಾಗೆ ಇದ್ದಾರೆ. ಒಂದು ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಓವೈಸಿ ಹೇಳುವುದಾದರೆ ಸ್ವಾತಂತ್ರ್ಯ ಸಿಗುವಾಗ ಭಾರತದಲ್ಲಿ ಇದ್ದ 3% ರಿಂದ 5% ಮುಸ್ಲಿಮರ ಜನಸಂಖ್ಯೆ ಈಗ 16% ರಷ್ಟು ಆಗಲು ಕಾರಣವೇನು? ಎಂದು ಓವೈಸಿ ಹೇಳಬೇಕು. ಏನು ದೇವರು ಮೇಲಿನಿಂದ ಮಕ್ಕಳನ್ನು ಇಳಿಸಿ ಹೋದ್ನಾ? ಆದ್ದರಿಂದ ಓವೈಸಿ ಸುಮ್ಮನೆ ತಾವು ಮುಸ್ಲಿಂ ಸಮುದಾಯದ ಪ್ರತಿನಿಧಿಯಂತೆ ಏನೇನೋ ಮಾತನಾಡಬಾರದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲಿ ಒಂದು ಅಕ್ಷರವೂ ತಪ್ಪಿಲ್ಲ. ಇಡೀ ದೇಶದಲ್ಲಿ ಜನಸಂಖ್ಯೆ ಯಾವ ರೀತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದರೆ ನಾವು ಕೆಲವೇ ವರ್ಷಗಳಲ್ಲಿ ಚೀನಾವನ್ನು ಹಿಂದಕ್ಕೆ ಹಾಕಿ ನಂಬರ್ 1 ಸ್ಥಾನಕ್ಕೆ ತಲುಪಲಿದ್ದೇವೆ. ಇದರಿಂದ ಏನು ಆಗುತ್ತದೆ ಎಂದರೆ ಈ ದೇಶದ ಮಾನವ ಸಂಪನ್ಮೂಲ ಮಾತ್ರ ಹೆಚ್ಚಾಗುತ್ತದೆ. ಉಳಿದ ಎಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ. ನಿರುದ್ಯೋಗ ಜಾಸ್ತಿಯಾಗುತ್ತದೆ. ಬಡತನ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣದ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ಆದರೆ ಅವರು ಹೇಳಿದ ಕೂಡಲೇ ಅದನ್ನು ಅನುಷ್ಟಾನಕ್ಕೆ ತರಲು ಆಗುವುದಿಲ್ಲ. ಯಾಕೆಂದರೆ ದೇಶದ ಭವಿಷ್ಯವನ್ನು ಕೂಡ ನೋಡಬೇಕಾಗುತ್ತದೆ. ರಷ್ಯಾದಲ್ಲಿ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಹಿಂದೆ ಹೇರಲಾಗಿದ್ದ ಕಾನೂನುಗಳಿಂದ ಅಲ್ಲಿ ವೃದ್ಧರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದಕ್ಕಾಗಿ ಹೆಚ್ಚೆಚ್ಚು ಮಕ್ಕಳನ್ನು ಹೊಂದಿ ಮತ್ತು ಆರ್ಥಿಕ ಬೆಂಬಲ ಪಡೆಯಿರಿ ಎಂದು ಪುತಿನ್ ಘೋಷಣೆ ಮಾಡಿದ್ದಾರೆ. ಪ್ರಪಂಚದ ಅನೇಕ ರಾಷ್ಟ್ರಗಳು ಮಕ್ಕಳನ್ನು ಹೆರಲು ನಾಗರಿಕರಿಗೆ ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಜನಸಂಖ್ಯೆ ಎನ್ನುವುದು ಅಗಸ್ಟ್ ನಲ್ಲಿ ಬೀಳುವ ಮಳೆಯಂತೆ. ಹೆಚ್ಚು ಆದರೂ ಕಷ್ಟ ಮತ್ತು ಕಡಿಮೆ ಆದರೂ ನಷ್ಟ. ಆದ್ದರಿಂದ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾಗಿರುವುದು ಅತ್ಯಗತ್ಯ.
ಈಗ ಕಾಲಾನುಕ್ರಮದಲ್ಲಿ ಮಕ್ಕಳನ್ನು ಹೆರುವ ವಿಷಯದಲ್ಲಿ ಹೆಂಗಸರ ಫಲವತ್ತತೆ ಕೂಡ ಕಡಿಮೆಯಾಗುತ್ತಾ ಬಂದಿದೆ. ಹಿಂದಿನ ಕಾಲದ ಹಾಗೆ ಈಗ ಯಾರಿಗೂ ಏಳೆಂಟು ಮಕ್ಕಳು ಇಲ್ಲ. ಒಂದು ತಪ್ಪಿದರೆ ಎರಡು. ಮೂರು ಮಕ್ಕಳಾದರೆ ಅದನ್ನು ಆಶ್ಚರ್ಯವಾಗಿ ನೋಡಲಾಗುತ್ತದೆ. ಈಗ ವಿದ್ಯಾಭ್ಯಾಸದ ಖರ್ಚು, ಜೀವನ ನಿರ್ವಹಣೆ ಖರ್ಚು, ಕಲಿಕೆಗೆ ತಕ್ಕಂತೆ ಉದ್ಯೋಗ ಸಿಗದ ಚಿಂತೆ ಎಲ್ಲವೂ ಸೇರುವುದರಿಂದ ಒಂದು ಮಗು ಆದ ಕೂಡಲೇ ಸಾಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹಿಂದೂಗಳ ಮನಸ್ಥಿತಿ ಮತ್ತು ಒಂದಿಷ್ಟರ ಮಟ್ಟಿಗೆ ನಗರ ಪ್ರದೇಶದ ಮುಸ್ಲಿಮರ ಚಿಂತನೆಯೂ ಹೌದು. ಆದರೆ ಓವೈಸಿ ತಾವು ಒಬ್ಬ ಸಂಸದರಾಗಿ ಮಾತನಾಡಬೇಕೆ ಹೊರತು ಒಂದು ಮತದ ಪ್ರತಿನಿಧಿಯಂತೆ ಮಾತನಾಡಬಾರದು. ಇನ್ನು ಮಕ್ಕಳನ್ನು ಮಾಡಲಾಗದವರು ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುತ್ತಾರೆ ಎಂದು ಕೆಲವರು ಸಂಘಕ್ಕೆ ಟಾಂಗ್ ನೀಡಿದ್ದಾರೆ. ಮಕ್ಕಳನ್ನು ಮಾಡುವುದೇ ದೊಡ್ಡ ಸಂಗತಿ ಅಲ್ಲ. ಅವರನ್ನು ಯೋಗ್ಯ ಸಂಸ್ಕಾರವಂತರಾಗಿ ಮಾಡಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಬೇಕೆ ಹೊರತು ಅವರನ್ನು ಸಮಾಜ ಕಂಟಕರನ್ನಾಗಿ ಮಾಡಬಾರದು. ಬಾಂಬ್ ಹಿಡಿಯಲು ಕಲಿಸುವುದೇ ಸಾಧನೆ ಅಲ್ಲ. ತಮ್ಮ ಧರ್ಮದ ಶಕ್ತಿಯನ್ನು ತೋರಿಸಲು ಮಕ್ಕಳನ್ನು ಹೆಚ್ಚೆಚ್ಚು ಹುಟ್ಟಿಸುವುದು ಪರಾಕ್ರಮ ಅಲ್ಲ. ಓವೈಸಿಗೆ ತಾವು ಮೋಹನ್ ಭಾಗವತ್ ಅವರಿಗೆ ಟಕ್ಕರ್ ಕೊಡುವುದು ಮಾತ್ರ ಗೊತ್ತು. ಅದು ಬಿಟ್ಟು ಈ ದೇಶದ ಸಮಗ್ರ ಅಭಿವೃದ್ಧಿಗೆ ಮಾತ್ರ ಯೋಚಿಸುವ ಆರ್ ಎಸ್ ಎಸ್ ದೃಷ್ಟಿಕೋನದಲ್ಲಿ ಓವೈಸಿ ಯೋಚಿಸಲು ಆರಂಭವಾದಾಗ ಅವರು ಚೆನ್ನಾಗಿರುತ್ತಾರೆ. ದೇಶವೂ ಚೆನ್ನಾಗಿರುತ್ತದೆ!
Leave A Reply