• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಿಷಿ ಸುನಾಕ್ ಹಿಂದೂ ಆಗಿರುವುದು ಟೀಕಿಸಲು ಕಾರಣವಾಯಿತೆ!

Hanumantha Kamath Posted On October 28, 2022


  • Share On Facebook
  • Tweet It

ರಿಷಿ ಸುನಾಕ್ ಸೂರ್ಯ ಮುಳುಗದ ನಾಡಿನ ಪ್ರಧಾನಿಯಾಗುತ್ತಿರುವ ಈ ಹೊತ್ತಿನಲ್ಲಿ ಇದರಿಂದ ಭಾರತಕ್ಕೆ ಏನು ಲಾಭ ಇದೆ ಎನ್ನುವ ಚರ್ಚೆ ಶುರುವಾಗುತ್ತಿದೆ. ಒಬ್ಬ ಭಾರತೀಯ ಮೂಲದ ವ್ಯಕ್ತಿ ಜಗತ್ತಿನ ಅತ್ಯಂತ ಸಮೃದ್ಧ ದೇಶದ ಪ್ರಧಾನಿಯಾಗುವುದು ನಿಜಕ್ಕೂ ನಮಗೆಲ್ಲರಿಗೂ ಖುಷಿಯ ವಿಷಯ ಬಿಟ್ಟರೆ ಅದರ ಹಿಂದೆ ಅಂತಹ ಲಾಭದ ಉದ್ದೇಶ ಏನಿಲ್ಲ. ಆದರೂ ಭಾರತದ ಕೆಲವು ನಿರುದ್ಯೋಗಿ ರಾಜಕಾರಣಿಗಳು ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುವ ಈ ಸಂದರ್ಭದಲ್ಲಿ ಅದಕ್ಕೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಲಿಂಕ್ ಮಾಡಿ ಹಂಗಿಸಲು, ಟೀಕಿಸಲು ಶುರು ಮಾಡಿದ್ದಾರೆ. ಹಾಗೆ ನೋಡಿದರೆ ಸುನಾಕ್ ಭಾರತದಲ್ಲಿ ಹುಟ್ಟಿದ್ದೇ ಅಲ್ಲ. ಅವರು ಜನ್ಮ ತಾಳಿದ್ದೇ ಬ್ರಿಟನ್ ನಲ್ಲಿ. ಅದು ಹೋಗಲಿ, ಅವರ ತಂದೆಯಾದರೂ ಭಾರತದಲ್ಲಿ ಹುಟ್ಟಿದ್ರಾ? ಅದು ಕೂಡ ಇಲ್ಲ. ರಿಷಿ ತಂದೆ ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಿ. ಸುನಾಕ್ ಅಜ್ಜ ಹುಟ್ಟಿದ್ದು ಪಂಜಾಬ್ ನಲ್ಲಿ. ಆದ್ದರಿಂದ ಸುನಾಕ್ ಮೈಯಲ್ಲಿ ಭಾರತದ ರಕ್ತ ಹರಿಯುತ್ತಿದೆ ಎಂದರೆ ಅದರಲ್ಲಿ ತಪ್ಪಿಲ್ಲ. ಹಾಗಂತ ಇವರಿಗೆ ನೇರವಾಗಿ ವಂಶವಾಹಿನಿಯ ಸಂಬಂಧವೇ ಹೊರತು ಇಲ್ಲಿ ಹುಟ್ಟಿ ಬೆಳೆದ ಹಿನ್ನಲೆ ಇಲ್ಲ. ಆದರೆ ಅದಕ್ಕಿಂತಲೂ ಇನ್ನೊಂದು ರೀತಿಯಲ್ಲಿ ಸುನಾಕ್ ಅವರನ್ನು ನಾವು ನಮ್ಮವರು ಎಂದು ಹೇಳಬಹುದು. ಅದೇನೆಂದರೆ ಅವರು ಕರ್ನಾಟಕದ ನಾರಾಯಣ ಮೂರ್ತಿಗಳ ಮಗಳನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಯಶಸ್ವಿ ಕುಟುಂಬ ಜೀವನವನ್ನು ನಡೆಸುತ್ತಿದ್ದಾರೆ. ಆ ದೃಷ್ಟಿಯಲ್ಲಿ ನೋಡಿದರೆ ಸುನಾಕ್ ಭಾರತದ ಅಳಿಯ ಎನ್ನಬಹುದು. ಆದರೆ ಕೆಲವು ರಾಜಕಾರಣಿಗಳ ದೃಷ್ಟಿಯಲ್ಲಿ ಸುನಾಕ್ ಹಿಂದೂ ಆಗಿ ಹುಟ್ಟಿದ್ದೇ ತಪ್ಪು. ಅವರು ಹಿಂದೂ ಸಂಸ್ಕೃತಿಯ ಶಾಲನ್ನು ಹಾಕಿ ದೇವಸ್ಥಾನದಲ್ಲಿ ಪತ್ನಿಯೊಂದಿಗೆ ಪ್ರಾರ್ಥನೆಯಲ್ಲಿ ತೊಡಗಿದ ಫೋಟೋವನ್ನು ನೋಡಿದ ಕಾಂಗಿಗಳಿಗೆ, ಮುಸ್ಲಿಂ ಮುಖಂಡರಿಗೆ ಉರಿಯನ್ನು ತಡೆದುಕೊಳ್ಳಲು ಆಗುವುದಿಲ್ಲ. ಇನ್ನು ಸುನಾಕ್ ಬ್ರಿಟನ್ ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಘಳಿಗೆಯಲ್ಲಿ ಅವರ ಕೈಯಲ್ಲಿ ಭಗವತ್ ಗೀತೆ ಇದ್ದದ್ದು ಭಾರತದಲ್ಲಿ ಕೆಲವರಿಗೆ ನಿದ್ರೆಯಲ್ಲಿಯೂ ಚೇಳು ಕಚ್ಚಿದಂತೆ ಆಗುತ್ತಿದೆ. ಅದನ್ನು ಗಂಭಿರವಾಗಿ ತೆಗೆದುಕೊಂಡಿರುವ ಶಶಿ ತರೂರ್ ಎಂಬ ಕಾಂಗ್ರೆಸ್ಸಿನ ಹಣೆಬರಹ ಬದಲಿಸಲು ಹೊರಟು ವಿಫಲಗೊಂಡಿರುವ ರಾಜಕಾರಣಿ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರೊಬ್ಬರು ಪ್ರಧಾನಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ರಿಷಿ ಸುನಾಕ್ ಹಿಂದೂವಾಗಿರುವುದರಿಂದ ಬ್ರಿಟನ್ ಮಟ್ಟಿಗೆ ಅವರು ಅಲ್ಪಸಂಖ್ಯಾತರು. ಅಲ್ಲಿ ಅಲ್ಪಸಂಖ್ಯಾತರು ಪ್ರಧಾನಿಯಾಗಿರುವುದು ದೊಡ್ಡ ಸಾಧನೆ, ಅದನ್ನು ನೋಡಿ ಭಾರತ ಕಲಿಯುವಂತದ್ದು ತುಂಬಾ ಇದೆ ಎಂದು ಕಾಂಗ್ರೆಸ್ಸಿನ ಹಣದ ತಿಜೋರಿ ಚಿದಂಬರಂ ಹೇಳಿದ್ದಾರೆ. ಚಿದಂಬರಂ ಪ್ರಕಾರ ಭಾರತೀಯ ಜನತಾ ಪಾರ್ಟಿಯವರು ಯಾವತ್ತೂ ಅಲ್ಪಸಂಖ್ಯಾತರಿಗೆ ಪ್ರಧಾನಿ ಮಾಡುವುದಿಲ್ಲ ಎನ್ನುವ ರೀತಿಯಲ್ಲಿ ಹಂಗಿಸಿದ್ದಾರೆ. ಬಿಜೆಪಿಯವರು ಎಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು ಎನ್ನುವುದನ್ನು ಕಾಂಗ್ರೆಸ್ಸಿನವರು ಮೊದಲು ನೋಡಲಿ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿಗರು ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎನ್ನುವುದನ್ನು ತಾಳೆ ಹಾಕಲಿ. ಆಗ ಯಾರು ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕು ಎಂದು ಗೊತ್ತಾಗುತ್ತದೆ. ಬಿಜೆಪಿಯವರು ರಾಷ್ಟ್ರಪತಿಯನ್ನಾಗಿ ಅಲ್ಪಸಂಖ್ಯಾತರನ್ನು ನೇಮಿಸಿದ್ದಾರೆ. ಹಾಗೆ ನೋಡಿದರೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎನ್ನುವುದಕ್ಕಿಂತ ಈ ದೇಶ ಕಂಡ ಶ್ರೇಷ್ಟ ವಿಜ್ಞಾನಿ ಎಂದು ಹೇಳಬಹುದು. ನೀವು ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕು ಎನ್ನುವ ಕಾರಣಕ್ಕೆ ಯಾರನ್ನೋ ತಂದು ಕೂರಿಸುವುದರ ಬದಲು ಅರ್ಹ ವ್ಯಕ್ತಿಗಳನ್ನು ತಂದು ಸ್ಥಾನಮಾನ ಕೊಟ್ಟರೆ ಅವರಿಗೂ ಗೌರವ ಮತ್ತು ಸಮುದಾಯಕ್ಕೂ ಮನ್ನಣೆ ನೀಡಿದಂತೆ ಆಗುತ್ತದೆ. ಆದರೆ ಕಾಂಗ್ರೆಸ್ಸಿಗರಿಗೆ ರಬ್ಬರ್ ಸ್ಟ್ಯಾಂಪ್ ತರದವರೇ ಬೇಕು. ಆದ್ದರಿಂದ ಅವರು ಅವಕಾಶ ಕೊಡುವುದು ಅಲ್ಪಸಂಖ್ಯಾತರು ಮತ್ತು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವವರು. ಆದ್ದರಿಂದ ಬ್ರಿಟನ್ನಿನಿಂದ ನಾವು ಕಲಿಯುವಂತದ್ದು ಏನೂ ಇಲ್ಲ. ಏನು ಇದ್ದರೂ ಕಾಂಗ್ರೆಸ್ಸಿಗರು ಕಲಿಯುವಂತದ್ದು ಇದೆ. ಇನ್ನು ಕಾಶ್ಮೀರದ ಮುಫ್ತಿ ಮೊಹಮ್ಮದ್ ಸಯ್ಯದ್ ಮಗಳ ಪ್ರಕಾರ ಬ್ರಿಟನ್ ನಲ್ಲಿ ಅಲ್ಪಸಂಖ್ಯಾತ ವ್ಯಕ್ತಿ ಪ್ರಧಾನಿಯಾಗಬಹುದಾಗಿದೆ. ಆದರೆ ಭಾರತದಲ್ಲಿ ಸಿಎಎ, ಎನ್ ಆರ್ ಸಿ ಬಗ್ಗೆ ದಾಖಲೆ ಕೇಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ಕಾಲೆಳೆದಿದ್ದಾರೆ. ಹಾಗೆ ನೋಡಿದರೆ ಕಾಶ್ಮೀರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಲು ಈ ಮುಫ್ತಿ ಕುಟುಂಬದ ಕೈವಾಡವೂ ಇದೆ. ಇನ್ನು ಸಿಎಎ, ಎನ್ ಆರ್ ಸಿಯಿಂದ ಮುಫ್ತಿ ಕುಟುಂಬ ಸಹಿತ ಈ ದೇಶದ ಮುಸ್ಲಿಮರು ಹೆದರುವಂತಹ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಆದರೆ ಅದನ್ನು ಇಟ್ಟು ಮುಸ್ಲಿಮರಲ್ಲಿ ಅಭದ್ರತೆಯ ಭಾವನೆಯನ್ನು ಬೆಳೆಸಲು ಇಂತಹ ಅನೇಕರು ತಮ್ಮ ಕೊಡುಗೆ ನೀಡುತ್ತಿದ್ದಾರೆ. ಪ್ರಪಂಚ ಮತ್ತು ದೇಶದ ಮೂಲೆಯಲ್ಲಿ ಏನೇ ನಡೆಯಲಿ ಅದನ್ನು ನೇರವಾಗಿ ಕೇಂದ್ರ ಸರಕಾರ ಮತ್ತು ಮೋದಿಯವರಿಗೆ ಸಂಬಂಧ ತರುವುದನ್ನು ಕೆಲವರು ಮಾಡುತ್ತಾ ಬಂದಿದ್ದಾರೆ. ಒಂದಂತೂ ನಿಜ, ರಿಷಿ ಸುನಾಕ್ ಹಿಂದೂ, ಭಾರತೀಯ ಎನ್ನುವ ಯಾವುದೇ ವಿಷಯ ಇಟ್ಟು ಬ್ರಿಟನ್ ಪ್ರಧಾನಿಯಾಗುತ್ತಿಲ್ಲ. ಅವರು ತಮ್ಮ ಸ್ವಂತ ಬಲದ ಮೇಲೆ ಪ್ರಧಾನಿಯಾಗುತ್ತಿದ್ದಾರೆ. ಅವರು ಮೋದಿಯವರ ಬೆಂಬಲದಿಂದ ಪ್ರಧಾನಿಯಾಗುತ್ತಿಲ್ಲ ಎನ್ನುವುದನ್ನು ಕಾಂಗಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು!

  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search