• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ದೇವಸ್ಥಾನಗಳಲ್ಲಿ ಮುದ್ರಾಧರಣೆ ಬೇಡಾ ಎಂದರೆ ಬಿಜೆಪಿ ಮಾನ ಗೋತಾ!!

Tulunadu News Posted On November 17, 2022
0


0
Shares
  • Share On Facebook
  • Tweet It

ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಅದರ ಪ್ರಕಾರ ಮುಜುರಾಯಿ ದೇವಸ್ಥಾನಗಳಲ್ಲಿ ಇನ್ನು ಮುದ್ರಾಧಾರಣೆ ನಡೆಯುವಂತಿಲ್ಲ, ಫೋಟೋ ಹಾಕುವಂತಿಲ್ಲ, ಜಯಂತಿಗಳನ್ನು ಆಚರಿಸುವಂತಿಲ್ಲ ಎನ್ನುವ ಅಂಶಗಳನ್ನು ಸೇರಿಸಲಾಗಿದೆ. ಇಂತಹ ಸುತ್ತೋಲೆಗಳನ್ನು ದೇವಸ್ಥಾನಗಳಿಗೆ ಕಳುಹಿಸುವ ಧಾ.ದ ಇಲಾಖೆಯ ಅಧಿಕಾರಿ ಒಂದೋ ಭಯಂಕರ ಹಿಂದೂ ವಿರೋಧಿಯಾಗಿರಬೇಕು ಅಥವಾ ಅವರಿಗೆ ಭಾರತೀಯ ಜನತಾ ಪಾರ್ಟಿಯ ಸರಕಾರ ವಿರುದ್ಧ ಅತೀ ಹೆಚ್ಚಿನ ಕೋಪ ಇರಬೇಕು. ಯಾಕೆಂದರೆ ಈ ಇಲಾಖೆ ಬಿಜೆಪಿ ಸರಕಾರ ಬಂದ ಬಳಿಕ ಹಿಂದೂ ವಿರೋಧಿ ನೀತಿಗಳನ್ನು ಎಷ್ಟು ಜಾರಿ ತರಲು ಸಾಧ್ಯವೋ ಅಷ್ಟು ಪ್ರಯತ್ನಿಸಿದೆ. ಪ್ರತಿ ಬಾರಿ ಮುಜುರಾಯಿ ಇಲಾಖೆ ಏನಾದರೂ ಒಂದು ಅಧ್ವಾನ ಮಾಡುವುದು ಮತ್ತು ಅದು ವಿವಾದಕ್ಕೆ ಒಳಗಾದಾಗ ಏನೂ ಗೊತ್ತಿಲ್ಲದವರಂತೆ ಬಿಜೆಪಿ ಸರಕಾರ ವರ್ತಿಸುವುದು ನಂತರ ಹಿಂದಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿ ಮೈಲೇಜ್ ಗಿಟ್ಟಿಸುವ ಯತ್ನ ನಡೆಯುತ್ತಿರುವುದು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಮೊದಲನೇಯದಾಗಿ ಧಾ.ದ ಇಲಾಖೆಯ ಈ ಧಾರ್ಮಿಕ ಪರಿಷತ್ತು ಕಮಿಟಿಯಲ್ಲಿ ಇರುವವರೆಲ್ಲರೂ ಹಿಂದೂಗಳು. ಒಂದು ವೇಳೆ ಕೆಲವು ಮುಸ್ಲಿಮರು, ಕೆಲವು ಕ್ರಿಶ್ಚಿಯನ್ನರು ಇದ್ದು ಸಮಿತಿಯಲ್ಲಿ ಅವರು ಏನಾದರೂ ಕಡ್ಡಿ ಅಲ್ಲಾಡಿಸುತ್ತಿದ್ದರೆ ಆಗ ಹಿಂದೂಗಳದ್ದು ನಡೆಯುವುದಿಲ್ಲ ಎನ್ನಬಹುದಿತ್ತು. ಆದರೆ ಇಲ್ಲಿ ಹಾಗಲ್ಲ. ಎಲ್ಲರೂ ಹಿಂದೂಗಳೇ. ಹಾಗಿರುವಾಗ ಸರಕಾರಿ ದೇವಸ್ಥಾನಗಳಲ್ಲಿ ಮುದ್ರಾಧಾರಣೆ ಮಾಡಬಾರದು ಎಂದು ಹೇಳಲು ಅವನ್ಯಾರು ಪಾಕಿಸ್ತಾನಿ ಅಧಿಕಾರಿಯಾ? ಇಂತಹ ನಿಯಮ ತರುವ ಅಧಿಕಾರಿಗಳ ತಂದೆ, ಅಜ್ಜ, ಮುತ್ತಾತ ಮತ್ತು ಅವರ ಮುತ್ತಾತನ ಕಾಲದಿಂದಲೂ ಮುದ್ರಾಧಾರಣೆ ದೇವಾಲಯಗಳಲ್ಲಿ ನಡೆಯುತ್ತಲೇ ಇದೆ. ಇನ್ನು ಮುದ್ರಾಧಾರಣೆಯನ್ನು ನಮ್ಮ ಹಿರಿಯರು ಸುಮ್ಮನೆ ಜಾರಿಗೆ ತಂದದ್ದಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ನಿಮ್ಮ ದೇಹದ ಮೇಲೆ ಮುದ್ರೆಯನ್ನು ಒತ್ತಿದಾಗ ಅದು ದೇಹದ ನರನಾಡಿಗಳಲ್ಲಿ ಏಕಕಾಲಕ್ಕೆ ಸಕರಾತ್ಮಕ ಶಕ್ತಿಯನ್ನು ಪ್ರವಹಿಸಿ ದೇಹದಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸುತ್ತದೆ. ಇನ್ನು ಮುದ್ರಾಧಾರಣೆ ಏನೂ ಬಲವಂತದ ಮತಾಂತರವಲ್ಲ. ಅದನ್ನು ಯಾರ ಮೇಲೆಯೂ ಒತ್ತಾಯಪೂರ್ವಕವಾಗಿ ಹೇರುವುದಿಲ್ಲ. ಇನ್ನು ಮುದ್ರಾಧಾರಣೆಗೆ ಅನುವಾಗುವ ಭಕ್ತ ಕೂಡ ಸೀದಾ ಬಂದು ಮುದ್ರಾಧಾರಣೆ ಪಡೆದುಕೊಳ್ಳುವಂತಿಲ್ಲ. ಆತ ಅದಕ್ಕಾಗಿ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿ, ಸಂಧ್ಯಾವಂದನೆ ಮಾಡಿ, ಅಕ್ಕಿಯ ಯಾವುದೇ ಆಹಾರ ಸೇವಿಸದೇ, ಪಂಚೆಯಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮುದ್ರಾಧಾರಣೆ ಮಾಡಿಸಿಕೊಂಡು ಶಿಸ್ತಾಗಿ ಮನೆಗೆ ಹೋಗುತ್ತಾರೆ. ಇದರಿಂದ ಹಿಂದೂ ಧರ್ಮದ ಒಂದು ಸಂಪ್ರದಾಯ ಇವತ್ತಿನ ಪೀಳಿಗೆಗೆ ಗೊತ್ತಾಗುತ್ತದೆ. ಇನ್ನು ದೇವಸ್ಥಾನಗಳಲ್ಲಿ ಯಾವುದೇ ಜಯಂತಿಯನ್ನು ಆಚರಿಸಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಯಾವುದೇ ದೇವಸ್ಥಾನದಲ್ಲಿ ಸಿನೆಮಾ ನಟರ, ರಾಜಕೀಯ ನೇತಾರರ ಜನ್ಮದಿನವನ್ನು ಜಯಂತಿಯನ್ನು ಆಚರಿಸುವುದಾದರೆ ಅದನ್ನು ನಿಲ್ಲಿಸಬೇಕು ಎಂದು ಹೇಳುವುದರಲ್ಲಿ ಅರ್ಥವಿದೆ. ಆದರೆ ನಾವು ದೇವಸ್ಥಾನಗಳಲ್ಲಿ ಆಚರಿಸುವುದು ನಮ್ಮ ಧರ್ಮವನ್ನು ಬೆಳೆಸಲು ಶ್ರಮಿಸಿದ ಸಂತರ, ಯುಗಪುರುಷರ ಜಯಂತಿಗಳನ್ನು. ಅದನ್ನು ಆಚರಿಸುವುದರಿಂದ ನಮ್ಮ ಈಗಿನ ಪೀಳಿಗೆಗೆ ಆ ಯುಗಪುರುಷರ ಸಂದೇಶಗಳನ್ನು ತಿಳಿಸಿದಂತೆ ಆಗುತ್ತದೆ. ಅದನ್ನು ಆಚರಿಸಿದರೆ ನಿಲ್ಲಿಸಿದರೆ ಇನ್ನೇನು ಉಳಿದಿದೆ. ಇನ್ನು ಫೋಟೋಗಳನ್ನು ಹಾಕಬಾರದು, ನಾಮಫಲಕ ಹಾಕಬಾರದು ಎಂದು ಹೇಳಲಾಗಿದೆ. ಫೋಟೋಗಳನ್ನು ಒಂದು ದೇವಸ್ಥಾನದಲ್ಲಿ ಹಾಕಿದ್ದಾರೆ ಎಂದರೆ ಆ ಫೋಟೋಗಳು ಯಾವುದೋ ಅಶ್ಲೀಲ ಚಿತ್ರಕಲೆಯಾಗಿರುವುದಿಲ್ಲ. ಇನ್ನು ನಾಮಫಲಕಗಳನ್ನು ಹಾಕುವುದರ ವಿರುದ್ಧ ಇವರು ಏನು ಹೇಳಲು ಹೊರಟಿದ್ದಾರೆ ಎಂದು ಬರುವ ದಿನಗಳಲ್ಲಿ ಗೊತ್ತಾಗಬೇಕು. ಒಟ್ಟಿನಲ್ಲಿ ಮುದ್ರಾಧಾರಣೆ, ಜಯಂತಿ, ಫೋಟೋ ಬೇಡಾ ಎಂದು ಹೇಳಿರುವ ಅಧಿಕಾರಿಯು ಬಿಜೆಪಿ ಸರಕಾರದ ಮಾನ ತೆಗೆಯಲೆಂದೇ ಹುಟ್ಟಿರುವಂತಿದೆ. ಅವರನ್ನು ಶೀಘ್ರ ಎತ್ತಂಗಡಿ ಮಾಡದೇ ಹೋದರೆ ಬಿಜೆಪಿಯ ಮಾನ ಮರ್ಯಾದೆ ಮತ್ತೆ ಹರಾಜಾದೀತು. ಜೋಕೆ

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Tulunadu News July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Tulunadu News July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search