• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!

Hanumantha Kamath Posted On January 30, 2023


  • Share On Facebook
  • Tweet It

ಪ್ರವೀಣ್ ನೆಟ್ಟಾರು ಪ್ರಕರಣದ ಪ್ರಧಾನ ಆರೋಪಿಗಳಾದ ಮೊಹಮ್ಮದ್ ಮುಸ್ತಫಾ, ಕೆ.ಎ ಮಸೂದ್ ಸೌದಿ ಅರೇಬಿಯಾದಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಅವರ ತಲೆಗೆ ರಾಷ್ಟ್ರೀಯ ತನಿಖಾ ದಳ ಹತ್ತು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಜುಲೈ 26 ರಂದು ತಮ್ಮ ಅಂಗಡಿಯ ಸನಿಹದಲ್ಲಿಯೇ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನೆಟ್ಟಾರು ಎನ್ನುವುದು ಸುಳ್ಯ ಗಡಿ ಪ್ರದೇಶದ ಊರಾಗಿದ್ದು, ಪ್ರವೀಣ್ ಹತ್ಯೆ ಮಾಡಿದ ನಂತರ ಹಂತಕರು ಪಕ್ಕದ ಕೇರಳಕ್ಕೆ ಹೋಗಿ ಅಲ್ಲಿನ ಮಸೀದಿಯೊಂದರಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದರು ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿತ್ತು. ಇದರ ಅರ್ಥ ಆರಂಭದಿಂದಲೇ ಪ್ರವೀಣ್ ಹತ್ಯೆಯಲ್ಲಿ ಮತಾಂಧತೆಯ ಕರಿನೆರಳು ಬೆಸೆದುಕೊಂಡಿತ್ತು. ಯಾರು ಹಿಂದೂ ಯುವಕರನ್ನು ಹತ್ಯೆ ಮಾಡುತ್ತಾರೋ ಅವರಿಗೆ ಸೂಕ್ತ ಪುರಸ್ಕಾರದ ಆಮಿಷವೂ ಸಿಕ್ಕಿರಬಹುದು. ಇಲ್ಲದಿದ್ದರೆ ಒಂದು ಕೊಲೆಯನ್ನು ಮೂರು ಮೂರು ಸಲ ಪ್ಲಾನ್ ಮಾಡಿ ಆ ಬಳಿಕ ಅದನ್ನು ಅನುಷ್ಟಾನಕ್ಕೆ ತಂದು ಅದರಲ್ಲಿ ಯಶಸ್ವಿಯಾಗಿ ನಂತರ ತಪ್ಪಿಸಿಕೊಂಡು ಹೋಗಿ ಅಲ್ಲಿಂದ ವಿದೇಶಕ್ಕೂ ಹೋಗುವುದು ಇದೆಯಲ್ಲ, ಇದೆಲ್ಲ ಸಣ್ಣ ವಿಷಯವಲ್ಲ. ಈಗ ಎನ್ ಐಎ ತನಿಖೆ ಮಾಡಲು ಮುಂದಾದ ನಂತರ ಇಲ್ಲಿ ತಕ್ಷಣ ಕೆಲವು ಆರೋಪಿಗಳು ಪತ್ತೆಯಾಗಿ ಅವರ ಬಂಧನವೂ ಆಗಿದೆ. ಆದರೆ ಮುಖ್ಯ ಆರೋಪಿಗಳ ಬಂಧನ ಆಗದೇ ಇದ್ದರೆ ಇಂತಹ ಘಟನೆಗಳು ಇನ್ನಷ್ಟು ನಡೆಯುತ್ತದೆ. ಯಾಕೆಂದರೆ ಹತ್ಯೆಯನ್ನು ಜಾರಿಗೆ ತರುವ ಹಂತಕರು ಮೂಲಭೂತವಾದಿಗಳಿಗೆ ಎಷ್ಟು ಬೇಕಾದರೂ ಸಿಗುವ ಸಾಧ್ಯತೆ ಇದೆ. ಆದರೆ ಇವರಷ್ಟೇ ಮತ್ತು ಇವರಿಗಿಂತ ಹೆಚ್ಚು ಡೇಂಜರಸ್ ಎಂದರೆ ಈ ಒಟ್ಟು ಹತ್ಯೆಯ ಸಂಚನ್ನು ರೂಪಿಸಿ ಅದನ್ನು ಜಾರಿಗೆ ತರುವ ವ್ಯಕ್ತಿಗಳು ಬಲೆಗೆ ಬೀಳಲೇಬೇಕಾಗಿತ್ತು.

ಎನ್ ಐಎ ಒಂದು ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಬಹುಮಾನವನ್ನು ಘೋಷಿಸುತ್ತದೆ ಎಂದರೆ ಆರೋಪಿಗಳು ಇವರ ಕೈಯಿಂದ ಬಹಳ ದೂರ ಹೋಗಿರುವ ಸಾಧ್ಯತೆ ಇದೆ ಎಂದೇ ಅರ್ಥ. ಹಾಗಿದ್ದರೆ ಮಾತ್ರ ಬಹುಮಾನಗಳ ಘೋಷಣೆ ಆಗುತ್ತದೆ. ಇಲ್ಲಿಯೂ ಹಾಗೆ ಆಗಿತ್ತು. ಮುಖ್ಯ ಅರೋಪಿಗಳು ತಮಗೆ ಅತ್ಯಂತ ಸೇಫ್ ಆಗಿರುವ ಸೌದಿ ಅರೇಬಿಯಾಕ್ಕೆ ಹೋಗಿ ಅಲ್ಲಿ ಎಂಜಾಯ್ ಮಾಡುತ್ತಿರುವುದು ಈಗ ಪತ್ತೆಯಾಗಿದೆ. ಅವರನ್ನು ಬಂಧಿಸಿ ಕರೆತರಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಈಗ ಎನ್ ಐಎ ಮಾಡುತ್ತಾ ಇದೆ. ಅವರು ಇವತ್ತಲ್ಲ, ನಾಳೆ ಭಾರತದ ಜೈಲಿನೊಳಗೆ ಕುಳಿತುಕೊಳ್ಳುವುದು ಪಕ್ಕಾ. ಆದರೆ ವಿಷಯ ಇರುವುದು ಒಂದು ಹೈಪ್ರೋಫೈಲ್ ಹತ್ಯಾ ಪ್ರಕರಣದ ಬಳಿಕ ಅವರು ವಿದೇಶಕ್ಕೆ ಹೋಗಲು ಹೇಗೆ ಸಾಧ್ಯವಾಯಿತು? ಈ ಬಗ್ಗೆ ತನಿಖೆ ಆಗಬೇಕಿದೆ. ಇಂತಹ ಸಂದರ್ಭದಲ್ಲಿ ಅನುಮಾನ ಬರುವುದೇ ಕೇರಳ ಪೊಲೀಸರ ಮೇಲೆ. ಯಾವಾಗ ಕೇರಳ ಪೊಲೀಸ್ ಉಗ್ರಾಣದಿಂದ ಬಂದೂಕುಗಳು ಮತ್ತು ಬುಲೆಟ್ ಗಳು ಅಪಾರ ಪ್ರಮಾಣದಲ್ಲಿ ಮಾಯವಾಗುತ್ತಾ ಬಂದವೋ ಅದರ ಬಳಿಕ ಸಹಜವಾಗಿ ಕೇರಳ ಪೊಲೀಸರ ವರ್ತನೆ ಬಗ್ಗೆ ಒಂದು ರೀತಿಯ ಸಂಶಯ ಮತ್ತು ಅಸಹ್ಯ ಎರಡೂ ಕೂಡ ಉಂಟಾಗುತ್ತಿವೆ. ಇಲ್ಲಿ ಕೂಡ ಹತ್ಯೆಯಾದ ಬಳಿಕ ಇಲ್ಲಿಂದ ಆರೋಪಿಗಳನ್ನು ವಿಮಾನದ ಮೂಲಕ ಬೇರೆ ದೇಶಕ್ಕೆ ಸಾಗಿಸುವಲ್ಲಿ ಪೊಲೀಸರ ಸಹಕಾರವಿಲ್ಲದೇ ನಡೆಯುವುದು ಅಷ್ಟು ಸುಲಭದ ಮಾತಲ್ಲ. ಒಂದೋ ಕೊಲೆಯಾದ ಮರುಕ್ಷಣವೇ ಪ್ರಧಾನ ಆರೋಪಿಗಳು ತಲೆ ಮರೆಸಿಕೊಂಡು ನಂತರ ಸೂಕ್ತ ಸಮಯ ನೋಡಿ ವಿಮಾನ ನಿಲ್ದಾಣದ ಮೂಲಕ ತಮಗೆ ಬೇಕಾದ ದೇಶಕ್ಕೆ ಹೋಗಿರುವ ಸಾಧ್ಯತೆ ಇದೆ. ಇಲ್ಲವಾದರೆ ಸೌದಿ ಅರೇಬಿಯಾದಲ್ಲಿ ಮೊದಲೇ ಆಶ್ರಯ ಪಡೆದುಕೊಂಡು ಅಲ್ಲಿಂದಲೇ ತಮ್ಮ ಪ್ಲಾನ್ ಜಾರಿಗೆ ತರುವ ಸಾಧ್ಯತೆ ಇದೆ. ಒಂದು ವೇಳೆ ನಂತರ ಹೋಗಿದ್ದರೆ ಯಾವಾಗ ಹೋದರು ಎನ್ನುವುದರಿಂದ ಹಿಡಿದು ಅವರಿಗೆ ಹೋಗಲು ಸಿಕ್ಕಿರುವ ಅವಕಾಶಗಳು ಮತ್ತು ಆ ಅವಕಾಶವನ್ನು ದೊರಕಿಸಿಕೊಟ್ಟ ಮಹಾನುಭಾವರ ಮುಖಚಹರೆ ಕೂಡ ಬೆಳಕಿಗೆ ಬರಬೇಕಿದೆ.
ಇದರೊಂದಿಗೆ ಸೌದಿ ಅರೇಬಿಯಾದೊಂದಿಗೆ ಭಾರತದ ಸಂಬಂಧವೂ ಚೆನ್ನಾಗಿದೆ. ಇಂತಿಂತಹ ವ್ಯಕ್ತಿಗಳು ನಿಮ್ಮ ದೇಶದಲ್ಲಿ ಇದ್ದಾರೆ. ಅವರನ್ನು ನಮಗೆ ಒಪ್ಪಿಸಬೇಕು ಎಂದು ನಮ್ಮ ಸರಕಾರ ಹೇಳಿದರೆ ಆಗಲ್ಲ ಎಂದು ಹೇಳುವಷ್ಟು ಧಾರ್ಟ್ಯತನ ಸೌದಿಗೆ ಸದ್ಯಕ್ಕೆ ಇಲ್ಲ. ಆದರೆ ಮತ, ಧರ್ಮದ ಆಧಾರದ ಮೇಲೆ ಆರೋಪಿಗಳನ್ನು ತಮ್ಮ ದೇಶದಿಂದ ಬೇರೆ ದೇಶಕ್ಕೆ ಕಳುಹಿಸಲು ಪರೋಕ್ಷ ನೆರವನ್ನು ನೀಡುವ ಅವಕಾಶವನ್ನು ಆ ಸರಕಾರ ಬಳಸಿಕೊಳ್ಳಬಹುದು. ನಮ್ಮ ನಿರೀಕ್ಷೆ ಏನೆಂದರೆ ಸೌದಿ ಅರೇಬಿಯಾ ಎನ್ನುವ ಮತಾಂಧರ ಕೊನೆಯ ಅಡ್ಡವಾಗಿರುವ ದೇಶಕ್ಕೆ ಈಗ ಮಾನವೀಯತೆ ಮತ್ತು ಕಾನೂನಿನ ಜೊತೆ ನಿಲ್ಲುವುದಾ ಅಥವಾ ಧರ್ಮ ಮತ್ತು ಮತಾಂಧತೆಯನ್ನು ಆಯ್ದುಕೊಳ್ಳುವುದಾ ಎನ್ನುವ ಪ್ರಶ್ನೆ ಬಂದಾಗ ಅದು ಏನನ್ನು ನೋಡುತ್ತದೆ ಎನ್ನುವುದೇ ಮುಖ್ಯ. ಆರೋಪಿಗಳನ್ನು ಹೆಡೆಮುರಿ ಕಟ್ಟಿ ಕಳುಹಿಸಿಕೊಡುವ ಮೂಲಕ ಭಾರತದ ಹಿಂದೂ ಸಹೋದರರ ಮೇಲೆ ಯಾರೂ ಕೆಟ್ಟ ಕೃತ್ಯ ಮಾಡಬಾರದು ಮತ್ತು ಮಾಡಿ ನಮ್ಮಲ್ಲಿ ಅಡಗಿಕುಳಿತರೆ ನಾವು ಸಹಿಸುವುದಿಲ್ಲ ಎಂದು ಸೌದಿ ಹೇಳಿ ಹಾಗೆ ಮಾಡಿ ತೋರಿಸುತ್ತದೆಯೋ ಅಥವಾ ಆರೋಪಿಗಳ ರಕ್ಷಣೆ ಮಾಡಿ ಕಾಫೀರರನ್ನು ಬಿಡಬೇಡಿ ಎನ್ನುತ್ತದೋ ಕಾದು ನೋಡಬೇಕು!

  • Share On Facebook
  • Tweet It


- Advertisement -


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Hanumantha Kamath March 27, 2023
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search