ಈ ನೆಲದ ಆಚರಣೆಗೆ ದಕ್ಕೆ ಬರದಂತೆ ಕ್ರಮ ಕೈಗೊಂಡ ನಳಿನ್ ಕುಮಾರ್ ಕಟೀಲ್
ಫೆಬ್ರವರಿ 11 ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಘನ ಉಪಸ್ಥಿತಿಯಲ್ಲಿ ಮಂಗಳೂರಿನ ಪದವಿನಂಗಡಿಯ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿತ್ತು. ಅಮಿತ್ ಶಾ ಆಗಮಿಸುವ ರಸ್ತೆಯ ಉದ್ದಕ್ಕೂ ಅವರ ಸುರಕ್ಷತೆಗೆ ಪೊಲೀಸ್ ಇಲಾಖೆಯಿಂದ ರಕ್ಷಣಾ ಸಿದ್ಧತೆ ಈಗಾಗಲೇ ಆರಂಭವಾಗಿತ್ತು.
ಆದರೆ ಪದವಿನಂಗಡಿಯಲ್ಲಿ ಅಂದೇ ಕಾರ್ಣಿಕದ ಕೊರಗಜ್ಜನ ಕೋಲ ಇದ್ದ ಕಾರಣ ರಸ್ತೆ ಉದ್ದಕ್ಕೂ ಕೋಲದ ಪ್ರಯುಕ್ತ ವಿಶೇಷ ಲೈಟಿಂಗ್ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದರು. ಆದರೆ ಪೊಲೀಸರು ಅದನ್ನು ತೆಗೆದು ಹಾಕಲು ಮುಂದಾಗುತ್ತಿದ್ದಂತೆ ವಿಷಯ ಸಂಸದ, ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಬಂದಿದೆ.
ಅವರು ತಕ್ಷಣ ಸ್ಥಳೀಯ ಶಾಸಕರನ್ನು, ಪೊಲೀಸ್ ಕಮೀಷನರ್ ಅವರನ್ನು ಕರೆಸಿ ಕೋಲಕ್ಕೆ ಹಾಕಲಾಗಿರುವ ಯಾವುದೇ ಲೈಟಿಂಗ್ಸ್ ಅಥವಾ ಬೇರೆ ವ್ಯವಸ್ಥೆಗೆ ಪೊಲೀಸ್ ಇಲಾಖೆ ತೊಂದರೆ ಕೊಡಬಾರದು. ಪಕ್ಷದ ಕಾರ್ಯಕ್ರಮವನ್ನು ಅಲ್ಲಿಂದ ಬೇರೆಡೆ ಶಿಫ್ಟ್ ಮಾಡುತ್ತೇವೆ ಎಂದು ಸೂಚಿಸಿದ್ದಾರೆ.
ಈ ನೆಲದ ಸಂಸ್ಕೃತಿ, ಆಚಾರ, ಪರಂಪರೆಗೆ ತೊಂದರೆ ಮಾಡಿ ಪಕ್ಷದ ಕಾರ್ಯಕ್ರಮ ನಡೆಸುವುದಿಲ್ಲ ಎಂದು ಹೇಳುವ ಮೂಲಕ ನಳಿನ್ ತುಳುನಾಡಿನ ಜನರ ಹೃದಯ ಗೆದ್ದಿದ್ದಾರೆ. ಕೊರಗಜ್ಜನ ಕೃಪೆ ನಳಿನ್ ಅವರ ಮೇಲೆ ಯಾವತ್ತೂ ಇರಲಿ ಎಂದು ಅಜ್ಜನ ಭಕ್ತರು ಹರಸಿದ ಘಟನೆಯೂ ನಡೆದಿದೆ.
Leave A Reply