ಪ್ರತಿ ಯುದ್ಧ ವಿಮಾನದ ಮೇಲೆ ಹನುಮಂತನ ಚಿತ್ರ ಇರಲಿ!!
ಭಾರತದ ಯುದ್ಧ ವಿಮಾನದ ಒಂದು ಪಾಶ್ವದಲ್ಲಿ ಹನುಮಂತ ದೇವರ ಚಿತ್ರ ಇದ್ದರೆ ಅದರಲ್ಲಿ ತಪ್ಪೇನಿದೆ? ಅದಕ್ಕೆ ಪಾಕಿಸ್ತಾನದ ಮುಲ್ಲಾಗಳಿಗೆ ಹುಟ್ಟಿದಂತೆ ಆಡುವವರು ಯಾಕೆ ವಿವಾದ ಮಾಡಬೇಕು? ಇದು ಹಿಂದೂಸ್ತಾನ. ಇಲ್ಲಿ ವಾಯುಸೇನೆ ತನ್ನ ಶಕ್ತಿ ಸಾಮರ್ತ್ಯವನ್ನು ವಿಶ್ವಕ್ಕೆ ಪರಿಚಯಿಸಲು ಪ್ರತಿ ವರ್ಷ ಏರ್ ಶೋ ನಡೆಸುತ್ತದೆ. ಅದರಲ್ಲಿ ವಾಯುಪಡೆಯ ಹಲವಾರು ವಿಮಾನಗಳು ಆಗಸದಲ್ಲಿ ಹಾರಾಡುತ್ತಾ ಭಾರತೀಯರಲ್ಲಿ ಹೆಮ್ಮೆಯ, ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತವೆ. ವರ್ಷದಲ್ಲಿ ಒಂದು ಸಲ ಈ ಏರ್ ಶೋ ದೇಶದ ಯಾವುದಾದರೂ ಪ್ರಮುಖ ನಗರದಲ್ಲಿ ನಡೆಯುತ್ತದೆ. ಈ ಬಾರಿ ಬೆಂಗಳೂರಿನಲ್ಲಿ ನಡೆದಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಿ ಏರ್ ಶೋ ಕಣ್ತುಂಬಿಕೊಂಡರು. ಅದರಲ್ಲಿ ಒಂದು ವಿಮಾನವೇ ಸೋ ಕಾಲ್ಡ್ ಜಾತ್ಯಾತೀತರ ಕೆಂಗೆಣ್ಣಿಗೆ ಗುರಿಯಾಗಿರುವುದು. ಅದು ಎಚ್ ಎಲ್ ಎಫ್ಟಿ 42 ಮೊದಲ ಸ್ವದೇಶಿ ನಿರ್ಮಿತ ಹಾಲ್ ನಿರ್ಮಾಣ ಮಾಡಿದ ಮಾರುತ್ ವಿಮಾನದ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿರುವ ವಿಮಾನವಾಗಿದೆ. ಇದು ಮುಂದಿನ ಪೀಳಿಗೆಯ ವಿಮಾನ ಎಂದೇ ಗುರುತಿಸಲ್ಪಟ್ಟಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿರುವ ಈ ವಿಮಾನ ಭಾರತ ಪ್ರಚಂಡ ಶಕ್ತಿಯ ದ್ಯೋತಕವಾಗಿದೆ. ಈ ವಿಮಾನದಲ್ಲಿ ಪವನಸುತ ಹನುಮಾನ್ ಚಿತ್ರ ಇದ್ದರೆ ಜಾತ್ಯಾತೀತರಿಗೆ ಎಲ್ಲಿಯೋ ಉರಿ ಬಂದದ್ದು ಯಾಕೆ ಎನ್ನುವುದೇ ಈಗ ಬಂದಿರುವ ಪ್ರಶ್ನೆ.
ಯಾವಾಗ ಹನುಮಂತ ದೇವರ ಫೋಟೋ ವಿಮಾನದ ಒಂದು ಮೂಲೆಯಲ್ಲಿ ಇದೆ ಎಂದು ಎಡಬಿಡಂಗಿಗಳಿಗೆ ಗೊತ್ತಾಯಿತೋ ಅವರು ಖ್ಯಾತೆ ತೆಗೆದರು. ಅದೇಗೆ ವಾಯುಪಡೆಯ ವಿಮಾನದಲ್ಲಿ ಹನುಮಂತ ಬಂದ ಎಂದು ರಗಳೆ ಎತ್ತಿದರು. ಇದು ಮೋದಿಯವರದ್ದೇ ಕಾರುಬಾರು. ಅವರೇ ಹಾಕಿಸಿದ್ದು. ಅವರು ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕೆಂದು ಹೊರಟಿದ್ದಾರೆ. ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ವಾಕ್ ದಾಳಿಯನ್ನು ಆರಂಭಿಸಿದರು. ವಿಮಾನಕ್ಕೆ ಆಂಜನೇಯನ ಚಿತ್ರ ಇರುವ ವಿಷಯ ಮೋದಿಯವರಿಗೆ ಗೊತ್ತಿತ್ತೋ, ಇಲ್ವೋ ಆದರೆ ಹೀಗೆ ವಿವಾದ ಶುರುವಾದ ಕೂಡಲೇ ಹಾಲ್ ಮತ್ತು ಏರ್ ಫೋರ್ಸ್ ಸಮಾಲೋಚನೆ ನಡೆಸಿ ವಿಮಾನದಿಂದ ಆ ಚಿತ್ರವನ್ನು ತೆಗೆದುಬಿಟ್ಟರು. ಸುಮ್ಮನೆ ಕೇಂದ್ರ ಸರಕಾರಕ್ಕೆ ಮುಜುಗರ ತರುವುದು ಯಾಕೆ ಎನ್ನುವ ಅಭಿಮತವೂ ಇದ್ದಿರಬಹುದು. ಯಾವಾಗ ಆ ಚಿತ್ರ ತೆಗೆಯಲಾಯಿತೋ, ಬುದ್ಧಿಜೀವಿಗಳ ಕೈ ಮೇಲಾಯಿತು. ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಅಹಂಪಟ್ಟುಕೊಂಡವು. ಯಾವಾಗ ಈ ವಿಷಯ ಕೇಸರಿಪಡೆಗಳಿಗೆ ಗೊತ್ತಾಯಿತೋ ಅವರು ಇದನ್ನು ತಮ್ಮ ಪ್ರತಿಷ್ಟೆಯ ವಿಷಯವನ್ನಾಗಿ ತೆಗೆದುಕೊಂಡವು. ಇದು ಕೇಂದ್ರ ಸರಕಾರದ ಹಿರಿತಲೆಗೆ ಸುದ್ದಿ ತಲುಪಲು ತಡವಾಗಲಿಲ್ಲ. ಅವರು ಇಂತಹ ವಿಷಯವೊಂದು ಆಗಿರುವುದರ ಕುರಿತು ತಕ್ಷಣ ಸೇನೆಯ ಪ್ರಮುಖರೊಂದಿಗೆ ಮಾತನಾಡಿದರು. ನೀವು ಯಾರೋ ಹೇಳುತ್ತಾರೆ ಎಂದು ಹೆದರುವ ಅಗತ್ಯ ಏನಿಲ್ಲ. ನಾವು ನಿಮ್ಮ ಬೆನ್ನಿಗೆ ಇದ್ದೇವೆ. ಹನುಮಂತನ ಚಿತ್ರ ಮತ್ತೆ ವಿಮಾನದಲ್ಲಿ ಹಾಕಿ ಎಂದು ಹೇಳಲಾಯಿತು. ಅದರ ನಂತರ ಆ ಯುದ್ಧ ವಿಮಾನ ಮತ್ತೆ ಹಾಲ್ ಫ್ಯಾಕ್ಟರಿಗೆ ಬಂತು. ಅಲ್ಲಿ ಮತ್ತೆ ಹನುಮಂತನ ಚಿತ್ರ ಮೂಡಿಸಲಾಯಿತು. ವಿಮಾನ ಮತ್ತೆ ರೆಕ್ಕೆ ಬಿಚ್ಚಿ ಆಗಸದಲ್ಲಿ ಹಾರಿತು.
ಈಗ ಜನಸಾಮಾನ್ಯರಲ್ಲಿ ಬಂದಿರುವ ಪ್ರಶ್ನೆ ಏನೆಂದರೆ ಹನುಮಂತನ ಚಿತ್ರ ಹಾಕುವ ಬದಲು ನೆಹರೂ, ಇಂದಿರಾ ಫೋಟೋ ಹಾಕಬೇಕಿತ್ತಾ? ಈ ನಾಯಕರ ಫೋಟೋ ಹಾಕಿದ್ರೆ ಜಾತ್ಯಾತೀತರು ಖುಷಿ ಪಡುತ್ತಿದ್ದರಾ? ಈಗಾಗಲೇ ದೇಶದ ಎಷ್ಟೋ ಸಂಸ್ಥೆಗಳಿಗೆ, ರಸ್ತೆಗಳಿಗೆ, ಯೋಜನೆಗಳಿಗೆ ನೆಹರು, ಇಂದಿರಾ, ರಾಜೀವ್ ಹೆಸರು ಇಡಲಾಗಿದೆ. ಅದರಿಂದ ಕಾಂಗ್ರೆಸ್ಸಿಗರು ಖುಷಿಪಟ್ಟಿದ್ದಾರೆ. ಅದರಿಂದಲೇ ಕಾಂಗ್ರೆಸ್ ಅಧಿಕಾರದಲ್ಲಿ ಅನೇಕ ವರ್ಷ ಮುಂದುವರೆಯಲು ಸಾಧ್ಯವೂ ಆಗಿತ್ತು. ಆದರೆ ಕಾಲ ಬದಲಾಗಿದೆ. ಹಾಗಂತ ಮೋದಿ, ಅಮಿತ್ ಶಾ ಚಿತ್ರವನ್ನು ಹಾಕಬೇಕೆಂದು ನಾನು ಹೇಳುತ್ತಿಲ್ಲ. ಅದರ ಬದಲಿಗೆ ಸನಾತನಿಗಳು ಆರಾಧಿಸಿಕೊಂಡು ಬಂದಿರುವ, ಗಾಳಿಯ ಅಧಿದೇವತೆ, ವಾಯುಸೇನೆಗೆ ಬಲ ತುಂಬುವಂತಹ ಹನುಮಂತ ದೇವರ ಫೋಟೋ ಹಾಕುವುದರಿಂದ ನಾವೆಲ್ಲರೂ ಧನ್ಯತಾ ಬಾವ ಅನುಭವಿಸಬೇಕು. ನಾವೆಲ್ಲರೂ ಅದನ್ನು ಬೆಂಬಲಿಸಬೇಕು. ಯಾಕೆಂದರೆ ಇದು ನಮ್ಮ ದೇಶದ ಅಸ್ಮಿತೆ. ಇಂಡೋನೇಶಿಯಾದಲ್ಲಿ, ಶ್ರೀಲಂಕಾದಲ್ಲಿ ಹನುಮಂತ ಕಾಲಿಟ್ಟ ಕುರುಹುಗಳು ಪತ್ತೆಯಾಗಿದೆ. ಆ ಬಗ್ಗೆ ವೈಜ್ಞಾನಿಕ ಸಂಶೋದನೆಯಾಗಿದೆ. ಅಲ್ಲಿನ ಜನ ಅದನ್ನು ಒಪ್ಪಿದ್ದಾರೆ. ಹಾಗಿರುವಾಗ ನಾವೇ ಹನುಮಂತನ ಫೋಟೋ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಹೇಗೆ? ಮುಂದಿನ ಏರ್ ಶೋದಲ್ಲಿ ಪ್ರತಿ ವಿಮಾನಕ್ಕೂ ಶ್ರೀರಾಮನ ಭಕ್ತ ಹನುಮಂತನ ಚಿತ್ರ ಇರಲಿ ಎಂದು ಆಶಯ!
Leave A Reply