• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!

Hanumantha Kamath Posted On March 16, 2023


  • Share On Facebook
  • Tweet It

ವಿರೂಪಾಕ್ಷಪ್ಪ ಎಂಬ ಶಾಸಕರ ಮಗ ಲೋಕಾಯುಕ್ತ ಪೊಲೀಸರಿಂದ ಬಂಧಿತನಾಗಿದ್ದಾನೆ. ಆತನ ಬಳಿ ಎಂಟು ಕೋಟಿ ರೂಪಾಯಿಯಷ್ಟು ಹಣ ಸಿಕ್ಕಿದೆ ಎನ್ನುವ ಮಾಹಿತಿ ಹೊರಬಂದ ತಕ್ಷಣ ರಾಜ್ಯದ ಬೇರೆ ಭಾಗಗಳ ಹೆಚ್ಚಿನ ಜನಸಾಮಾನ್ಯರ ಮನಸ್ಸಿನಲ್ಲಿ ಇದ್ದ ವಿಷಯ ಏನೆಂದರೆ ಆ ಶಾಸಕ ಕಾಂಗ್ರೆಸ್ಸಿನವರೋ ಅಥವಾ ಜಾತ್ಯಾತೀತ ಜನತಾದಳದವರೋ ಎನ್ನುವುದು. ಯಾಕೆಂದರೆ ರಾಜ್ಯ ಮತ್ತು ಕೇಂದ್ರದಲ್ಲಿ ಇರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ. ಆದ್ದರಿಂದ ಅದೇ ಪಕ್ಷದ ಶಾಸಕರೊಬ್ಬರ ಮಗ ಭ್ರಷ್ಟಾಚಾರದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತನಾಗುವುದು ಸಾಧ್ಯ ಇಲ್ಲ ಎನ್ನುವ ಭಾವನೆ ಇತ್ತು. ಆದರೆ ವಿರೂಪಾಕ್ಷಪ್ಪ ಬಿಜೆಪಿ ಶಾಸಕ ಎಂದು ಗೊತ್ತಾಗುತ್ತಿದ್ದಂತೆ ಜನಸಾಮಾನ್ಯರಿಗೆ ಅನಿಸಿದ್ದು ಅದು ಹೇಗೆ ಸಾಧ್ಯ?
ಒಂದು ವೇಳೆ ಬಿಜೆಪಿ ಶಾಸಕರ ಸ್ಥಾನದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಇದ್ದಿದ್ದರೆ ಅದನ್ನು ದ್ವೇಷದ ರಾಜಕೀಯ ಎಂದು ಆ ಪಕ್ಷಗಳ ಮುಖಂಡರು ಹೇಳಿಕೆ ನೀಡುತ್ತಿದ್ದರು. ಡಿಕೆಶಿವಕುಮಾರ್ ಅವರಿಗೆ ಇಡಿ ಮತ್ತು ಐಟಿಯಿಂದ ನೋಟಿಸು ಬಂದಾಗಲೆಲ್ಲ ಅದನ್ನು ದ್ವೇಷದ ರಾಜಕೀಯ ಎಂದೇ ಹೇಳಲಾಗುತ್ತಿದೆ.

ಇದನ್ನು ಹಾಗೆ ಹಣೆಪಟ್ಟಿ ಕಟ್ಟಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಶಾಸಕರ ಮಗನ ಮೇಲೆ ದಾಳಿ ನಡೆದಿರುವುದರಿಂದ ” ನಾವು ಇವರು 40% ಸರಕಾರ ಎಂದು ಹೇಳಿಲ್ವಾ? ಅದು ಸಾಬೀತಾಗಿದೆ” ಎಂದು ವಿಪಕ್ಷ ಮುಖಂಡರು ಹೇಳುತ್ತಿದ್ದಾರೆ. ಈಗ ಸಾಕ್ಷಿ ಸಿಕ್ಕಿತ್ತಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಇಲ್ಲಿ ಒಂದು ವಿಷಯ ಸ್ಪಷ್ಟವಾಗಿ ನಾವು ಯೋಚಿಸಬೇಕು. ಅದೇನೆಂದರೆ ಒಬ್ಬ ಆಡಳಿತ ಪಕ್ಷದ ಶಾಸಕನ ಮಗನ ಮೇಲೆ ಲೋಕಾಯುಕ್ತದವರು ದಾಳಿ ಮಾಡುತ್ತಾರೆ ಎಂದರೆ ಅದು ಚಿಕ್ಕ ವಿಷಯ ಅಲ್ಲ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ತಮ್ಮ ಹಗರಣವನ್ನು ಲೋಕಾಯುಕ್ತ ಕೆದಕುತ್ತಿದೆ ಎಂದು ಆತಂಕದಿಂದ ಲೋಕಾಯುಕ್ತವನ್ನೇ ಬರ್ಖಾಸ್ತು ಮಾಡಿದ್ದರು. ಅದರ ನಂತರ ಹಲ್ಲಿಲ್ಲದ ಹಾವಾಗಿದ್ದ ಭ್ರಷ್ಟಾಚಾರ ವಿರೋಧಿ ಬ್ಯೂರೋ ರಚಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತವನ್ನು ಬಲಪಡಿಸಲಾಗಿತ್ತು. ಅದರೊಂದಿಗೆ ಭ್ರಷ್ಟಾಚಾರ ಯಾರೇ ಮಾಡಿರಲಿ ಯಾವುದೇ ದಾಕ್ಷಿಣ್ಯ ಇಲ್ಲದೇ ಕ್ರಮ ಕೈಗೊಳ್ಳಿ ಎಂದು ಸಿಎಂ ಕಡೆಯಿಂದ ಸೂಚನೆ ಬಂದಿರಬಹುದು. ಇಲ್ಲದಿದ್ದರೆ ಯಾವುದೇ ಆಡಳಿತ ಪಕ್ಷಕ್ಕೆ ಮುಜುಗರ ಆಗುವಂತೆ ಯಾವುದೇ ಅಧಿಕಾರಿ ಸಾಮಾನ್ಯವಾಗಿ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ. ಇನ್ನು ತನಿಖಾ ಸಂಸ್ಥೆಗಳನ್ನು ಸರಕಾರಗಳು ತಮ್ಮ ಕೈಗೊಂಬೆಯಂತೆ ಮಾಡಿಕೊಂಡಿವೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಬರುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬಿಜೆಪಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್, ಜೆಡಿಎಸ್ ಆರೋಪಗಳನ್ನು ಹಾಕುತ್ತವೆ. ಆದ್ದರಿಂದ ಲೋಕಾಯುಕ್ತ ಕೂಡ ಇದಕ್ಕೆ ಹೊರತಾಗಿಲ್ಲ ಎನ್ನುವುದು ಎಲ್ಲರೂ ಅಂದುಕೊಂಡಿದ್ದರು. ಈಗ ಅಂತಹ ಲೋಕಾಯುಕ್ತವೇ ಮಾಡಾಳ್ ಪ್ರಶಾಂತ್ ಮೇಲೆ ದಾಳಿ ಮಾಡಿರುವುದು ರಾಜ್ಯ ಸರಕಾರ ಲೋಕಾಯುಕ್ತದ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವುದು ಸಾಬೀತಾಗಿದೆ.

ಇನ್ನು ಈ ರೇಡ್ ಮಾಡಿದ್ದು ನೇರವಾಗಿ ಮುಖ್ಯ ಲೋಕಾಯುಕ್ತರೋ ಅಥವಾ ಉಪಲೋಕಾಯುಕ್ತರೋ ಅಥವಾ ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿಯೋ ಅಲ್ಲ. ಒಂದು ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ದಾಳಿ ಆಗಿದೆ ಎಂದರೆ ಅಧಿಕಾರ ಕೆಳಹಂತದವರೆಗೂ ನೀಡಲಾಗಿದೆ ಎನ್ನುವುದು ಸ್ಪಷ್ಟ. ಇನ್ನು ರೇಡ್ ಗೆ ಒಳಪಟ್ಟ ಮಾಡಾಳ್ ಪ್ರಶಾಂತ್ ಕೇವಲ ಶಾಸಕರ ಮಗ ಮಾತ್ರವಲ್ಲ, ಸರಕಾರದ ಗೌರವಾನ್ವಿತ ಹುದ್ದೆಯಲ್ಲಿದ್ದ ಅಧಿಕಾರಿ. ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್ ಸದ್ಯ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ. ಇವರ ತಂದೆ ಶಾಸಕ ಮಾತ್ರವಲ್ಲ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್ (ಕೆಎಸ್ ಡಿಎಲ್) ಇದರ ಅಧ್ಯಕ್ಷರು. ಈ ಸಂಸ್ಥೆಗೆ ರಾಸಾಯನಿಕ ಪೂರೈಸುವ ಗುತ್ತಿಗೆದಾರರಿಂದ 40 ಲಕ್ಷ ರೂಪಾಯಿ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ದಾಳಿಯಾಗಿದೆ. ಲೋಕಾಯುಕ್ತರು ತನಿಖೆ ಮಾಡುತ್ತಾ ಇದ್ದ ಹಾಗೆ ಭ್ರಷ್ಟಾಚಾರದ ಆಳಕ್ಕೆ ಹೋಗಿ ಈಗ ಎಂಟು ಕೋಟಿ ರೂಪಾಯಿ ತನಕ ಸಿಕ್ಕಿದೆ.

ಇನ್ನು ಸಹಜವಾಗಿ ವಿಚಾರಣೆಯ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಕಳೆದ ಚುನಾವಣೆಯ ಸಮಯದಲ್ಲಿ ತಾವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಈಗ ರೇಡ್ ನಡೆದು ಆರೋಪಿ ಸೆರೆ ಸಿಕ್ಕಿದ್ದಾರೆ. ತನಿಖೆ ನಡೆದು ಆರೋಪ ಸಾಬೀತಾದರೆ ನಂತರ ಆ ಆರೋಪಿ ಅಧಿಕಾರಿಯ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರ ತೀರ್ಮಾನಿಸುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಆರೋಪಿಗೆ ಸೂಕ್ತ ಶಿಕ್ಷೆ ಆಗುವುದಿಲ್ಲ. ಅದರ ಬದಲಿಗೆ ಯಾವಾಗ ಆರೋಪಿ ತಪ್ಪಿತಸ್ಥನೆಂದು ಸಾಬೀತಾಗುತ್ತದೋ ಆಗ ಅವನನ್ನು ಕೆಲಸದಿಂದ ಕಿತ್ತೆಸೆಯುವ ಅಧಿಕಾರ ಲೋಕಾಯುಕ್ತಕ್ಕೆ ನೀಡಿ ಆತನ ಆಸ್ತಿಯನ್ನು ಸ್ವಾಧೀನಪಡಿಸುವ ಅವಕಾಶವನ್ನು ಕೂಡ ನೀಡಬೇಕು. ಇದನ್ನು ಪರಮಾಧಿಕಾರ ಎನ್ನಬಹುದು. ಬಿಜೆಪಿ ಸರಕಾರ ಮಾಡುತ್ತಾ??

  • Share On Facebook
  • Tweet It


- Advertisement -


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Hanumantha Kamath March 27, 2023
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search