• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕಾಂಗ್ರೆಸ್ ಬಾಯಿಗೆ ಬಂದ ತುತ್ತನ್ನು ಮೈಮೇಲೆ ಚೆಲ್ಲಿಕೊಂಡಿದೆ!!

Hanumantha Kamath Posted On May 4, 2023
0


0
Shares
  • Share On Facebook
  • Tweet It

ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ತಯಾರಿಸುವವರು ಅಕ್ಷರಶ: ಕರ್ನಾಟಕದ ಕಾಂಗ್ರೆಸ್ಸನ್ನು ರಾಜ್ಯದ ಮುಂದೆ ಬೆತ್ತಲಾಗಿಸಿದ್ದಾರೆ. ನೇರವಾಗಿ ಚುನಾವಣೆಯನ್ನು ಎದುರಿಸಿ ಜಯಗಳಿಸಲಾಗದ ಜೈರಾಂ ರಮೇಶ್, ಚುನಾವಣೆಯಲ್ಲಿ ಹಣಬಲ, ತೋಳ್ಬಲ ಬಳಸಿ ತಮಿಳುನಾಡಿನಲ್ಲಿ ಗೆಲ್ಲುತ್ತಿದ್ದ ಚಿದಂಬರಂ, ಕರ್ನಾಟಕ ಕಾಂಗ್ರೆಸ್ಸಿಗೆ ಯಾವುದೋ ಒಂದು ಕಾಲದಲ್ಲಿ ಉಸ್ತುವಾರಿಯಾಗಿ ಈಗ ಕರ್ನಾಟಕ ಯಾವ ಕಡೆ ಇದೆ ಎಂದು ಮರೆತುಹೋಗಿರುವ ಮಿಸ್ತ್ರಿಯಂತವರು ನವದೆಹಲಿಯ ಜನಪಥ್ 10 ರ ಎಸಿ ಕೋಣೆಯಲ್ಲಿ ಕುಳಿತು ಚಿಪ್ಸಿಗೆ ಬಾಳೆಹಣ್ಣು ಸುಲಿದಂತೆ ಪ್ರಣಾಳಿಕೆಯನ್ನು ರೆಡಿ ಮಾಡಿ ಅದರ ಪ್ರಿಂಟ್ ತೆಗೆದು ಸುದ್ದಿಗೋಷ್ಟಿಯಲ್ಲಿ ತೆರೆದಿಟ್ಟು ಇದಕ್ಕೆ ಮತ ನೀಡಿ ಎಂದರೆ ಡಿಕೆಶಿ, ಸಿದ್ದು ತರದವರು ಆಕಾಶ ನೋಡುವುದು ಮಾತ್ರ ಬಾಕಿ. ಇದಕ್ಕೆ ತಾಜಾ ಉದಾಹರಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭಜರಂಗದಳ ನಿಷೇಧದ ಪ್ರಸ್ತಾಪ.

ಹೇಗಾದರೂ ಮಾಡಿ ಜಾತ್ಯಾತೀತ ಜನತಾದಳದ ಬುಟ್ಟಿಗೆ ಸೇರಲಿದ್ದ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಾನು ಹೆಣೆದ ಬಲೆಯಲ್ಲಿ ತಾನೇ ಒದ್ದಾಡಿ ಬಿಡುವುದು ಇದೆಯಲ್ಲ, ಅದು ಚುನಾವಣೆಗೆ ಬೆರಳೆಣಿಕೆಯ ದಿನಗಳು ಇರುವಾಗ ಆ ಪಕ್ಷಕ್ಕೂ ಒಳ್ಳೆಯದಲ್ಲ. ಹಾಗಾದರೆ ಈ ಪ್ರಣಾಳಿಕೆ ತಯಾರಿಸುವಾಗ ಭಜರಂಗದಳದ ನಿಷೇಧದ ಪ್ರಸ್ತಾಪ ಮಾಡಿದವರ ತಲೆಗೆ ಹುಳ ಹೊಕ್ಕಿತ್ತಾ? ಈ ವಿಷಯವನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಮೊದಲನೇಯದಾಗಿ ಕರ್ನಾಟಕದ ತಳಮಟ್ಟದ ವಾಸ್ತವದ ಪರಿಚಯ ಪ್ರಣಾಳಿಕಾ ಸಮಿತಿಯಲ್ಲಿ ಇದ್ದವರಿಗೆ ಇಲ್ಲ. ಅವರು ಕೇವಲ ಒಂದು ಆಯಾಮವನ್ನು ಮಾತ್ರ ನೋಡಿದ್ದಾರೆ. ಹಾಗಾದರೆ ಅವರು ಮಾಡಿದ್ದು ಮೂರ್ಖತನದ ಪರಮಾವಧಿಯಾ ಎಂದು ನೋಡಿದರೆ ನೂರಕ್ಕೆ ನೂರರಷ್ಟು ಅಲ್ಲ. ಯಾಕೆಂದರೆ ಇದರಿಂದ ಕಾಂಗ್ರೆಸ್ಸ್ ಮೇಲ್ನೋಟಕ್ಕೆ ಕಳೆದುಕೊಳ್ಳುವಂತದ್ದು ಏನಿಲ್ಲ. ಯಾಕೆಂದರೆ ಭಜರಂಗದಳದ ಪರವಾಗಿ ಒಂದು ವೇಳೆ ಕಾಂಗ್ರೆಸ್ ಮಾತನಾಡಿದರೂ ಭಜರಂಗದಳದ ಕಾರ್ಯಕರ್ತರ ವೋಟು ಕಾಂಗ್ರೆಸ್ಸಿಗೇನೂ ಬೀಳುವುದಿಲ್ಲ. ಹಾಗಂತ ವಿರೋಧವಾಗಿ ಮಾತನಾಡಿದ ಕೂಡಲೇ ಎಲ್ಲವೂ ಮುಗಿದು ಹೋಯಿತಾ, ಅದು ಕೂಡ ಇಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ಕ್ಷೇತ್ರದಲ್ಲಿ ಯಾವುದರಲ್ಲಿಯೂ ಇಲ್ಲದ ತಟಸ್ಥ ಮತದಾರರೇ ಆ ಕ್ಷೇತ್ರದ ಅಭ್ಯರ್ಥಿಯ ಹಣೆಬರಹವನ್ನು ಬರೆಯುವವರು. ಅವರು ಕೊನೆಯ ವಾರದಲ್ಲಿ ಉದ್ಭವಿಸುವ ಟ್ರೆಂಡ್ ನೋಡಿ ಮತ ಚಲಾಯಿಸುತ್ತಾರೆ. ಅದರಲ್ಲಿ ಮೋದಿ ಫ್ಯಾಕ್ಟರ್ ನಿಂದ ಹಿಡಿದು ಮನೆಯಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಎರಡು ಗಂಟೆ ಕರೆಂಟು ಹೆಚ್ಚು ತೆಗೆದದ್ದು ಕೂಡ ಒಳಗೊಂಡಿರುತ್ತದೆ. ಅಂತವರಿಗೆ ಭಜರಂಗದಳದ ನಿಷೇಧ ಒಂದು ಸಬ್ಜೆಕ್ಟ್ ಅಲ್ಲವೇ ಅಲ್ಲ. ಆದರೆ ಈ ವಿಷಯ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ಸೃಷ್ಟಿಸುವ ಹವಾ ಇದೆಯಲ್ಲ, ಅದು ಎಷ್ಟರಮಟ್ಟಿಗೆ ಅಂತಹ ನ್ಯೂಟ್ರಲ್ ಮತದಾರರ ಮನಸ್ಸನ್ನು ಪ್ರಭಾವಿತಗೊಳಿಸುತ್ತದೆ ಎನ್ನುವುದರ ಮೇಲೆ ಕಾಂಗ್ರೆಸ್ಸಿನ ಅಭ್ಯರ್ಥಿಯ ಭವಿಷ್ಯ ಆಯಾ ಕ್ಷೇತ್ರದಲ್ಲಿ ಪಣಕ್ಕೆ ಒಡ್ಡಲ್ಪಡುತ್ತದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧ ಮಾಡುವ ಪ್ರಸ್ತಾಪಕ್ಕೆ ತಕ್ಷಣ ಮುಂದಾಗುತ್ತದೆ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಯಾವುದೇ ಸಂಘಟನೆಯನ್ನು ನಿಷೇಧಿಸಲು ತುಂಬಾ ಮಜಬೂತ್ ಆಗಿರುವ ಸಾಕ್ಷಿಗಳು ಕೇಂದ್ರ ಸರಕಾರದ ಬಳಿ ಬೇಕು. ಪಿಎಫ್ ಐ ನಿಷೇಧ ಮಾಡುವ ಮೊದಲು ಕೇಂದ್ರ ಸರಕಾರ ಅದರ ವಿರುದ್ಧ ಅಷ್ಟೂ ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಂಡಿತ್ತು. ಆದರೆ ಭಜರಂಗದಳ ಸಂಘಟನೆ ದೇಶದ್ರೋಹಿ ಸಂಘಟನೆ ಅಲ್ಲ. ಅದು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿಲ್ಲ. ಕೋಮುಗಲಭೆಯನ್ನು ಮಾಡಿಲ್ಲ. ದೇಶದ ಕಾನೂನನ್ನು ದಿಕ್ಕರಿಸಿ ಅಖಂಡತೆಗೆ ದಕ್ಕೆ ತರುವ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ತಮ್ಮದೇ ಕಾನೂನು ಸೃಷ್ಟಿಸಿ ಗಲಭೆ ಹಬ್ಬಿಸುವ ಯತ್ನ ಮಾಡಿಲ್ಲ. ಅಂತಹ ಏನೂ ವಿರೋಧಗಳನ್ನು ಮಾಡದಿದ್ದ ಮೇಲೆ ಅದನ್ನು ನಿಷೇಧಿಸಲು ಅದೇನು ಗ್ರಾಮದ ಓಣಿಯಲ್ಲಿರುವ ಕ್ಲಬ್ ಅಥವಾ ಯುವಕ ಮಂಡಲ ಅಲ್ಲವಲ್ಲ.

ಇನ್ನು ಪಿಎಫ್ ಐ ಹಾಗೂ ಭಜರಂಗದಳದ ವಿರುದ್ಧ ಕ್ರಮ ತೆಗೆದುಕೊಂಡು ನಿಷೇಧಿಸುವ ಪ್ರಸ್ತಾಪವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸುವಾಗ ಅದಕ್ಕೆ ಈಗಾಗಲೇ ಪಿಎಫ್ ಐ ನಿಷೇಧಕ್ಕೆ ಒಳಗಾಗಿರುವುದು ಗೊತ್ತಿರಬೇಕಿತ್ತು. ಕೇವಲ ಭಜರಂಗದಳ ಎಂದು ಬರೆದರೆ ತಪ್ಪು ಸಂದೇಶ ಹೋಗುತ್ತದೆ ಎನ್ನುವ ಕಾರಣಕ್ಕೆ ಪಿಎಫ್ ಐ ಹೆಸರನ್ನು ಸೇರಿಸಲಾಗಿದೆ. ಇನ್ನು ನೀವು ಬೇಕಾದರೆ ಆಂತರಿಕವಾಗಿ ಹಿಂದೂ ಕಾಂಗ್ರೆಸ್ ಮುಖಂಡರನ್ನೇ ಕೇಳಿನೋಡಿ. ಭಜರಂಗದಳ ನಿಷೇಧ ಆಗಬೇಕಾ ಎಂದರೆ ಬಹಿರಂಗವಾಗಿ ಏನು ಹೇಳುತ್ತಾರೋ, ಬಿಡ್ತಾರೋ ಒಳಗೊಳಗೆ ಮಾತ್ರ ಭಜರಂಗದಳ ಇದ್ದ ಕಾರಣ ಈ ಬ್ಯಾರಿಗಳ ರಂಪಾಟ ಹದ್ದುಬಸ್ತಿನಲ್ಲಿದೆ. ಇಲ್ಲದೆ ಹೋದರೆ ಇಷ್ಟೊತ್ತಿಗಾಗಲೇ ಈ ಬ್ಯಾರಿಗಳು ನಮ್ಮನ್ನು ಮಾರಿ ನೀರು ಕುಡಿಯುತ್ತಿದ್ದರು ಎಂದೇ ಹೇಳುತ್ತಾರೆ. ಎಲ್ಲೋ ಕೆಲವು ಕಡೆ ಅಕ್ರಮ ಗೋಸಾಗಾಟ ನಡೆಯುವಾಗ ಅದನ್ನು ತಡೆದು ನಿಲ್ಲಿಸುವ ಭರದಲ್ಲಿ ಸ್ವಲ್ಪ ಹೋಯ್ ಕೈ ಆಗಿರಬಹುದು. ಹಿಂದೂ ಹುಡುಗಿ ಮುಸ್ಲಿಂ ಹುಡುಗನೊಂದಿಗೆ ಎಲ್ಲೋ ಸಿಗಬಾರದ ಕಡೆ ಸಿಕ್ಕಿದ್ದಾಗ ಹುಡುಗನಿಗೆ ನಾಲ್ಕು ಏಟು ಬಿದ್ದಿರಬಹುದು. ಅಂಧ ಆಚರಣೆಗಳ ಹೆಸರಿನಲ್ಲಿ ಯುವಕ, ಯುವತಿಯರು ಮೋಜು ಮಸ್ತಿಯಲ್ಲಿ ತೊಡಗಿ ಹೆಚ್ಚು ಕಡಿಮೆ ಮಾಡಿಕೊಳ್ಳುವುದನ್ನು ತಡೆಯಲು ಕೆಲವೊಮ್ಮೆ ಅಣ್ಣನ ಸ್ಥಾನದಲ್ಲಿ ನಿಂತು ನಾಲ್ಕು ಬೈದಿರಬಹುದು. ಇದರಿಂದ ಸಮಾಜ ಸರಿದಾರಿಗೆ ತರುವ ಪ್ರಯತ್ನ ಇತ್ತೇ ವಿನ: ಇದೇನೂ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸುತ್ತಾ ಕಾಂಗ್ರೆಸ್ ಭಜರಂಗದಳ ನಿಷೇಧ ಮಾಡುತ್ತೇವೆ ಎನ್ನುತ್ತಿದೆ. ಒಂದಿಷ್ಟು ಸ್ವೇಚ್ಚಾಚಾರಿ ಯುವಕರ ಮತ ಸೆಳೆಯಲು, ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಹೋಗಿ ಆನೆ ಖೆಡ್ಡಾಗೆ ಬಿದ್ದಂತೆ ಒದ್ದಾಡುತ್ತಿರುವ ಕಾಂಗ್ರೆಸ್ಸಿಗೆ ಈಗ ಬಾಯಿಗೆ ಬಂದ ತುತ್ತು ಮೈಮೇಲೆ ಚೆಲ್ಲಿಕೊಂಡ ಅನುಭವ ಆಗುತ್ತಿದೆ!

0
Shares
  • Share On Facebook
  • Tweet It




Trending Now
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Hanumantha Kamath January 7, 2026
ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
Hanumantha Kamath January 6, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
  • Popular Posts

    • 1
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 2
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 3
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • 4
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...

  • Privacy Policy
  • Contact
© Tulunadu Infomedia.

Press enter/return to begin your search