• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!

Hanumanth Kamath Posted On May 27, 2023
0


0
Shares
  • Share On Facebook
  • Tweet It

ಇತಿಹಾಸವನ್ನು ಅರಿತವನು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲ ಎಂಬ ಮಾತಿದೆ. ಹಾಗೆ ವರ್ತಮಾನವನ್ನು ಅರಿತವನು ಮಾತ್ರ ವರ್ತಮಾನವನ್ನು ಚೆನ್ನಾಗಿ ಇಡಬಲ್ಲ ಎಂಬುದನ್ನು ಹೇಳಬೇಕಾಗಿದೆ. ಈಗ ತೆರೆಕಂಡು ಜನಮಾನಸವನ್ನು ಸೂರೆಗೊಂಡಿರುವ ಕೇರಳ ಸ್ಟೋರಿ ಸಿನೆಮಾ ವರ್ತಮಾನದ ಕನ್ನಡಿ ಎಂದು ಹೇಳಿದರೆ ಅತೀಶಯೋಕ್ತಿಯಾಗಲಾರದು. ಈ ಸಿನೆಮಾ ನೋಡಿದವರು ಖಂಡಿತವಾಗಿ ಒಮ್ಮೆ ತಮ್ಮ ಸುತ್ತಲಿನ ಪರಿಸರದಲ್ಲಿ ಭೂಗತವಾಗಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲೇಬೇಕಾದ ಜಾಗೃತಿಯನ್ನು ಈ ಸಿನೆಮಾ ಮೂಡಿಸುತ್ತದೆ. ಹಾಗೆ ಇಂದಿನ ಮಕ್ಕಳು ವಿಶೇಷವಾಗಿ ಯುವತಿಯರು ಜಾಗೃತರಾಗಬಾರದು ಎನ್ನುವ ಕಾರಣಕ್ಕೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಿನೆಮಾವನ್ನು ನಿಷೇಧಿಸಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಈ ಸಿನೆಮಾಕ್ಕೆ ತೆರಿಗೆ ರದ್ದು ಮಾಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಒಂದಂತೂ ನಿಜ. ಈ ಸಿನೆಮಾ ಇವತ್ತಿನ ಯುವತಿಯರ ಕಣ್ಣನ್ನು ತೆರೆಸಿದೆ.

ಉತ್ತರ ಪ್ರದೇಶದಲ್ಲಿ ಈ ಸಿನೆಮಾ ನೋಡಿದ ನಂತರ ಹೆಣ್ಣುಮಗಳೊಬ್ಬಳು ಕೆಲವೇ ದಿನಗಳಲ್ಲಿ ತನ್ನನ್ನು ಮದುವೆಯಾಗಲಿದ್ದ ಮುಸ್ಲಿಂ ಯುವಕನ ಹಿನ್ನಲೆಯನ್ನು ಪರಿಶೀಲಿಸಿ ಅವನ ಮೇಲೆ ಸಂಶಯ ಗ್ಯಾರಂಟಿಯಾಗಿ ಆತನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅವನನ್ನು ಒಳಗೆ ಹಾಕಿಸಿದ್ದಾಳೆ. ಮಹಾರಾಷ್ಟ್ರದ IchilKaranji ಎಂಬಲ್ಲಿ ಈ ಸಿನೆಮಾ ನೋಡಿದ ನಂತರ ಅಲ್ಲಿಯೇ ಯುವತಿಯರ ಸಮೂಹವೊಂದು ತಾವು ಇನ್ನು ಮುಂದೆ ಯಾವತ್ತೂ, ಯಾವ ಪರಿಸ್ಥಿತಿಯಲ್ಲಿಯೂ ಹಿಂದೂ ಧರ್ಮ ಬಿಟ್ಟು ಹೋಗುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಿದೆ. ನಾವು ಬೇರೆ ಧರ್ಮದ ಯುವಕರ ಪ್ರೀತಿ, ಪ್ರೇಮದ ಬಲೆಗೆ ಬೀಳಲ್ಲ, ಅನ್ಯಧರ್ಮದ ಯುವಕರ ಅಥವಾ ಯುವತಿಯರಿಂದ ಬ್ರೇನ್ ವಾಶಿಗೆ ಒಳಗಾಗಲ್ಲ ಎಂದು ಶಪಥ ಮಾಡುವುದು ಇದೆಯಲ್ಲ. ಅದು ಸಣ್ಣ ವಿಷಯವಲ್ಲ. ಇವತ್ತು ಮಹಾರಾಷ್ಟ್ರದಲ್ಲಿ ಯುವತಿಯರ ಒಂದು ಸಮೂಹ ಇದನ್ನು ಮಾಡಿರಬಹುದು. ಆದರೆ ಇದು ನಿಧಾನವಾಗಿ ಕಾಳ್ಗಿಚ್ಚಿನಂತೆ ಹರಡುತ್ತದೆ. ದೇಶದ ಉದ್ದಗಲಕ್ಕೂ ಹೆಣ್ಣುಮಕ್ಕಳು ಇದನ್ನು ಅನುಸರಿಸುತ್ತಾರೆ. ಇದು ನಿಧಾನವಾಗಿ ಮತಾಂಧರ ಉದ್ದೇಶಕ್ಕೆ ಅಡ್ಡಿಯಾಗುತ್ತದೆ. ಅದೇ ಕಾರಣಕ್ಕೆ ಈ ಸಿನೆಮಾ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಸಿನೆಮಾ ತೆರೆಕಾಣದಂತೆ ನಿಲ್ಲಿಸುವ ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಆದರೂ ನ್ಯಾಯಾಲಯದ ಅನುಮತಿಯ ಮೇರೆಗೆ ಸಿನೆಮಾ ಭರ್ಜರಿಯಾಗಿ ತೆರೆಕಾಣುತ್ತಿದೆ. ಅಲ್ಲಲ್ಲಿ ಸಿನೆಮಾ ಚಿತ್ರಮಂದಿರದ ಮಾಲೀಕರನ್ನು ದಬಾಯಿಸುವ, ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನಗಳು ನಡೆದವು. ಆದರೂ ಇದನ್ನು ತಡೆಯುವಲ್ಲಿ ಮೂಲಭೂತವಾದಿಗಳು ಯಶಸ್ವಿಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮುಸ್ಲಿಮ್ ಯುವಕರನ್ನು ಒಲೈಸುವುದಕ್ಕಾಗಿ ನಿಷೇಧಿಸುವ ಕೆಲಸ ಮಾಡಿದರಾದರೂ ಈ ಸಿನೆಮಾ ಅದೆಲ್ಲವನ್ನು ಮೀರಿ ಯಶಸ್ವಿಯಾಗಿದೆ.

ಸಿನೆಮಾ ಎನ್ನುವುದು ಒಂದು ಪ್ರಬಲ ಮಾಧ್ಯಮ. ಅದರಲ್ಲಿ ಏನನ್ನು ತೋರಿಸಿದರೂ ಅದು ಜನರ ಮನಸ್ಸಿನಲ್ಲಿ ತುಂಬಾ ಗಟ್ಟಿಯಾಗಿ ನಿಲ್ಲುತ್ತದೆ. ಅದಕ್ಕೆ ಕಾಶ್ಮೀರಿ ಫೈಲ್ಸ್ ಇತ್ತೀಚಿನ ಉದಾಹರಣೆಯಾಗಿತ್ತು. ಈಗ ಕೇರಳ ಸ್ಟೋರಿ ಕೂಡ ಅಂತಹುದೇ ಒಂದು ಸಿನೆಮಾವಾಗಿ ಜನರ ಮನಸ್ಸಲ್ಲಿ ದಾಖಲಾಗಿದೆ. ಇಂತಹ ಸಮಾಜಮುಖಿ ಪರಿಣಾಮಗಳನ್ನು ಬೀರುವ ಸಿನೆಮಾಗಳು ಹೆಚ್ಚೆಚ್ಚು ತೆರೆಕಾಣಬೇಕಿದೆ. ಯಾಕೆಂದರೆ ಆಗ ಮಾತ್ರ ವಾಸ್ತವ ಹೊರಗೆ ಬರುತ್ತದೆ. ಕೇರಳ ಸ್ಟೋರಿ ಸಿನೆಮಾ ನೋಡಿದ ನಂತರ ಅನೇಕ ಹೆಣ್ಣುಮಕ್ಕಳು ಮಾಧ್ಯಮಗಳ ಮುಂದೆ ಬಂದು ತಮ್ಮ ಬದುಕಿನಲ್ಲಿಯೂ ಇಂತಹ ಘಟನೆಗಳು ಆಗಿರುವುದನ್ನು ವಿವರವಾಗಿ ತಿಳಿಸಿದ್ದಾರೆ. ಹೇಗೆ ತಮ್ಮ ಬ್ರೇನ್ ವಾಶ್ ಮಾಡಲಾಯಿತು, ತಮ್ಮನ್ನು ಹೇಗೆ ಪ್ರಪಾತಕ್ಕೆ ದೂಡಲಾಯಿತು ಎನ್ನುವ ಕುರಿತಾಗಿಯೂ ತಿಳಿಸಿದ್ದಾರೆ. ಇದರಿಂದ ಈ ಸಿನೆಮಾ ವಾಸ್ತವಿಕತೆಯಿಂದ ದೂರವಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಭಾರತದಲ್ಲಿ ಯಾರು ಯಾರನ್ನು ಕೂಡ ಪ್ರೀತಿಸಲು ಕಾನೂನಿನಲ್ಲಿ ಅಡ್ಡಿಯಿಲ್ಲ. ಆದರೆ ತಾವು ಪ್ರೀತಿಸುವ ವ್ಯಕ್ತಿ ಕೈಯಲ್ಲಿ ಕುಣಿಕೆಯನ್ನು ಹಿಡಿದುಕೊಂಡು ನಮ್ಮ ವಿನಾಶಕ್ಕೆ ಕಾಯುತ್ತಿದ್ದಾನೆ ಎಂದು ಅರಿಯುವ ಪರಿಜ್ಞಾನ ನಮ್ಮಲ್ಲಿರಬೇಕು. ಅದು ಕೇರಳ ಸ್ಟೋರಿ ಹೇಳಿದೆ.

ಆದರೆ ಈ ಜ್ಞಾನ ನಮ್ಮಲ್ಲಿ ಯಾವಾಗ ಮೂಡುತ್ತದೆ. ಯಾವಾಗ ನಮ್ಮ ಪೋಷಕರು ನಮ್ಮ ಸನಾತನ ಧರ್ಮದ ಬಗ್ಗೆ ನಮ್ಮಲ್ಲಿ ನಂಬಿಕೆಯನ್ನು ಹೆಚ್ಚಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ನಿತ್ಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರೆ ಅದಕ್ಕಿಂತ ಉತ್ತಮವಾಗಿರುವುದು ಬೇರೆನಿಲ್ಲ. ಆದರೆ ಕನಿಷ್ಟ ರಜಾದಿನಗಳಲ್ಲಿ ಆದರೂ ದೇವಾಲಯಗಳಲ್ಲಿ ಕರೆದುಕೊಂಡು ಹೋಗಿ ನಮ್ಮ ದೇವರ, ಯತಿಗಳ, ಧರ್ಮದ ಬಗ್ಗೆ ಹೇಳಿ, ಅದರ ಸಾರವನ್ನು ಅವರು ಮಕ್ಕಳ ಬದುಕಿನಲ್ಲಿ ಅಳವಡಿಸುವ ಮೂಲಕ ನಂಬಿಕೆಯನ್ನು ಗಟ್ಟಿಮಾಡಬೇಕು. ಆಗ ಇಂತಹ ಸಿನೆಮಾಗಳನ್ನು ನೋಡುವ ಅವಶ್ಯಕತೆ ಇರುವುದಿಲ್ಲ. ಯಾವಾಗ ಪೋಷಕರು ತಮ್ಮ ಕೆಲಸವನ್ನು ಮಾಡುವಲ್ಲಿ ಹಿಂದೆ ಬೀಳುತ್ತಾರೋ ಆಗಲೇ ಈ ಸಿನೆಮಾಗಳು ನಿಜವನ್ನು ಹೇಳಬೇಕಾಗುತ್ತದೆ!

0
Shares
  • Share On Facebook
  • Tweet It




Trending Now
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Hanumanth Kamath July 3, 2025
ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
Hanumanth Kamath July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
  • Popular Posts

    • 1
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 2
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 3
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 4
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 5
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

  • Privacy Policy
  • Contact
© Tulunadu Infomedia.

Press enter/return to begin your search