• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?

Hanumanth Kamath Posted On May 30, 2023


  • Share On Facebook
  • Tweet It

ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು ಯಾಕೆ ಹೊಸ ಸಂಸತ್ ಭವನವನ್ನು ವಿರೋಧಿಸುತ್ತಿದ್ದಾರೆ. ಯಾಕೆಂದರೆ ಅವರ ಹೊಟ್ಟೆಯ ಮೇಲೆ ನರೇಂದ್ರ ಮೋದಿಯವರು ಒದೆದಿದ್ದಾರೆ. ಆ ನೋವು ತಡೆಯಲಾರದೇ ಗೋಳೊ ಎಂದು ಅಳುತ್ತಿರುವವರು ಹೊಸ ಸಂಸತ್ ಭವನದ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅಲ್ಲಿ ಅವರಿಗೆ ಏನೂ ಗಿಟ್ಟಲಿಲ್ಲ, ಅದು ಬೇರೆ ವಿಷಯ. ಆದರೆ ದೇಶದ ಅಸ್ಥಿತೆಯ ದ್ಯೋತಕವಾಗಿರುವ ಸಂಸತ್ ಭವನದ ವಿರುದ್ಧ ಬೊಬ್ಬೆ ಹೊಡೆಯುವ ಮೂಲಕ ಅಲ್ಲಿಯೂ ಮೋದಿ ವಿರುದ್ಧ ಕಳಂಕ ತರುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಮೋದಿ ಇಲ್ಲಿ ಮಾಡಿರುವ ತಪ್ಪು ಏನು?
ಮೊದಲನೇಯದಾಗಿ ಇಲ್ಲಿಯ ತನಕ ಕೇಂದ್ರ ಸರಕಾರದ ಸುಮಾರು 30 ರಿಂದ 40 ಸಚಿವಾಲಯಗಳು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದ ಪ್ರತಿ ಸಚಿವಾಲಯದ ವರ್ಷದ ಬಾಡಿಗೆ 20 ರಿಂದ 25 ಕೋಟಿಗಳಷ್ಟು ಆಗುತ್ತಿತ್ತು. ವರ್ಷದ ಒಟ್ಟಾರೆ ಖರ್ಚು ಈ ಬಾಡಿಗೆ ಕಟ್ಟಡಗಳದ್ದೇ 500 ಕೋಟಿ ರೂಪಾಯಿಗಳನ್ನು ದಾಟುತ್ತಿತ್ತು. ಅಂದರೆ ಪ್ರತಿ ವರ್ಷ ಕೇಂದ್ರ ಸರಕಾರ 500 ರೂಪಾಯಿಗಳನ್ನು ತನ್ನ ಸಚಿವಾಲಯಗಳ ಬಾಡಿಗೆ ಕಟ್ಟಲು ವ್ಯಯಿಸಬೇಕಾಗಿತ್ತು. ಇದು ಇನ್ನು ಉಳಿತಾಯವಾಗಲಿದೆ. ಹಾಗಾದ್ರೆ ಸರಕಾರದ ಅಂದರೆ ಜನರ ತೆರಿಗೆಯ ಹಣ ಉಳಿದರೆ ಕಾಂಗ್ರೆಸ್ಸಿಗರಿಗೆ ಮತ್ತು ಕಮ್ಯೂನಿಸ್ಟರಿಗೆ ಯಾಕೆ ಕೋಪ? ಯಾಕೆಂದ್ರೆ ಆ ಕಟ್ಟಡಗಳ ಮಾಲೀಕರಾಗಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು ಮತ್ತು ಕಮ್ಯೂನಿಸ್ಟರು. ಇಷ್ಟು ದಶಕಗಳ ತನಕ ನಿರಾಯಾಸವಾಗಿ ತಮ್ಮ ಕಿಸೆಗೆ ಹರಿದು ಬರುತ್ತಿದ್ದ ಕೋಟ್ಯಾಂತರ ರೂಪಾಯಿ ಬಾಡಿಗೆ ಇನ್ನು ಬರುವುದಿಲ್ಲ ಎನ್ನುವುದು ಖಚಿತವಾಗಿರುವುದರಿಂದ ಅವರೆಲ್ಲ ಬೊಬ್ಬೆ ಹೊಡೆಯುತ್ತಿದ್ದಾರೆ. ಯಾಕೆಂದರೆ ಈ ಸಚಿವಾಲಯಗಳಿಗಾಗಿಯೇ ಹೊಸ ಸಂಸತ್ ಭವನದಲ್ಲಿ ಹೊಸ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಎಲ್ಲಾ ಸಚಿವಾಲಯಗಳು ಒಂದೇ ಕಟ್ಟಡದಲ್ಲಿ ಬರಲಿವೆ. ಈಗಿನ ಮತ್ತು ಭವಿಷ್ಯದ ಯಾವುದೇ ಕೇಂದ್ರ ಸರಕಾರಗಳು ಯಾರಿಗೂ ಬಾಡಿಗೆ ಕಟ್ಟಬೇಕಾಗಿಲ್ಲ. ಅದರೊಂದಿಗೆ ಪರಸ್ಪರ ಸಚಿವಾಲಯಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹೋಗಿ ಬರುವ ಖರ್ಚು ಕೂಡ ಉಳಿಯಲಿದೆ. ಎರಡು ವರ್ಷಗಳಲ್ಲಿ ಈ ಸಚಿವಾಲಯದ ಕಟ್ಟಡ “ವಿಸ್ತಾ” ದ ಹಣ ಹಿಂದಕ್ಕೆ ಬಂದರೆ ಭವಿಷ್ಯದಲ್ಲಿ ವರ್ಷಕ್ಕೆ 500 ಕೋಟಿ ರೂ ಕೊಡುವುದು ಶುದ್ಧ ಉಳಿಯಲಿದೆ. ಯಾಕೆಂದರೆ ಸಚಿವಾಲಯದ ಕಟ್ಟಡ ವಿಸ್ತಾ ಇದಕ್ಕೆ ಖರ್ಚಾಗಿರುವುದೇ 975 ಕೋಟಿ ರೂಪಾಯಿಗಳು.
ಈ ಕಾಂಗ್ರೆಸ್ಸಿಗರು ಮೋದಿ ಸರಕಾರ ಬರುವ ತನಕ ದೆಹಲಿಯಲ್ಲಿ ಎಷ್ಟಾಗುತ್ತದೋ ಅಷ್ಟು ಲೂಟಿ ಹೇಗೆ ಮಾಡುತ್ತಿದ್ದರು ಎನ್ನುವುದರ ಒಂದು ಉದಾಹರಣೆ ನೋಡೋಣ. ಕೇಂದ್ರದ ಮಾಜಿ ಹಣಕಾಸು ಸಚಿವರಾಗಿದ್ದ ಚಿದಂಬರಂ ದೆಹಲಿಯಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿದ್ದ ಮನೆಯಲ್ಲಿಯೇ ವಾಸವಿದ್ದರು. ಆದರೂ ಯುಪಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳು ಬಾಡಿಗೆಯನ್ನು ಪಡೆಯುತ್ತಿದ್ದರು. ಹಾಗಂತ ಬಾಡಿಗೆ ಎಷ್ಟು ಎಂದು ಗೊತ್ತಾದರೆ ನೀವು ಶಾಕಿಗೆ ಒಳಗಾಗುತ್ತಿರಿ? ಪ್ರತಿ ತಿಂಗಳ ಬಾಡಿಗೆಯೇ 20 ಲಕ್ಷ ರೂಪಾಯಿಗಳು. ಒಂದು ದೇಶದ ಸಂಪತ್ತನ್ನು ಹೇಗೆ ಹರಿದು ಹಂಚಿ ಮುಕ್ಕಬಹುದು ಎನ್ನುವುದನ್ನು ಈ ಒಂದು ಉದಾಹರಣೆಯಿಂದಲೇ ತಿಳಿದುಕೊಳ್ಳಬಹುದು. ಇರುವುದು ಇವರ ಮನೆಯಲ್ಲಿಯೇ. ಬಾಡಿಗೆ ತೆಗೆದುಕೊಳ್ಳುವುದು ಸರಕಾರದಿಂದ. ಅದು ಕೂಡ ವರ್ಷಕ್ಕೆ ಕೋಟ್ಯಾಂತರ ರೂಪಾಯಿ. ಚಿದಂಬರಂ ಇದ್ದದ್ದು ಅಬುದಾಬಿ ದೊರೆಗಳ ಪ್ಯಾಲೇಸಿನಲ್ಲಿಯಾ ಅಥವಾ ದೆಹಲಿಯ ಮನೆಯಲ್ಲಿಯಾ ಎನ್ನುವುದನ್ನು ಅವರೇ ಹೇಳಬೇಕು.
ಈಗ ಇನ್ನೊಂದು ವಿಷಯಕ್ಕೆ ಬರೋಣ. ಹೊಸ ಸಂಸತ್ ಅಗತ್ಯ ಇದೆಯಾ ಎಂದು ಕೆಲವು ವಿಘ್ನ ಸಂತೋಷಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೆ ಕೇಳುವವರಿಗೆ ಹೊಸ ಸಂಸತ್ತಿನ ಅಗತ್ಯವನ್ನು ಮೊದಲು ಒತ್ತಿ ಹೇಳಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಮೀರಾ ಕುಮಾರಿಯವರು ಎನ್ನುವುದು ಬಹುತೇಕರಿಗೆ ಗೊತ್ತೆ ಇಲ್ಲ. ಆಗ ಭಾರತದ ಪ್ರಧಾನಿಯಾಗಿದ್ದವರು ಮನಮೋಹನ್ ಸಿಂಗ್. ಆಗ ಕಾಂಗ್ರೆಸ್ ಅದಕ್ಕೆ ಎಸ್ಟೀಮೇಟ್ ಮಾಡಿದ ಮೊತ್ತ ಅಂದಾಜು 3000 ಕೋಟಿ ರೂಪಾಯಿಗಳು. ಅಂದಾಜು ವಿಸ್ತ್ರೀರ್ಣ 35000 ಚದರ ಮೀಟರ್. ಆದರೆ ಇಚ್ಚಾಶಕ್ತಿಯ ಕೊರತೆ ಮತ್ತು ದೂರದೃಷ್ಟಿ ಇಲ್ಲದಿರುವಿಕೆ ಯೋಜನೆಯನ್ನು ಹಾಗೆ ದಾಖಲೆಗಳಲ್ಲಿ ಉಳಿಯುವಂತೆ ಮಾಡಿಬಿಟ್ಟಿತ್ತು. ಒಂದು ವೇಳೆ 2020 ರಲ್ಲಿಯೂ ಕಾಂಗ್ರೆಸ್ ಇದ್ದಿದ್ದರೆ ಹೊಸ ಸಂಸತ್ ಆಗುತ್ತೋ, ಬಿಡುತ್ತಿತ್ತೋ ಆದರೆ ಅದರ ನಿರ್ಮಾಣ ವೆಚ್ಚ ಈಗಿನ ದರಕ್ಕೆ ಅನುಗುಣವಾಗಿ 3900 ಕೋಟಿ ರೂ ಆಗುತ್ತಿತ್ತು. ಆದರೆ ಮೋದಿ ಸರಕಾರ ಕಾಂಗ್ರೆಸ್ ಲೆಕ್ಕ ಹಾಕಿದ್ದಕ್ಕಿಂತ ಬಹುತೇಕ ಡಬ್ಬಲ್ ವಿಸ್ತ್ರೀರ್ಣದಲ್ಲಿ ಆದರೆ ಅದಕ್ಕಿಂತ ಮೂರನೇ ಒಂದು ಭಾಗದಷ್ಟು ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸಿದೆ. ಇದನ್ನು ಯಾರು ಯಾಕೆ ಪ್ರಶಂಸಿಸುವುದಿಲ್ಲ. ಯಾರಿಗೂ ಕಮೀಷನ್ ಇಲ್ಲದೆ, ಭ್ರಷ್ಟಾಚಾರದ ಲವಲೇಶವೂ ಇಲ್ಲದೇ ದೇಶದ ಹೃದಯವಾಗಿರುವ ಸಂಸತ್ತನ್ನು ನಿರ್ಮಿಸಿ ದೇಶದ 140 ಕೋಟಿ ಜನರಿಗೆ ಅರ್ಪಿಸುವುದು ಸಣ್ಣ ವಿಷಯವಲ್ಲ. ಇದರಲ್ಲಿಯೂ ಲೋಪ ಹುಡುಕುವವರಿಗೆ ಏನು ಹೇಳಿದರೂ ಅಷ್ಟೇ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumanth Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumanth Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search