ತುಳುನಾಡಿನ ದೈವಾರಾಧನೆಯನ್ನು ನಿಂಧನೆ ಮಾಡಿದ ಶಿವು ಕನ್ನಡಿಗ ಅಂದರ್
Posted On July 8, 2023

ಮಂಗಳೂರು: ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಆಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಸೈಬರ್ ಕ್ರೈಂ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವರಾಜ್ ಹೆಚ್.ಕೆ ಪ್ರಾಯ 37 ವರ್ಷ, ತಂದೆ: ಕೆಂಪಯ್ಯ, ವಾಸ: ಉಷಾ ಕಾಂಪ್ಲೆಕ್ಸ್, ಜಕ್ಕೂರು ಮೇನ್ ರೋಡ್, ಅಮೃತಹಳ್ಳಿ, ಬೆಂಗಳೂರು ಉತ್ತರ ಎಂದು ಗುರುತಿಸಲಾಗಿದೆ.
ಟ್ವಿಟರ್ ನಲ್ಲಿ ನಕಲಿ ಖಾತೆಯ ಮೂಲಕ ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ (ರಿ) ಸಂಘಟನೆ ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಿತ್ತು.ಸಂಘಟನೆಯು ನೀಡಿದ ದೂರಿನಂತೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಅಕ್ರ: 100/2022 ಕಲಂ 67 ಐಟಿ ಕಾಯ ಮತ್ತು 153(ಎ),505(2) ಐಪಿಸಿ ರಂತೆ ದೂರು ದಾಖಲಾಗಿತ್ತು.
- Advertisement -
Leave A Reply