• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇದು 5 ವರ್ಷದ ಗ್ರಹಚಾರ!

Hanumantha Kamath Posted On July 10, 2023
0


0
Shares
  • Share On Facebook
  • Tweet It

ಏಳನೇ ತರಗತಿಯ ಮಕ್ಕಳು ಹೆಗಡೇವಾರ್ ಅವರ ಬಗ್ಗೆ ತಿಳಿದುಕೊಂಡರೆ ಅದು ತಪ್ಪಾಗುತ್ತದೆ, ಅದೇ ಏಳನೇ ತರಗತಿಯ ಮಕ್ಕಳು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ, ಯೇಸುವಿನ ಬಗ್ಗೆ ತಿಳಿದುಕೊಂಡರೆ ಜಾತ್ಯಾತೀತವಾಗುತ್ತದೆ ಎನ್ನುವುದನ್ನು ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರದ ಮಂತ್ರಿ, ಮಾಜಿ ಸಿಎಂ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಸಾಧಿಸಲು ಹೊರಟಿದ್ದಾರೆ. ಹಿಂದಿನ ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಇದ್ದಾಗ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಒಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು. ಅದರ ಉದ್ದೇಶ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಮೂಲಕ ಮಕ್ಕಳಲ್ಲಿ ಆರಂಭದಿಂದಲೇ ಈ ದೇಶದ ಮಹಾನ್ ನಾಯಕರ ಸ್ಪೂರ್ತಿದಾಯಕ ವಿಷಯಗಳನ್ನು ತಿಳಿಸಬೇಕು ಎನ್ನುವ ದೂರದೃಷ್ಟಿ ಇತ್ತು. ಅದು ಬಿಟ್ಟು ಅದರಲ್ಲಿ ಎಲ್ಲಿಯೂ ಧರ್ಮಗಳ ಬಗ್ಗೆ, ಮತಗಳ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ತುರುಕಿ ತಮ್ಮ ಗುಪ್ತಾಲೋಚನೆಯನ್ನು ಎಳೆಯುವ ಪ್ರಯತ್ನ ಇರಲಿಲ್ಲ. ಯಾಕೆಂದರೆ ನಾವು ಇಲ್ಲಿಯ ತನಕ ಕಲಿತದ್ದು ಬರೀ ನಮ್ಮ ದೇಶದ ಮೇಲೆ ದಾಳಿ ಮಾಡಿದವರ, ನಮ್ಮ ದೇಶವನ್ನು ಕೊಳ್ಳೆ ಹೊಡೆದವರ ವಿಷಯ ಮಾತ್ರ. ಆದರೆ ಈಗಿನ ಪಠ್ಯಪುಸ್ತಕದಲ್ಲಿ ಇಸ್ಲಾಂ ಬಗ್ಗೆ, ಕ್ರೈಸ್ತ ಮತದ ಬಗ್ಗೆ ಎಷ್ಟು ವಿಸ್ತಾರವಾಗಿ ಹೇಳಲು ಸಾಧ್ಯವಿದೆಯೋ ಅಷ್ಟು ತುರುಕಿಸುವ ಕೆಲಸ ನಿರ್ವಿಘ್ನವಾಗಿ ನಡೆಯುತ್ತಿದೆ. ಒಂದು ತರಗತಿ ಎಂದ ಮೇಲೆ ಅಲ್ಲಿ ಎಲ್ಲಾ ಧರ್ಮದ, ಮತಗಳ ಮಕ್ಕಳು ಕಲಿಯುತ್ತಿರುತ್ತಾರೆ. ಅವರಿಗೆ ಏನು, ಎಷ್ಟು ಕಲಿಸಬೇಕು ಎನ್ನುವುದು ಗೊತ್ತಿರುವ ಕೆಲವರನ್ನು ಸೇರಿಸಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಲಾಗುತ್ತದೆ. ಕಾಂಗ್ರೆಸ್ ಹಿಂದಿನ ಅವಧಿಯಲ್ಲಿ ಈ ಸಮಿತಿಯ ಅಧ್ಯಕ್ಷರಾಗಿದ್ದ “ಬರ”ಗೂರು ರಾಮಚಂದ್ರಪ್ಪನವರು ಏನು ಮಾಡಿದರು ಮತ್ತು ಅದಕ್ಕೆ ಎಷ್ಟು ಕೋಟಿ ಬಿಲ್ ಆಯಿತು ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಮಸೀದಿಗೆ ಹೋಗಿ, ಚರ್ಚಿಗೆ ಹೋಗಿ!

ಈಗಾಗಲೇ ಸಿದ್ದಣ್ಣನವರು ತಮ್ಮ ಬಜೆಟ್ ಹೆಸರಿನಲ್ಲಿ ಜನಸಾಮಾನ್ಯರ ಕೋಟಿಗಟ್ಟಲೆ ಹಣವನ್ನು ಮುಸ್ಲಿಂ ಮತ್ತು ಕ್ರೈಸ್ತರ ಅಭ್ಯುದಯಕ್ಕಾಗಿ ಮಾತ್ರ ಮೀಸಲಾಗಿಟ್ಟಿರುವುದು ನಾವು ನೋಡಿದ್ದೇವೆ. ರಾಜ್ಯ ಎಂದರೆ ಇಲ್ಲಿ ಮುಸ್ಲಿಂ, ಕ್ರೈಸ್ತರು ಮಾತ್ರ ಇರುವುದಾ ಎನ್ನುವ ಪ್ರಶ್ನೆ ಸಿದ್ದು ಅವರಿಗೆ ಹಾಕಿದ್ರೆ ಅವರ ಕನ್ನಡಕದಲ್ಲಿ ಒಂದು ಗ್ಲಾಸಿನಲ್ಲಿ ಮುಸ್ಲಿಮರು, ಇನ್ನೊಂದು ಗ್ಲಾಸಿನಲ್ಲಿ ಕ್ರೈಸ್ತರು ಮಾತ್ರ ಕಾಣಸಿಗಬಹುದು. ಹಾಗಂತ ಅದೇ ಪಾಲಿಸಿಯನ್ನು ಶಾಲೆಗಳಲ್ಲಿ ಕೂಡ ಅಳವಡಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಹಿಂದೂ ಪೋಷಕರ ಅಭಿಪ್ರಾಯ. ಈಗ ಇಸ್ಲಾಂ ಮತದ ಬಗ್ಗೆ ಮಕ್ಕಳಿಗೆ ತಿಳಿಸಲೇಬೇಕಾದರೆ ಅದರ ಸ್ಥಾಪಕರ ಬಗ್ಗೆ ಮತ್ತು ಹಬ್ಬಗಳ ಬಗ್ಗೆ ಚಿಕ್ಕದಾಗಿ ಹೇಳಬಹುದಿತ್ತು. ಆದರೆ ಮಸೀದಿಗೆ ಭೇಟಿ ನೀಡಿ ಅಲ್ಲಿನ ಆಚರಣೆಗಳನ್ನು ಕಲಿಯಿರಿ, ಊರುಸ್ ನೋಡಿ ಹಾಗೆ ಹೀಗೆ, ಗುಂಪಿನಲ್ಲಿ ಈ ವಿಷಯಗಳ ಕುರಿತು ಚರ್ಚೆ ಮಾಡಿ, ಶಿಕ್ಷಕರಿಂದ ಹೆಚ್ಚಿನ ಮಾಹಿತಿ ಪಡೆದು ಪ್ರಬಂಧ ಬರೆಯಿರಿ, ಹೀಗೆ ಏನೇನೋ ಹೇಳಿ ಮಕ್ಕಳ ಮನಸ್ಸಿನಲ್ಲಿ ಆ ಮತಗಳ ಬಗ್ಗೆ ಅಷ್ಟೊಂದು ಮಾಹಿತಿ ತುಂಬಿಸುವ ಅವಶ್ಯಕತೆ ಏನಿದೆ. ತುಂಬಾ ಡೀಪ್ ಆಗಿ ಹೋಗುವ ಅನಿವಾರ್ಯತೆ ಸಿದ್ದು ಅವರಿಗೆ ಏನಿತ್ತು. ಮಕ್ಕಳಿಗೆ ಕ್ರೈಸ್ತ ಮತದ ಕುರಿತು ಇಂತಹುದೇ ಪಠ್ಯೇತರ ಚಟುವಟಿಕೆಗಳ ಬಗ್ಗೆ ಕೂಡ ಹೇಳಲಾಗಿದೆ. ಹಾಗಾದರೆ ಹಿಂದೂಗಳು ಏನು ತಪ್ಪು ಮಾಡಿದ್ರು. ಹಿಂದೂ ಧರ್ಮದ ಬಗ್ಗೆ ಕೂಡ ಹೇಳಬಹುದಿತ್ತಲ್ಲ. ನೀವೀಗ ಜಾತ್ಯಾತೀತ ತತ್ವದ ಮೇಲೆ ನಿಂತಿರುವ ಸರಕಾರವೇ ಆಗಿದ್ದಲ್ಲಿ ಹಿಂದೂಗಳ ವಿಷಯದಲ್ಲಿ ಮಾತ್ರ ಯಾಕೆ ತಾತ್ಸಾರ ಸಿದ್ದುಜಿ. ಮುಸ್ಲಿಂ, ಕೈಸ್ತರ ಆಚರಣೆ ಬಗ್ಗೆ ಎಲ್ಲಾ ಮಕ್ಕಳು ವಿವರವಾಗಿ ಕಲಿಯಬೇಕು ಎಂದಾದರೆ ಆ ಮಕ್ಕಳು ಹಿಂದೂಗಳ ಆಚರಣೆಯ ಬಗ್ಗೆ, ನಮ್ಮ ಸಹಿಷ್ಣುತೆಯ ಬಗ್ಗೆ ಕೂಡ ಕಲಿಯಲಿ. ಅಷ್ಟಕ್ಕೂ ಸಿದ್ದು ಅವರು ಸರಕಾರಿ ಶಾಲೆಗಳಿಗೆ ಪಠ್ಯಪುಸ್ತಕ ರಚಿಸಿದ್ದಾರೋ ಅಥವಾ ಮದರಸಗಳ ಸಿಲೆಬಸ್ ರಚಿಸಿದ್ದಾರೋ ಎನ್ನುವುದನ್ನು ಅವರು ನಿರ್ಣಯಿಸಬೇಕು. ಯಾಕೆಂದರೆ ಮಸೀದಿಯಲ್ಲಿ ಆಗುವ ಆಚರಣೆ ಬಗ್ಗೆ ಆ ಸಮುದಾಯದ ಮಕ್ಕಳು ಕಲಿಯಲು ಅವರಿಗೆ ಮದರಸಗಳಿವೆ. ಅದಕ್ಕೆ ನಮ್ಮ ಶಾಲೆಗಳು ಬೇಕಂತಿಲ್ಲ. ಆದರೂ ಸಿಕ್ಕಸಿಕ್ಕ ಕಡೆ ಮುಸ್ಲಿಮರನ್ನು, ಕ್ರೈಸ್ತರನ್ನು ಸಂತುಷ್ಟಿಗೊಳಿಸಲು ಸಿದ್ದು ಸರಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ.

ಇದು 5 ವರ್ಷದ ಗ್ರಹಚಾರ!

ವೀರ ಸಾವರ್ಕರ್ ಪಠ್ಯವನ್ನು ಕಿತ್ತೆಸೆಯಲು ಹಿಂದೆ ಮುಂದೆ ನೋಡದ ಕಾಂಗ್ರೆಸ್ ಸರಕಾರ ಮೊಹಮ್ಮದ್ ಪೈಗಂಬರರ ಜೀವನವನ್ನು ತಿಳಿಸಿ ಎಂದು ಪ್ರಶ್ನೆ ಕೇಳುತ್ತದೆ. ಪಿ. ಸತ್ಯನಾರಾಯಣ ಭಟ್ ಅವರ ಬರೆದ ಅಚ್ಚರಿಯ ಜೀವ ಇಂಬಳ ಎಂಬ ವೈಜ್ಞಾನಿಕ ಪ್ರಬಂಧವನ್ನು ಕಿತ್ತು ಹಾಕಿ ಏಸು ಕ್ರಿಸ್ತರ ಜೀವನದ ಕುರಿತ ಪ್ರಶ್ನೆಯನ್ನು ಸೇರಿಸುತ್ತದೆ. ಆದರೆ ಅಪ್ಪಿತಪ್ಪಿಯೂ ಭಗವಂತ ಶ್ರೀರಾಮಚಂದ್ರನ ಬಗ್ಗೆ, ಯುಗಾದಿ, ಚೌತಿಯ ಬಗ್ಗೆ ಜ್ಞಾನ ಕೊಡುವ ಪ್ರಯತ್ನವನ್ನು ಎಲ್ಲಿಯೂ ಮಾಡಿಲ್ಲ. ಇದರ ಒಟ್ಟು ಉದ್ದೇಶ ಏನು? ಮುಸ್ಲಿಂ, ಕ್ರೈಸ್ತರನ್ನು ಖುಷಿಪಡಿಸುವುದು. ದೇವರನ್ನು ನಂಬದ ಸಿದ್ದು ಅವರಿಗೆ ಮಕ್ಕಳು ಏನು ಕಲಿಯಬೇಕು, ಏಷ್ಟು ಕಲಿಯಬೇಕು ಎನ್ನುವುದು ಮುಖ್ಯವಲ್ಲ. ಅವರಿಗೆ ತುರ್ತಾಗಿ ಅಲ್ಪಸಂಖ್ಯಾತರನ್ನು ಓಲೈಸಬೇಕು. ಅದು ಯಾವ ಮಟ್ಟದಲ್ಲಿದೆ ಎಂದರೆ ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತ ಯುವಕರಿಗೆ ವಸತಿ ಸಹಿತ ಹತ್ತು ತಿಂಗಳ ಐಎಎಸ್, ಕೆಎಎಸ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಸರಕಾರದ ಮುಂದಿದೆ. ಸದ್ಯ ಐದು ವರ್ಷ ಮಕ್ಕಳ ಬ್ರೇನ್ ವಾಶ್ ಮಾಡಿ ಏನು ತುಂಬಿಸಲು ಸಾಧ್ಯವಿದೆಯೋ ಅದನ್ನು ಸಿದ್ದು ಸರಕಾರ ಮಾಡುತ್ತದೆ. ಅದನ್ನು ನೋಡಿಯೂ ನೋಡದಂತೆ ಇರುವ ಅನಿವಾರ್ಯತೆ ಹಿಂದೂಗಳದ್ದು. ನಾವು ಸರಿ ಇದ್ದಿದ್ರೆ ನಮ್ಮ ಮಕ್ಕಳು ಹೀಗೆ ಮಸೀದಿ, ಚರ್ಚ್ ಗೆ ಅಲೆಯಬೇಕಿತ್ತಾ?

0
Shares
  • Share On Facebook
  • Tweet It




Trending Now
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Hanumantha Kamath July 3, 2025
ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
Hanumantha Kamath July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
  • Popular Posts

    • 1
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 2
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 3
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 4
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 5
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

  • Privacy Policy
  • Contact
© Tulunadu Infomedia.

Press enter/return to begin your search