• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೊಲೆಗಳಲ್ಲಿ ರಾಜಕೀಯ ಬಂದರೆ ಮುಗಿಯಿತು!!

Hanumantha Kamath Posted On July 12, 2023


  • Share On Facebook
  • Tweet It

ಟಿ ನರಸಿಂಹಪುರದ ಯುವಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಅವರನ್ನು ಕೊಂದದ್ದು ಎಷ್ಟು ಕ್ಷುಲಕ ಕಾರಣಕ್ಕೆ ಎನ್ನುವುದನ್ನು ನೋಡಿದಾಗ ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹನುಮ ಜಯಂತಿಯ ಸಂಭ್ರಮಾಚರಣೆಯಲ್ಲಿ ಸಿನೆಮಾ ನಟರೊಬ್ಬರ ಫ್ಲೆಕ್ಸ್ ಹಾಕುವ ಅಗತ್ಯ ಇಲ್ಲ ಎನ್ನುವ ಒಂದೇ ಒಂದು ವಿಷಯದಲ್ಲಿ ಶುರುವಾದ ಮನಸ್ತಾಪ ಒಬ್ಬ ಯುವಕನ ಕೊಲೆಯೊಂದಿಗೆ ಮುಕ್ತಾಯವಾಗುತ್ತದೆ ಎನ್ನುವುದನ್ನು ಊಹಿಸಿದಾಗ ನಿಜಕ್ಕೂ ಹತ್ಯೆಗಳು ನಡೆಯುವುದು ಅಷ್ಟು ಸುಲಭವೇ ಎಂದು ಅನಿಸುತ್ತದೆ. ಅಷ್ಟಕ್ಕೂ ಒಂದು ವೇಳೆ ಪುನೀತ್ ರಾಜಕುಮಾರ್ ಅವರೇ ಇದ್ದಿದ್ದರೆ ಅವರ ಫೋಟೋ ಇರುವ ಫ್ಲೆಕ್ಸ್ ಇಲ್ಲದೇ ಇದ್ದ ಕಾರಣಕ್ಕೆ ಯಾರ ಮೇಲೆಯೂ ಕೋಪಗೊಳ್ಳುತ್ತಿರಲಿಲ್ಲ. ಆದರೆ ಅವರ ಅಭಿಮಾನಿಗಳು ಎಂದೆನಿಸಿಕೊಂಡವರು ತಮ್ಮ ನಾಯಕನಟನ ಫೋಟೋ ಇಲ್ಲದೇ ಇರುವ ಏಕೈಕ ಕಾರಣಕ್ಕೆ ಒಂದು ಹೆಣ ಬೀಳಿಸುತ್ತಾರೆ ಎನ್ನುವುದೇ ಆದರೆ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿದೆ ಎಂದು ಅನಿಸದೇ ಇರುವುದಿಲ್ಲ.

ಅಷ್ಟಕ್ಕೂ ಹತ್ಯೆಗಳು ಅಷ್ಟು ಸುಲಭವಾಗಿ ನಡೆಯಲು ಕಾರಣಗಳೇನು?

ಮೊದಲನೇಯದಾಗಿ ಹಂತಕರಿಗೆ ಶಿಕ್ಷೆಯ ಭಯ ಇಲ್ಲದೇ ಇರುವುದು. ಯಾಕೆಂದರೆ ನಮ್ಮಲ್ಲಿ ಕೊಲೆ ಆರೋಪಗಳು ಎಷ್ಟು ವೇಗದಲ್ಲಿ ಬರುತ್ತದೆಯೋ ಅಷ್ಟೇ ವೇಗದಲ್ಲಿ ಆರೋಪಿ ಆರೋಪದಿಂದ ಮುಕ್ತನಾಗುತ್ತಾನೆ. ನೂರರಲ್ಲಿ ತೊಂಭತ್ತೊಂಭತ್ತು ಮಂದಿಗೆ ಈ ಶಿಕ್ಷೆ ಎನ್ನುವುದು ಹತ್ತಿರಕ್ಕೂ ಸುಳಿಯದೇ ಇರುವುದರಿಂದ ಅವರಿಗೆ ಅದು ಅಷ್ಟಾಗಿ ಹೆದರಿಕೆಯನ್ನು ಹುಟ್ಟಿಸುವುದಿಲ್ಲ. ಇನ್ನು ಹೈಪ್ರೋಫೈಲ್ ಪ್ರಕರಣಗಳಲ್ಲಿ ಅದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜಕೀಯಕ್ಕೆ ಸಂಬಂಧವನ್ನು ಕರುಣಿಸುತ್ತದೆ. ಆರೋಪಿಗಳು ಮತ್ತು ಸತ್ತವರು ಬೇರೆ ಬೇರೆ ಪಕ್ಷ, ಸಂಘಟನೆಗಳಲ್ಲಿ ಗುರುತಿಸಿಕೊಂಡರೆ ಮುಗಿಯಿತು, ಅಲ್ಲಿಗೆ ಆ ಪ್ರಕರಣ ಹಾದಿ ತಪ್ಪಲು ತುಂಬಾ ಸಮಯ ಹಿಡಿಯುವುದಿಲ್ಲ. ವೇಣುಗೋಪಾಲ್ ಪ್ರಕರಣದಲ್ಲಿಯೂ ಹೀಗೆ ಆಗಲಿದೆ. ಇದರಲ್ಲಿ ಆರೋಪಿಗಳು ಕಾಂಗ್ರೆಸ್ ಪಕ್ಷದವರು ಎನ್ನುವುದು ಯುವ ಬ್ರಿಗೇಡ್ ಮುಖಂಡರಾದ ಚಕ್ರವರ್ತಿ ಸೂಲಿಬೆಲೆಯವರ ದೃಢವಾದ ನಂಬಿಕೆ. ಆದರೆ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರ ಸಹೋದರ ಇದ್ದಾರೆ ಎನ್ನುವುದು ಕೂಡ ಈಗ ಪತ್ತೆಯಾಗಿದೆ. ಈಗ ಇಲ್ಲಿ ವಿಚಾರಣೆ ಮುಂದುವರೆಯಬೇಕಾದರೆ ಇದು ಪಕ್ಷಾತೀತವಾಗಿ ನಡೆಯಬೇಕು. ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಯುವ ಬ್ರಿಗೇಡ್ ಮುಖಂಡನ ಕೊಲೆ ಎಂದ ತಕ್ಷಣ ರಾಜ್ಯದ ಕಾಂಗ್ರೆಸ್ ಸರಕಾರ ಇದನ್ನು ಹೇಗೆ ನೋಡುತ್ತದೆ ಎನ್ನುವುದು ಮುಖ್ಯ. ಸಿಎಂ ಸಿದ್ದು ನಮ್ಮ ಸರಕಾರ ನೈಜ ಆರೋಪಿಗಳನ್ನು ಉಳಿಸುವ ಪ್ರಶ್ನೆಯೇ ಇಲ್ಲ ಎನ್ನುವ ಭಾವಾರ್ಥದ ವಿಷಯಗಳನ್ನು ಹೇಳಿದ್ದಾರೆ. ಅದಕ್ಕೆ ಬದ್ಧರಾಗಿರುತ್ತಾರಾ ಎನ್ನುವುದು ಈಗ ಕಾದು ನೋಡಬೇಕು.

ಕೊಲೆಗಳಲ್ಲಿ ರಾಜಕೀಯ ಬಂದರೆ ಮುಗಿಯಿತು!!

ಇನ್ನು ಜೈನ ಮುನಿಗಳ ಹತ್ಯೆಯ ವಿಷಯದ ಬಗ್ಗೆ ಕೂಡ ನೋಡೋಣ. ರಾಜ್ಯದ ಜನರು ಈ ಎರಡು ಕೊಲೆಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಜೈನ ಮುನಿಯನ್ನು ಹತ್ಯೆ ಮಾಡಿದ ರೀತಿ ನೋಡಿದ ಬಳಿಕ ಇಷ್ಟು ಕ್ರೂರತೆಯಿಂದ ಮನುಷ್ಯ ವರ್ತಿಸುತ್ತಾನಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕರೆಂಟ್ ಶಾಕ್ ಕೊಟ್ಟು ಕೊಂದು ನಂತರ ದೇಹವನ್ನು ತುಂಡರಿಸಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ. ಅಹಿಂಸಾವಾದಿ ಜೈನ ಮುನಿ ಒಬ್ಬರನ್ನು ಇಷ್ಟು ಭೀಭತ್ಸವಾಗಿ ಹತ್ಯೆ ಮಾಡುವವರ ಮನಸ್ಥಿತಿ ಎನಿರಬಹುದು, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ನಮಗೆ ಇಲ್ಲಿ ಯಾವುದೇ ರೀತಿಯಲ್ಲಿ ಏನೂ ಆಗುವುದಿಲ್ಲ ಎನ್ನುವ ಭಂಡ ಧೈರ್ಯ ಹಂತಕರಿಗೆ ಇರುತ್ತದೆಯಾ ಎನ್ನುವುದನ್ನು ನೋಡಬೇಕು. ಈಗ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎನ್ನುವುದು ಬಿಜೆಪಿಯ ವಾದ. ಅದರೆ ನಮ್ಮ ಪೊಲೀಸ್ ಇಲಾಖೆಯೇ ಸಮರ್ಥವಾಗಿ ಇರುವುದರಿಂದ ಇದನ್ನು ಸಿಬಿಐಗೆ ನೀಡಬೇಕಾಗಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ವಾದ. ಇಲ್ಲಿ ವಿಷಯ ಇರುವುದು ಆರೋಪಿಗಳ ಕುರಿತು ಸೂಕ್ತ ತನಿಖೆ ನಡೆಸಿ ಶಿಕ್ಷೆ ನೀಡುವುದು ಮಾತ್ರ. ಅದನ್ನು ಸಮರ್ಥವಾಗಿ ತನಿಖೆ ಯಾವ ಇಲಾಖೆಯೇ ಮಾಡಲಿ ಅವರಿಗೆ ನೀಡಬೇಕು. ಇನ್ನು ವಿಚಾರಣೆ ನಡೆದು ಫಲಿತಾಂಶ ಯಾವುದೇ ಬರಲಿ, ಎರಡೂ ಕಡೆಯವರು ಒಪ್ಪುತ್ತಾರಾ ಎನ್ನುವುದು ಪ್ರಶ್ನೆ. ಈಗ ಹಲವು ಪ್ರಕರಣಗಳನ್ನು ರಾಜ್ಯ ಸರಕಾರ ಸಿಬಿಐಗೆ ನೀಡಿದೆ. ಅದರಲ್ಲಿ ಸಿಬಿಐ ತನಿಖೆ ನಡೆಸಿ ನೀಡಿರುವ ತೀರ್ಪನ್ನು ಒಪ್ಪದೇ ಇರುವ ವರ್ಗವೂ ಇದೆ. ಯಾಕೆಂದರೆ ಸಿಬಿಐ ತನಿಖೆ ನಡೆಸಿ ಅವರದ್ದೇ ಕೋರ್ಟ್ ಕೊಟ್ಟಿರುವ ತೀರ್ಪು ಕೂಡ ಹಲವು ಬಾರಿ ಪ್ರಕರಣವನ್ನು ಗೋಜಲು ಮಾಡಿದೆ. ಉದಾಹರಣೆಗೆ ಸೌಜನ್ಯ ಪ್ರಕರಣ. ಆರೋಪಿ ಸಂತೋಷ್ ಅಪರಾಧಿ ಅಲ್ಲ ಎನ್ನುವುದನ್ನು ತೀರ್ಪು ನೀಡಿದೆ. ಆರೋಪಿಯನ್ನು ಬಂಧಮುಕ್ತಗೊಳಿಸಿದೆ.
ಇನ್ನು ಮಂಗಳೂರಿನಲ್ಲಿ ಹೊರರಾಜ್ಯದ ಕಾರ್ಮಿಕನೊಬ್ಬ ಸಂಬಳ ಕೇಳಿದ್ದಕ್ಕೆ ಧಣಿ ಅವನನ್ನು ಕೊಂದಿದ್ದಾನೆ. ಒಟ್ಟಿನಲ್ಲಿ ಹತ್ಯೆಗಳು ಹೈಪ್ರೋಫೈಲ್ ಆಗಲಿ ಅಥವಾ ಸುದ್ದಿಯೇ ಆಗದಂತೆ ನಡೆದು ಹೋಗಲಿ. ಹಂತಕರಿಗೆ ಶಿಕ್ಷೆ ಆಗಲೇಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದೇ ಇರಲಿ ಎಂದು ಪ್ರಾರ್ಥಿಸೋಣ.

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search