ಸಚಿವರ ಮಾಧ್ಯಮ ಸಂಯೋಜಕನಿಂದ ಸೂಲಿಬೆಲೆಯವರಿಗೆ ಬೆದರಿಕೆ!
ಇತ್ತೀಚಿಗೆ ತಿ ನರಸೀಪುರದಲ್ಲಿ ಹಿಂದೂ ಯುವಕ ವೇಣುಗೋಪಾಲನ ಹತ್ಯೆಯ ಆರೋಪಿಗಳು ಸಚಿವ ಮಹದೇವಪ್ಪನವರ ಮಗನ ಒಡನಾಡಿಗಳು ಎಂಬ ಮಾತು ಕೇಳಿಬಂದಿತ್ತು. ಈಗ ಸಚಿವ ಮಹದೇವಪ್ಪ ತಮ್ಮ ಮಾಧ್ಯಮ ಸಂಯೋಜಕ ನೇಮಕಾತಿಯಲ್ಲಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಸಚಿವರ ಮಾಧ್ಯಮ ಸಂಯೋಜಕನಾಗಿ ನೇಮಕವಾಗಿರುವ ರಮೇಶ ಎಚ್ ಕೆ ಎಂಬಾತ ತನ್ನ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆದಿಯಾಗಿ ಸಮಾಜದ ಅನೇಕ ಗಣ್ಯವ್ಯಕ್ತಿಗಳ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದಾನೆ.
ಮಾಧ್ಯಮ ಸಂಯೋಜಕನಾಗಿ ಸರ್ಕಾರಿ ವೆಚ್ಚದಲ್ಲಿ ಸಂಬಳ ಪಡೆಯುವ ಈತ ಹಿರಿಯ ಮುತ್ಸದ್ದಿ ದೇವೇಗೌಡರ ಕುರಿತು ” ಈತನಿಗೆ ವಯಸ್ಸಾಗಿದೆ, ತಲೆಯಲ್ಲಿ ಕೂದಲೂ ಬುದ್ಧಿಯೂ ಇಲ್ಲ” ಎಂದು ತುಚ್ಛವಾಗಿ ಬರೆದಿದ್ದಾನೆ. ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಕುರಿತು ಅವಾಚ್ಯವಾಗಿ ನಿಂದಿಸಿದ್ದಲ್ಲದೇ “ನಿನಗೂ ಖಾರದ ಪುಡಿ ಫಿಕ್ಸ್” ಎಂದೆಲ್ಲಾ ಜೀವ ಬೆದರಿಕೆ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಚಕ್ರವರ್ತಿ ಸೂಲಿಬೆಲೆಯವರ ಅಭಿಮಾನಿಯೊಬ್ಬ ಬೆಂಗಳೂರಿನಲ್ಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ ಇಂತಹ ಸಮಾಜ ಘಾತುಕ ಕಿಡಿಗೇಡಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಅಷ್ಟೇಅಲ್ಲ ಪಬ್ಲಿಕ್ ಟಿವಿಯ ರಂಗನಾಥ್ ಅವರ ಕುರಿತಂತೆಯೂ ಈತ ಕೆಟ್ಟದಾಗಿ ಪೋಸ್ಟ್ ಹಾಕಿದ್ದಾನೆ.
ಸಚಿವರ ಮಾಧ್ಯಮ ಸಂಯೋಜಕನೊಬ್ಬನಿಗೆ ಇರಬೇಕಾದ ಯಾವ ಯೋಗ್ಯತೆಯೂ ಇಲ್ಲದ ಈ ರಮೇಶನನ್ನು ಕೂಡಲೇ ಕೆಲಸದಿಂದ ಉಚ್ಚಾಟಿಸಿ ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನ ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಇಂತಹ ಅಯೋಗ್ಯರಿಗೇ ಅದು ಹೇಗೆ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ಸಿಗುತ್ತವೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಮಹದೇವಪ್ಪನವರು ಇಂತಹ ಬಾಯಿ ಹರುಕನನ್ನು ಹುದ್ದೆಯಿಂದ ಕೆಳಗಿಳಿಸಿ ತಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳುತ್ತಾರಾ? ನೋಡಬೇಕು.
Leave A Reply