ಕಳ್ಳಸಾಗಣಿಕೆಗೊಂಡಿದ್ದ ಶತಮಾನಗಳ ಹಿಂದಿನ ಕಲಾಕೃತಿಗಳು ವಾಪಾಸ್!
ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸದಿಂದ ಮತ್ತೊಂದು ಮೌನ ಕ್ರಾಂತಿ ನಡೆದಿದೆ. ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ 105 ಸಾಂಸ್ಕೃತಿಕ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರಕ್ಕೆ ಅಮೇರಿಕಾ ಬಂದಿದೆ. ಯುನೈಟೆಡ್ ಸ್ಟೇಟ್ಸ್ (ಯುಎಸ್) ಭಾರತದಲ್ಲಿ ಕಳ್ಳತನ ಮಾಡಿ ಅನೇಕ ಪುರಾತನ ವಸ್ತುಗಳನ್ನು ಸ್ಮಂಗ್ಲಿಂಗ್ ಮಾಡಲಾಗಿದೆ. ಇಲ್ಲಿನ ಹಲವು ವಸ್ತುಗಳು ಅಮೇರಿಕಾದಲ್ಲಿ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವೂ ಆಗಿದೆ. ಆ ಬಗ್ಗೆ ಭಾರತೀಯ ದೂತಾವಾಸದಿಂದ ಅಮೇರಿಕಾದ ಆಡಳಿತ, ಕಳ್ಳಸಾಗಣೆ ವಿರೋಧಿ ಘಟಕ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ತನಿಖಾ ತಂಡಕ್ಕೆ ಕಾಲಕಾಲಕ್ಕೆ ದೂರು ಕೂಡ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು ಭಾರತದ ಅನೇಕ ಪುರಾತತ್ವ ವಸ್ತುಗಳನ್ನು ಪತ್ತೆ ಹಚ್ಚಿರುವ ಅಲ್ಲಿನ ಇಲಾಖೆಗಳು ಅಮೇರಿಕಾದ ಸಂಗ್ರಹದಲ್ಲಿ ಇಟ್ಟುಕೊಂಡಿದ್ದವು. ಸದ್ಯ ಅಂತಹ ಕೆಲವು ವಸ್ತುಗಳು ಭಾರತಕ್ಕೆ ಮರಳಲಿವೆ.
ಅದರಲ್ಲಿ 12 ಮತ್ತು 13 ನೇ ಶತಮಾನದ ರಾಜಸ್ಥಾನದ ಮಾರ್ಬಲ್ ನಿಂದ ಮಾಡಲ್ಪಟ್ಟ ಕಮಾನು, 14 ಮತ್ತು 15 ನೇ ಶತಮಾನದ ಮಧ್ಯ ಭಾರತದ ಅಪ್ಸರಾ ಮೂರ್ತಿ, 14 ಮತ್ತು 15 ನೇ ಶತಮಾನದ ತಾಮ್ರದ ಮಿಶ್ರಲೋಹದ ಸಂಬಂದರ್ ಶಿಲ್ಪವು ತೋರುಬೆರಳು ಸ್ಪಲ್ಪ ಮೇಲಕ್ಕೆ ತೋರಿಸುತ್ತದೆ ( ಸಾಂಕೇತಿಕವಾಗಿ ಪಾರ್ವತಿ ಮತ್ತು ಶಿವನ ಕಡೆಗೆ) ಚೋಳ ಸಾಮ್ರಾಜ್ಯ (ಇಂದಿನ ಸಿಕಾರ್ಜಿ, ತಮಿಳುನಾಡು, ಭಾರತ) ಮತ್ತು 17 ಹಾಗೂ 18 ಶತಮಾನದ ತಾಮ್ರದ ನಟರಾಜನ ಮೂರ್ತಿಗಳು ಒಳಗೊಂಡಿವೆ.
ಪ್ರಧಾನಿ ಮೋದಿಯವರ 2016ರ ಅಮೇರಿಕಾ ಭೇಟಿಯ ವೇಳೆ ಅಮೇರಿಕಾದ 16 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಇದೇ ರೀತಿ 2021 ರಲ್ಲಿ ಅಮೇರಿಕಾ 157 ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಈ ಬಾರಿ 105 ಪುರಾತನ ವಸ್ತುಗಳ ಜೊತೆಗೆ 278 ಸಾಂಸ್ಕೃತಿಕ ಕಲಾಕೃತಿಗಳನ್ನು ಅಮೇರಿಕಾ ಭಾರತಕ್ಕೆ ಹಸ್ತಾಂತರಿಸಿದೆ
Leave A Reply