ರಾಮಸೇತು ಕಲ್ಪನೆ ಅಲ್ಲ, ವಾಸ್ತವ!

ರಾಮಸೇತು ಎನ್ನುವ ಶಬ್ದವನ್ನು ನೀವು ಕೇಳಿರುತ್ತೀರಿ. ಅಂತಹ ಒಂದು ಸೇತುವೆ ಇತ್ತಾ, ಇಲ್ವಾ ಎನ್ನುವುದರ ಬಗ್ಗೆ ಆಸ್ತಿಕ ಮತ್ತು ನಾಸ್ತಿಕರ ನಡುವೆ ವಾದ, ಪ್ರತಿವಾದಗಳು ನಡೆಯುತ್ತಾ ಬಂದಿವೆ. ಈಗ ಸಮುದ್ರಶಾಸ್ತ್ರ ವಿಜ್ಞಾನಿಗಳು ಆ ಬಗ್ಗೆ ಧೀರ್ಘ ಅಧ್ಯಯನದ ಬಳಿಕ ಅಂತಹ ಒಂದು ಸೇತುವೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 7000 ವರ್ಷಗಳ ಹಿಂದೆ ಈ ಸೇತುವೆ ಅಸ್ತಿತ್ವ ಇತ್ತು ಎನ್ನುವುದು ಪತ್ತೆಯಾಗಿದೆ. ಧನುಶ್ ಕೋಡಿ ಮತ್ತು ಮನ್ನಾರ್ ದ್ವೀಪಗಳ ಸಮುದ್ರ ತಟದ ಬಳಿ ಕಾರ್ಬನ್ ಡೇಟಿಂಗ್ (ಜೈವಿಕ ವಸ್ತುಗಳ ವಯೋಮಾನ ವರದಿ) ಅಧ್ಯಯನ ಮಾಡಿದ ತಂಡಕ್ಕೆ ರಾಮಾಯಣ ನಡೆದ ಕಾಲಘಟ್ಟದ ಬಗ್ಗೆ ಮಾಹಿತಿ ದೊರಕಿದೆ. ಹದಿನೈದನೇ ಶತಮಾನದ ತನಕ ರಾಮಸೇತು ಸಾಗರದ ಮೇಲ್ಪದರದಲ್ಲಿ ಕಾಣುತ್ತಿತ್ತು. 1480 ರಲ್ಲಿ ಅಪ್ಪಳಿಸಿದ ಭೀಕರ ಸೈಕ್ಲೋನ್ ಬಳಿಕ ಅದು ಮುರಿದ ಸ್ಥಿತಿಯಲ್ಲಿ ಸಮುದ್ರಮಟ್ಟದಿಂದ ಕೆಳಗೆ ಹೋಯಿತು. ರಾಮಸೇತು 48 ಕಿ.ಮೀ ಉದ್ದ ಇತ್ತು. ಈ ಸೇತುವೆ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖ ಇದೆ. ನಾಸ ತೆಗೆದ ಭೂಮಿಯ ಮೇಲಿನ ಚಿತ್ರದಲ್ಲಿ ರಾಮ ಸೇತು ಎಂದು ಹೇಳಲಾಗುವ ತೇಲುವ ಸೇತುವೆಯ ದೃಶ್ಯ ಕೂಡ ಇದೆ. ಇದೆಲ್ಲವನ್ನು ನೋಡಿದ ಬಳಿಕವಾದರೂ ನಾಸ್ತಿಕರು ರಾಮಸೇತು ಇತ್ತು ಎನ್ನುವುದನ್ನು ಒಪ್ಪುತ್ತಾರಾ ಅಥವಾ ತಮ್ಮದೇ ಕತ್ತೆಗೆ ಮೂರು ಕಾಲು ಎನ್ನುತ್ತಾರಾ ಎನ್ನುವುದು ಉಳಿದಿರುವ ಪ್ರಶ್ನೆ.
Leave A Reply