ಸಮಾಜವಾದಿ ಪಾರ್ಟಿ “ಇಂಡಿಯಾ” ಭಾಗ!

ಮಹಾರಾಷ್ಟ್ರದ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಾನು ವಂದೇ ಮಾತರಂ ಗೀತೆಯನ್ನು ಹಾಡುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ತನ್ನ ಧರ್ಮದಲ್ಲಿ ಅಲ್ಲಾನನ್ನು ಬಿಟ್ಟು ಬೇರೆಯವರಿಗೆ ಶಿರಬಾಗಬಾರದು ಎಂದು ಹೇಳಲಾಗಿದೆ. ಆದ್ದರಿಂದ ವಂದೇ ಮಾತರಂ ಹೇಳುವುದು ತನಗೆ ನಿಷಿದ್ಧ ಎಂದು ತಿಳಿಸಿದ್ದಾರೆ. ಹೀಗೆ ಹೇಳುವ ಮೂಲಕ ಅಬು ಅಜ್ಮಿ ತನಗೆ ದೇಶಕ್ಕಿಂತ ಧರ್ಮ ದೊಡ್ಡದು ಎಂದು ಸಾರಿದ್ದಾನೆ. ಇಂತಹ ಮನುಷ್ಯನನ್ನು ಶಾಸಕನನ್ನಾಗಿ ಹೊಂದಿರುವುದು ಸಮಾಜವಾದಿ ಪಾರ್ಟಿ ಮತ್ತು ಈ ಪಕ್ಷ ಐ.ಎನ್.ಡಿ.ಐ.ಎ (ಇಂಡಿಯಾ) ಇದರ ಭಾಗ.
ಹಾಗಾದರೆ ಇಂಡಿಯಾ ಎನ್ನುವ ವಿಪಕ್ಷಗಳ ಒಕ್ಕೂಟ ತಮಗೆ ದೇಶಕ್ಕಿಂತ ಧರ್ಮ ಮೇಲು ಎನ್ನುವುದನ್ನು ಒಪ್ಪಿಕೊಂಡಿದೆಯಾ? ಇಂತಹ ಮನಸ್ಥಿತಿ ಇರುವವರು ಅಧಿಕಾರಕ್ಕೆ ಬಂದರೆ ಏನಾಗಬಹುದು. ಭಾರತ ಎನ್ನುವ ಸನಾತನ ಪರಂಪರೆಯಲ್ಲಿ ಜನ್ಮ ನೀಡಿದ ಭೂಮಿಗೆ ಹಾಗೂ ಜನ್ಮ ನೀಡಿದ ತಾಯಿಗೆ ಮೊದಲಿಗೆ ಅಡ್ಡಬೀಳಬೇಕು ಎಂದು ಹೇಳಲಾಗಿದೆ. ಆದರೆ ತಾನು ಹುಟ್ಟಿದ ದೇಶಕ್ಕಿಂತ ತನಗೆ ಧರ್ಮ ದೊಡ್ಡದು ಎಂದಿರುವ ಮನುಷ್ಯರು ದೇಶಕ್ಕಾಗಿ ಏನಾದರೂ ಮಾಡುವುದಕ್ಕಿಂತ ಹೆಚ್ಚಾಗಿ ಧರ್ಮವನ್ನು ಎತ್ತಲು ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಎಂದು ಸಾಬೀತಾಗುತ್ತದೆ. ಅವರಿಗೆ ತಮ್ಮ ಧರ್ಮ ಬೆಳೆಯುವುದೇ ಮುಖ್ಯವಾಗಿರುತ್ತದೆ. ಅವರು ಬೇರೆ ಧರ್ಮದವರನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎನ್ನುವುದನ್ನು ಅಬು ಅಜ್ಮಿಯಂತವರನ್ನು ನೋಡಿಯೇ ತಿಳಿಯಬಹುದು.
ಅಷ್ಟಕ್ಕೂ ಅಬು ಅಜ್ಮಿ 1993 ರ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ. ಅಂತವನು ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಕೃಪೆಯಿಂದ ರಾಜಾರೋಷವಾಗಿ ತಿರುಗಾಡುತ್ತಿದ್ದ. ಸರಣಿ ಬಾಂಬ್ ಸ್ಫೋಟದ ಆರೋಪಿಗಳನ್ನು ರಕ್ಷಣೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತುಕೊಂಡಿರುವ ಶರದ್ ಪವಾರ್ ಅವರು ಕೂಡ ಈ ಇಂಡಿಯಾ ಮೈತ್ರಿಕೂಟದ ಭಾಗ. ಇಂತವರೇ ಇರುವ ಮೈತ್ರಿಕೂಟ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ.
Leave A Reply