• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜೈಲಿನೊಳಗೆ ಕುಳಿತೇ ಉಗ್ರ ಕೃತ್ಯಕ್ಕೆ ಮೈಂಡ್!

Hanumantha Kamath Posted On July 22, 2023


  • Share On Facebook
  • Tweet It

ಜೈಲಿನಲ್ಲಿ ಕೆಲವು ದಿನಗಳು ಇದ್ದು, ಹೊರಗೆ ಬರುವ ಆರೋಪಿಗಳ ಮೇಲೆ ಪೊಲೀಸರು ಯಾವತ್ತೂ ಒಂದು ಕಣ್ಣು ಇಡಬೇಕಾದ ಅವಶ್ಯಕತೆ ಇದೆ. ಯಾಕೆಂದರೆ ಒಂದು ಕಾಲದಲ್ಲಿ ಉತ್ತಮ ಜೈಲರ್ ಗಳಿಂದ ಮನಪರಿವರ್ತನೆಯ ಕೇಂದ್ರಗಳಾಗಿದ್ದ ಜೈಲುಗಳು ಇತ್ತೀಚೆಗೆ ಭಯೋತ್ಪಾದನಾ ತರಬೇತಿ ಕೇಂದ್ರಗಳಾಗಿ ಬದಲಾವಣೆಯಾಗುತ್ತಿರುವುದಕ್ಕೆ ಈಗ ಬಂಧಿತರಾಗಿರುವ ಕೆಲವು ಶಂಕಿತ ಭಯೋತ್ಪಾದಕರೇ ಕಾರಣ. ಬೆಂಗಳೂರಿನ ಸಿಸಿಬಿ ಪೊಲೀಸರು ರಾಜ್ಯವನ್ನೇ ನಡುಗಿಸಬಹುದಾಗಿದ್ದ ಬೃಹತ್ ಸ್ಫೋಟದ ಸಂಚೊಂದನ್ನು ವಿಫಲಗೊಳಿಸಿದ ಬಳಿಕ ಬೆಂಗಳೂರು ಜೈಲಿನ ಕಥೆ ಹೊರಗಿನ ಪ್ರಪಂಚಕ್ಕೆ ಗೊತ್ತಾಗುತ್ತಿದೆ. ಈಗ ಬಂಧಿತರಾದವರು ಶಂಕಿತ ಭಯೋತ್ಪಾದಕರು ಎಂದು ಹೇಳಲು ಆಗುವುದಿಲ್ಲ, ಆ ಬಗ್ಗೆ ತನಿಖೆಯಾಗಬೇಕು ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಆದರೆ ಬಂಧಿತರು ವಾಸವಿದ್ದ ಮನೆಗಳಲ್ಲಿ, ಅಡಗುದಾಣಗಳಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪೆನಿಯ ಸಿಮ್ ಗಳು, ಲ್ಯಾಪ್ ಟಾಪ್ ಲಭ್ಯವಾಗಿದೆ. ಅದರೊಂದಿಗೆ ಜೀವಂತ ಗ್ರೆನೇಡ್ ಗಳು ಪತ್ತೆಯಾಗಿರುವುದು ಮುಂದಿನ ದಿನಗಳಲ್ಲಿ ದೇಶದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಈ ಬಂಧಿತರು ಎಂತಹ ಕೃತ್ಯ ಮಾಡಲು ತಯಾರಿ ನಡೆಸಿದ್ದರು ಎನ್ನುವುದರ ಸಣ್ಣ ಅಂದಾಜು ಈಗ ತಿಳಿಯುತ್ತಿದೆ.

ಬೆಂಗಳೂರಿಗೆ ಇದು ಡೆಂಜರ್ ಅಲಾರಂ!

ಪೊಲೀಸರ ಮಾಹಿತಿ ಪ್ರಕಾರ ವಶಕ್ಕೆ ಪಡೆದ ಎಲ್ಲಾ ಶಂಕಿತರು ಬೆಂಗಳೂರು ಮೂಲದವರೇ ಆಗಿದ್ದಾರೆ. ಅದರೊಂದಿಗೆ ರೌಡಿ ಶೀಟರ್ ಕೂಡ ಆಗಿದ್ದ ಕಾರಣ ಜೈಲಿನೊಳಗೆ ಕೂಡ ಕೆಲವು ಕಾಲ ಇದ್ದರು. ಆಗ ಬೆಂಗಳೂರು ಸರಣಿ ಸ್ಫೋಟದ ರೂವಾರಿ ನಜೀರ್ ಜತೆ ಸಂಪರ್ಕ ಹೊಂದಿರುವುದು ಈಗ ಬಯಲಿಗೆ ಬಂದಿದೆ. ನಜೀರ್ 2008 ರಿಂದ ಬೆಂಗಳೂರು ಜೈಲಿನಲ್ಲಿ ಇದ್ದಾನೆ. ಈಗ ಬಂಧಿತರು 2017 ರಲ್ಲಿ ಆರ್ ಟಿ ನಗರದಲ್ಲಿ ನಡೆದ ನೂರ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಅಷ್ಟಕ್ಕೂ ನಜೀರ್ ಮಾರ್ಗದರ್ಶನದಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿ ಈಗ ಬಂಧಿತರಾದವರು ಬೆಂಗಳೂರಿನ ಆರ್ ಟಿ ನಗರದಲ್ಲಿ ದುಷ್ಟ ಕೃತ್ಯಗಳನ್ನು ನಡೆಸುತ್ತಿದ್ದರು. ಸಣ್ಣಪುಟ್ಟ ಕ್ರೈಂ ನಡೆಸಿ ಸಿಗುವ ಲಾಭಕ್ಕಿಂತ ಒಂದು ದೊಡ್ಡ ಕೃತ್ಯಕ್ಕೆ ಕೈ ಹಾಕಿದರೆ ಅದರಿಂದ ದೊಡ್ಡ ಗಂಟು ಹೊಡೆಯಬಹುದು ಎಂದು ಪ್ಲಾನ್ ಮಾಡಿದರು. ಅದರೊಂದಿಗೆ ಬಾಂಬ್ ಸ್ಫೋಟ ನಡೆಸಿ ಅದರಿಂದ ಸಾಕಷ್ಟು ಜನರ ಪ್ರಾಣ ಕೂಡ ಹೋಗುವುದರಿಂದ ತಮಗೆ ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರೆ ಎನ್ನುವ ಆಸೆಯನ್ನು ಜುನೈದ್ ಹುಟ್ಟಿಸಿರಬಹುದು.
ಇನ್ನು ಇಂತವರ ಬಂಧನವಾಗುತ್ತಲೇ ಯಥಾವತ್ತಾಗಿ ಇವರ ಮನೆಯವರು, ಪೋಷಕರು ನಮ್ಮ ಮಗ ಇಂತವನಲ್ಲ ಎಂದು ಪ್ರತಿ ಶಂಕಿತ ಉಗ್ರನ ಮನೆಯವರು ಹೇಳುವುದನ್ನೇ ಹೇಳಿದ್ದಾರೆ. ಇನ್ನು ಆರಂಭದಲ್ಲಿ ಈ ಶಂಕಿತ ಉಗ್ರರ ಬಂಧನವಾಗುತ್ತಲೇ ಮಾಧ್ಯಮಗಳು ಕೂಡ ಅವರ ಮನೆಯ ವಿಳಾಸಗಳನ್ನು ಹೇಳುತ್ತಿದ್ದವರು ನಂತರ ಅದನ್ನು ತೋರಿಸುವುದನ್ನು ನಿಲ್ಲಿಸಿದ್ದಾರೆ. ಅದೇನೆ ಇರಲಿ, ಈಗ ಬಂಧನವಾದವರ ಸಂಪೂರ್ಣ ಪೂರ್ವಾಪರ ಇತಿಹಾಸವನ್ನು ಪೊಲೀಸರು ಕಲೆ ಹಾಕಬೇಕು. ಯಾಕೆಂದರೆ ಈ ಬಂಧನದೊಂದಿಗೆ ಎಲ್ಲವೂ ಮುಗಿಯುವುದಿಲ್ಲ. ಒಂದೂವರೆ ದಶಕಗಳ ಅವಧಿಯಲ್ಲಿ ಜೈಲಿನಲ್ಲಿ ಕುಳಿತುಕೊಂಡೇ ನಜೀರ್ ಇಂತವರನ್ನು ತನ್ನ ಉದ್ದೇಶ ಸಾಧನೆಗೆ ಬಳಸಿದ್ದಾನೆ ಎಂದರೆ ಅವನು ಇಂತಹ ಇನ್ನೆಷ್ಟು ಜನರಿಗೆ ಹೀಗೆ ತಲೆ ತಿರುಗಿಸಿಲ್ಲ. ಅವನಿಂದ ಬೋಧನೆ ಪಡೆದುಕೊಂಡ ಎಲ್ಲಾ ರೌಡಿ ಶೀಟರ್ ಗಳು ಹೀಗೆ ಆಗುತ್ತಾರೆ ಎಂದಲ್ಲ, ಆದರೆ ನೂರರಲ್ಲಿ ಇಬ್ಬರು ಹೀಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಅದು ಅಮಾಯಕರ ಪ್ರಾಣಕ್ಕೆ ಸಂಚಕಾರ ಎಂದು ಅರ್ಥ.

ಕಾಂಗ್ರೆಸ್ ಪಕ್ಷ “ಬ್ರದರ್” ಗಳ ರಕ್ಷಣೆಗೆ ಬರಲಾರದು!

ಈಗ ಆಗಬೇಕಿರುವುದು ಏನೆಂದರೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅದರ ಮೂಲದ ತನಕ ಹೋಗಲೇಬೇಕಿದೆ. ಬೆಂಗಳೂರು ಜೈಲು ಆಗಾಗ ಕೆಟ್ಟ ವಿಷಯಗಳಿಗೆ ಸುದ್ದಿಯಾಗುತ್ತಲೇ ಇರುತ್ತದೆ. ಹರ್ಷದ ಹತ್ಯಾ ಆರೋಪಿಗಳಿಗೂ ಅಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ ಎನ್ನುವ ಆರೋಪದಿಂದ ಹಿಡಿದು ಐಪಿಎಸ್ ಅಧಿಕಾರಿ ರೂಪಾ ಅವರು ತಮ್ಮ ಮೇಲಾಧಿಕಾರಿಗಳ ವಿರುದ್ಧ ಮಾಡಿರುವ ಆರೋಪಗಳ ತನಕ ಬೆಂಗಳೂರು ಜೈಲು ಕುಖ್ಯಾತಿ ಪಡೆದಿದೆ. ಈಗ ನಜೀರ್ ನಿಂದ ಅದರ ಮತ್ತೊಂದು ಬಂಡವಾಳ ಬಯಲಿಗೆ ಬಂದಿದೆ. ಈ ಬಾರಿ ಕಾಂಗ್ರೆಸ್ ಪಕ್ಷ “ಬ್ರದರ್” ಗಳ ರಕ್ಷಣೆಗೆ ಬರಲಾರದು ಎನ್ನುವುದು ನಿರೀಕ್ಷೆ!!

  • Share On Facebook
  • Tweet It


- Advertisement -


Trending Now
ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
Hanumantha Kamath September 26, 2023
ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
Hanumantha Kamath September 26, 2023
Leave A Reply

  • Recent Posts

    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
  • Popular Posts

    • 1
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • 2
      ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • 3
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 4
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search