ಚೀನಾ ದಾಸ್ಯದಿಂದ ಶ್ರೀಲಂಕಾ ಬಿಡುಗಡೆಗೆ ಮೋದಿ ಮಾಸ್ಟರ್ ಸ್ಟೋಕ್!
ಶ್ರೀಲಂಕಾವನ್ನು ಹಂತಹಂತವಾಗಿ ಕೈವಶಪಡಿಸಿಕೊಂಡು ಅಲ್ಲಿ ಸ್ಥಾನ ಗಟ್ಟಿಗೊಳಿಸಿ ಕದಂಬಬಾಹುಗಳನ್ನು ಬಲಪಡಿಸಿ ಭಾರತದ ಮೇಲೆ ಇನ್ನೊಂದು ಭಾಗದ ಮೇಲೆ ಕಣ್ಗಾವಳು ಇಡುವ ಚೀನಾ ಕುತಂತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಕಪಾಳಮೋಕ್ಷ ಮಾಡಿದ್ದಾರೆ. ನಿಧಾನವಾಗಿ ಚೀನಾ ದಾಸ್ಯದಿಂದ ಶ್ರೀಲಂಕಾವನ್ನು ಬಿಡಿಸಲು ಮೋದಿ ಧೃಡಹೆಜ್ಜೆಗಳನ್ನು ಇಡುತ್ತಿದ್ದಾರೆ. ಅದರ ಮೊದಲ ಹಂತವಾಗಿ ಭಾರತ ಹಾಗೂ ಶ್ರೀಲಂಕಾ ಅನೇಕ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಿಂದ ಎರಡೂ ದೇಶಗಳು ರಸ್ತೆ, ಸೇತುವೆ ಮತ್ತು ತೈಲ ಕೊಳವೆಗಳ ವಿಷಯದಲ್ಲಿ ಪರಸ್ಪರ ಅಭಿವೃದ್ಧಿ ಸಾಧಿಸಲು ಬದ್ಧವಾಗಲಿವೆ. ಭಾರತದ ಯುಪಿಐ ಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಶ್ರೀಲಂಕಾದಲ್ಲಿ ಅಳವಡಿಸಲು ದ್ವೀಪರಾಷ್ಟ್ರ ಸಜ್ಜಾಗಿದೆ. ಭಾರತದ ಕರೆನ್ಸಿಯನ್ನು ಶ್ರೀಲಂಕಾ ಮಾನ್ಯ ಮಾಡಿದೆ. ಇದರಿಂದ ಏನು ಲಾಭ ಎಂದರೆ ಭಾರತೀಯ ನಾಗರಿಕರು ಶ್ರೀಲಂಕಾ ಪ್ರವಾಸದಲ್ಲಿ ಕರೆನ್ಸಿಯನ್ನು ಬಳಸಬಹುದು. ವ್ಯಾಪಾರಿ ಸಂಬಂಧಿತ ವಹಿವಾಟುಗಳಿಗೆ ಭಾರತೀಯ ಕರೆನ್ಸಿ ಶ್ರೀಲಂಕಾದಲ್ಲಿ ಒಪ್ಪಿತವಾಗಲಿದೆ.
ಇದರೊಂದಿಗೆ ಶ್ರೀಲಂಕಾದ ಅಧ್ಯಕ್ಷರೊಂದಿಗೆ ಅದಾನಿ ಸಮೂಹ ಸಂಸ್ಥೆ ಈಗಾಗಲೇ ಪ್ರತ್ಯೇಕ ಮಾತುಕತೆ ನಡೆಸಿದ್ದು, ಕೊಲಂಬೊ ಬಂದರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ನಮ್ಮ ಇಂಧನ ಯೋಜನೆಗಳಿಗೆ ಅದನ್ನು ಸಮರ್ಪಕವಾಗಿ ಬಳಸಲು ಯೋಜನೆ ರೂಪಿಸಲಾಗಿದೆ. ಈ ಎಲ್ಲವೂ ಭಾರತದ ವಿದೇಶಾಂಗ ನೀತಿಯ ಭಾಗವಾಗಿದ್ದು, ಭಾರತದ ಈ ನಡೆಯಿಂದ ಚೀನಾ ಭಾರೀ ಮುಖಭಂಗ ಅನುಭವಿಸಿದೆ. ಇಲ್ಲಿಯ ತನಕ ದಿವಾಳಿಯಾಗಿರುವ ಶ್ರೀಲಂಕಾ ರಾಷ್ಟ್ರಕ್ಕೆ ಸಾಲವನ್ನು ಯಥೇಚ್ಚವಾಗಿ ನೀಡಿ ಅದನ್ನು ಪರೋಕ್ಷವಾಗಿ ತನ್ನ ವಶ ಮಾಡಲು ಯೋಜನೆ ಹಾಕಿಕೊಂಡಿದ್ದ ಚೀನಾಕ್ಕೆ ಮೋದಿ ಸರಿಯಾದ ಏಟನ್ನು ನೀಡಿದ್ದಾರೆ. ಒಂದು ವೇಳೆ ಮೋದಿ ಸ್ಥಾನದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ!!
Leave A Reply