ಮೋದಿಯವರಿಂದಲೂ ಗ್ಯಾರಂಟಿ ಪ್ರಸ್ತಾಪ? ಅವರ ಗ್ಯಾರಂಟಿ ಏನು?

ಮೋದಿಯವರಿಂದಲೂ ಗ್ಯಾರಂಟಿ ಪ್ರಸ್ತಾಪ? ಅವರ ಗ್ಯಾರಂಟಿ ಏನು?
ತಮ್ಮ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ಬಲಿಷ್ಟ ಆರ್ಥಿಕ ರಾಷ್ಟ್ರವಾಗಿ ಬೆಳೆಯಲಿದೆ. ಇದು ನನ್ನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಚಿತ ಗ್ಯಾರಂಟಿ ಘೋಷಣೆಗಳಿಂದ ಜನರು ಕಾಂಗ್ರೆಸ್ಸಿಗೆ ಮತ ಹಾಕಿ ಅಭೂತಪೂರ್ವವಾಗಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. ಆದರೆ ಯಾವುದೇ ಒಂದು ಉಚಿತ ಸೌಲಭ್ಯಗಳು ದೇಶದ, ರಾಜ್ಯದ ಅರ್ಥ ವ್ಯವಸ್ಥೆಗೆ ದೊಡ್ಡ ಮಾರಕ ಎಂದು ಈಗಾಗಲೇ ಅರ್ಥಶಾಸ್ತ್ರಜ್ಞರು ತಮ್ಮ ಅಭಿಮತ ಸೂಚಿಸಿದ್ದಾರೆ. ಆದರೆ ಅಧಿಕಾರಕ್ಕೆ ಏರುವ ಹಪಾಹಪಿಯಿಂದ ಕಾಂಗ್ರೆಸ್ ಕರ್ನಾಟಕದಲ್ಲಿ ಇದ್ದಬದ್ದ ಉಚಿತಗಳನ್ನು ನೀಡಿ ಜನರನ್ನು ಸೆಳೆದಿತ್ತು. ಆದರೆ ಮೋದಿಯವರು ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಮೂರನೇ ಬಲಾಢ್ಯ ದೇಶವಾಗಿ ಬೆಳೆಯಲಿದೆ ಎಂದು ಹೇಳಿರುವುದು ಜನಸಾಮಾನ್ಯರ ದೃಷ್ಟಿಯಲ್ಲಿ ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲದಿದ್ದರೂ ಅಖಂಡ ಭಾರತ ಕಲ್ಪನೆಯಲ್ಲಿ ನೋಡುವಾಗ ದೇಶದ ಉನ್ನತಿ ಇದರಿಂದ ಬೇರೆಯದ್ದೇ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದು ನಿಶ್ಚಿತ.
ಪ್ರಸ್ತುತ ಭಾರತ ದೇಶ ಅಂದಾಜು 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು, 2047 ರಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ನೂರನೇ ವರ್ಷಾಚರಣೆಯನ್ನು ಆಚರಿಸುವಾಗ 30-35 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.
ಈಗ ಭಾರತ ಹೊಂದುತ್ತಿರುವ ಅಭಿವೃದ್ಧಿಯ ಪ್ರಕಾರ 2027 ರಲ್ಲಿ ಜರ್ಮನಿಯನ್ನು ಹಾಗೂ 2029 ರಲ್ಲಿ ಜಪಾನ್ ದೇಶವನ್ನು ಭಾರತ ಹಿಂದಿಕ್ಕಲಿದೆ. 2014 ರಲ್ಲಿ ಭಾರತ ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿತ್ತು. ಕೊರೊನಾದ ಎರಡು ವರ್ಷಗಳ ಭೀಕರ ಹೊಡೆತದ ಬಳಿಕವೂ ಮೋದಿಯವರ ದೂರದೃಷ್ಟಿ ಹಾಗೂ ಮಹತ್ತರ ಹೆಜ್ಜೆಗಳಿಂದ ಭಾರತ ಈಗಾಗಲೇ 5 ಸ್ಥಾನಕ್ಕೆ ತಲುಪಿದ್ದು, ಮೂರನೇ ಸ್ಥಾನಕ್ಕೆ ಹೋಗಲು ಮೋದಿಯವರು ಈಗಾಗಲೇ ಧೃಡ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಕಳೆದ ವರ್ಷ ಭಾರತದ ರಫ್ತು 676 ಬಿಲಿಯನ್ ಡಾಲರ್ ದಾಟಿದ್ದು, ಅದು ಮುಂದಿನ ವರ್ಷ 750 ಬಿಲಿಯನ್ ಡಾಲರ್ ತಲುಪಲಿದೆ. ಭಾರತದ ಯುವಶಕ್ತಿ ಮತ್ತು ಉತ್ಸಾಹಿ ಮಾನವಬಲದ ಮೇಲೆ ಭರವಸೆ ಇಟ್ಟಿರುವ ಕೇಂದ್ರ ಸರಕಾರದ ನೀತಿಗಳಿಂದ ಸದ್ಯ ಇದು ಅಸಾಧ್ಯವಲ್ಲ ಎನ್ನುವುದು ಉದ್ಯಮಿಗಳ ಆಶಯ
Leave A Reply