ಐಟಿಪಿಒ ಕಟ್ಟಡ ಲೋಕಾರ್ಪಣೆ; ಶೃಂಗೇರಿ ಅರ್ಚಕರಿಂದ ವಿಧಿವಿಧಾನ!
ಭಾರತೀಯ ವ್ಯಾಪಾರ ಅಭಿವೃದ್ಧಿ ಸಂಸ್ಥೆ (ಐಟಿಪಿಒ) ಕಟ್ಟಡವನ್ನು ಪುನಶ್ಚೇತನಗೊಳಿಸಲಾಗಿದ್ದು, ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ವಿಧಿವಿಧಾನಗಳ ಪ್ರಕ್ರಿಯೆ ಪೂರ್ಣಗೊಳಿಸಿ ಉದ್ಘಾಟಿಸಿದರು. ಐಇಸಿಸಿ ( ಎಕ್ಸಿಬ್ಲಿಶನ್ ಮತ್ತು ಕನ್ವéೆನ್ಷನ್ ಸೆಂಟರ್) ಇದಕ್ಕಾಗಿ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಇದು ಪ್ರಗತಿ ಮೈದಾನ ಅಭಿವೃದ್ಧಿ ಯೋಜನೆಯ ಅಂಗವಾಗಿದೆ. 2017 ಜನವರಿಯಂದು ಕೇಂದ್ರ ಸರಕಾರ ಇದರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, 2,254 ಕೋಟಿ ರೂಪಾಯಿ ಇದಕ್ಕೆ ಮೀಸಲಿಡಲಾಗಿತ್ತು.
ನವದೆಹಲಿಯಲ್ಲಿರುವ ನೂತನ ಭವ್ಯ ಕಟ್ಟಡ ಸಂಕೀರ್ಣದಲ್ಲಿ ಏಳು ಸಾವಿರ ಜನರು ಕುಳಿತುಕೊಳ್ಳಲು ಅವಕಾಶ ಇದ್ದು, ಹೊಸ ಆಮ್ಪಿ ಥಿಯೇಟರ್ ನಲ್ಲಿ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಬಹುದಾಗಿದ್ದು, ಅಲ್ಲಿ 3000 ಜನರು ಆಸೀನರಾಗಬಹುದಾಗಿದೆ. ಇದೇ ನೂತನ ಸುಂದರ ಕಟ್ಟಡದಲ್ಲಿ ಜಿ-20 ಶೃಂಗ ಸಭೆ ನಡೆಯಲಿದೆ. ಈ ಬಾರಿ ಇದರ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ಈ ಕಟ್ಟಡ ಭಾರತೀಯರ ಹೆಮ್ಮೆಗೆ ಮತ್ತೊಂದು ಗರಿಯಾಗಿದೆ.
ಯಾವುದೇ ನೂತನ ಸರಕಾರಿ ಕಟ್ಟಡಗಳ ನಿರ್ಮಾಣದ ಮೊದಲು ಶಿಲಾನ್ಯಾಸ ಅಥವಾ ಲೋಕಾರ್ಪಣೆ ಸಂದರ್ಭದಲ್ಲಿ ಮೋದಿಯವರು ಸನಾತನ ವೈದಿಕ ವಿಧಾನಗಳನ್ನು ಅನುಸರಿಸಿ ಮುಂದುವರೆಯುತ್ತಾರೆ. ಬಹಳ ವಿಧಿವಿತ್ತಾಗಿ ಪುರೋಹಿತರ ಮಂತ್ರ ಉಚ್ಚಾರಣೆಯ ನಡುವೆ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿ ನೂತನ ಮಠದ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿರುವುದು ತಮಗೆ ಸಂತಸ ತಂದಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. ಚತುರ್ಧಾಮದ ಸಂಸ್ಥಾಪಕರಾಗಿರುವ ಆದಿ ಶಂಕರಾರ್ಚಾಯರು ಸ್ಥಾಪಿಸಿದ ನಾಲ್ಕು ಧಾಮಗಳಲ್ಲಿ ಶೃಂಗೇರಿಯ ಅಮನ್ಯ ಪೀಠವೂ ಒಂದು.
Leave A Reply