ಸುಧಾಮೂರ್ತಿಯವರ ಸ್ಪೂನ್ ಮತ್ತು ಚೇತನ್ ಟೀಕೆ!
ಒಂದೆರಡು ಸಿನೆಮಾಗಳು ಹಿಟ್ ಆದ ಕೂಡಲೇ ಅದರಲ್ಲಿ ಅಭಿನಯಿಸಿದ ವ್ಯಕ್ತಿಗಳು ಹೇಳಿದ್ದು ವೇದವಾಕ್ಯವಾಗುವುದಿಲ್ಲ. ಕನ್ನಡದಲ್ಲಿ ಒಬ್ಬ ನಟ ಚೇತನ್ ಎನ್ನುವ ವ್ಯಕ್ತಿ ಇದ್ದಾರೆ. ಅವರಿಗೆ ಆಗಾಗ ಏನಾದರೂ ಹೇಳಿಕೆ ನೀಡದಿದ್ದರೆ ತಿಂದ ಅನ್ನ ಅರಗುವುದಿಲ್ಲ. ಅವರು ಈಗ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರೂ, ಸ್ನೇಹಮಯಿ ವ್ಯಕ್ತಿತ್ವದ ಸುಧಾಮೂರ್ತಿಯವರನ್ನು ಬ್ರಾಹ್ಮಣ್ಯ ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ ನಿಂದ ಗುರುತಿಸ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಎಂದು ಹೇಳಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸುಧಾಮೂರ್ತಿಯವರು ಯೂಟ್ಯೂಬ್ ಚಾನೆಲ್ ಒಂದರ ಸಂಚಿಕೆಯಲ್ಲಿ “ನಾನೊಬ್ಬಳು ಶುದ್ಧ ಸಸ್ಯಾಹಾರಿ, ಮೊಟ್ಟೆ ಸಹಿತ ಯಾವುದೇ ಮಾಂಸಹಾರ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಸಸ್ಯಹಾರ- ಮಾಂಸಹಾರ ಭಕ್ಷ್ಯಗಳಿಗೆ ಒಂದೇ ಚಮಚಾ ಬಳಸುತ್ತಾರೆಯೇ ಎಂಬ ಆತಂಕ ನನ್ನ ಮನಸ್ಸನ್ನು ಕಾಡುತ್ತದೆ” ಎಂದು ಹೇಳಿದ್ದರು. ” ನಾನು ವಿದೇಶಕ್ಕೆ ಹೋದಾಗ ಅಲ್ಲಿ ಸಸ್ಯಹಾರಿ ರೆಸ್ಟೋರೆಂಟ್ ಗಳನ್ನು ಹುಡುಕುತ್ತೇನೆ. ಮನೆಯ ಊಟವನ್ನೇ ಹೆಚ್ಚು ಇಷ್ಟಪಡುತ್ತೇನೆ. ಪ್ರಯಾಣ ಮಾಡುವಾಗ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತೆಗೆದುಕೊಂಡು ಹೋಗುತ್ತೇನೆ” ಎಂದು ಕೂಡ ಹೇಳಿದ್ದಾರೆ.
ಇದರಲ್ಲಿ ನಟ ಚೇತನ್ ಅವರಿಗೆ ತಪ್ಪು ಕಾಣಿಸಿದೆ. ಅದಕ್ಕಾಗಿ ಸುಧಾಮೂರ್ತಿಯವರನ್ನು ಟೀಕಿಸಿದ್ದಾರೆ. ಇವತ್ತಿಗೂ ಎಷ್ಟೋ ಜನ ಸುಧಾಮೂರ್ತಿಯವರ ಈ ನಿಲುವನ್ನು ಅನುಸರಿಸುತ್ತಿದ್ದಾರೆ. ಗೋಮಾಂಸ ನಮ್ಮ ಆಹಾರ ಪದ್ಧತಿ ಎಂದು ಹೇಳಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ತರುವವರ ಬಗ್ಗೆ ಕೆಲವರಿಗೆ ಏನೂ ಅನಿಸುವುದಿಲ್ಲ. ಅದೇ ಸುಧಾಮೂರ್ತಿಯವರು ತಾವು ಮಾಂಸಹಾರಕ್ಕೆ ಬಳಸಿರಬಹುದಾದ ಸ್ಪೂನ್ ಬಳಸಲು ಬಯಸುವುದಿಲ್ಲ ಎಂದು ಹೇಳಿದ್ದು ಚೇತನ್ ಅಂತವರಿಗೆ ತಪ್ಪು ಎಂದು ಅನಿಸುತ್ತದೆ. ಸುಧಾಮೂರ್ತಿಯವರು ಯಾವತ್ತೂ ಪ್ರಚಾರದ ಹಿಂದೆ ಹೋದವರಲ್ಲ. ಅವರು ಅಸಂಖ್ಯಾತ ಜನರಿಗೆ ತಮ್ಮ ಫೌಂಡೇಶನ್ ಮೂಲಕ ಸಾಕಷ್ಟು ಸಹಾಯ ಹಸ್ತ ಚಾಚಿದ್ದಾರೆ. ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಯೋಗ್ಯ ನೆರವು ನೀಡಿದ್ದಾರೆ. ಅವರ ಒಳ್ಳೆಯ ಕಾರ್ಯಗಳಿಂದ ಪ್ರಚಾರದಲ್ಲಿ ಇದ್ದಾರೆಯೇ ಹೊರತು ಒಂದೆರಡು ಸಿನೆಮಾ ಮಾಡಿ ಅಲ್ಲ ಎಂದು ಚೇತನ್ ತರದವರು ಅಂದುಕೊಳ್ಳಬೇಕಿದೆ.
Leave A Reply