ಇಂತಹ ಕಾಂಗ್ರೆಸ್ ಈಗ “ಇಂಡಿಯಾ” ಭಾಗ!
ಕಾರ್ಗಿಲ್ ವಿಜಯ ಭಾರತದ ಇತಿಹಾಸದಲ್ಲಿ ಅತೀ ದೊಡ್ಡ ವಿಜಯ ಯಾತ್ರೆಗಳಲ್ಲಿ ಪ್ರಮುಖವಾಗಿರುವಂತದ್ದು. ಭಾರತೀಯ ವೀರ ಯೋಧರ ತ್ಯಾಗ, ಬಲಿದಾನದ ಸಂಕೇತವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಕೂಡ ಆಚರಿಸಲಾಗುತ್ತದೆ. ಅಂದು ಭಾರತೀಯರು ಪಕ್ಷಾತೀತವಾಗಿ, ಧರ್ಮಾತೀತವಾಗಿ ಸಂಭ್ರಮಿಸುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 2004 ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಮೈತ್ರಿಕೂಟದ ಕೇಂದ್ರ ಸರಕಾರ ಕಾರ್ಗಿಲ್ ಹೀರೋಗಳನ್ನು ಗೌರವಿಸಿರಲಿಲ್ಲ ಎಂದು ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಫಸ್ಟ್ ಪೋಸ್ಟ್ ಮಾಧ್ಯಮದಲ್ಲಿ 2009 ರಲ್ಲಿ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ನೀಡಿರುವ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಶೀದ್ ಆಲ್ವಿಯವರ ಪ್ರಕಾರ ಕಾರ್ಗಿಲ್ ವಿಜಯವು ಆಚರಿಸುವಂತಲ್ಲ ವಿಷಯ ಅಲ್ಲ, ಹೆಚ್ಚೆಂದರೆ ಎನ್ ಡಿಎ ಮಾತ್ರ ಅದನ್ನು ಸಂಭ್ರಮಿಸಬಹುದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರೂ ಆಗಿದ್ದ ರಶೀದ್ ಆಲ್ವಿಯವರ ಪ್ರಕಾರ ಅದು ಭಾರತೀಯ ಜನತಾ ಪಾರ್ಟಿಯ ವಿಜಯ. ಇದನ್ನು ಎನ್ ಡಿಎ ಸಂಭ್ರಮಿಸಬೇಕೆ ವಿನ: ನಾವೆಲ್ಲಾ ಯಾಕೆ ಸಂಭ್ರಮಿಸಬೇಕು ಎಂದು ಹೇಳಿದ್ದರು. ಇಂತಹ ಮನಸ್ಥಿತಿಯ ಕಾಂಗ್ರೆಸ್ ಪಕ್ಷ ಈಗ ಐ.ಎನ್.ಡಿ.ಐ.ಎ ಎಂಬ ಮೈತ್ರಿಕೂಟ ರಚಿಸಿಕೊಂಡು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ.
ದೇಶದ ವೀರ ಯೋಧರ ಗೆಲುವನ್ನು ಒಂದು ಪಕ್ಷದ ಗೆಲುವು ಮತ್ತು ಅದನ್ನು ನಾವು ಯಾಕೆ ಆಚರಿಸಬೇಕು ಎನ್ನುವ ಸಂಕುಚಿತ ಮನೋಭಾವನೆಯ ಕಾಂಗ್ರೆಸ್ ಮುಖಂಡರು ಈಗ ಇಂಡಿಯಾ ಎನ್ನುವ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಯೋಧರನ್ನು ಯಾವತ್ತೂ ಒಂದು ಪಕ್ಷ ಅಥವಾ ಅಧಿಕಾರದಲ್ಲಿರುವ ಸರಕಾರದ ಭಾಗ ಎಂದು ಅಂದುಕೊಳ್ಳುವುದೇ ತಪ್ಪು. ಹೀಗೆ ನೋಡುವ ಮೂಲಕ ಕಾಂಗ್ರೆಸ್ ಸೈನಿಕರನ್ನು ಅವಮಾನ ಮಾಡಿದೆ ಎಂದೇ ಹೇಳಬೇಕಾಗುತ್ತದೆ. ಯೋಧರು ಯಾವತ್ತೂ ಒಂದು ಸರಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಈ ಹಿಂದೆ ಕೂಡ ಸೈನಿಕರ ಬಗ್ಗೆ ಕಾಂಗ್ರೆಸ್ ಮತ್ತು ಅಂತಹುದೇ ಮನಸ್ಸಿನವರು ತುಚ್ಚವಾಗಿ ಮಾತನಾಡಿದ್ದನ್ನು ಇತಿಹಾಸ ನೋಡಿದೆ. ಯೋಧರಾಗಲು ಸಿದ್ಧರಿರುವವರು ಯಾವತ್ತೂ ಸಂಬಳ, ಭತ್ಯೆಗಾಗಿ ಸೈನ್ಯವನ್ನು ಸೇರುವುದಿಲ್ಲ. ಅವರು ಭಾರತಾಂಬೆಯ ಸೇವೆಗಾಗಿ ತಮ್ಮನ್ನು ಅರ್ಪಿಸಲು ಮುಂದಾಗಿರುತ್ತಾರೆ. ಇಂತವರ ಬಗ್ಗೆ ಮಾತನಾಡುವ ಮೊದಲು ಕಾಂಗ್ರೆಸ್ ಎಚ್ಚರವಹಿಸಬೇಕು.
Leave A Reply