ಮೂಲಭೂತವಾದಿ ಯುವಕರಿಗೆ ಪ್ರೇರಣೆ, ಐಸಿಸ್ ಸಂಪರ್ಕ
ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಪುಣೆಯ ಪ್ರತಿಷ್ಠಿತ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಅದ್ನಾನಳಿ ಸರಕಾರ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಈ ವ್ಯಕ್ತಿಗೆ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಇತ್ತು ಎಂದು ಆರೋಪಿಸಲಾಗಿದೆ. 43 ವರ್ಷದ ವೈದ್ಯನನ್ನು ಆತನ ಮನೆಯಲ್ಲಿ ಕೇಂದ್ರಿಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಕರೆದೊಯ್ದರು.
ಅದಕ್ಕೆ ಮೊದಲು ಡಾ. ಸರಕಾರ್ ನಿವಾಸ ಮತ್ತು ಆತನಿಗೆ ಸಂಬಂಧಪಟ್ಟಿರುವ ಇತರ ಸ್ಥಳಗಳಲ್ಲಿ ದಾಳಿ ಮಾಡಿದ ಎನ್ ಐಎ ಅಧಿಕಾರಿಗಳು ಐಸಿಸ್ ಗೆ ಸಂಬಂಧಪಟ್ಟ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅವನಿಂದ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಐಸಿಸ್ ಜೊತೆ ಸಂಪರ್ಕ ಇಟ್ಟುಕೊಂಡಿರುವುದಕ್ಕೆ ಪೂರಕ ಸಾಕ್ಷ್ಯಿಗಳು ಎನ್ ಐಎಗೆ ದೊರಕಿದೆ. ಈ ವ್ಯಕ್ತಿ ಭಾರತದಲ್ಲಿ ಗುಪ್ತವಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರ ತಂಡಗಳಿಗೆ, ಅಜ್ಞಾತರಾಗಿ ಕೆಲಸ ಮಾಡುತ್ತಿರುವ ಗುಂಪು, ಸಂಘಟನೆಗಳಿಗೆ ನೆರವನ್ನು ನೀಡುತ್ತಿದ್ದ, ಅದೇ ರೀತಿಯಲ್ಲಿ ಇಂತಹ ಸಂಘಟನೆಗಳಿಗೆ ಸೇರಲು ಮೂಲಭೂತವಾದಿ ಯುವಕರಿಗೆ ಪ್ರೇರಣೆ ನೀಡುತ್ತಿದ್ದ ತಿಳಿದುಬಂದಿದೆ. ಹದಿನಾರು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಇರುವ ಸರಕಾರ್ ಮಹಾರಾಷ್ಟ್ರದ ಪುಣೆಯಲ್ಲಿ ಎಂಬಿಬಿಎಸ್ ಹಾಗೂ ಎಂಡಿ ವಿದ್ಯಾಭ್ಯಾಸವನ್ನು ಮುಗಿಸಿದ್ದ.
Leave A Reply