94% ಪ್ರಕರಣಗಳೊಂದಿಗೆ ಪೋರ್ಚುಗಲ್ ಮೊದಲ ಸ್ಥಾನ
ಭಾರತದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ಕಳವಳಕಾರಿ ವಿಷಯವನ್ನು ಮಾಧ್ಯಮಗಳ ಮೂಲಕ ಅರಿತಿದ್ದೇವು. ನಮ್ಮ ಸುತ್ತಮುತ್ತಲಿನಲ್ಲಿ
ಅನೇಕ ದಂಪತಿಗಳು ಡೈವೋಸ್ ಕೇಸಿಗೆ ಅರ್ಜಿ ಹಾಕಿರುವುದು ಮತ್ತು ಕೆಲವರು ವಿಚ್ಚೇದನ ಪಡೆದಿರುವುದನ್ನು ನೋಡಿದಾಗ ಹಿಂದಿನ ಕಾಲಕ್ಕೆ ಹೋಲಿಸಿದಾಗ ಈಗಿನ ದಿನಗಳಲ್ಲಿ ವಿವಾಹ ವಿಚ್ಚೇದನಗಳು ಹೆಚ್ಚಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ವಿಶ್ವ ಅಂಕಿಅಂಶಗಳ ಒಕ್ಕೂಟ ಬಿಡುಗಡೆ ಮಾಡಿರುವ ದಾಖಲೆಯನ್ನು ನೋಡಿದಾಗ ಭಾರತದಲ್ಲಿ ಕೇವಲ ಒಂದು ಶೇಕಡಾ ವಿಚ್ಚೇದನಗಳು ಮಾತ್ರ ಆಗುತ್ತಿರುವುದು ತಿಳಿದುಬಂದಿದೆ. ವಿಚ್ಚೇದನಗಳ ಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದ್ದು, ವಿಚ್ಚೇದನಗಳ ಪಟ್ಟಿಯಲ್ಲಿ 94% ಪ್ರಕರಣಗಳೊಂದಿಗೆ ಪೋರ್ಚುಗಲ್ ಮೊದಲ ಸ್ಥಾನದಲ್ಲಿದೆ.
ಪೋರ್ಚುಗಲ್ ಬಳಿಕ ಸ್ಪೇನ್ ಕೆಳಗಿನಿಂದ ಎರಡನೇ ಸ್ಥಾನದಲ್ಲಿದ್ದು, 85% ಡೈವೋರ್ಸ್ ಪ್ರಕರಣಗಳು ಅಲ್ಲಿ ದಾಖಲಾಗಿವೆ. ಮುಸ್ಲಿಂ ರಾಷ್ಟ್ರವಾಗಿರುವ ಇರಾನ್ ನಲ್ಲಿ 14% ವಿಚ್ಚೇದನಗಳು ನಡೆಯುತ್ತಿದ್ದರೆ, ಮುಂದುವರೆದ ರಾಷ್ಟ್ರ ರಶ್ಯಾದಲ್ಲಿ 73% ವಿಚ್ಚೇದನಗಳು ನಡೆಯುತ್ತಿವೆ.
Leave A Reply