ಭಾರತದ 5 ರೂ ಕಾಯಿನಿಂದ ಬಾಂಗ್ಲಾದಲ್ಲಿ 6 ಬ್ಲೇಡ್ ತಯಾರಿ!
ನಿಮ್ಮಲ್ಲಿ ಐದು ರೂಪಾಯಿ ನಾಣ್ಯ ಇದೆಯಾ? ಅದು ತುಂಬಾ ದಪ್ಪ ಇದೆಯಾ? ಹಾಗಾದರೆ ಅದು ಕೆಲವೇ ದಿನಗಳಲ್ಲಿ ಮಾಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ನೀವು ಅಂತಹ ದಪ್ಪ ಆಕಾರದ ಐದು ರೂಪಾಯಿ ನಾಣ್ಯಗಳನ್ನು ಬಹಳ ಅಪರೂಪವಾಗಿ ನೋಡಿರಬಹುದು. ಆದರ ಅರ್ಥ ಭಾರತ ಸರಕಾರ ಎರಡು ಸಾವಿರ ರೂಪಾಯಿಯಂತೆ ಅದನ್ನು ಕೂಡ ಹಿಂದಕ್ಕೆ ಪಡೆದುಕೊಂಡಿರಬಹುದಾ ಎಂದು ನಿಮಗೆ ಅನಿಸಬಹುದು. ಇಲ್ಲಿ ಇರುವ ವಿಷಯ ಏನಪ್ಪ ಎಂದರೆ ಭಾರತದ ದಪ್ಪ ಐದು ರೂಪಾಯಿ ನಾಣ್ಯಗಳನ್ನು ಇಲ್ಲಿಂದ ಬಾಂಗ್ಲಾ ದೇಶಕ್ಕೆ ಸ್ಮಂಗಲ್ ಮಾಡಲಾಗುತ್ತಿತ್ತು. ಅದಕ್ಕೆ ಕಾರಣ ಬ್ಲೇಡ್ ಗಳ ತಯಾರಿಕೆ. ಬ್ಲೇಡ್ ಗಳಿಗೆ ಬಳಕೆಯಾಗುವ ಕಾರ್ಬನ್ ಸ್ಟೀಲ್ ಕಚ್ಚಾ ವಸ್ತುಗಳು ಬಾಂಗ್ಲಾ ದೇಶದಲ್ಲಿ ಬಹಳ ದುಬಾರಿಯಾಗಿದೆ. ಅದಕ್ಕಾಗಿ ಬಾಂಗ್ಲಾದ ಬ್ಲೇಡ್ ತಯಾರಕರು ನಮ್ಮ ದೇಶದ ಐದು ರೂಪಾಯಿ ಕಾಯಿನ್ ಗಳನ್ನು ತಮ್ಮ ದೇಶಕ್ಕೆ ಕಳ್ಳ ಸಾಗಾಣಿಕೆ ಮೂಲಕ ತರಿಸಿಕೊಳ್ಳುತ್ತಿದ್ದರು. ಒಂದೊಂದು ಕಾಯಿನ್ ನಿಂದ ತಲಾ ಆರು ಬ್ಲೇಡ್ ಗಳನ್ನು ಉತ್ಪಾದಿಸಿ ತಲಾ ಬ್ಲೇಡ್ ಗಳನ್ನು 2 ರೂಪಾಯಿಗಳಿಗೆ ಮಾರಲಾಗುತ್ತಿತ್ತು. ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಈ ಕಳ್ಳ ಸ್ಮಂಗ್ಲಿಂಗ್ ಜೋರಾಗಿ ನಡೆಯುತ್ತಿತ್ತು. ಇದು ಭಾರತ ಸರಕಾರಕ್ಕೆ ತಿಳಿದ ಕೂಡಲೇ ನಮ್ಮ ದೇಶದಲ್ಲಿ ಹೊಸ ಐದು ರೂಪಾಯಿ ನಾಣ್ಯಗಳನ್ನು ತಯಾರಿಸುವ ಪ್ರಕ್ರಿಯೆ ಶುರುವಾಯಿತು. ಹೊಸ ಐದು ರೂಪಾಯಿ ನಾಣ್ಯವನ್ನು ಹೇಗೆ ತಯಾರಿಸಲಾಗಿದೆ ಎಂದರೆ ಅದನ್ನು ಯಾವುದೇ ಕಾರಣಕ್ಕೂ ಕರಗಿಸಿ ಬೇರೆ ವಸ್ತುಗಳನ್ನು ತಯಾರಿಸಲು ಆಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹೊಸ ಐದು ರೂಪಾಯಿ ನಾಣ್ಯವನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಕರೆ ನೀಡಿದೆ.
Leave A Reply