ಪುರುಷ ಸಂಗಾತಿರಹಿತವಾಗಿ 4314 ಮಹಿಳೆಯರ ಹಜ್ ಯಾತ್ರೆ!
ಹಜ್ ಯಾತ್ರೆಯಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ದೆಹಲಿ ಹಜ್ ಕಮಿಟಿ ಮುಖ್ಯಸ್ಥೆ ಕೌಸರ್ ಜಹಾನ್ ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಶ್ಲಾಘಿಸಿದ್ದಾರೆ. ಹಿಂದೆ ಹಜ್ ಯಾತ್ರೆಯನ್ನು ಕೈಗೊಳ್ಳುವ ಮಹಿಳೆಯ ಜೊತೆ ಯಾರಾದರೂ ಪುರುಷ ಸಂಬಂಧಿ ಇರಲೇಬೇಕಾಗಿತ್ತು. ಅದು ಪತಿ, ತಂದೆ, ಸಹೋದರ, ಸೋದರ ಸಂಬಂಧಿ ಯಾರಾದರೂ ಆಗಬಹುದಾಗಿತ್ತು. ಆದರೆ 2018 ರಲ್ಲಿ ಮೋದಿ ಸರಕಾರ ಈ ನಿಯಮವನ್ನು ತೆಗೆದುಹಾಕಿತ್ತು. ಅದರ ಬಳಿಕ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಹಜ್ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. 2018 ರಿಂದ 2022 ರ ಅವಧಿಯಲ್ಲಿ ಹೀಗೆ 3400 ಮಹಿಳೆಯರು ಸ್ವತಂತ್ರವಾಗಿ ಪುರುಷ ಸಂಗಾತಿರಹಿತವಾಗಿ ಭಾರತದಿಂದ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ, 2023 ರಲ್ಲಿ 4314 ಮಹಿಳೆಯರು ಹಜ್ ಯಾತ್ರೆಯನ್ನು ಮುಗಿಸಿದ್ದಾರೆ.
ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದ್ದು, ಇದು ನಿಜವಾದ ಮಹಿಳಾ ಸಬಲೀಕರಣ ಎಂದು ವ್ಯಾಖ್ಯಾನಿಸಲಾಗಿದೆ. ಭಾರತೀಯ ಮಹಿಳೆಯರಿಗೆ ವಿದೇಶದಲ್ಲಿ ಸಿಗುವ ಪ್ರಾತಿನಿಧ್ಯದ ದ್ಯೋತಕವಾಗಿ ಈ ಬೆಳವಣಿಗೆ ನಡೆದಿದ್ದು, ಮೋದಿಯವರು ಯಾವಾಗಲೂ ಮಹಿಳಾ ಸಶಕ್ತಿಕರಣದ ಚಿಂತನೆಯನ್ನು ಮಾಡಿ ಅದನ್ನು ಸಮರ್ಪಕವಾಗಿ ಕಾರ್ಯ ರೂಪಕ್ಕೆ ವಿವಿಧ ಆಯಾಮಗಳಿಂದ ಜಾರಿಗೆ ತರುತ್ತಿದ್ದಾರೆ ಎಂದು ಕೌಸರ್ ಜಹಾನ್ ಹೇಳಿದ್ದಾರೆ.
Leave A Reply