ಪೋಲೆಂಡ್ ಮಹಿಳೆಗೆ ಜಾರ್ಖಂಡ್ ಯುವಕನೊಂದಿಗೆ ಲವ್!
ಇತ್ತೀಚೆಗೆ ಪಬ್ಜಿ ಗೆಳೆಯನ ಮೋಹಕ್ಕೆ ಒಳಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಎನ್ನುವ ಯುವತಿ ಭಾರತದ ಯುವಕನನ್ನು ಪ್ರೀತಿಸಿ ಇಲ್ಲಿಯೇ ನೆರವೂರಿದ ಘಟನೆ ನಿಮ್ಮ ನೆನಪಿನಲ್ಲಿರಬಹುದು. ಈಗ ಅಂತಹ ಮತ್ತೊಂದು ಘಟನೆ ನಡೆದಿದೆ. ಆದರೆ ಈ ಬಾರಿ ಬಂದ ಮಹಿಳೆ ಪೋಲೆಂಡಿನವರು. ಹೆಸರು ಬಾರ್ಬರ್ ಪೋಲಾಕ್. ಈಕೆಗೆ ಇನ್ಟಾಗ್ರಾಂನಲ್ಲಿ ಶೋಯಬ್ ಮಲಿಕ್ ಎನ್ನುವ ಜಾರ್ಖಂಡಿನ ಯುವಕನೊಂದಿಗೆ ಗೆಳೆತನವಾಗಿದೆ. ಅದು ಸಹಜವಾಗಿ ಪ್ರೀತಿ, ಪ್ರೇಮಕ್ಕೆ ತಿರುಗಿದೆ. ಬಾರ್ಬರ್ ಸೀದಾ ವಿಮಾನ ಏರಿ ಜಾರ್ಖಂಡಿಗೆ ಬಂದಿದ್ದಾಳೆ. ಟೂರಿಸ್ಟ್ ವೀಸಾದಲ್ಲಿ ಬಂದಿರುವ ಈಕೆಗೆ ಆರು ವರ್ಷದ ಮಗಳಿದ್ದಾಳೆ. ಸದ್ಯ ಶೋಯಿಬ್ ಸಹಿತ ಮೂವರು ಜಾರ್ಖಂಡಿನ ಹಜಾರಿಬಾಗಿನಲ್ಲಿ ವಾಸವಾಗಿದ್ದಾರೆ. 2027 ರ ತನಕ ಬಾರ್ಬರ್ ಅವರ ಟೂರಿಸ್ಟ್ ವೀಸಾ ಊರ್ಜಿತದಲ್ಲಿರುತ್ತದೆ. ಮಹಿಳೆಯ ಮಗಳು ಅನನ್ಯ ಈಗ ಶೋಯಬ್ ಮಲಿಕ್ ಅವರನ್ನು ತಂದೆ ಎಂದು ಕರೆಯುತ್ತಿದ್ದಾಳೆ. ಸದ್ಯ 49 ವರ್ಷದ ಬಾರ್ಬರ್ ಹಾಗೂ 35 ವರ್ಷದ ಶೋಯಿಬ್ ಮದುವೆಯಾಗಲು ನಿರ್ಧರಿಸಿದ್ದಾರೆ. ಪ್ರೀತಿಗೆ ವಯಸ್ಸು, ಊರಿನ ಹಂಗಿರುವುದಿಲ್ಲ ಎನ್ನುವುದೇ ಇದಕ್ಕೆ ಅಲ್ಲವೇ
Leave A Reply