• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಉಸ್ತುವಾರಿ ಸಚಿವರು ತನಿಖೆ ನಡೆಸಲಿ!

Hanumantha Kamath Posted On August 3, 2023


  • Share On Facebook
  • Tweet It

ಕರ್ನಾಟಕ ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕ ತಮ್ಮ ಇಲಾಖೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದ್ಯ ಯೋಚಿಸುವಷ್ಟು ಅವರಿಗೆ ಸಮಯ ಸಿಕ್ಕಿಲ್ಲ. ಸಮನ್ವಯತೆಯ ಕೊರತೆಯಂತೂ ಯಾವ ಮಟ್ಟದಲ್ಲಿ ಇದೆ ಎಂದರೆ ವರ್ಗಾವಣೆಯ ಆರೋಪಗಳು, ಹಿರಿಯ ಶಾಸಕರ ಅಸಮಾಧಾನ, ಗ್ಯಾರಂಟಿಯ ರಗಳೆ, ಲೋಕಸಭಾ ಚುನಾವಣೆಯ ಸವಾಲು ಸಹಿತ ಒಂದಲ್ಲ ಒಂದು ಕಿರಿಕ್ ನಡುವೆ ಅಭಿವೃದ್ಧಿಯ ವಿಷಯ ಸದ್ಯಕ್ಕೆ ಬ್ಯಾಕ್ ಸೀಟಿಗೆ ಹೋಗಿಬಿಟ್ಟಿದೆ. ಇಲ್ಲದೆ ಹೋದರೆ ಸ್ಮಾರ್ಟ್ ಸಿಟಿಯ ವಿಷಯದಲ್ಲಿ ಇಬ್ಬರು ಸಚಿವರು ಎರಡು ರೀತಿಯ ಹೇಳಿಕೆಗಳನ್ನು ಸದನದ ಒಳಗೊಂದು ಹೊರಗೊಂದು ಕೊಡುತ್ತಿರಲಿಲ್ಲ ಎನ್ನುವುದು ಪಕ್ಕಾ. ನಗರಾಭಿವೃದ್ಧಿ ಸಚಿವರಾಗಿರುವ ಬೈರತಿ ಸುರೇಶ್ ಅವರು ಸದನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರ ಪ್ರಶ್ನೆಗೆ ಸ್ಮಾರ್ಟ್ ಸಿಟಿಯ ವಿಷಯದಲ್ಲಿ ಏನೂ ದೂರುಗಳು ಬಂದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು. ಸಚಿವರು ಸದನದಲ್ಲಿ ಒಂದು ಹೇಳಿಕೆಯನ್ನು ನೀಡಿದರೆ ಅದಕ್ಕೆ ಪ್ರತ್ಯೇಕವಾದ ತೂಕ ಇರುತ್ತದೆ. ಅದೇ ಸರಕಾರದ ಇನ್ನೊಬ್ಬ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರು ಮಂಗಳೂರಿಗೆ ಬಂದಾಗ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ತುಂಬಾ ದೂರುಗಳು ಇವೆ ಎಂದು ಹೇಳಿದ್ದಾರೆ. ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ, ತುಂಬಾ ನಿಧಾನವಾಗಿ ಕಾಮಗಾರಿಗಳು ನಡೆಯುತ್ತವೆ ಎಂದು ಕಂಪ್ಲೇಂಟ್ ಬಂದಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಹಾಗಾದರೆ ಒಂದೇ ಸರಕಾರದ ಇಬ್ಬರು ಸಚಿವರ ಹೇಳಿಕೆಯಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ನಾನೇ ದೂರು ಕೊಟ್ಟಿದ್ದೇನೆ!

ಸದನದಲ್ಲಿ ನಗರಾಭಿವೃದ್ಧಿ ಸಚಿವರು ಹೇಳಿದ್ದರಲ್ಲಿ ತಪ್ಪಿದೆ ಎನ್ನುವುದು ಮೇಲ್ನೋಟಕ್ಕೆ ಯಾರೂ ಬೇಕಾದರೂ ಅಂದಾಜಿಸಬಹುದು. ಬಹುಶ: ಅವರಿಗೆ ಬಂದಿರುವ ಮಾಹಿತಿಯಲ್ಲಿ ಕೊರತೆ ಇರಬಹುದು. ಎಲ್ಲಿಯಾದರೂ ಮಂಗಳೂರಿನ ಸ್ಥಳೀಯ ಮಟ್ಟದಲ್ಲಿ ನೀಡಿರುವ ದೂರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ತನಕ ತಲುಪದೇ ಇರಬಹುದು. ಇನ್ನು ಹಿಂದಿನ ಉಸ್ತುವಾರಿ ಸಚಿವರಿಗೆ ದೂರು ಕೊಟ್ಟಿರುವುದನ್ನು ಇವರಿಗೆ ಅಧಿಕಾರಿಗಳು ಅಪ್ ಡೇಟ್ ಮಾಡದೇ ಇರಬಹುದು. ಯಾಕೆಂದರೆ ಹಿಂದಿನ ಉಸ್ತುವಾರಿ ಸಚಿವರಿಗೆ, ಅಧಿಕಾರಿಗಳಿಗೆ ನಾನೇ ಸ್ವತ: ದೂರು ಕೊಟ್ಟಿದ್ದೇನೆ. ಆದ್ದರಿಂದ ದೂರೇ ಇಲ್ಲ ಎಂದು ಹೇಳುವುದು ಸರಿಯಲ್ಲ. ಇನ್ನು ನೂತನ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರು ಅನೇಕ ದೂರುಗಳು ಬಂದಿವೆ ಎಂದು ಹೇಳಿರುವುದರಿಂದ ಇವರಿಗೆ ಬಂದಿರುವ ಹೊಸ ದೂರುಗಳು ಯಾವುದು ಅಥವಾ ಹಳೇ ದೂರುಗಳನ್ನೇ ಇವರು ಉಲ್ಲೇಖಿಸಿ ಹೇಳುತ್ತಿದ್ದಾರಾ? ಬಂದರೆ ಆ ದೂರನ್ನು ಇವರು ಪರಿಶೀಲಿಸಿದ್ದಾರಾ ಅಥವಾ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರಾ ಎನ್ನುವುದನ್ನು ನೋಡಬೇಕಾಗಿದೆ.
ನರೇಂದ್ರ ಮೋದಿಯವರ ಕನಸಿನ ಕೂಸು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನಪ್ರತಿನಿಧಿಗಳ ಭಾಗಿದಾರಿಕೆಯಿಂದ ಅದರಲ್ಲಿ ರಾಜಕೀಯ ಹಸ್ತಕ್ಷೇಪಗಳು ನಡೆಯುತ್ತವೆ ಎನ್ನುವ ಕಾರಣಕ್ಕೆ ಅಧಿಕಾರಿಗಳ ಕೈಯಲ್ಲಿ ಅದರ ಜುಟ್ಟನ್ನು ಆರಂಭದಿಂದಲೇ ನೀಡಲಾಗಿತ್ತು. ಅದಕ್ಕಾಗಿ ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಮಾತ್ರ ಇದರಲ್ಲಿ ವಿಶೇಷವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಆದ ನಂತರ ಪೂರ್ಣಾವಧಿಯಾಗಿ ಯಾವ ಐಎಎಸ್ ಅಧಿಕಾರಿಗಳು ಕೂಡ ಇಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿಲ್ಲ.

ದಿನೇಶ್ ಗುಂಡೂರಾವ್ ಸೂಕ್ತ ತನಿಖೆ ನಡೆಸಲಿ!

ಇಲ್ಲಿಯ ತನಕ ಬಂದವರು ಕೇವಲ ಕೆಎಎಸ್ ಶ್ರೇಣಿಯ ಅಧಿಕಾರಿಗಳು ಮಾತ್ರ. ಶ್ರೇಣಿ ಯಾವುದೇ ಇರಲಿ, ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಮರ್ಪಕವಾದ ಇಚ್ಚಾಶಕ್ತಿ ಬೇಕು. ದೂರದೃಷ್ಟಿ ಬೇಕು. ಆದರೆ ಅದ್ಯಾವುದೂ ಇಲ್ಲದೆ ಇರುವುದರಿಂದ ಕಾಮಗಾರಿಗಳು ಕುಂಟುತ್ತಾ, ತೆವಳುತ್ತಾ ಸಾಗುತ್ತಿವೆ. ಈಗ ಹೊಸ ಉಸ್ತುವಾರಿ ಸಚಿವರು ಬಂದಿರುವುದರಿಂದ ಮತ್ತು ತಮಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ದೂರುಗಳು ಬಂದಿವೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿರುವುದರಿಂದ ಅವರು ಅದರ ಪರಿಶೀಲನೆಗೆ ಮುಂದಾಗಬೇಕು. ಎಲ್ಲಿಯಾದರೂ ಕಳಪೆ ಕಾಮಗಾರಿ ಆಗುತ್ತಿದ್ದರೆ ಅದನ್ನು ಟೆಸ್ಟ್ ಮಾಡಲಿ, ಎಲ್ಲಿಯಾದರೂ ಸಮರ್ಪಕ ಪ್ಲಾನ್ ಇಲ್ಲದೇ ಇದ್ದರೆ ಅದನ್ನು ಅಧಿಕಾರಿಗಳಿಗೆ ತಿಳಿಸಿ ಸರಿ ಮಾಡಿಸಲಿ, ಮಂಗಳೂರಿನಲ್ಲಿ ಹೆಚ್ಚೆಚ್ಚು ಸ್ಮಾರ್ಟ್ ಸಿಟಿಯ ಯೋಜನೆಗಳು ನಡೆದು ನಗರ ಅಭಿವೃದ್ಧಿಯಾಗಲು ತಮ್ಮ ಕೊಡುಗೆನೂ ಕೊಡಲಿ. ಅದು ಬಿಟ್ಟು ಫ್ರೀ ಇದ್ದಾಗ ಬಂದು ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಏನೋ ಗಾಳಿಯಲ್ಲಿ ಹೇಳಿಕೆ ಕೊಟ್ಟು ಹೋಗುವುದರಿಂದ ಮಂಗಳೂರಿಗೆ ಏನೂ ಪ್ರಯೋಜನವಿಲ್ಲ!!

  • Share On Facebook
  • Tweet It


- Advertisement -


Trending Now
ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
Hanumantha Kamath September 26, 2023
ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
Hanumantha Kamath September 26, 2023
Leave A Reply

  • Recent Posts

    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
  • Popular Posts

    • 1
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • 2
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • 3
      ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • 4
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 5
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search