ಹಾಲಿನ ವಿಷಯದಲ್ಲಿ ಇನ್ನೊಂದು ಶಾಕ್!
Posted On August 3, 2023

ಒಂದು ಕಡೆ ಹಾಲಿನ ದರ ಲೀಟರಿಗೆ ಮೂರು ರೂಪಾಯಿ ಹೆಚ್ಚಿಸಿರುವ ರಾಜ್ಯ ಸರಕಾರ ಇನ್ನೊಂದೆಡೆ ಹಾಲಿನ ಪ್ರಮಾಣದಲ್ಲಿಯೂ ಕಡಿಮೆ ಮಾಡಿ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ. ನೀವು ಅರ್ಧ ಲೀಟರ್ ನಂದಿನಿ ಹಾಲಿನ ಪ್ಯಾಕೇಟನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಹಾಲಿನ ಪ್ರಮಾಣ 450 ಎಂಎಲ್ ಎಂದು ನಮೂದಿಸಿರುವುದು ತಿಳಿಯುತ್ತದೆ. ಅದರ ಅರ್ಥ ನಿಮಗೆ ಹಾಲು ಕೂಡ ಪೂರ್ತಿಯಾಗಿ ಅರ್ಧ ಲೀಟರ್ ಸಿಗುತ್ತಿಲ್ಲ. ಹಾಲಿನ ದರ ಹೆಚ್ಚಳ ಮಾಡುವಾಗ ಅದರ ಪೂರ್ಣ ಪ್ರಯೋಜನವನ್ನು ಹೈನುಗಾರರಿಗೆ ನೀಡುವುದಾಗಿ ಹೇಳಿ ಗ್ರಾಹಕರ ಆಕ್ರೋಶವನ್ನು ತಣಿಸಿದ ರಾಜ್ಯ ಸರಕಾರ ಈ ರೀತಿಯಲ್ಲಿ ಹಾಲನ್ನು ಕಡಿಮೆ ಮಾಡಿ ನೀಡುತ್ತಿರುವುದನ್ನು ನೋಡಿ ಜನರು ಅಸಮಾಧಾನಗೊಂಡಿದ್ದಾರೆ. ಬೆಲೆಯನ್ನು ಹೆಚ್ಚಿಸುವುದು ಮತ್ತು ತೂಕದಲ್ಲಿಯೂ ಕಡಿಮೆ ನೀಡುವ ಮೂಲಕ ರಾಜ್ಯ ಸರಕಾರದ ಈ ಧೋರಣೆಯ ಬಗ್ಗೆ ಸಾರ್ವಜನಿಕರು ಅಸಹ್ಯ ವ್ಯಕ್ತಪಡಿಸಿದ್ದಾರೆ.
- Advertisement -
Trending Now
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
September 29, 2023
Leave A Reply