ಉತ್ಖನನ ಇಲ್ಲದೇ ಸರ್ವೆಗೆ ಅನುಮತಿ
ಎರಡು ಮಹತ್ವದ ಆದೇಶಗಳನ್ನು ಅಗಸ್ಟ್ 4 ರಂದು ಸುಪ್ರೀಂಕೋರ್ಟ್ ನೀಡಿದೆ. ಒಂದನೇಯದಾಗಿ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶೀ ವಿಶ್ವನಾಥ ದೇವಸ್ಥಾನಕ್ಕೆ ತಾಗಿಕೊಂಡಿರುವ ಗ್ಯಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೆ ನಡೆಸಲು ಸುಪ್ರೀಂಕೋರ್ಟ್ ರಾಷ್ಟ್ರದ ಪುರಾತತ್ವ ಇಲಾಖೆಗೆ ತಡೆ ನೀಡಿಲ್ಲ. ಈ ಬಗ್ಗೆ ಹೇಳಿರುವ ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ವೈಜ್ಞಾನಿಕ ಸರ್ವೆಗೆ ಅನುಮತಿ ನೀಡಲಾಗಿದೆ. ಆದರೆ ನಾವು ಅದನ್ನು ಇನ್ನು ತಡೆಯಲು ಹೋಗುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಆ ಪ್ರದೇಶದಲ್ಲಿ ಉತ್ಖನನ ಮಾಡುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡುವುದಿದ್ದರೂ ಮತ್ತೆ ನ್ಯಾಯಾಲಯದಿಂದ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಹೇಳಿದೆ. ಇನ್ನು ವೈಜ್ಞಾನಿಕ ಸರ್ವೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದೆ. ಈ ಸರ್ವೆಗೆ ಅನುಮತಿ ನೀಡಬಾರದು ಎಂದು ಮುಸ್ಲಿಂ ನಿಯೋಗ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿತ್ತು. ಆದರೆ ಗ್ಯಾನವಾಪಿ ಮಸೀದಿಯ ಯಾವುದೇ ಏರಿಯಾ ಅಥವಾ ಗೋಡೆ ಸಹಿತ ಯಾವುದೇ ವಸ್ತುವಿಗೂ ಹಾನಿಯಾಗದಂತೆ ಸರ್ವೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಮೂಲಕ ಹಿಂದೂ ಆಸ್ತಿಕ ಬಾಂಧವರ ಬಹುದಿನಗಳ ಕನಸು ನನಸಾಗಿದೆ. ಅಷ್ಟಕ್ಕೂ ವೈಜ್ಞಾನಿಕ ಸರ್ವೆ ನಡೆಸುವುದನ್ನು ಮುಸ್ಲಿಂ ಬಾಂಧವರು ವಿರೋಧಿಸುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಇದರಿಂದ ಗ್ಯಾನವಾಪಿಯ ಮೂಲ ಅಸ್ತಿತ್ವಕ್ಕೆ ಯಾವ ದಕ್ಕೆಯೂ ಬರುವುದಿಲ್ಲ. ಅವರ ವಿಶ್ವಾಸಕ್ಕೂ ಎಲ್ಲಿಯೂ ತೊಂದರೆ ಆಗುವುದಿಲ್ಲ. ವೈಜ್ಞಾನಿಕವಾಗಿ ಮಾತ್ರ ಇಲ್ಲಿ ಸರ್ವೆ ನಡೆಯುತ್ತದೆ. ಆ ಸರ್ವೆಯ ಬಳಿಕ ನೈಜ ವಿಷಯ ಬೆಳಕಿಗೆ ಬರಬಹುದು. ಈ ಸರ್ವೆಯಿಂದ ಆ ಪ್ರದೇಶದಲ್ಲಿ ಹಿಂದೆ ಏನಿತ್ತು ಎನ್ನುವುದರ ಬಗ್ಗೆ ಮಾಹಿತಿ ದೊರೆಯಲಿದೆ. ಆದರೆ ಮುಸ್ಲಿಂ ನಿಯೋಗದ ಪ್ರಕಾರ ಇದು ಹಿಂದಿನ ಗಾಯವನ್ನು ಮತ್ತೆ ಕೆದಕುವ ಪ್ರಯತ್ನ ಎಂದು ಹೇಳಲಾಗಿದೆ. ಆದರೆ ಇದರಿಂದ ಸತ್ಯ ಗೊತ್ತಾಗುತ್ತದೆ ಎನ್ನುವುದು ಹಿಂದೂ ನಾಗರಿಕರ ಅಭಿಮತ.
ರಾಹುಲ್ ಗೆ ಸಮಾಧಾನ ನೀಡಿದ ಸುಪ್ರೀಂಕೋರ್ಟ್!
ಇನ್ನು ಸುಪ್ರೀಂಕೋರ್ಟ್ ಇವತ್ತು ಮತ್ತೊಂದು ಮಹತ್ವ ಆದೇಶ ನೀಡಿದೆ. ಆ ಮೂಲಕ ರಾಹುಲ್ ಗಾಂಧಿಯವರು ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಬಹುಶ: ಕಾಂಗ್ರೆಸ್ಸಿಗರು ಇದನ್ನು ಸಂಭ್ರಮದಿಂದ ಆಚರಿಸಬಹುದು. ಜನಪ್ರತಿನಿಧಿಯ ಕಾಯ್ದೆಯ ಪ್ರಕಾರ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಅವರ ವಿರುದ್ಧದ ಶಿಕ್ಷೆ ಜಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರ ಅರ್ಥ ಪ್ರಕರಣ ಬರ್ಖಾಸ್ತುಗೊಂಡಿದೆ ಎಂದಲ್ಲ. ಆದರೆ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದ ರಾಹುಲ್ ಅವರ ಸಂಸದ ಸ್ಥಾನ ಊರ್ಜಿತದಲ್ಲಿರುತ್ತದೆ. ಅವರು ಅಧಿವೇಶನದಲ್ಲಿ ಭಾಗವಹಿಸಬಹುದು. ಅವರಿಗೆ ದೆಹಲಿಯಲ್ಲಿ ಸಂಸದರ ನಿವಾಸ ಸಿಗುತ್ತದೆ. ಅವರು ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುವುದು ಮುಂದುವರೆಯುತ್ತದೆ. ಕೆಳ ನ್ಯಾಯಾಲಯದ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಿರುವ ಸುಪ್ರೀಂಕೋರ್ಟ್ ಎರಡು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿರುವ ಕಾರಣಗಳ ಬಗ್ಗೆ ಹೇಳಿಲ್ಲ ಎಂದು ತಿಳಿಸಿದೆ. ಮೋದಿಯವರ ಉಪನಾಮದ ಬಗ್ಗೆ ವ್ಯಂಗ್ಯಭರಿತ ಭಾಷೆಯಲ್ಲಿ ಮಾತನಾಡಿ ಎರಡು ವರ್ಷದ ಜೈಲು ಶಿಕ್ಷೆಗೆ ರಾಹುಲ್ ಒಳಗಾಗಿದ್ದರು. ಮೋದಿ ಹೆಸರಿನಲ್ಲಿರುವವರೆಲ್ಲರೂ ಕಳ್ಳರೇಕೆ ಎನ್ನುವ ಅರ್ಥದಲ್ಲಿ ಮೋದಿಯವರನ್ನು ಟೀಕಿಸಿ ರಾಹುಲ್ ಕರ್ನಾಟಕದ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು.
Leave A Reply